• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮುಂದಿನ ವರ್ಷಕ್ಕೆ ತಯಾರಾಗಬಹುದು ಕೋವಿಡ್‌-19 ಲಸಿಕೆ

by
April 25, 2020
in ದೇಶ
0
ಮುಂದಿನ ವರ್ಷಕ್ಕೆ ತಯಾರಾಗಬಹುದು ಕೋವಿಡ್‌-19 ಲಸಿಕೆ
Share on WhatsAppShare on FacebookShare on Telegram

ಕರೋನಾ ಮಹಾಮಾರಿಯಿಂದ ಇಡೀ ಜಗತ್ತೇ ಕಂಗೆಟ್ಟಿದೆ. ಕರೋನಾ ಮಾರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಕಾಯುತ್ತಿರುವ ಪ್ರಪಂಚದ ದುಸ್ಥಿತಿಗೆ ದಿವ್ಯವೌಷಧ ಪತ್ತೆಯಾಗಿದೆ. ಈಗಾಗಲೇ ಮನುಷ್ಯರ ಮೇಲೆ ಕರೋನಾ ಲಸಿಕೆಯ ಪ್ರಯೋಗ ಶುರುವಾಗಿದೆ. ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳು ಮಾನವರ ಮೇಲೆ ಪ್ರಯೋಗ ಶುರು ಮಾಡಿದೆ. ಮೊದಲ ಬಾರಿಗೆ ಆರೋಗ್ಯವಂತರ ಮೇಲೆ ಪ್ರಯೋಗ ಮಾಡುತ್ತಿದೆ. 18 ವರ್ಷದಿಂದ 55 ವರ್ಷದೊಳಗಿನ ಜನರನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರಯೋಗ ಮಾಡಲಾಗುತ್ತಾ ಇದೆ. ಅದರಲ್ಲಿ ಯಶಸ್ಸು ಸಾಧಿಸುತ್ತಿದ್ದ ಹಾಗೆ ಭಾರತೀಯರು ಸೇರಿದಂತೆ ಕಪ್ಪು ಇತರೆ ಏಷಿಯನ್ (Black and Asian minority ethnic) ರಾಷ್ಟ್ರಗಳ ಜನರ ಮೇಲೂ ವಿಜ್ಞಾನಿಗಳು ಪ್ರಯೋಗ ಮಾಡಲಿದ್ದಾರೆ. 510 ಆರೋಗ್ಯವಂತ ಜನರನ್ನು ಆಯ್ಕೆ ಮಾಡಿಕೊಂಡಿದ್ದು, ಶೇಕಡ 80ರಷ್ಟು ಪ್ರತಿಶತ ನಾವು ಕೋವಿಡ್ – 19 ವಿರುದ್ಧ ಜಯ ಸಾಧಿಸುತ್ತೇವೆ ಎನ್ನುವ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ADVERTISEMENT

ಸಂಶೋಧನ ವಿಜ್ಞಾನಿಗಳು ನಿರ್ದೇಶಕ ಸಾರಾ ಗಿಲ್ಬರ್ಟ್ ನೇತೃತ್ವದಲ್ಲಿ ಸಾಹಸಕ್ಕೆ ಕೈ ಹಾಕಿದ್ದು, ಪ್ರೊಫೆಸರ್ ಆಂಡ್ರೂ ಪೊಲಾರ್ಡ್, ಪ್ರೊಫೆಸರ್ ತೆರೆಸಾ ಲ್ಯಾಂಬೆ, ಡಾ. ಸ್ಯಾಂಡಿ ಡೌಗ್ಲಾಸ್, ಪ್ರೊಫೆಸರ್ ಕ್ಯಾಥರೀನ್ ಗ್ರೀನ್ ಹಾಗೂ ಪ್ರೊಫೆಸರ್ ಆಡ್ರಿಯನ್ ಹಿಲ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಮನುಷ್ಯರ ಮೇಲಿನ ಈ ಪ್ರಯೋಗ ಯಶಸ್ವಿಯಾದರೆ, ಇಡೀ ವಿಶ್ವವೇ ನಿಟ್ಟುಸಿರು ಬಿಡುವ ಕಾಲ ಸನ್ನಿಹಿತವಾಗಲಿದೆ. ಚಿಂಪಾಂಜಿಗಳಲ್ಲಿ ಕಂಡು ಬರುವ ವೈರಸ್ ಆಧಾರದಲ್ಲಿಈ ಲಸಿಕೆ ಪ್ರಯೋಗ ನಡೆಯುತ್ತಿದೆ. ಜರ್ಮನಿಯಲ್ಲಿ ಅಂಗೀಕಾರವಾಗಿರುವ ಈ ಲಸಿಕೆಯನ್ನು ಇಂಗ್ಲೆಂಡ್‌ನ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿದೆ. ಈಗ ಆರಂಭವಾಗಿರುವ ಪ್ರಯೋಗದ ಫಲಿತಾಂಶ ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಗೊತ್ತಾಗಲಿದೆ ಎಂದು ಊಹಿಸಲಾಗಿದೆ. ಇದೇ ಲಸಿಕೆಯನ್ನು ಅಮೆರಿಕದಲ್ಲೂ ಪ್ರಯೋಗ ಕೈಗೊಳ್ಳಲು ಕಂಪೆನಿ ನಿರ್ಧಾರ ಮಾಡಿದೆ. ಬ್ರಿಟೀಷ್ ವೈದ್ಯಕೀಯ ಸಂಘದ ಗೌರವ ಉಪಾಧ್ಯಕ್ಷ ಡಾ. ಕೈಲಾಶ್ ಚಂದ್ ಈ ಪ್ರಯೋಗವನ್ನು ಭರವಸೆಯ ಕಿರಣ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಕಪ್ಪು ಜನಾಂಗ ಹಾಗೂ ಏಷ್ಯಾದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಜನಾಂಗೀಯ ಪ್ರಯೋಗಗಳ ಅವಶ್ಯಕತೆ ಇದೆ.

ಪ್ರತಿ ವಿಭಾಗದ ಜನರು ಪ್ರತ್ಯೇಕ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಪ್ರಯೋಗದ ಫಲಿತಾಂಶ ಜೂನ್ ಅಥವಾ ಜುಲೈ ಮೊದಲ ವಾರದಲ್ಲಿ ಹೊರ ಬಿದ್ದ ಬಳಿಕ ಭಾರತೀಯರು ಸೇರಿದಂತೆ ಕಪ್ಪು ಮತ್ತು ಇತರೆ ಏಷಿಯನ್ (Black and Asian minority ethnic) ರಾಷ್ಟ್ರಗಳ ಜನರ ಮೇಲೆ ಪ್ರಯೋಗ ನಡೆಸಲಿದ್ದು, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಲಸಿಕೆ ತಯಾರಿಕೆ ಶುರು ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಆದರೆ ಈ ವರ್ಷ ನಾವು ಕೋವಿಡ್ – 19 ಲಸಿಕೆ ಪಡೆಯಲು ಸಾಧ್ಯವಾಗದೆ ಇರಬಹುದು ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್ ವಿಟ್ಟಿ ತಿಳಿಸಿದ್ದಾರೆ. ಯಾಕಂದ್ರೆ ಗುರುವಾರ 10 ಮಂದಿ ಸ್ವಯಂಸೇವಕರಿಗೆ 4 ವಾರಗಳ ಅಂತರದಲ್ಲಿ 2 ಡೋಸ್ ಲಸಿಕೆ ಕೊಡಲಾಗುತ್ತದೆ. ಇದರ ಫಲಿತಾಂಶ ಹೊರಬಂದ ಬಳಿಕ ಇದೇ ರೀತಿಯ ಪ್ರಯೋಗಗಳನ್ನು ಚೀನಾ ಹಾಗೂ ಅಮೆರಿಕ ಈಗಾಗಲೇ ಶುರು ಮಾಡಿದ್ದು, ಈ ತಿಂಗಳಾಂತ್ಯಕ್ಕೆ ಜರ್ಮನಿಯಲ್ಲೇ ಅಧ್ಯಯನ ಶುರು ಮಾಡಲು ಯೋಜನೆ ಹಾಕಿಕೊಂಡಿವೆ. ಫೆಡರಲ್ ವ್ಯಾಕ್ಸಿನ್ ಅಥಾರಿಟಿ ಕೂಡ ಅನುಮತಿ ಕೊಟ್ಟಿದೆ.

ಈಗಅಧ್ಯಯನಕ್ಕೆ ಒಳಪಡಿಸಿರುವ ಲಸಿಕೆ ಮಾನವನ ದೇಹದಲ್ಲಿ ಪ್ರೋಟಿನ್ ಗುರುತಿಸಲು ಸಹಕಾರಿ ಆಗಲಿದೆ. ಈ ಮೂಲಕ ಮಾನವನ ಜೀವಕೋಶ ಪ್ರವೇಶ ಮಾಡದಂತೆ ಕರೋನಾ ವೈರಸ್‌ ಅನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಜೀವಕೋಶಗಳಲ್ಲಿ ಪ್ರೋಟಿನ್‌ ಪ್ರಮಾಣವನ್ನು ಹೆಚ್ಚಿಸುವ ಆರ್‌ಎನ್‌ಎಗಳನ್ನು ಬಳಸಿಕೊಂಡು ಕರೋನಾವೈರಸ್ ವಿರುದ್ಧ ಹೋರಾಟಕ್ಕೆ ಪ್ರೇರೇಪಿಸುತ್ತದೆ. ಮಧುಮೇಹ, ವಯೋವೃದ್ಧರು ಹಾಗೂ ಸಣ್ಣ ಮಕ್ಕಳಿಗೂ ಸಹಕಾರಿಯಾಗುವಂತೆ ಲಸಿಕೆ ತಯಾರಿಗೆ ಯೋಜಿಸಲಾಗಿದೆ. ಈ ವರ್ಷಾಂತ್ಯ ಅಥವಾ 2021ರ ಆರಂಭದಲ್ಲಿ ಕೋವಿಡ್ – 19 ವೈರಸ್‌ ನಿರ್ಮೂಲನೆಗೆ ಲಸಿಕೆ ಲಭ್ಯವಾಗಲಿದೆ ಎನ್ನುವ ಆಶಯ ವ್ಯಕ್ತವಾಗುತ್ತಿದೆ.

ಜಗತ್ತನ್ನು ಸಾಮಾನ್ಯ ಸ್ಥಿತಿಗೆ ತರುವುದಕ್ಕೆ ಲಸಿಕೆ ಪತ್ತೆ ಮಾಡುವುದೊಂದೆ ಇರುವ ಮಾರ್ಗವಾಗಿದೆ. ಆದಷ್ಟೂ ಶೀಘ್ರವಾಗಿ ಚಿಕಿತ್ಸೆ ಪತ್ತೆಯಾಗಲಿ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೋ ಗುಟೇರಸ್‌ ಕೂಡಾ ಹೇಳಿಕೆ ನೀಡಿದ್ದರು. ಇದೀಗ ವಿಶ್ವಾದ್ಯಂತ 26,92,584 ಜನರಿಗೆ ಸೋಂಕು ತಗುಲಿದ್ದು, ಕೋವಿಡ್-19 ನಿಂದ ಸಾವನ್ನಪ್ಪಿದ್ದವರ ಸಂಖ್ಯೆ 2 ಲಕ್ಷ ದಾಟಿದೆ. ಆದರೆ 7,38,432 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆ ಶೇಕಡ 20ರಷ್ಟುಇದ್ದು, ಶೇಕಡ 80 ರಷ್ಟು ಜನರು ಸಾಮಾನ್ಯವಾಗಿ ಗುಣಮುಖರಾಗುತ್ತಿದ್ದಾರೆ. ಶೇಕಡ 20ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಆ ವರ್ಗದ ಜನರಿಗಾಗಿ ಲಸಿಕೆ ಅತ್ಯವಶ್ಯಕವಾಗಿದೆ. ವಿಶ್ವದಲ್ಲಿ 17,66,077 ಜನರಿನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ. 17,07,888 ಜನರು ಸಾಮಾನ್ಯ ಸ್ಥಿತಿಯಲ್ಲಿದ್ದಾರೆ. ಇನ್ನುಳಿದ ಶೇಕಡ 3ರಷ್ಟುಅಂದರೆ 58,189 ಜನರು ಗಂಭಿರವಾಗಿದ್ದಾರೆ. ಲಸಿಕೆ ಆದಷ್ಟೂ ಶೀಘ್ರವಾಗಿ ಪತ್ತೆಯಾದರೆ, ಈ ರೀತಿಯಲ್ಲಿ ಗಂಭಿರ ಸಮಸ್ಯೆ ಎದುರಿಸುವ ಜನರನ್ನು ಕೋವಿಡ್-19ನಿಂದ ರಕ್ಷಿಸಲು ಸಹಕಾರಿಯಾಗುತ್ತದೆ.

Tags: coronaviruscovid-19 vaccineಕೋವಿಡ್‌ 19ಕೋವಿಡ್‌-19 ಲಸಿಕೆ
Previous Post

ಇನ್ನಾದರೂ ಆಗಬೇಕಿದೆ ಜುಬಿಲಿಯೆಂಟ್ ಪ್ರಕರಣದ ಪ್ರಾಮಾಣಿಕ ತನಿಖೆ

Next Post

ರ‍್ಯಾಪಿಡ್ ಟೆಸ್ಟ್ ಕಿಟ್ ಕಳಪೆ! PPE ಕಿಟ್ ಕಳಪೆ! ಯಾರ ಖಜಾನೆಗೆ ಕಾಸು?

Related Posts

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ
Top Story

ನಮ್ಮ ಸರ್ಕಾರ ಯಾವಾಗಲೂ ಕಾರ್ಮಿಕರ ಪರವಾಗಿದೆ , ಮೋದಿ ಅದರ ವಿರೋಧಿ : ಸಿದ್ದರಾಮಯ್ಯ ವಾಗ್ದಾಳಿ

by ಪ್ರತಿಧ್ವನಿ
May 1, 2026
0

ಬೆಂಗಳೂರು : ಕಾರ್ಮಿಕರು ದೇಶದ ಆರ್ಥಿಕ ಸಾಮಾಜಿಕ, ಅಭಿವೃದ್ಧಿಯ ಶಿಲ್ಪಿಗಳು. ಕಾಯಕವೇ ಕೈಲಾಸ ಅಂತ ಬಸವಣ್ಣ ಹೇಳಿದ್ದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ನೀಡಬೇಕು....

Read moreDetails
ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

ದೇಶದ ತಂತ್ರಜ್ಞಾನ, ನಾವೀನ್ಯತೆಯ ಪಯಣದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ : ಸಚಿವ ಪ್ರಿಯಾಂಕ್‌ ಖರ್ಗೆ..

May 1, 2026
ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

ನಾವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ : ಖರ್ಗೆ ಶಾಕಿಂಗ್‌ ಹೇಳಿಕೆ..

May 1, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

ಗಂಡನ ಸಾಲ, ಹೆಂಡತಿ ಅಕೌಂಟ್‌ಗೆ ಬಿತ್ತು ಕತ್ತರಿ : ಗೃಹ ಲಕ್ಷ್ಮಿ ಹಣಕ್ಕೂ ಬ್ಯಾಂಕ್‌ಗಳಲ್ಲಿ ಇಲ್ಲದಾಯಿತೇ ಭದ್ರತೆ..?

May 1, 2026
Next Post
ರ‍್ಯಾಪಿಡ್ ಟೆಸ್ಟ್ ಕಿಟ್ ಕಳಪೆ! PPE ಕಿಟ್ ಕಳಪೆ! ಯಾರ ಖಜಾನೆಗೆ ಕಾಸು?

ರ‍್ಯಾಪಿಡ್ ಟೆಸ್ಟ್ ಕಿಟ್ ಕಳಪೆ! PPE ಕಿಟ್ ಕಳಪೆ! ಯಾರ ಖಜಾನೆಗೆ ಕಾಸು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada