• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಲಿದಾನ ನೀಡುತ್ತೇವೆ, ಆದರೆ ಸರ್ಕಾರದ ಮುಂದೆ ತಲೆ ಬಾಗುವುದಿಲ್ಲ – ಆಜಾ಼ದ್

by
January 19, 2020
in ದೇಶ
0
ಬಲಿದಾನ ನೀಡುತ್ತೇವೆ
Share on WhatsAppShare on FacebookShare on Telegram

“ಬಲಿದಾನ್‌ ದೇಂಗೆ, ಫಾಂಸಿ ಭಿ ಚಡ್‌ ಜಾಯೆಂಗೆ, ಹಜಾ಼ರ್‌ ಬಾರ್‌ ಜೇಲ್‌ ಜಾಯೆಂಗೆ, ಮಗರ್‌ ಇಸ್‌ ಸರ್ಕಾರ್‌ ಕೆ ಸಾಮ್ನೆ ಜುಕೆಂಗೆ ನಹಿ”, ಭೀಮ್‌ ಆರ್ಮಿ ಮುಖಂಡ ಚಂದ್ರಶೇಖರ್‌ ಆಜಾ಼ದ್‌ ಅವರು ಹೇಳಿದ ಮಾತುಗಳಿವು. ಬಲಿದಾನ ನೀಡುತ್ತೇವೆ, ಗಲ್ಲಿಗೂ ಏರುತ್ತವೆ, ಸಾವಿರ ಬಾರಿ ಜೈಲಿಗೆ ಬೇಕದರೂ ಹೋಗುತ್ತೇವೆ, ಆದರೆ ಈ ಸರ್ಕಾರದ ಮುಂದೆ ಯಾವತ್ತೂ ತಲೆ ಬಾಗುವುದಿಲ್ಲ ಎಂದು CAA ವಿರುದ್ದ ತಮ್ಮ ಮುಂದಿನ ಹೋರಾಟದ ಸ್ವರೂಪವನ್ನು ಆಜಾ಼ದ್‌ ಅವರು ಬಿಚ್ಚಿಟ್ಟಿದ್ದಾರೆ.

ADVERTISEMENT

ಡಿಸೆಂಬರ್‌ 20ರಂದು ದೆಹಲಿಯ ದರಿಯಾಗಂಜ್‌ನಲ್ಲಿ CAA ವಿರುದ್ದ ಪ್ರತಿಭಟಿಸುವ ಸಂದರ್ಭದಲ್ಲಿ ಆಜಾ಼ದ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಜುಮ್ಮಾ ಮಸೀದಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು ದೆಹಲಿಯಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಲು ಕಾರಣವೆಂದು ಪೊಲೀಸರ ಆರೋಪವಾಗಿತ್ತು. ಜನವರಿ 15ರಂದು ಷರತ್ತು ಬದ್ದ ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು. ಬಿಡುಗಡೆಗೊಂಡ 24 ತಾಸುಗಳ ಒಳಗಾಗಿ ದೆಹಲಿಯಿಂದ ಮುಂದಿನ ನಾಲ್ಕು ವಾರಗಳ ಮಟ್ಟಿಗಾದರೂ ದೂರವಿರಬೇಕಂಬುದು ಕೋರ್ಟ್‌ನ ಆದೇಶವಾಗಿತ್ತು. ದೆಹಲಿಯಲ್ಲಿದ್ದ 24 ತಾಸಗಳಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವನ್ನು ದೆಹಲಿ ನ್ಯಾಯಾಲಯ ನೀಡಲಿಲ್ಲ.

ಹೀಗೆ ಕಠಿಣ ಷರತ್ತುಗಳ ಮೇಲೆ ಜನವರಿ 16ರಂದು ತಿಹಾರ್‌ ಜೈಲಿನಿಂದ ಹೊರಕ್ಕೆ ಕಾಲಿಟ್ಟ ಉತ್ತರ ಪ್ರದೇಶದ ದಲಿತ ಮುಖಂಡ ಆಜಾ಼ದ್‌ರನ್ನು ಅವರ ಸಾವಿರಾರು ಬೆಂಬಲಿಗರು ʼಜೈ ಭೀಮ್‌ʼ ಹಾಗೂ ʼಇಂಕ್ವಿಲಾಬ್‌ ಜಿಂದಾಬಾದ್‌ʼ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಹೀಗೆ ಬಿಡುಗಡೆಗೊಂಡ ಆಜಾ಼ದ್‌ ಅವರು ಪ್ರತಿಭಟನೆಯಲ್ಲಿ ಭಾಗವಹಿಲು ಅನುಮತಿ ಇಲ್ಲದೇ ಇರುವುದರಿಂದ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಜುಮ್ಮಾ ಮಸೀದಿ, ರವಿದಾಸ ದೇವಸ್ಥಾನ ಹಾಗೂ ಬಾಂಗ್ಲಾ ಸಾಹಿಬ್‌ ಗುರುದ್ವಾರವನ್ನು ಭೇಟಿ ಮಾಡಿ ಇಂಡಿಯನ್‌ ವಿಮೆನ್ಸ್‌ ಪ್ರೆಸ್‌ ಕಾರ್ಪ್ಸ್ ಕಡೆ ಹೆಜ್ಜೆ ಹಾಕಿದರು. ರಾತ್ರಿ ಸುಮಾರು 9 ಗಂಟೆಗೆ ದೆಹಲಿಯ ಗಡಿಯನ್ನು ದಾಟಿದರು.

“ನಾನು ನಿರಾಶ್ರಿತರಿಗೆ ಪೌರತ್ವ ನೋಡುವಂತಹ CAA ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಆದರೆ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹೊರಟಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇನೆ, ಒಂದು ವೇಳೆ ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ನಮಗೆ ಸಂವಿಧಾನವನ್ನು ನೀಡದೇ ಹೋಗುತ್ತಿದ್ದರೆ, ನಮ್ಮ ಹಕ್ಕುಗಳನ್ನು ನೀಡದೇ ಹೋಗುತ್ತಿದ್ದರೆ ನನ್ನಂತಹ ಹಾಗೂ ಹಲವು ಕೆಳ ವರ್ಗದ ಜನರು ಇಂದಿಗೂ ಮೇಲ್ವರ್ಗದವರಿಂದ ಶೋಷಣೆಯನ್ನು ಅನುಭವಿಸಬೇಕಾಗುತ್ತಿತ್ತು.” ಎಂದು ಹೇಳಿದರು.

ತಮ್ಮ “ಪ್ರಚೋದನಾಕಾರಿ” ಭಾಷಣ ಮಾಡಿದ ದಿನದ ಕುರಿತು ಮಾತನಾಡಿದ ಅವರು “ನಾನು ಅಂದು ಜುಮ್ಮಾ ಮಸೀದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋದೆ. ಏಕೆಂದರೆ ಭಾರತದಲ್ಲಿ ನಡೆದ ಚಳವಳಿಗಳ ಜೊತೆಗೆ ದೆಹಲಿಯ ಜುಮ್ಮಾ ಮಸೀದಿಗೆ ಐತಿಹಾಸಿಕ ಸಂಬಂಧವಿದೆ. ಮೌಲಾನಾ ಆಜಾ಼ದ್‌ ಅವರು ಭಾರತದ ವಿಭಜನೆಯ ವಿರುದ್ದ ತಮ್ಮ ಚಳವಳಿಯನ್ನು ಇಲ್ಲಿಂದಲೇ ಪ್ರಾರಂಭಿಸಿದ್ದರು. ಇಂದು ಭಾರತ ಇನ್ನೊಂದು ವಿಭಜನೆಯನ್ನು ಎದುರು ನೋಡುತ್ತಾ ಇದೆ. ಇದನ್ನು ಪ್ರತಿಭಟಿಸುವುದು ನನ್ನ ಸಾಂವಿಧಾನಿಕ ಹಕ್ಕು,” ಎಂದರು.

ಈ ವೇಳೆ ಸಂವಿಧಾನದ ಆರ್ಟಿಕಲ್‌ 51ರ Part IV A ಅನ್ನು ನೆನಪಿಸಿಕೊಂಡ ಆಜಾ಼ದ್‌, ಭಾರತದ ಸಂವಿಧಾನವನ್ನು ರಕ್ಷಿಸುವುದು ಎಲ್ಲರ ಹಕ್ಕು. ಯಾವಾಗ ಸರ್ಕಾರವು ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತದೆಯೋ, ಆಗ ಸಂವಿಧಾನ ಕೂಡ ದುರ್ಬಲವಾಗುತ್ತದೆ. ಆ ಕಾರಣಕ್ಕಾಗಿ ನಾನು CAA ವಿರುದ್ದ ಬೀದಿಗೆ ಇಳಿದಿದ್ದೇನೆ. ಅಸ್ಸಾಂನಲ್ಲಿ 19 ಲಕ್ಷ ಜನರನ್ನು NRCಯಿಂದ ಹೊರಗಿಡಲಾಗಿದೆ. ಪ್ರಧಾನಿ ಮೋದಿಯವರು ನಿರಾಖರಿಸುತ್ತಿರುವ ಗೃಹ ಮಂತ್ರ ಅಮಿತ್‌ ಶಾ ಅವರು ಒಪ್ಪಿಕೊಳ್ಳುತ್ತಿರುವ NRCಯನ್ನು ದೇಶದಾದ್ಯಂತ ಜಾರಿಗೆ ತಂದರೆ ಅದಕ್ಕೆ ತಗಲುವ ಖರ್ಚು ಎಷ್ಟಾಗಬಹುದು, ಎಂದು ಅವರು ಪ್ರಶ್ನೆ ಹಾಕಿದರು.

ಇಷ್ಟರವರೆಗೆ ದೇಶವನ್ನು ಒಡೆಯಲು ರಾಮ ಮಂದಿರವನ್ನು ದಾಳವಾಗಿಸಿದ್ದರು. ಈಗ ಅದು ಮುಕ್ತಾಯಗೊಂಡಿರುವುದಕ್ಕೆ, ಮುಂದಿನ ಹಂತದ ದೇಶ ಒಡೆಯುವ ಯೋಜನೆಯಾಗಿ CAA, NRC ಹಾಗೂ NPR ಅನ್ನು ಜಾರಿಗೆ ತರುತ್ತಿದ್ದಾರೆ. ಈ ಸರ್ಕಾರಕ್ಕಿಂತ ನಾವೇ ಹೆಚ್ಚು ಭಾರತೀಯರು. ಈ ದೇಶಕ್ಕಾಗಿ ರಕ್ತವನ್ನೂ ನೀಡಲೂ ಸಿದ್ದನಿದ್ದೇನೆ. ಪ್ರಧಾನಿ ಹಾಗೂ ಗೃಹ ಮಂತ್ರಿಗಳಿಗೆ ಒಂದು ವಿಷಯ ನೆನಪಿಸುತ್ತಾ ಇದ್ದೇನೆ, ದೇಶದ ಯಾವುದೇ ನ್ಯಾಯಾಲಯಕ್ಕಿಂತ ಜನತಾ ನ್ಯಾಯಾಲಯ ದೊಡ್ಡದು. ಪ್ರಧಾನಿಯವರು ತಮ್ಮನ್ನು ಸಂವಿಧಾನಕ್ಕಿಂತ ಮೇಲ್ಪಟ್ಟವರು ಎಂದು ಭಾವಿಸಿಕೊಂಡಿದ್ದಾರೆ. ಈ ನೆಲದ ಸೋದರತ್ವ ಹಾಗೂ ಭ್ರಾತೃತ್ವತೆ ನಿಮ್ಮ ರಾಜಕೀಯಕ್ಕಿಂತಲೂ ಮೇಲು, ಎಂದು ಗುಡುಗಿದರು.

“ಬಿಜೆಪಿಯವರಿಗೆ ಇದು ಕೇವಲ ಚುನಾವಣಾ ಅಜೆಂಡಾ. ಪಶ್ಚಿಮ ಬಂಗಾಳ ಚುನಾವಣೆಯ ನಂತರ ಇದನ್ನು ಕೈಬಿಡಲೂ ಬಹುದು, ಆದರೆ ನಮಗಿದು ಸಾವು ಬದುಕಿನ ಹೋರಾಟ. ಈ ಹೋರಾಟದಲ್ಲಿ ಒಂದಿಚ್ಚೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ವಿಶ್ವಾಸವಿದೆ ಈ ಯುದ್ದದಲ್ಲಿ ಜಯ ನಮ್ಮದೇ ಆಗಿರುತ್ತದೆ,” ಎಂದರು.

ರಾಜಕೀಯ ಅಖಾಡಕ್ಕೆ ಧುಮುಕುವ ಸಿದ್ದತೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ರಾಜಕೀಯಕ್ಕೆ ಬರಬೇಕಾಗಿತ್ತು, ಆದರೆ ಅದಕ್ಕಿಂತಲೂ ಮುಖ್ಯವಾಗಿ CAA, NRC ಪ್ರತಿಭಟನೆಗಳನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಈ ಯುದ್ದದಲ್ಲಿ ಯಾರು ನೇತೃತ್ವ ವಹಿಸಿದರು, ಅವರ ಹಿಂದೆ ಬೆನ್ನುಲುಬಾಗಿ ನಿಲ್ಲಲು ನಾನು ಸಿದ್ದ, ಎಂದು ಹೇಳಿದರು.

ಕೃಪೆ: ದಿ ವೈರ್

Tags: AazadarrestedDaryaganjDelhi PoliceJama Masjidprotestspeechviolenceಆಜಾದ್ಎನ್ಆರ್ ಸಿಜಮ್ಮಾ ಮಸೀದಿಜಾಮೀನುದರ್ಯಾಗಂಜ್ದೆಹಲಿ ಪೊಲೀಸ್ಪ್ರತಿಭಟನೆಬಂಧನಭಾಷಣರಾಷ್ಟ್ರದ ರಾಜಧಾನಿಸಿಎಎಹಿಂಸಾಚಾರ
Previous Post

ಜಯದೇವ ಜಗತ್ತಿನ `ಶ್ರೇಷ್ಠ ಹೃದಯ ಆಸ್ಪತ್ರೆʼ

Next Post

7,100 ಕೋಟಿ ಹೂಡಿಕೆ ಮಾಡಿದರೂ ಅಮೆಜಾನ್ ಮೇಲೆ ದ್ವೇಷವೇಕೆ?     

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
7

7,100 ಕೋಟಿ ಹೂಡಿಕೆ ಮಾಡಿದರೂ ಅಮೆಜಾನ್ ಮೇಲೆ ದ್ವೇಷವೇಕೆ?     

Please login to join discussion

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

October 24, 2025
ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada