ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಶಾಹಿದ್ ಅಫ್ರಿದಿ ಕೋವಿಡ್-19 ರೋಗಕ್ಕೆ ತುತ್ತಾಗಿದ್ದಾರೆ. ಇದನ್ನ ಖುದ್ದು ಅವರೇ ತಮ್ಮ ಟ್ವಿಟ್ಟರ್ ನಲ್ಲಿ ದೃಢಪಡಿಸಿದ್ದು, “ಕಳೆದ ಗುರುವಾದಿಂದ ಅನಾರೋಗ್ಯದ ಭಾವನೆ ಕಾಡುತ್ತಿತ್ತು. ಅಲ್ಲದೇ ದೇಹವು ವಿಪರೀತ ನೋವು ಅನುಭವಿಸುತ್ತಿತ್ತು. ಪರೀಕ್ಷಿಸಿದಾಗ ಕೋವಿಡ್-19 ಇರುವುದು ದೃಢಪಟ್ಟಿದೆ. ಶೀಘ್ರ ಗುಣಮುಖನಾಗಲು ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ. ಇನ್ಶಾಅಲ್ಲಾಹ್” ಅಂತಾ ಟ್ವೀಟ್ ಮಾಡಿದ್ದಾರೆ.
I’ve been feeling unwell since Thursday; my body had been aching badly. I’ve been tested and unfortunately I’m covid positive. Need prayers for a speedy recovery, InshaAllah #COVID19 #pandemic #hopenotout #staysafe #stayhome
— Shahid Afridi (@SAfridiOfficial) June 13, 2020
ಶಾಹಿದ್ ಅಫ್ರಿದಿ ಕೋವಿಡ್-19 ತುತ್ತಾಗುವುದರೊಂದಿಗೆ ಪಾಕಿಸ್ತಾನದ ಮೂರನೇ ಕ್ರಿಕೆಟ್ ಪಟು ಸೋಂಕಿಗೆ ತುತ್ತಾದಂತಾಗಿದೆ. ಈ ಮೊದಲು ತೌಫೀಕ್ ಉಮರ್ ಹಾಗೂ ಝಫರ್ ಸರ್ಫರಾಝ್ ಕರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಆ ಇಬ್ಬರು ಆಟಗಾರರು ಹದಿನಾಲ್ಕು ದಿನಗಳ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆದಿದ್ದು ಗುಣಮುಖರಾಗುತ್ತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತನ್ನದೇ ವಿಭಿನ್ನ ಶೈಲಿಯ ಆಟದಿಂದ ಹೆಸರುವಾಸಿಯಾಗಿದ್ದ ಶಾಹಿದ್ ಅಫ್ರಿದಿ, ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಶ್ರೇಷ್ಠ ಆಲ್‌ರೌಂಡರ್ ಆಗಿ ಗುರುತಿಸಿಕೊಂಡವರು. ಅಲ್ಲದೇ ಇದೀಗ ಎದುರಾಗಿರುವ ಕರೋನಾ ಸೋಂಕಿನ ವಿರುದ್ಧವೂ ಅವರು ತನ್ನ ʼಶಾಹಿದ್ ಅಫ್ರಿದಿ ಫೌಂಡೇಶನ್ʼ ವತಿಯಿಂದ ಸೇವೆಯಲ್ಲಿ ನಿರತರಾಗಿದ್ದರು. ಜೊತೆಗೆ ಅವರ ಭಾರತೀಯ ಸ್ನೇಹಿತರಾದ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಮೂಲಕ ದೇಣಿಗೆ ಸಂಗ್ರಹಕ್ಕೆ ಮನವಿ ಮಾಡಿದ್ದು, ಅದರಂತೆ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದರು.
ಆದರೆ ಕಳೆದ ತಿಂಗಳು ಪಿಓಕೆ (ಪಾಕ್ ಆಕ್ರಮಿತ ಕಾಶ್ಮೀರ) ಭೇಟಿ ನೀಡಿದ್ದ ಶಾಹಿದ್ ಅಫ್ರಿದಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೀಕಿಸುವ ಮೂಲಕ ಯುವರಾಜ್, ಹರ್ಭಜನ್ ಸಹಿತ ಹಲವು ಭಾರತೀಯ ಕ್ರಿಕೆಟಿಗರ ಹಾಗೂ ಟ್ವಿಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.






