ಲಡಾಖ್ ಭಾಗದಲ್ಲಿ ಚೀನಾ ಭಾರತ ಸೇನೆಯ ನಡುವೆ ಉಂಟಾದ ಘರ್ಷಣೆಯ ಬಗ್ಗೆ ಮೊದಲ ಬಾರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾತನಾಡಿದ್ದಾರೆ. ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷವನ್ನು ಐತಿಹಾಸಿಕ ದ್ರೊಹವೆಂದು ಮಾಜಿ ಪ್ರಧಾನಿ ಬಣ್ಣಿಸಿದ್ದಾರೆ.
ಗಡಿ ರಕ್ಷಣೆಗೆ ಅಪ್ರತಿಮ ತ್ಯಾಗ ಮಾಡಿರುವ ಕರ್ನಲ್ ಬಿ ಸಂತೋಷ್ ಬಾಬು ಹಾಗೂ ಯೋಧರ ಸಾವಿಗೆ ನ್ಯಾಯ ಒದಗಿಸಬೇಕೆಂದು ಸರಕಾರಕ್ಕೆ ಕೇಳಿಕೊಂಡಿದ್ದಾರೆ.
Also Read: “ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು
ಸರ್ವ ಪಕ್ಷ ಸಭೆಯ ಬಳಿಕ ಮಾತನಾಡಿದ ಮೋದಿಯ ಹೇಳಿಕೆ ವಿವಾದವನ್ನು ಎಬ್ಬಿಸಿತ್ತು. ಈ ಹಿನ್ನಲೆಯಲ್ಲಿ ಮಾತನಾಡಿದ ಮನಮೋಹನ್ ಸಿಂಗ್ ಪ್ರಧಾನಿಯವರು ಮಾತನಾಡುವಾಗ ನಿಗಾ ವಹಿಸಬೇಕು. ತಮ್ಮ ಮಾತಿನ ಪರಿಣಾಮದ ಕುರಿತು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ನಾವು ಈಗ ಐತಿಹಾಸಿಕ ತಿರುವು ಪಡೆಯುವ ಘಟ್ಟದಲ್ಲಿದ್ದೇವೆ. ನಮ್ಮ ಸರ್ಕಾರ ಈಗ ತೆಗೆದುಕೊಳ್ಳುವ ನಿರ್ಣಯ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಹೇಗೆ ನೆನಪಿಸಿಕೊಳ್ಳುತ್ತವೆ ಅನ್ನುವುದಕ್ಕೆ ಮುಖ್ಯವಾಗುತ್ತದೆ. ನಮ್ಮನ್ನು ಆಳುವವರು ಮಹತ್ತರ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಆ ಹೊಣೆ ಪ್ರಧಾನ ಮಂತ್ರಿ ಕಚೇರಿಯ ಹೆಗಲಲ್ಲಿದೆ. ಹಾಗಾಗಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮಾತನಾಡುವಾಗ ಪ್ರಧಾನಿ ತನ್ನ ಮಾತುಗಳು ಯಾವ ಪರಿಣಾಮ ಬೀರುತ್ತವೆ ಎಂಬುವುದನ್ನು ಮನಸಲ್ಲಿಟ್ಟುಕೊಂಡು ವಾಕ್ಯಗಳನ್ನು ಪ್ರಯೋಗಿಸಬೇಕು ಎಂದು ಬುದ್ದಿ ಮಾತು ಹೇಳಿದ್ದಾರೆ.
Also Read: ಮನಮೋಹನ್ ಸಿಂಗರ ತುಳುಕಿದ ಮೌನವೂ, ನರೇಂದ್ರ ಮೋದಿಯ ಖಾಲಿ ಗುಂಡಿಗೆಯೂ..!
ಕಳೆದ ಎಪ್ರಿಲ್‌ನಿಂದ ಚೀನಾ ಕಾನೂನು ಬಾಹಿರವಾಗಿ ನಮ್ಮ ಗಡಿಯೊಳಗೆ ನುಸುಳಿ ಅತಿಕ್ರಮಣ ನಡೆಸಿದೆ. ಚೀನಾದ ಈ ಭಯಪಡಿಸುವ ಕೃತ್ಯಕ್ಕೆ ನಾವು ಬೆದರಬೇಕಾದ ಅಗತ್ಯವಿಲ್ಲ. ಈ ಹೊತ್ತು ಇಡೀ ದೇಶವೇ ಒಂದಾಗಿ ಗಡಿಯ ಮೇಲಿನ ನಮ್ಮ ಸಾರ್ವಭೌಮತ್ವನ್ನು ಎತ್ತಿ ಹಿಡಿಯಬೇಕು. ಅದೇ ವೇಳೆ ಜನರಿಗೆ ತಪ್ಪು ಮಾಹಿತಿ ನೀಡುವುದು ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಸರ್ವ ಪಕ್ಷಗಳ ಸಭೆ ನಡೆಸಿದ ಮೋದಿ, ಬಳಿಕ ನಮ್ಮ ಗಡಿಯೊಳಗೆ ಯಾರೂ ಅತಿಕ್ರಮಿಸಿಲ್ಲ ಎಂದು ಹೇಳಿದ್ದರು. ಚೀನಾ ಕೂಡಾ ಗಾಲ್ವಾನ್ ನಮ್ಮ ಭಾಗ, ನಾವು ಭಾರತದ ಗಡಿಗೆ ನುಸುಲಿಲ್ಲ ಎಂದಿತ್ತು. ಈ ಹಿನ್ನಲೆಯಲ್ಲಿ ಭಾರತದ ಪ್ರಧಾನಿ ಹೇಳಿಕೆ ಸಾಕಷ್ಟು ವಿವಾದವನ್ನು ಎಬ್ಬಿಸಿತ್ತು. ಹಲವಾರು ಮಾಜಿ ಯೋಧರು ಕೂಡ ಪ್ರಧಾನಿಯ ಹೇಳಿಕೆಯನ್ನು ಖಂಡಿಸಿದ್ದರು.
Also Read: ಗಲ್ವಾನ್ ಕಣಿವೆ ಚೀನಾದ ಭಾಗವೆಂದ ಚೀನಾ