“ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆಗಳನ್ನು ನಡೆಸದಿರಲು ಆಯೋಗ ನಿರ್ಧರಿಸಿದೆ. ಚುನಾವಣೆಗಳನ್ನು ನಡೆಸಲು ಸಂಬಂಧಿಸಿದ ತೊಂದರೆಗಳನ್ನು ಹಾಗೂ ಸವಾಲುಗಳನ್ನು ಈ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ಮುಖ್ಯ ಚುನಾವಣಾ ಅಧಿಕಾರಿಗಳಿಂದ ಆಯೋಗವು ಸ್ವೀಕರಿಸಿದೆ” ಎಂದು ಆಯೋಗ ತಿಳಿಸಿದೆ.
Commission has decided not to announce by-elections at this stage in Assam, Kerala, Tamil Nadu & West Bengal. Commission received inputs expressing difficulties in conduct of elections & issues related to it from Chief Secretaries/Chief Electoral Officers from these states: EC pic.twitter.com/srKWB71oLS
— ANI (@ANI) September 29, 2020
ಅದೇ ವೇಳೆ ನವೆಂಬರ್ 7 ರಂದು ಬಿಹಾರದ ಒಂದು ಸಂಸದೀಯ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಛತ್ತೀಸ್‌ಗಡ, ಗುಜರಾತ್, ಜಾರ್ಖಂಡ್, ಕರ್ನಾಟಕ, ನಾಗಾಲ್ಯಾಂಡ್, ಒಡಿಶಾದ 54 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ ಎಂದು ಆಯೋಗ ಹೇಳಿದೆ. ತೆಲಂಗಾಣ ಮತ್ತು ಉತ್ತರಪ್ರದೇಶದಲ್ಲಿ ನವೆಂಬರ್ 3 ರಂದು ಉಪಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಮತಗಳ ಎಣಿಕೆ ನಡೆಯಲಿದೆ.









