ಆರು ತಿಂಗಳ ಕಾಲ ಲಾಕ್‌ಡೌನ್ ಇದ್ದುದರಿಂದ ತಿಳಿಯಾಗಿದ್ದ ದೆಹಲಿಯ ವಾತಾವರಣ ಇದೀಗ ಮತ್ತೆ ಮೊದಲಿನಂತೆ ಕಲುಷಿತಗೊಳ್ಳುತ್ತಿದೆ. ವಿಶೇಷವಾಗಿ ದೆಹಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಈ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.
ದೆಹಲಿ ಮತ್ತು ದೆಹಲಿ ಎನ್‌ಸಿಆರ್‌ಗೆ ಮಾತ್ರ ಅನ್ವಯವಾಗುವಂತೆ ಹೊಸ ಕಾನೂನನ್ನು ಜಾರಿಗೊಳಿಸಲಾಗುತ್ತದೆ. ಉಳಿದಂತೆ ಈಗಿರುವ ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆಯು ಯಥಾಸ್ಥಿತಿಯಲ್ಲಿ ಮುಂದುವರೆಯುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯ ವಾಯು ಮಾಲಿನ್ಯದ ಕುರಿತಾಗಿ ಇತ್ತೀಚಿಗೆ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಾಲ್ಕು ದಿನಗಳ ಒಳಗಾಗಿ ಕಾನೂನು ಜಾರಿಗೊಳಿಸುವ ರೂಪುರೇಷೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ದೆಹಲಿ ಗಾಳಿಯ ಗುಣಮಟ್ಟವು ಅತೀ ಕನಿಷ್ಟ ಮಟ್ಟವನ್ನು ತಲುಪಿದ್ದು, ಅಕ್ಟೋಬರ್ 31ರ ವರೆಗೆ ಇದೇ ಪರಿಸ್ಥಿತಿ ಮುಂದುವರೆಯುವ ಸಂಭವವಿದೆ.
ಕೋವಿಡ್‌ನಂತಹ ಉಸಿರಾಟ ಸಂಬಂಧಿತ ಸೋಂಕು ತೀವ್ರವಾಗಿರುವ ಸಂದರ್ಭದಲ್ಲಿ ವಾಯು ಮಾಲಿನ್ಯವು ಇದೇ ರೀತಿ ಹದೆಗೆಟ್ಟರೆ, ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆಗಳು ಉಂಟಾಗಲಿವೆ. ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಸಿಜೆಐ ಅರವಿಂದ ಬೊಬ್ಡೆ ಹೇಳಿದ್ದಾರೆ.

ವಾಯು ಮಾಲಿನ್ಯವನ್ನು ತಡೆಗಟ್ಟಲು, ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ಕಾರ್ ಪೂಲಿಂಗ್ ಮೊರೆ ಹೋದಲ್ಲಿ ಉತ್ತಮ. ಹತ್ತಿರದ ಸಂಚಾರಕ್ಕಾಗಿ ಬೈಕು ಕಾರುಗಳನ್ನು ಚಲಾಯಿಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್ ಬಳಸಿದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಮತ್ತಷ್ಟು ಸಹಕಾರಿ. ಇದರೊಂದಿಗೆ ಬ್ಯಾಟರೀ ಚಾಲಿತ ವಾಹನಗಳ ಬಳಕೆಯೂ ಸಹಕಾರಿಯಾಗಲಿದೆ.
ಇನ್ನು, ಸರ್ಕಾರವೂರಸ್ತೆಗಳಅಭಿವೃದ್ದಿಯಕುರಿತಾಗಿಗಂಭೀರವಾಗಿಚಿಂತನೆಮಾಡಬೇಕಿದೆ. ಕಳಪೆಗುಣಮಟ್ಟದರಸ್ತೆಗಳಿಂದಉಂಟಾಗುವವಾಹನದಟ್ಟಣೆಯೂದೆಹಲಿಯಕಲುಷಿತವಾತಾವರಣಕ್ಕೆದಕ್ಕೆಯಾಗಲುಮೂಲಕಾರಣ. ಇದರೊಂದಿಗೆ, ಸಣ್ಣಕೈಗಾರಿಕೆಮತ್ತುಇತರೆಡೆಗಳಲ್ಲಿಸೋಲಾರ್‌ನಬಳಕೆಯನ್ನುಕೂಡಾಪ್ರೋತ್ಸಾಹಿಸಿದಲ್ಲಿಉತ್ತಮಫಲಿತಾಂಶವನ್ನುಕಾಣಲುಸಾಧ್ಯ.






