ಮುಂದಿನ ಐದು ತಿಂಗಳಲ್ಲಿ ಎದುರಾಗಲಿರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಗೆದ್ದು ಅಧಿಕಾರ ಹಿಡಿಯಲು ಆಡಳಿತರೂಢ ಟಿಎಂಪಿ ಸೇರಿದಂತೆ ಬಿಜೆಪಿ ಮತ್ತು ಎಡ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿದೆ. ಹಾಗಾಗಿ ಇತ್ತೀಚೆಗೆ ಚುನಾವಣೆ ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಹಲವು ರಣತಂತ್ರಗಳನ್ನು ಹಣೆಯುತ್ತಿವೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಯಾರಿಗೂ ಬಹುಮತ ಸಿಗೋದಿಲ್ಲ, ಬದಲಿಗೆ ಅಂತಂತ್ರ ಫಲಿಂತಾಶ ಉಂಟಾಗಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಅತಂತ್ರ ಫಲಿತಾಂಶ ಉಂಟಾದಲ್ಲಿ, ಕರ್ನಾಟಕ ಮಾದರಿಯಲ್ಲೇ ಪಶ್ಚಿಮ ಬಂಗಾಳದಲ್ಲೂ ಆಪರೇಷನ್ ಕಮಲ ಶುರುವಾಗಬಹುದು. ಹೀಗಾಗಿ ಈಗಲೇ ಅಲ್ಲಿ ರೆಸಾರ್ಟ್ ರಾಜಕಾರಣ ಮಾಡಲು ಕಾಂಗ್ರೆಸ್ ಹೈಕಮಾಂಡ್ ತಯಾರಿ ಮಾಡಿಕೊಳ್ಳುವಂತೆ ಡಿ.ಕೆ ಶಿವಕುಮಾರ್ಗೆ ಸೂಚಿಸಿದೆಯಂತೆ. ಕರ್ನಾಟಕದ ಮೈತ್ರಿ ಸರ್ಕಾರ ಉಳಿಸಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ರಚಿಸುವ ಹೊಣೆ ನೀಡಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎರಡು ವರ್ಷಗಳ ಹಿಂದೆ 2018ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಅಂತಂತ್ರ ಫಲಿಂತಾಶ ಉಂಟಾಯಿತು. ಈ ವೇಳೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿಯೇ ಬಿಟ್ಟರು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದ ಕಾರಣಕ್ಕೆ ಬಿಜೆಪಿ ಸರ್ಕಾರ ಒಂದೇ ವಾರದಲ್ಲಿ ಸ್ಥಗಿತಗೊಂಡಿತ್ತು. ಈ ಮಧ್ಯೆ ಅಧಿಕಾರಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪ ಪಡೆ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಅಂದಿನ ಪವರ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕಾರಣಕ್ಕೆ ಮುಂದಾಯಿತು. ಕೇವಲ 38 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್ಗೆ ಸಿಎಂ ಸ್ಥಾನವನ್ನು ಬಿಟ್ಟು, ಸರ್ಕಾರ ರಚಿಸಲು ಕಾಂಗ್ರೆಸ್ ತಂತ್ರ ರೂಪಿಸಿತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆದೇಶದ ಮೇರೆಗೆ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್, ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಜೊತೆಗೆ ಮಾತುಕತೆ ನಡೆಸಿದರು. ಮೈತ್ರಿ ಸರ್ಕಾರ ರಚಿಸುವುದಾಗಿ ಘೋಷಿಸಿಯೇ ಬಿಟ್ಟರು.
ಅಂದು ಕಾಂಗ್ರೆಸ್ ಶಾಸಕರು ಯಾರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ನೋಡಿಕೊಳ್ಳಲು ಡಿಕೆ ಶಿವಕುಮಾರ್ ಸಹೋದರರು ಭಾರೀ ಸರ್ಕಸ್ ನಡೆಸಿದರು. ಸರ್ಕಾರ ರಚನೆಗೆ ಬೇಕಿದ್ದ 112 ಸೀಟುಗಳಿಗಿಂತ ಕಾಂಗ್ರೆಸ್-ಜೆಡಿಎಸ್ ಬಳಿ ಇನ್ನು ಅಧಿಕವಾಗಿ 6 ಸೀಟುಗಳಿದ್ದವು. ಜತೆಗೆ ಪಕ್ಷೇತರ ಅಭ್ಯರ್ಥಿಗಳನ್ನು ಹಿಡಿದಿಡುವಲ್ಲಿ ಡಿಕೆಶಿ ಯಶ್ವಿಸಿಯಾದರು. ರೆಸಾರ್ಟ್ ರಾಜಕಾರಣದ ನಂತರ ವಿಧಾನಸಭಾ ಅದಿವೇಶನದಲ್ಲಿ ಬಿಜೆಪಿ ಬಹುಮತ ಸಾಬೀತು ಮಾಡಲಾಗದೇ ಸೋಲನ್ನು ಒಪ್ಪಿಕೊಂಡಿತು. ಕೊನೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಎಚ್.ಡಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಎಂದು ಘೋಷಿಸಿದರು.
ಹೀಗೆಯೇ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಸಿಗೋದಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್ ಬಳಿ ದೀದಿ ಬರಲೇಬೇಕು. ಈ ವೇಳೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಬಹುದು. ಆದ್ದರಿಂದ ಸೇಮ್ ಟು ಸೇಮ್.. ಕರ್ನಾಟಕದಲ್ಲಾದ ಮಾದರಿಯ ಪ್ಲಾನ್ ಪಶ್ಚಿಮ ಬಂಗಾಳದಲ್ಲಿ ಅಳವಡಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗುತ್ತಿದೆ. ಯಾವುದೇ ಕಾರಣಕ್ಕೂ ನಮಗೆ ಮೈತ್ರಿ ಸರ್ಕಾರ ರಚಿಸುವ ಅವಕಾಶವಿದ್ದಲ್ಲಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಅನ್ನು ಗಟ್ಟಿಗೊಳಿಸಬೇಕು. ಒಂದು ವೇಳೆ ನಿರೀಕ್ಷೆಯಂತೆಯೇ ಅತಂತ್ರ ಫಲಿತಾಂಶ ಬಂದಲ್ಲಿ, ಇದೇ ತಂತ್ರಗಳನ್ನು ಅಳವಡಿಸಲು ಡಿಕೆಶಿಗೆ ಹೈಕಮಾಂಡ್ ಸೂಚಿಸಿದೆ.
ಈ ಬಾರಿ ನಾವು ಅಧಿಕಾರ ಹಿಡಿಯಲೇಬೇಕಿದೆ. ಟಿಎಂಸಿ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬಂದರೇ ಏನು ಮಾಡಲಾಗುವುದಿಲ್ಲ. ಒಂದು ವೇಳೆ ಹಂಗ್ ಅಸೆಂಬ್ಲಿ ಆದರೇ, ಗೆಲ್ಲುವ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಬೇಕಾಗುತ್ತದೆ. ಹೀಗಾಗಿ ಈಗಿನಿಂದಲೇ ಕಾಂಗ್ರೆಸ್ನ ರೆಬೆಲ್ಸ್ ಶಾಸಕರು, ಗೆಲ್ಲುವ ಪಕ್ಷೇತರ ಅಭ್ಯರ್ಥಿಗಳು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಪಕ್ಷ ಮಾಡಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡದಂತೆ ನೋಡಿಕೊಳ್ಳಬೇಕೆಂದು ಡಿಕೆಶಿಗೆ ಹೈಕಮಾಂಡ್ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿಯೂ ಅತಂತ್ರ ಫಲಿತಾಂಶದ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕದಲ್ಲಿಯೇ ಮಾಡಿದ ಹಾಗೆಯೇ ರೆಸಾರ್ಟ್ ರಾಜಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿದ್ದವಾಗಿದೆ. ಹೈಕಮಾಂಡ್ ಸೂಚನೆ ಮೇರೆಗೆ ಅಲ್ಲಿನ ಕಾಂಗ್ರೆಸ್ನ ರಾಜ್ಯ ನಾಯಕರು ಪಕ್ಷೇತರರ ಜೊತೆ ಒಳ್ಳ ಸಂಬಂಧವನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ.
ಇನ್ನು ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಲು ಕೀಲಕ ಪಾತ್ರವಹಿಸಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪಶ್ಚಿಮ ಬಂಗಾಳಕ್ಕೆ ಸದ್ಯದಲ್ಲೇ ಭೇಟಿ ನೀಡುವಂತೆ ಹೈಕಮಾಂಡ್ ಆದೇಶಿಸಿದೆ. ಇಲ್ಲಿ ಪಕ್ಷೇತರ ಶಾಸಕರನ್ನು ಹಿಡಿದಿಡಟ್ಟುಕೊಳ್ಳುವ, ಕ್ಯಾಂಪ್ ಮತ್ತು ರೆಸಾರ್ಟ್ ರಾಜಕಾರಣ ಮಾಡುವ ಜವಾಬ್ದಾರಿಯನ್ನು ಡಿಕೆಶಿಗೆ ನೀಡಲಾಗಿದೆ. ಅಲ್ಲದೇ ಡಿಕೆಶಿಗೆ ಕೇಂದ್ರ ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ. ಒಟ್ನಲ್ಲಿ ಪಶ್ಚಿಮ ಬಂಗಾಳದ ಮೇಲೆ ಟಿಎಂಸಿ, ಬಿಜೆಪಿ ನಡುವೇ ಕಾಂಗ್ರೆಸ್ ಹೈಕಮಾಂಡ್ ಕಣ್ಣು ನೆಟ್ಟಿದ್ದು, ಡಿಕೆಶಿ ಹವಾ ನಡೆಯುತ್ತಾ ಎಂದು ಕಾದು ನೋಡಬೇಕಿದೆ.