• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮತ್ತೆ ಬಿಜೆಪಿಯ ಕನ್ನಡಪರ ನಿಷ್ಠೆ ಜಗಜ್ಜಾಹೀರು ಮಾಡಿದ ಮರಾಠ ಅಭಿವೃದ್ಧಿ ನಿಗಮ

by
November 17, 2020
in ಕರ್ನಾಟಕ
0
ಮತ್ತೆ ಬಿಜೆಪಿಯ ಕನ್ನಡಪರ ನಿಷ್ಠೆ ಜಗಜ್ಜಾಹೀರು ಮಾಡಿದ ಮರಾಠ ಅಭಿವೃದ್ಧಿ ನಿಗಮ
Share on WhatsAppShare on FacebookShare on Telegram

ಚುನಾವಣೆ ಮತ್ತು ಆಡಳಿತದ ನಡುವೆ ವ್ಯತ್ಯಾಸವನ್ನೇ ಅಳಿಸಿಹಾಕಿರುವ ರಾಜ್ಯ ಬಿಜೆಪಿ ಸರ್ಕಾರ, ಚುನಾವಣೆಗೊಂದು ಮಂಡಳಿ, ಪ್ರಾಧಿಕಾರ ರಚಿಸುವ ಮೂಲಕ ಸರ್ಕಾರ ಇರುವುದು ರಾಜ್ಯದ ಸರ್ವ ಜನರ ಹಿತಕ್ಕಲ್ಲ; ಬದಲಾಗಿ ಉಪ ಚುನಾವಣಾ ಕಣದ ಸಂಖ್ಯಾ ಬಾಹುಳ್ಯದ ಮತದಾರ ಸಮುದಾಯಗಳ ಓಲೈಕೆಗೆ ಎಂಬುದನ್ನು ಸಾಬೀತು ಮಾಡುತ್ತಿದೆ.

ADVERTISEMENT

ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗಿ ಬಂದ ಬಳಿಕ ಸರ್ಕಾರವೊಂದರ ಆದ್ಯತೆಯಾಗಬೇಕಿರುವುದು ರಾಜ್ಯದ ಪ್ರತಿಯೊಬ್ಬರ ಹಕ್ಕುದಾರಿಕೆಯ ಸಾರ್ವಜನಿಕ ಹಣವನ್ನು ವಿವೇಚನೆ ಮತ್ತು ನ್ಯಾಯಸಮ್ಮತ ಬಳಕೆ. ಜೊತೆಗೆ ಯಾವುದೇ ಒಂದು ಸಮುದಾಯ ಅಥವಾ ಗುಂಪಿನ ಮತ ಸೆಳೆಯಲು ಜನರ ದುಡ್ಡನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂಬ ಸಾಮಾನ್ಯ ಹೊಣೆಗಾರಿಕೆ. ಆದರೆ, ಸ್ವತಃ ಕಾಂಗ್ರೆಸ್ ಪಕ್ಷದ ವಿರುದ್ಧ ಅಲ್ಪಸಂಖ್ಯಾತರ ಓಲೈಕೆಯ ಆರೋಪದ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿಯೇ ಈಗ ಲಜ್ಜೆ ಬಿಟ್ಟು ಉಪ ಚುನಾವಣಾ ಕ್ಷೇತ್ರಗಳಲ್ಲಿ ನಿರ್ಣಾಯಕ ಸಮುದಾಯಗಳ ಓಲೈಕೆಗೆ ಜಾತಿಗೊಂದು ಮಂಡಳಿ, ಪ್ರಾಧಿಕಾರ ರಚನೆ ಮಾಡುತ್ತಿರುವುದು ವಿಪರ್ಯಾಸ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೆಲವೇ ದಿನಗಳ ಹಿಂದೆ ಕಾಡುಗೊಲ್ಲ ಸಮುದಾಯದವರು ನಿರ್ಣಾಯಕರಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚಿಸಿ, ಬರೋಬ್ಬರಿ 50 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದೀಗ ಮರಾಠ ಸಮುದಾಯ ನಿರ್ಣಾಯಕರಾಗಿರುವ ಬೆಳಗಾವಿ ಲೋಕಸಭಾ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ತಯಾರಿಯ ಭಾಗವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆ ಪ್ರಾಧಿಕಾರಕ್ಕೂ ಬರೋಬ್ಬರಿ 50 ಕೋಟಿ ಅನುದಾನ ಘೋಷಿಸಿದೆ. ಜೊತೆಗೆ ಆ ಎರಡೂ ಕ್ಷೇತ್ರಗಳಲ್ಲಿ ಮತ್ತೊಂದು ಬಹುಸಂಖ್ಯಾತ ಸಮುದಾಯವಾದ ಲಿಂಗಾಯಿತ- ವೀರಶೈವರಿಗೆ ಸಂಬಂಧಿಸಿದ ಮಠಮಾನ್ಯಗಳಿಗೂ 88 ಕೋಟಿಯಷ್ಟು ಭಾರೀ ಮೊತ್ತದ ಸಾರ್ವಜನಿಕ ತೆರಿಗೆ ಹಣವನ್ನು ನೀಡಲಾಗಿದೆ.

ಅಂದರೆ; ಬಿಜೆಪಿ ಸರ್ಕಾರ, ರಾಜ್ಯದ ಪ್ರತಿಯೊಂದು ಸಮುದಾಯ, ಧರ್ಮದ ಜನರ ತೆರಿಗೆ ಹಣವನ್ನು ಹೀಗೆ ತನ್ನ ಮತ ಬ್ಯಾಂಕ್ ಬೆಳೆಸಲು, ಉಪ ಚುನಾವಣೆ ಗೆಲ್ಲಲು ಪಕ್ಷದ ನಿಧಿಯಂತೆ ಬಳಕೆ ಮಾಡುತ್ತಿದೆ. ಬಸವಕಲ್ಯಾಣದ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದ ಬರೋಬ್ಬರಿ 44 ಸಾವಿರ ಮತಗಳಿವೆ. ಹಾಗೇ ಇತ್ತೀಚೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸಂಸದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೂಡ ಮರಾಠ ಸಮುದಾಯದ ಸುಮಾರು 6 ಲಕ್ಷಕ್ಕೂ ಅಧಿಕ ಮತಗಳಿವೆ. ಆ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲೇ ಬಿಜೆಪಿ ಸರ್ಕಾರ ಈ ಭಾರೀ ಉಡುಗೊರೆ ಘೋಷಿಸಿದೆ.

ಆದರೆ, ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರದ ಇಂತಹ ಓಲೈಕೆ ರಾಜಕಾರಣಕ್ಕೆ ಬಳಕೆಯಾಗುತ್ತಿರುವ ಹಣ ಯಾರದ್ದು ಎಂಬುದು ಈಗ ಕೇಳಬೇಕಿರುವ ಪ್ರಶ್ನೆ. ಸಾರ್ವಜನಿಕ ತೆರಿಗೆ ಹಣವನ್ನು ಆಳುವ ಪಕ್ಷಗಳು ತಮ್ಮದೇ ಪಕ್ಷದ ಮತ ಬ್ಯಾಂಕ್ ಬೆಳೆಸಲು ಮನಸೋ ಇಚ್ಛೆ ಬಳಸುವ, ಸರ್ಕಾರದ ಖಜಾನೆಯನ್ನು ಪಕ್ಷದ ಬೊಕ್ಕಸದಂಗೆ ದುಂದುವೆಚ್ಚ ಮಾಡುವ ಈ ಹೇಯ ಚಾಳಿ ಭಾರತದ ಮಟ್ಟಿಗೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಆ ವಿಷಯದಲ್ಲಿ ಕಾಂಗ್ರೆಸ್, ಜನತಾ ಪರಿವಾರ ಮತ್ತು ಈಗ ಬಿಜೆಪಿ ಸೇರಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಆದರೆ, ಈಗಿನ ಬಿಎಸ್ ವೈ ಸರ್ಕಾರದ ರೀತಿಯಲ್ಲಿ ಉಪ ಚುನಾವಣೆಗಳನ್ನು ಗೆಲ್ಲುವ ಏಕೈಕ ಕಾರಣಕ್ಕಾಗಿ ಸರ್ಕಾರದ ಬೊಕ್ಕಸವನ್ನು ಬರಿದುಮಾಡುವುದು ಮಾತ್ರ ಹೊಸ ರೀತಿ.

ವಿಪರ್ಯಾಸವೆಂದರೆ ಒಂದು ಕಡೆ ಸಾರಿಗೆ ನೌಕರರಿಗೆ, ಅತಿಥಿ ಉಪನ್ಯಾಸಕರಿಗೆ, ಮತ್ತಿತರರಿಗೆ ಸಂಬಳ ಕೊಡಲು ಕೂಡ ಹಣವಿಲ್ಲವೆನ್ನುತ್ತಿದ್ದ ಸರ್ಕಾರ, ಬರೋಬ್ಬರಿ ಎಂಟು ತಿಂಗಳ ಕಾಲ ನಯಾಪೈಸೆ ವೇತನ ನೀಡದೆ ಸತಾಯಿಸಿದ ಸರ್ಕಾರ, ಕೋವಿಡ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಹಣವಿಲ್ಲ ಎಂದ ಸರ್ಕಾರ, ಕಳೆದ ವರ್ಷದ ಭೀಕರ ಪ್ರವಾಹದ ವೇಳೆ ಸಂತ್ರಸ್ತರಿಗೆ ನೆರವು ನೀಡಲು ಹಣವಿಲ್ಲ ಎಂದು ಕೈಚೆಲ್ಲಿದ ಸರ್ಕಾರ, ಈಗ ಹೀಗೆ ನೂರಾರು ಕೋಟಿ ರೂ. ಅನುದಾನ ಘೋಷಿಸುತ್ತಿದೆ. ಅಂದರೆ; ಸರ್ಕಾರದ ನೆರವು ಸಿಗಬೇಕೆಂದರೆ; ಚುನಾವಣೆ ಬರಬೇಕು ಮತ್ತು ನೀವು ಆ ಕ್ಷೇತ್ರದ ನಿರ್ಣಾಯಕ ಮತ ಬ್ಯಾಂಕ್ ಆಗಿರಬೇಕು ಎಂದಲ್ಲವೆ?

ಅಲ್ಲದೆ, ಹೀಗೆ ಚುನಾವಣೆಗಳನ್ನು ಗೆಲ್ಲುವುದೊಂದನ್ನೇ ಗುರಿಯಾಗಿಸಿಕೊಂಡು ಜಾತಿಗೊಂದು, ಸಮುದಾಯಕ್ಕೊಂದು ಮಂಡಳಿ, ನಿಗಮ, ಪ್ರಾಧಿಕಾರ ರಚಿಸಿ ಕೋಟಿಕೋಟಿ ಅನುದಾನ ನೀಡತೊಡಗಿದರೆ ಅದಕ್ಕೆ ಕೊನೆ ಎಂದು ಎಂಬುದು. ಈಗಾಗಲೇ ಈ ವಿಷಯದಲ್ಲಿ ಲಿಂಗಾಯಿತ-ವೀರಶೈವರೂ ಸೇರಿದಂತೆ ಹಲವು ಸಮುದಾಯಗಳು ತಮಗೂ ಮಂಡಳಿ, ನಿಗಮ ಘೋಷಿಸಿ ಎಂದು ಸರ್ಕಾರದ ಮುಂದೆ ಹಕ್ಕು ಮಂಡಿಸಿದ್ದಾರೆ. ಹೀಗೆ ಕೇಳಿದವರಿಗೆಲ್ಲಾ ಮಂಡಳಿಗಳನ್ನು ರಚಿಸುತ್ತಾ ಹೋದರೆ, ಸಮಾಜದ ಪ್ರತಿ ಸಮುದಾಯಕ್ಕೂ ಒಂದೊಂದು ನಿಗಮ-ಮಂಡಳಿಗಳು ಅಸ್ತಿತ್ವಕ್ಕೆ ಬಂದು ಆ ಸಮುದಾಯಕ್ಕೆ ಸಂಬಂಧಿಸಿದ ಎಲ್ಲವನ್ನೂ ಅವುಗಳೇ ನಿರ್ವಹಿಸುವುದಾದರೆ, ಸರ್ಕಾರಿ ಇಲಾಖೆಗಳ, ಸಚಿವಾಲಯಗಳ ಅಗತ್ಯವೇನಿದೆ? ಎಂಬ ಪ್ರಶ್ನೆಯೂ ಇದೆ.

ಜೊತೆಗೆ ಸಾರ್ವಜನಿ ಹಣಕಾಸು ಬಳಕೆಯ ನೈತಿಕತೆ ಮತ್ತು ಹೊಣೆಗಾರಿಕೆಯ ಜೊತೆಗೆ ಈ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿಷಯದಲ್ಲಿ ಮತ್ತೊಂದು ಸೂಕ್ಷ್ಮವೂ ಇದೆ. ಅದು ಭಾಷಾ ಸೂಕ್ಷ್ಮತೆ. ಮರಾಠರು ಮತ್ತು ಕನ್ನಡಿಗರ ನಡುವೆ ಶತಮಾನದಿಂದ ನೆಲ-ಜಲ ಮತ್ತು ನುಡಿಯ ವಿಷಯದಲ್ಲಿ ದೊಡ್ಡ ಮಟ್ಟದ ಸಂಘರ್ಷವಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ವಿವಿಧ ಪರಿಷತ್, ಅಕಾಡೆಮಿ, ಪ್ರಾಧಿಕಾರ-ಮಂಡಳಿಗಳಿಗೆ ಕೋವಿಡ್ ಸಂಕಷ್ಟದ ನೆಪದಲ್ಲಿ ಅನುದಾನ ಕಡಿತ ಮಾಡಿರುವ ಬಿ ಎಸ್ ಯಡಿಯೂರಪ್ಪ, ಈಗ ಕನ್ನಡದ ವಿಷಯದಲ್ಲಿ ಹಗೆತನಕ್ಕಾಗಿಯೇ ಹೆಸರಾಗಿರುವ ಬೆಳಗಾವಿ ಮರಾಠ ಭಾಷಾ ಮೂಲಭೂತವಾದಿಗಳ ವಿಷಯದಲ್ಲಿ ಮಮಕಾರದ ಪ್ರವಾಹವನ್ನೇ ಹರಿಸುತ್ತಿರುವುದು ಕನ್ನಡಿಗರಿಗೆ ಬಗೆದ ದ್ರೋಹವಲ್ಲವೆ ಎಂಬ ಪ್ರಶ್ನೆಯೂ ಕನ್ನಡ ಹೋರಾಟಗಾರರಿಂದ ಕೇಳಿಬಂದಿದೆ.

ಹಾಗಾಗಿ, ಕೇವಲ ಉಪ ಚುನಾವಣೆಗಳ ಮೇಲೆ ಕಣ್ಣಿಟ್ಟು ಹೀಗೆ ಕನ್ನಡಿಗರ ಬೆವರಿನ ಹಣವನ್ನು ಮರಾಠಿಗರ ಅಭಿವೃದ್ಧಿಗೆ ಮನಸೋ ಇಚ್ಛೆ ಬಳಸುತ್ತಿರುವ ಮುಖ್ಯಮಂತ್ರಿಗಳು ಮತ್ತು ಅವರ ಬಿಜೆಪಿ ಪಕ್ಷದ ಕನ್ನಡಪರ ನಿಷ್ಠೆಯ ಬಗ್ಗೆ ಮತ್ತೊಮ್ಮೆ ಗಂಭೀರ ಅನುಮಾನಕ್ಕೆ ಈ ಬೆಳವಣಿಗೆ ಕಾರಣವಾಗಿದೆ. ಜೊತೆಗೆ ಸಾರ್ವಜನಿಕ ಹಣವನ್ನು ಪಕ್ಷದ ಮುಫತ್ತು ನಿಧಿಯಂತೆ ಬಳಸುವ ನಾಚಿಕೆಗೇಡಿನ ಪ್ರವೃತ್ತಿಯ ಬಗ್ಗೆಯೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಆ ಹಿನ್ನೆಲೆಯಲ್ಲಿ ಈ ವಿಷಯ ಇದೀಗ ಹೊಸ ವಿವಾದವಾಗಿ ಹೊರಹೊಮ್ಮಿದೆ. ಕನ್ನಡ ಸಂಘಟನೆಗಳೂ ಸಿಡಿದೆದ್ದಿವೆ. ಅವುಗಳ ಆಕ್ರೋಶ ಮುಂದಿನ ದಿನಗಳಲ್ಲಿ ಪಡೆಯಬಹುದಾದ ಸ್ವರೂಪದ ಮೇಲೆ ರಾಜ್ಯ ಸರ್ಕಾರದ ಮುಂದಿನ ನಡೆ ನಿಂತಿದೆ.

Previous Post

ಕರ್ನಾಟಕ: 1157 ಹೊಸ ಕರೋನಾ ಪ್ರಕರಣಗಳು ದಾಖಲು

Next Post

ಚುನಾವಣೆಗೆ ಸ್ಪರ್ಧಿಸದೆಯೂ ಜನಮಾನಸರಾಗಿ ಉಳಿದಿರುವ ನಿತೀಶ್ ಕುಮಾರ್

Related Posts

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..
Top Story

ಬಿಸಿಲಿನ ಬೇಗೆಗೆ ತಂಪೆರೆದ ವರುಣ : ಬೆಂಗಳೂರಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ..

by ಪ್ರತಿಧ್ವನಿ
April 29, 2026
0

ಬೆಂಗಳೂರು : ಕೆಲ ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ನಗರದ ಜನರಿಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ. ಬೇಸಿಗೆಯ ಬಿಸಿಲಿನ ಶಾಖಕ್ಕೆ ಕಂಗಾಲಾಗಿದ್ದ ಸಿಲಿಕಾನ್‌ ಸಿಟಿಯ ಜನರಿಗೆ ಮಳೆರಾಯ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
Next Post
ಚುನಾವಣೆಗೆ ಸ್ಪರ್ಧಿಸದೆಯೂ ಜನಮಾನಸರಾಗಿ ಉಳಿದಿರುವ ನಿತೀಶ್ ಕುಮಾರ್

ಚುನಾವಣೆಗೆ ಸ್ಪರ್ಧಿಸದೆಯೂ ಜನಮಾನಸರಾಗಿ ಉಳಿದಿರುವ ನಿತೀಶ್ ಕುಮಾರ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada