ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಯ ಸಮಯದಲ್ಲಿ 23 ವರ್ಷ ವಯಸ್ಸಿನ ಫೈಝಾನ್ ಎಂಬ ಯುವಕ ಗಾಯಗೊಂಡು ನರಳುತ್ತಿದ್ದ ವೇಳೆ ಪೊಲೀಸರು ಅವನ ಬಳಿ ʼಜನ ಗಣ ಮನʼ ಹಾಡಲು ಒತ್ತಾಯಿಸಿದ ವಿಡಿಯೋ ವೈರಲ್ ಆಗಿತ್ತು. ಗುಂಡೇಟಿನಿಂದ ನರಳುತ್ತಿದ್ದ ಫೈಝಾನ್ ಫೆಬ್ರುವರಿ 28ರಂದು ಮೃತಪಟ್ಟಿದ್ದ. ಈಗ ಆರು ತಿಂಗಳ ನಂತರ ದೆಹಲಿ ಪೊಲೀಸರನ್ನು ಈ ಕುರಿತಾಗಿ ಪ್ರಶ್ನಿಸಲಾಗಿದೆ, ಎಂದು ವರದಿಯಾಗಿದೆ.
ಫೆಬ್ರುವರಿ 24ಕ್ಕೆ ಫೈಝಾನ್ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವ ವಿಡಿಯೋವನ್ನು ಓರ್ವ ಪೊಲೀಸ್ ಸಿಬ್ಬಂದಿ ತಮ್ಮ ಫೋನ್‌ನಲ್ಲಿ ಸೆರೆ ಹಿಡಿದಿದ್ದರು. ಕರ್ದಮ್ ಪುರಿ ಎಂಬಲ್ಲಿ ನಡೆದ ಈ ಘಟನೆಯ ವಿಡಿಯೋ ಮರುದಿನ ಸಾಕಷ್ಟು ವೈರಲ್ ಆಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಕ್ರೈಮ್ ಬ್ರಾಂಚ್‌ನ ವಿಶೇಷ ತನಿಖಾ ದಳಕ್ಕೆ ನೀಡಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಗಟನೆಯ ಕುರಿತು ಪ್ರಮುಖ ಮಾಹಿತಿ ನೀಡಿದ್ದು ಪೊಲೀಸರಿಗೆ ಗಲಭೆ ನಿಯಂತ್ರಿಸಲು ನೀಡಲಾಗಿದ್ದ ಅಶ್ರುವಾಯುಗಳ (Tear Smoke Munitions) ಮೂಲಕ. ಪ್ರತಿಯೊಬ್ಬ ಪೊಲೀಸರಿಗೂ TSM ನೀಡುವ ಮುಂಚೆ ಅದನ್ನು ದಾಖಲಿಸಿಕೊಳ್ಳಲಾಗುತ್ತದೆ. ಅಂದಿನ ದಿನ TSMಅನ್ನು ಪಡೆದುಕೊಂಡ ಪೊಲೀಸ್ ಸಿಬ್ಬಂದಿಗಳ ಹೆಸರು ಹಾಗೂ ವಿಡಿಯೋದಲ್ಲಿನ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖಾ ದಳವು ಹಲವು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದೆ.
ಇದೇ ಸಂದರ್ಭದಲ್ಲಿ ಮಾಡಿದಂತಹ ಇನ್ನೊಂದು ವಿಡಿಯೋದಲ್ಲಿ, ಘಟನೆಯ ಸಂದರ್ಭದಲ್ಲಿ ಕನಿಷ್ಟ ಆರು ಜನ ಪೊಲೀಸರು ಘಟನಾ ಸ್ಥಳದಲ್ಲಿದ್ದರು ಎಂದು ದೃಢೀಕರಿಸಿದೆ. ಇನ್ನು, ವಿಡಿಯೋ ಮಾಡಿದ್ದಂತಹ ಪೊಲೀಸ್ ಸಿಬ್ಬಂದಿಯನ್ನು ಕೂಡಾ ವಿಚಾರಿಸಲಾಗಿದೆ ಎಂದು ತನಿಖಾ ದಳದ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.