• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದಲ್ಲಿನ ಒಟ್ಟು ಕೋವಿಡ್ ಮರಣಗಳಲ್ಲಿ 70% ಪುರುಷರು: ಆರೋಗ್ಯ ಸಚಿವಾಲಯ

by
December 30, 2020
in ದೇಶ
0
ಭಾರತದಲ್ಲಿನ ಒಟ್ಟು ಕೋವಿಡ್ ಮರಣಗಳಲ್ಲಿ 70% ಪುರುಷರು: ಆರೋಗ್ಯ ಸಚಿವಾಲಯ
Share on WhatsAppShare on FacebookShare on Telegram

ಭಾರತದಲ್ಲಿ ಕರೋನಾ ಸೋಂಕು ಸ್ತ್ರೀಯರಿಗಿಂತ ಪುರುಷರ ಬಲಿಯನ್ನು ಗಣನೀಯವಾಗಿ ಪಡೆದುಕೊಂಡಿದೆ. ಕೋವಿಡ್‌ ನಿಂದಾಗಿ ಮೃತಪಟ್ಟ ಸರಿಸುಮಾರು 1.47 ಲಕ್ಷ ಜನರಲ್ಲಿ ಒಟ್ಟು 70 ಶೇಕಡಾ ಮಂದಿ ಪುರುಷರೇ ಎಂಬ ಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.

ADVERTISEMENT

ಯುಕೆ ರೂಪಾಂತರಿ ಕರೋನಾ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಮಂಗಳವಾರ ಹಂಚಿಕೊಂಡಿರುವ ದತ್ತಾಂಶಗಳಲ್ಲಿ ಈ ಅಂಶ ಬಹಿರಂಗಗೊಂಡಿದೆ.

ಒಟ್ಟು ಪ್ರಕರಣಗಳ ವಯಸ್ಸು ಹಾಗೂ ಲಿಂಗವಾರು ಮಾಹಿತಿ ಹಂಚಿಕೊಂಡ ಕೇಂದ್ರ ಆರೋಗ್ಯ ಕಾರ್ಯದರ್ಶು ರಾಜೇಶ್‌ ಭುವನ್‌ ಕೋವಿಡ್‌ ನಿಂದಾಗಿ ಮೃತಪಟ್ಟವರಲ್ಲಿ 70 ಶೇಕಡಾ ಮಂದಿ ಪುರುಷರು, ಹಾಗೂ 45% ಮಂದಿ 60 ವರ್ಷ ದಾಟದವರು ಎಂದು ತಿಳಿಸಿದ್ದಾರೆ.

‌ಒಟ್ಟು ಪ್ರಕರಣಗಳಲ್ಲಿ 63% ಪ್ರಕರಣಗಳು ಪುರುಷರಲ್ಲಿ ಕಂಡುಬಂದಿವೆ. 52% ಪ್ರಕರಣಗಳು 18-44 ವರ್ಷದವರಲ್ಲಿ ಕಂಡುಬಂದಿದ್ದು, ಈ ವರ್ಗದಲ್ಲಿ 11% ಮರಣ ಪ್ರಮಾಣ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೈನಂದಿನ ಸಾವುಗಳು 300 ರ ಆಸುಪಾಸು ಬಂದು ನಿಂತಿದೆ. ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ 2.7 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಹೊಸ ರೂಪಾಂತರಿ ಕರೋನಾ ಸೋಂಕು ಹಿಂದಿನ ಸೋಂಕಿಗಿಂತ 70% ಹೆಚ್ಚು ಸಾಂಕ್ರಾಮಿಕವೆಂದು ಸಚಿವಾಲಯ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಭಾರತಕ್ಕೆ ಆಗಮಿಸಿದ ಕನಿಷ್ಟ ಆರು ಮಂದಿಯಲ್ಲಿ ರೂಪಾಂತರಿ ಕರೋನಾ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿವೆ.

ರೂಪಾಂತರಿ ಸೋಂಕು ಸಾಂಕ್ರಾಮಿಕವಾಗಿ ಹಬ್ಬುವ ಆರಂಭದಲ್ಲೇ ಗುರುತಿಸುವುದರಿಂದ ಮಟ್ಟ ಹಾಕುವುದು ಸುಲಭ, ಹಾಗಾಗಿ ವಿದೇಶದಿಂದ ಮರಳುವವರಿಗೆ ವಿಮಾನ ನಿಲ್ದಾನಗಳಲ್ಲೇ ಕಡ್ಡಾಯ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಕಳೆದ ಆರು ತಿಂಗಳಿನಲ್ಲಿಯೇ ಅತಿ ಕಡಿಮೆ ಸೋಂಕು ಪತ್ತೆಯಾಗಲು ಆರಂಭಿಸಿರುವ ಬೆನ್ನಲ್ಲೇ, ರೂಪಾಂತರಿ ಕರೋನಾ ಭಾರತದಲ್ಲಿ ಈಗಾಗಲೇ ಬಂದಿರುವುದು ಎರಡನೇ ಅಲೆಯ ಆರಂಭವೇ ಎನ್ನುವ ಭಯವನ್ನು ಹುಟ್ಟು ಹಾಕಿವೆ. ಮುಖ್ಯವಾಗಿ ಚಳಿಯ ಪ್ರತಿಕೂಲ ವಾತಾವರಣದ ಈ ಸಮಯದಲ್ಲಿ ರೂಪಾಂತರಿ ಕರೋನಾ ಹೇಗೆ ವರ್ತಿಸಬಹುದು ಎನ್ನುವ ಯಾವುದೇ ಅಂದಾಜು ಇಲ್ಲದ್ದರಿಂದ ಮತ್ತೆ ಲಾಕ್‌ಡೌನ್‌ ಮೊರೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದಕ್ಕೆ ಪೂರಕವೆನಿಸುವಂತೆ, ನೀತಿ ಆಯೋಗ ಸದಸ್ಯ ಡಾ. ವಿಕೆ ಪೌಲ್‌ ಅವರು ರಾತ್ರಿ ವೇಳೆಯ ಕರ್ಫ್ಯೂಗೆ ಸಲಹೆ ನೀಡಿದ್ದಾರೆ.

Tags: Covid DeathHealth Ministry
Previous Post

ಗೋಶಾಲೆಗಳಿಗೆ ನೀಡಿದ ಅನುದಾನ ವಿವರ ಬಹಿರಂಗಪಡಿಸುವಂತೆ ಸಿದ್ದರಾಮಯ್ಯ ಒತ್ತಾಯ

Next Post

ಗ್ರಾಮ ಪಂಚಾಯಿತಿ ಚುನಾವಣೆ: 3,440 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ

Related Posts

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..
Top Story

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ನಡೆಯುತ್ತಿದ್ದು, ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕ್ಷೇತ್ರ ವಿಂಗಡಣೆ, ಜನಗಣತಿ ಹಾಗೂ ಮಹಿಳಾ ಮೀಸಲಾತಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಗ್ರಾಮ ಪಂಚಾಯಿತಿ ಚುನಾವಣೆ: 3

ಗ್ರಾಮ ಪಂಚಾಯಿತಿ ಚುನಾವಣೆ: 3,440 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada