• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪತ್ರಕರ್ತರಿಗೂ ಅಗತ್ಯವಾಗಿದೆ ಕೋವಿಡ್-19ನಿಂದ ರಕ್ಷಣೆ

by
April 23, 2020
in ದೇಶ
0
ಪತ್ರಕರ್ತರಿಗೂ ಅಗತ್ಯವಾಗಿದೆ ಕೋವಿಡ್-19ನಿಂದ ರಕ್ಷಣೆ
Share on WhatsAppShare on FacebookShare on Telegram

ಇಂದು ದೇಶಾದ್ಯಂತ ಲಾಕ್‌ ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಪಾತ್ರ ಗಣನೀಯವಾದುದು. ಏಕೆಂದರೆ ಇಂತಹ ಕ್ಲಿಷ್ಟಕರ ಸಮಯದಲ್ಲಿ ಸರ್ಕಾರದ ನಿರ್ಧಾರಗಳನ್ನು ಜನತೆಗೆ ತಲುಪಿಸಿ ನಿಯಮಾವಳಿಗಳು ಯಶಸ್ವಿ ಆಗುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಮಾದ್ಯಮ ರಂಗದ ಮೇಲಿದೆ. ಸಾಮಾನ್ಯ ಸಂದರ್ಭದಲ್ಲೂ ಮಾದ್ಯಮ ರಂಗವನ್ನು ಪ್ರಜಾ ಪ್ರಭುತ್ವದ ನಾಲ್ಕನೇ ಅಂಗ ಎಂದೇ ಕರೆಯಲಾಗುತ್ತದೆ. ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಲಾಕ್‌ ಡೌನ್‌ ಘೋಷಿಸಿದಲ್ಲಿಂದ ಮಾದ್ಯಮಗಳು ನಿತ್ಯವ ಕೊರೋನ ಸೋಂಕು ಪೀಡಿತರು, ಗುಣಮುಖರಾದವರು, ಮೃತಪಟ್ಟವರು ಎಲ್ಲ ವಿಷಯಗಳನ್ನೂ ವರದಿ ಮಾಡಿಕೊಂಡೆ ಬಂದವು. ಕೊರೋನ ಪೀಡಿತರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕೊರೋನ ಸೋಂಕು ತಗುಲಿದ್ದನ್ನೂ ಮಾದ್ಯಮಗಳು ವರದಿ ಮಾಡಿದವು.

ADVERTISEMENT

ಕಳೆದ ವಾರದಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರದಲ್ಲಿ ಮಾಧ್ಯಮದವರಿಗೂ ಸಾಮೂಹಿಕವಾಗಿ ಸೋಂಕು ತಗುಲಿರುವುದನ್ನೂ ಮಾದ್ಯಮಗಳೇ ವರದಿ ಮಾಡಿದವು. ಈ ಸುದ್ದಿನಿಜಕ್ಕೂ ಮಾಧ್ಯಮ ರಂಗವನ್ನೇ ಬೆಚ್ಚಿ ಬೀಳಿಸಿದೆ. ಏಕೆಂದರೆ ಮಾಧ್ಯಮ ಮಿತ್ರರು ಸರ್ಕಾರದ ಉನ್ನತ ಅಧಿಕಾರಿಗಳು, ರಾಜಕಾರಿಣಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಮಾಧ್ಯಮದವರಿಗೆ ಸೋಂಕು ಹರಡಿದರೆ ಆ ಮೂಲಕ ಶಾಸಕಾಂಗ, ಕಾರ್ಯಾಂಗದ ಪಾಲಕರಿಗೂ ಸೋಂಕು ತಗುಲುವುದು ಬಹಳ ಸರಾಗವಾಗುತ್ತದೆ. ಈ ರೀತಿ ಸೋಂಕು ಹರಡಿದರೆ ವ್ಯವಸ್ಥೆಯೇ ಕುಸಿದಂತಾಗುತ್ತದೆ. ಹಾಗಾಗಿ ಮಾಧ್ಯಮ ಮಿತ್ರರು ಇಂದು ಅತ್ಯಂತ ಎಚ್ಚರಿಕೆ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ.ಕಳೆದ ವಾರ ಮುಂಬೈನಲ್ಲಿ ಪತ್ರಕರ್ತರಿಗೂ ಸೋಂಕು ತಗುಲಿರುವುದು ಮೊದಲ ಬಾರಿಗೆ ವರದಿಆಯಿತು. ಇದರ ಬೆನ್ನಲ್ಲೇ ಚೆನ್ನೈನಲ್ಲಿ ಒಂದೇ ಟಿವಿ ಚಾನೆಲ್‌ ನ 26 ಜನರಿಗೂ ಕರೋನಾ ಸೋಂಕು ತಗುಲಿರುವುದು ಪತ್ತೆ ಅಗಿದೆ. ಮುಂಬೈ ಮತ್ತು ಚೆನ್ನೈನಲ್ಲಿ ಒಟ್ಟು 276 ಕೋವಿಡ್‌ – 19 ಪರೀಕ್ಷೆಗಳನ್ನು ನಡೆಸಿದಾಗ ಇದರಲ್ಲಿ 80 ಪಾಸಿಟಿವ್‌ ಕಂಡು ಬಂದಿರುವುದು ನಿಜಕ್ಕೂ ಅತಂಕಕಾರಿ ವಿಷಯವಾಗಿದೆ.

ಫೀಲ್ಡ್‌ ನಲ್ಲಿ ಕೆಲಸ ಮಾಡುವ ತಳ ಮಟ್ಟದ ಮಾದ್ಯಮ ಕೆಲಸಗಾರರಾದ ಪತ್ರಕರ್ತರು, ಫೋಟೋ ಗ್ರಾಫರ್‌ ಗಳು ಮತ್ತು ಕ್ಯಾಮೆರಾಮೆನ್‌ ಗಳು ಮಾಸ್ಕ್‌ ಗಳು ಇನ್ನಿತರ ವೈಯಕ್ತಿಕ ಸುರಕ್ಷಾ ವಸ್ತುಗಳನ್ನು ಧರಿಸಿದ್ದರೂ ಕೂಡ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇವರು ಬಹು ಬೇಗನೆ ಸೋಂಕಿಗೆ ತುತ್ತಾಗುತ್ತಾರೆ.ಆದ್ದರಿಂದ ಮಾಧ್ಯಮಗಳ ಕೆಲಸಗಾರರು ಕೋವಿಡ್ -19 ಸೋಂಕು ಪರೀಕ್ಷೆಗಳಿಗೆ ನಿಯಮಿತವಾಗಿ ಒಳಗಾಗುವುದು ಬಹಳ ಮುಖ್ಯ. ಇದಕ್ಕಾಗಿಯೇ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ ಈಗ ಪತ್ರಕರ್ತರಿಗೆ ಉಚಿತ ಪರೀಕ್ಷಾ ಕೇಂದ್ರವನ್ನು ದೆಹಲಿಯಲ್ಲಿ ಸ್ಥಾಪಿಸಿದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಕೂಡ ರಾಜ್ಯ ಸರ್ಕಾರ ಶೀಘ್ರದಲ್ಲೇ ಪತ್ರಕರ್ತರಿಗೆ ಕೋವಿಡ್ -19 ಪರೀಕ್ಷೆಗಳನ್ನು ಏರ್ಪಡಿಸುವುದಾಗಿ ಘೋಷಿಸಿದೆ. ಪತ್ರಕರ್ತರಿಗೆ ಕೋವಿಡ್‌ ಪರೀಕ್ಷೆ ನಡೆಸಬೇಕೆಂದು ಮೊದಲು ಆಗ್ರಹಿಸಿದವರು ರಾಜ್ಯದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು.

ಈ ವಿಷಯದಲ್ಲಿ ಮತ್ತಷ್ಟು ಆತಂಕಕಾರಿ ಸಂಗತಿ ಎಂದರೆ ಪತ್ರಕರ್ತರು ಕರೋನವೈರಸ್ ಸೋಂಕನ್ನು ಹೊಂದಿದ್ದರೂ ಯಾವುದೇ ರೋಗಲಕ್ಷಣಗಳು ಗೋಚರವಾಗಲಿಲ್ಲ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ ಶೇಕಡಾ 80 ರಷ್ಟು ಕರೋನ ವೈರಸ್ ಸೋಂಕಿತರು ರೋಗ ಲಕ್ಷಣಗಳನ್ನೇ ತೋರಿಸುವುದಿಲ್ಲ ಅಥವಾ ಕಡಿಮೆ ಲಕ್ಷಣಗಳನ್ನು ತೋರಿಸುತ್ತಾರೆ”. ವಾಸ್ತವವಾಗಿ, ಕೋವಿಡ್ -19 ಪರೀಕ್ಷಿಸಿದ 53 ಪತ್ರಕರ್ತರಲ್ಲಿ ಹೆಚ್ಚಿನವರು ತಮ್ಮ ಮಾದರಿಗಳನ್ನು ಸಂಗ್ರಹಿಸಿ ವರದಿಗಳನ್ನು ಬಿಡುಗಡೆ ಮಾಡುವವರೆಗೂ ರೋಗ ಲಕ್ಷಣಗಳನ್ನು ತೋರಿಸಲೇ ಇಲ್ಲ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ, ದೇಶಾದ್ಯಂತದ ಎಲ್ಲಾ ಪತ್ರಕರ್ತರಿಗೆ ಉಚಿತ ಮತ್ತು ನಿಯಮಿತ ಪರೀಕ್ಷೆಗಳನ್ನು ಮಾಡಿಸಬೇಕು. ಇದು ರೋಗಲಕ್ಷಣಗಳನ್ನು ಹೊಂದಿರುವವರಿಗೆ ಅಥವಾ ಮುಂಬೈ ಅಥವಾ ದೆಹಲಿ ಅಥವಾ ಕರ್ನಾಟಕದವರಿಗೆ ಮಾತ್ರವಲ್ಲ. ಪತ್ರಕರ್ತರು ತಮ್ಮನ್ನು, ಅವರ ಕುಟುಂಬಗಳನ್ನು, ಅವರ ಸಹೋದ್ಯೋಗಿಗಳನ್ನು ಮತ್ತು ಅವರು ಭೇಟಿಯಾಗುವ ಜನರಿಗೆ ಅಪಾಯಕಾರಿ ಆಗಬಾರದು.

ಮನೆ ಮಾಲೀಕರು ಮತ್ತು ಪಿಜಿ-ಮಾಲೀಕರು ಈಗಾಗಲೇ ಪತ್ರಕರ್ತ ಬಾಡಿಗೆದಾರರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ. ಕಟ್ಟುನಿಟ್ಟಾದ, ಅನಗತ್ಯ ನಿಯಮಗಳನ್ನು ಹೇರುತ್ತಿದ್ದಾರೆ, ಇದರಿಂದಾಗಿ ಪತ್ರಕರ್ತರಿಗೆ ತಮ್ಮ ಕೆಲಸಗಳನ್ನು ಮಾಡಲು ಕಷ್ಟವಾಗುತ್ತಿದೆ.ಆರೋಗ್ಯ ಕಾರ್ಯಕರ್ತರಂತೆ ಮಾಧ್ಯಮಗಳು ಧೈರ್ಯಶಾಲಿಗಳಾಗಿ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಅವರಿಗೆ ಉತ್ತಮ ರಕ್ಷಣಾತ್ಮಕ ಸಾಧನಗಳು ಬೇಕಾಗುತ್ತವೆ ಮತ್ತು ಸರ್ಕಾರದ ಪರೀಕ್ಷಾ ಕೊಡುಗೆಗಳನ್ನು ವಿರೋಧಿಸಬಾರದು. ವಾಸ್ತವವಾಗಿ, ಪತ್ರಕರ್ತರು ಸ್ವಯಂಪ್ರೇರಣೆಯಿಂದ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕು. ಕೋವಿಡ್ ಬಿಕ್ಕಟ್ಟಿನ ಬಗ್ಗೆ ವರದಿ ಮಾಡುವಾಗ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಯಾವಾಗಲೂ ಸಾಧ್ಯವಿಲ್ಲ, ಮತ್ತು ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸುವಾಗಲೂ ವೈರಸ್ ಸೋಂಕು ತಗುಲಬಹುದು.

ಯಾವುದೇ ಹೋಟೆಲ್‌ ಅಥವಾ ರೆಸ್ಟೋರಂಟ್‌ ತೆರೆಯದಿರುವುದರಿಂದ ಜನರು ನೀಡಿದ ಆಹಾರ ಮತ್ತು ಚಹಾವನ್ನು ಪತ್ರಕರ್ತರು ಸೇವಿಸುತ್ತಾರೆ ಅಲ್ಲದೆ ಹಣ್ಣು ಖರೀದಿಸಿ ತಿನ್ನುತ್ತಾರೆ .ಕಳೆದ ವಾರ, ದೆಹಲಿಯ ಲೇಡಿ ಹಾರ್ಡಿಂಜ್‌ ಆಸ್ಪತ್ರೆಯ ಎಂಟು ಆರೋಗ್ಯ ಅಧಿಕಾರಿಗಳು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದರು. ಈ ವಿಷಯವನ್ನು ವರದಿ ಮಾಡಲು ಅನೇಕ ಪತ್ರಕರ್ತರು ಆಸ್ಪತ್ರೆಯ ಕೋವಿಡ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿದ್ದರು. ವರದಿಯು ಮಾದರಿ ಸಂಗ್ರಹದಿಂದ ಪರೀಕ್ಷೆಯವರೆಗಿನ ಸಂಪೂರ್ಣ ಕಾರ್ಯವಿಧಾನವನ್ನು ಒಳಗೊಂಡಿರುತ್ತದೆ , ಇಡೀ ಕ್ಯಾಂಪಸ್ ಅನ್ನು ಸುತ್ತಾಡಿ ವೃತ್ತಿ ನಿರತರೊಂದಿಗೆ ಮಾತನಾಡಿ ವರದಿ ಮಾಡಬೇಕಾಗಿರುತ್ತದೆ.

ಇದಕ್ಕೂ ಮೊದಲು ಮಾರ್ಚ್ 31 ರಂದು ನಿಜಾಮುದ್ದೀನ್ ಮಾರ್ಕಾಜ್ ಬಗ್ಗೆ ವರದಿ ಮಾಡುವಾಗಲೂ ಅನೇಕ ಪತ್ರಕರ್ತರು ಸೋಂಕಿತರ ಸನಿಹದಲ್ಲೇ ಇದ್ದರು.ತಳ ಮಟ್ಟದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಉಚಿತ ಮುಖವಾಡಗಳು ಮತ್ತು ಕೈಗವಸುಗಳು, ಸಲಕರಣೆಗಳ ಕವರ್‌ಗಳು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮತ್ತು ಮಾಧ್ಯಮ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕೋವಿಡ್ -19 ಸೋಂಕು ಹೆಚ್ಚುತ್ತಿರುವ ಪತ್ರಕರ್ತರ ಸಂಖ್ಯೆಯೊಂದಿಗೆ, ಎಲ್ಲಾ ಮಾಧ್ಯಮಗಳಿಗೆ ಉಚಿತ ಕರೋನಾ ವೈರಸ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ಮೋದಿ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ರಾಷ್ಟ್ರವ್ಯಾಪಿ ಯೋಜನೆಯನ್ನು ತುರ್ತಾಗಿ ರೂಪಿಸುವುದು ಕಡ್ಡಾಯವಾಗಿದೆ.

Tags: coronavirusCovid 19Press Reportersಕೋವಿಡ್-19ಪತ್ರಕರ್ತ
Previous Post

ಲಾಕ್‌ಡೌನ್‌ ವಿನಾಯಿತಿ ನಿರ್ಧಾರ ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಲಿದೆಯೇ?

Next Post

ಕರೋನಾಕ್ಕಿಂತಲೂ ವೇಗವಾಗಿ ಹರಡುತ್ತಿದೆ ಕೋಮುವೈರಸ್!

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
Next Post
ಕರೋನಾಕ್ಕಿಂತಲೂ ವೇಗವಾಗಿ ಹರಡುತ್ತಿದೆ ಕೋಮುವೈರಸ್!

ಕರೋನಾಕ್ಕಿಂತಲೂ ವೇಗವಾಗಿ ಹರಡುತ್ತಿದೆ ಕೋಮುವೈರಸ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada