ಮಂಗಳೂರಿನಲ್ಲಿ ಕಳೆದ ವರ್ಷ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಗೋಲಿಬಾರ್ ಕುರಿತು ನ್ಯಾಯಾಂಗ ತನಿಖೆಯ ನೇತೃವವನ್ನು ವಹಿಸಿದ್ದ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು ಶನಿವಾರ ಅಂತಿಮ ತನಿಖಾ ವರದಿಯನ್ನು ರಾಜ್ಯ ಗೃಹ ಇಲಾಖೆಗೆ ಸಲ್ಲಿಸಿದ್ದಾರೆ.
50 ಪುಟದ ವರದಿಯೊಂದಿಗೆ 2,500 ಪೂರಕ ದಾಖಲೆಗಳನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಜಗದೀಶ್ ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಬೆನ್ನಲ್ಲಿ ಪ್ರತಿಭಟನೆ ಹಿಂಸಾರೂಪ ತಳೆದಿತ್ತು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಪೊಲೀಸರ ಗೋಲಿಬಾರ್ ನಲ್ಲಿ ನೌಶೀನ್ ಮತ್ತು ಜಲೀಲ್ ಎಂಬ ಇಬ್ಬರು ಬಲಿಯಾಗಿದ್ದರು.
ಕೋವಿಡ್ -19 ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಕಾರಣದಿಂದ ಗೋಲಿಬಾರ್ ಕುರಿತ ನ್ಯಾಯಾಂಗ ತನಿಖೆ ವಿಳಂಬವಾಗಿತ್ತು.
Also Read: ಮಂಗಳೂರು ಗೋಲಿಬಾರ್‌ಗೆ 245 ದಿನಗಳು: ಇನ್ನೂ ಜೈಲಲ್ಲಿರುವ ಪ್ರತಿಭಟನಕಾರರು
ಡಿಸೆಂಬರ್ 19 ರಂದು ನಡೆದ ಪ್ರತಿಭಟನೆ ವೇಳೆ ಉಂಟಾದ ಘರ್ಷಣೆ ಸಂಬಂಧಪಟ್ಟಂತೆ, ಪೊಲೀಸರ ವಿರುದ್ಧ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಮಂಗಳೂರು ಪೊಲೀಸರು 24 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ.
ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ, ಗೋಲಿಬಾರ್ ಪ್ರಕರಣದಲ್ಲಿ ಬಂಧಿಯಾಗಿದ್ದ ಎಲ್ಲಾ ಆರೋಪಿಗಳಿಗೆ ಸರಿಸುಮಾರು ಹತ್ತು ತಿಂಗಳು ಕಳೆದ ಬಳಿಕ ಜಾಮೀನು ದೊರೆತಿದೆ
Also Read: ಮಂಗಳೂರು ಗೋಲಿಬಾರ್ ಪ್ರಕರಣ: ಹತ್ತು ತಿಂಗಳ ಬಳಿಕ ಬಂಧಿತ 22 ಆರೋಪಿಗಳಿಗೆ ಜಾಮೀನು










