ಮೊನ್ನೆಯಷ್ಟೇ ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗವನ್ನ ಪ್ರತಿನಿಧಿಸಿ ನಿರೂಪಣೆ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ರಾಜಮೌಳಿ ನಿರ್ದೇಶನದ ʻಆರ್ ಆರ್ ಆರ್ʼ ಚಿತ್ರದ ʻನಾಟು ನಾಟುʼ ಹಾಡಿಗೆ, ʻಬೆಸ್ಟ್ ಒರಿಜಿನಲ್ ಸಾಂಗ್ʼ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಒಲಿದುಬಂತು. ಈ ವೇಳೆ ʻನಾಟು ನಾಟುʼ ಗೀತೆಯ ಬಗ್ಗೆ ಮೆಚ್ಚುಗೆ ಸೂಚಿಸಿ, ಹಾಡಿನ ವಿಶೇಷತೆಯನ್ನ ದೀಪಿಕಾ ವಿವರಿಸಿದ್ರು. ಆಸ್ಕರ್ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಬೋಲ್ಡ್ ಲುಕ್‌ನಿಂದ ಕಂಗೊಳಿಸಿದ್ದು, ನಟಿಯ ಬ್ಯೂಟಿಫುಲ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.
#Deepikapadukone #newlook #viral #osceraward #viralphoto #rrr #natunatu #song #anchoring #trend #gown #photoviral #pratidhvani #pratidhvanidigital #pratidhvaninews

ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರೋ ದೀಪಿಕಾ ಪಡುಕೋಣೆ, ಆಸ್ಕರ್ ಅಂಗಳದಲ್ಲಿ ಸದ್ದು ಮಾಡಿದ್ರು. ನಿರೂಪಣೆ ಅಷ್ಟೇ ಅಲ್ಲದೇ ತಮ್ಮ ಭಿನ್ನ ಡ್ರೆಸ್ ಸೆನ್ಸ್‌ನಿಂದ ಹೈಲೆಟ್ ಆದ್ರು. ಆಸ್ಕರ್ ಅರ್ವಾಡ್ ಕಾರ್ಯಕ್ರಮದಲ್ಲಿ ಕ್ಲಾಸಿ ಕಪ್ಪು ಬಣ್ಣದ ಗೌನ್‌ನಲ್ಲಿ ದೀಪಿಕಾ ಮಿಂಚಿದ್ರು. ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದಷ್ಟೇ ಅಲ್ಲದೇ ಕಾರ್ಯಕ್ರಮದ ಬಳಿಕ ಅರೆಂಜ್ ಮಾಡಲಾಗಿದ್ದ ಪಾರ್ಟಿಯಲ್ಲಿ, ಪಿಂಕ್ ಕಲರ್‌ನ ಮಾಡ್ರನ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
