
ಕಾಂಗ್ರೆಸ್ ಜಾಹಿರಾತಿಗೆ ಬಿಜೆಪಿ ಜಾಹಿರಾತು ಮೂಲಕವೇ ಕೌಂಟರ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಸದ್ಯ ಅಷ್ಟು ಎಚ್ಚರಿಕೆ ಆಗಿದೆಯಲ್ಲ, ಚೊಂಬಿನಿಂದ ಎಂದು ವ್ಯಂಗ್ಯವಾಡಿದ್ದು, ಮಾಜಿ ಪ್ರಧಾನಿ ದೇವೇಗೌಡರೇ ಖಾಲಿ ಚೊಂಬು ತೋರಿಸಿ, ನಿಮ್ಮಿಂದ ಅನ್ಯಾಯ ಆಯ್ತು ನಮ್ಮ ರಾಜ್ಯಕ್ಕೆ. ನಮಗೆ ಮಾತನಾಡುವುದಕ್ಕೆ ಶಕ್ತಿ ಇಲ್ಲ ಅಂತ ದೇವೇಗೌಡ್ರು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ ಎಂದಿದ್ದಾರೆ.
ಅವರು ಸಾರ್ವಜನಿಕರಿಗೆ ಏನು ಬೇಕಾದ್ರು ಹೇಳಬಹುದು. ಈ ಹಿಂದೆ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ದೇವೇಗೌಡರು, ಕುಮಾರಸ್ವಾಮಿ ಭಾಷಣ ಮಾಡಿದ್ರು. ನಾವು ಕೂಡ ಪ್ರಶ್ನೆ ಕೇಳಿದ್ದೇವೆ. ಎರಡನ್ನೂ ಯೋಚನೆ ಮಾಡುವ ಶಕ್ತಿ ಜನರಿಗಿದೆ ಎಂದಿದ್ದಾರೆ.