• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪದ ಬಳಕೆಯ ಪರಿಣಾಮದ ಕುರಿತು ಪ್ರಧಾನಿ ಎಚ್ಚರವಾಗಿರಬೇಕು- ಮನಮೋಹನ್‌ ಸಿಂಗ್

by
June 22, 2020
in ದೇಶ
0
ಪದ ಬಳಕೆಯ ಪರಿಣಾಮದ ಕುರಿತು ಪ್ರಧಾನಿ ಎಚ್ಚರವಾಗಿರಬೇಕು- ಮನಮೋಹನ್‌ ಸಿಂಗ್
Share on WhatsAppShare on FacebookShare on Telegram

ಲಡಾಖ್‌ ಭಾಗದಲ್ಲಿ ಚೀನಾ ಭಾರತ ಸೇನೆಯ ನಡುವೆ ಉಂಟಾದ ಘರ್ಷಣೆಯ ಬಗ್ಗೆ ಮೊದಲ ಬಾರಿಗೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಮಾತನಾಡಿದ್ದಾರೆ. ಜೂನ್‌ 15ರಂದು ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷವನ್ನು ಐತಿಹಾಸಿಕ ದ್ರೊಹವೆಂದು ಮಾಜಿ ಪ್ರಧಾನಿ ಬಣ್ಣಿಸಿದ್ದಾರೆ.

ADVERTISEMENT

ಗಡಿ ರಕ್ಷಣೆಗೆ ಅಪ್ರತಿಮ ತ್ಯಾಗ ಮಾಡಿರುವ ಕರ್ನಲ್‌ ಬಿ ಸಂತೋಷ್‌ ಬಾಬು ಹಾಗೂ ಯೋಧರ ಸಾವಿಗೆ ನ್ಯಾಯ ಒದಗಿಸಬೇಕೆಂದು ‌ ಸರಕಾರಕ್ಕೆ ಕೇಳಿಕೊಂಡಿದ್ದಾರೆ.

Also Read: “ಮೋದಿ ಚೀನಾಕ್ಕೆ ಶರಣಾಗಿದ್ದಾರೆ..” ಪ್ರಧಾನಿ ಮೇಲಿನ ಭರವಸೆ ಕಳೆದುಕೊಂಡ ನಿವೃತ್ತ ಯೋಧರು

ಸರ್ವ ಪಕ್ಷ ಸಭೆಯ ಬಳಿಕ ಮಾತನಾಡಿದ ಮೋದಿಯ ಹೇಳಿಕೆ ವಿವಾದವನ್ನು ಎಬ್ಬಿಸಿತ್ತು. ಈ ಹಿನ್ನಲೆಯಲ್ಲಿ ಮಾತನಾಡಿದ ಮನಮೋಹನ್‌ ಸಿಂಗ್‌ ಪ್ರಧಾನಿಯವರು ಮಾತನಾಡುವಾಗ ನಿಗಾ ವಹಿಸಬೇಕು. ತಮ್ಮ ಮಾತಿನ ಪರಿಣಾಮದ ಕುರಿತು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ನಾವು ಈಗ ಐತಿಹಾಸಿಕ ತಿರುವು ಪಡೆಯುವ ಘಟ್ಟದಲ್ಲಿದ್ದೇವೆ. ನಮ್ಮ ಸರ್ಕಾರ ಈಗ ತೆಗೆದುಕೊಳ್ಳುವ ನಿರ್ಣಯ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಹೇಗೆ ನೆನಪಿಸಿಕೊಳ್ಳುತ್ತವೆ ಅನ್ನುವುದಕ್ಕೆ ಮುಖ್ಯವಾಗುತ್ತದೆ. ನಮ್ಮನ್ನು ಆಳುವವರು ಮಹತ್ತರ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಆ ಹೊಣೆ ಪ್ರಧಾನ ಮಂತ್ರಿ ಕಚೇರಿಯ ಹೆಗಲಲ್ಲಿದೆ. ಹಾಗಾಗಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮಾತನಾಡುವಾಗ ಪ್ರಧಾನಿ ತನ್ನ ಮಾತುಗಳು ಯಾವ ಪರಿಣಾಮ ಬೀರುತ್ತವೆ ಎಂಬುವುದನ್ನು ಮನಸಲ್ಲಿಟ್ಟುಕೊಂಡು ವಾಕ್ಯಗಳನ್ನು ಪ್ರಯೋಗಿಸಬೇಕು ಎಂದು ಬುದ್ದಿ ಮಾತು ಹೇಳಿದ್ದಾರೆ.

Also Read: ಮನಮೋಹನ್‌ ಸಿಂಗರ ತುಳುಕಿದ ಮೌನವೂ, ‌ನರೇಂದ್ರ ಮೋದಿಯ ಖಾಲಿ ಗುಂಡಿಗೆಯೂ..!

ಕಳೆದ ಎಪ್ರಿಲ್‌ನಿಂದ ಚೀನಾ ಕಾನೂನು ಬಾಹಿರವಾಗಿ ನಮ್ಮ ಗಡಿಯೊಳಗೆ ನುಸುಳಿ ಅತಿಕ್ರಮಣ ನಡೆಸಿದೆ. ಚೀನಾದ ಈ ಭಯಪಡಿಸುವ ಕೃತ್ಯಕ್ಕೆ ನಾವು ಬೆದರಬೇಕಾದ ಅಗತ್ಯವಿಲ್ಲ. ಈ ಹೊತ್ತು ಇಡೀ ದೇಶವೇ ಒಂದಾಗಿ ಗಡಿಯ ಮೇಲಿನ ನಮ್ಮ ಸಾರ್ವಭೌಮತ್ವನ್ನು ಎತ್ತಿ ಹಿಡಿಯಬೇಕು. ಅದೇ ವೇಳೆ ಜನರಿಗೆ ತಪ್ಪು ಮಾಹಿತಿ ನೀಡುವುದು ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಸರ್ಕಾರಕ್ಕೆ ಹೇಳಲು ಬಯಸುತ್ತೇನೆ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಸರ್ವ ಪಕ್ಷಗಳ ಸಭೆ ನಡೆಸಿದ ಮೋದಿ, ಬಳಿಕ ನಮ್ಮ ಗಡಿಯೊಳಗೆ ಯಾರೂ ಅತಿಕ್ರಮಿಸಿಲ್ಲ ಎಂದು ಹೇಳಿದ್ದರು. ಚೀನಾ ಕೂಡಾ ಗಾಲ್ವಾನ್‌ ನಮ್ಮ ಭಾಗ, ನಾವು ಭಾರತದ ಗಡಿಗೆ ನುಸುಲಿಲ್ಲ ಎಂದಿತ್ತು. ಈ ಹಿನ್ನಲೆಯಲ್ಲಿ ಭಾರತದ ಪ್ರಧಾನಿ ಹೇಳಿಕೆ ಸಾಕಷ್ಟು ವಿವಾದವನ್ನು ಎಬ್ಬಿಸಿತ್ತು. ಹಲವಾರು ಮಾಜಿ ಯೋಧರು ಕೂಡ ಪ್ರಧಾನಿಯ ಹೇಳಿಕೆಯನ್ನು ಖಂಡಿಸಿದ್ದರು.

Also Read: ಗಲ್ವಾನ್‌ ಕಣಿವೆ ಚೀನಾದ ಭಾಗವೆಂದ ಚೀನಾ

Tags: ಚೀನಾ-ಭಾರತ ಗಡಿ ಬಿಕ್ಕಟ್ಟುನರೇಂದ್ರ ಮೋದಿಮನಮೋಹನ್ ಸಿಂಗ್
Previous Post

2021 ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಪಾಲಿಗೆ ಸೆಮಿಫೈನಲ್?

Next Post

ಗಲ್ವಾನ್: ಮೂರು ಹಂತದ ಘರ್ಷಣೆಯ ಪೂರ್ಣ ವಿವರ

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
Next Post
ಗಲ್ವಾನ್: ಮೂರು ಹಂತದ ಘರ್ಷಣೆಯ ಪೂರ್ಣ ವಿವರ

ಗಲ್ವಾನ್: ಮೂರು ಹಂತದ ಘರ್ಷಣೆಯ ಪೂರ್ಣ ವಿವರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada