ಚೀನಾ ಮೂಲದ ಸೈನಿಕನೋರ್ವನನ್ನು ಪೂರ್ವ ಲಡಾಖ್‌ನ ಡೆಮ್ಚೊಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ವಶಕ್ಕೆ ತೆಗೆದುಕೊಂಡಿದೆ. ಎಲ್‌ಎಸಿಯಲ್ಲಿ ದಾರಿ ತಪ್ಪಿ ಭಾರತದ ಪ್ರದೇಶಕ್ಕೆ ಪ್ರವೇಶಿಸಿದ್ದಾನೆಂದೂ ಭಾರತೀಯ ಸೇನೆ ತಿಳಿಸಿದೆ.
ಭಾರತೀಯ ಸೇನೆಯ ವಶಕ್ಕೆ ಸಿಕ್ಕ ಚೀನಾದ ಸೈನಿಕನನ್ನು ವಾಂಗ್ ಯ ಲಾಂಗ್ ಎಂದು ಗುರುತಿಸಲಾಗಿದ್ದು, ಆತನಿಗೆ ಅಗತ್ಯವಿದ್ದ ಆರೋಗ್ಯ ಸೇವೆಯನ್ನು, ಆಮ್ಲಜನಕ, ಬೆಚ್ಚಗಿನ ವಸ್ತ್ರ ಹಾಗೂ ಆಹಾರ ನೀಡಿ ಸೇನೆಯು ಉಪಚರಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಿಷ್ಟಾಚಾರದಂತೆ ಚೀನೀ ಸೈನಿಕನನ್ನು ಚೀನಾಗೆ ಹಸ್ತಾಂತರಿಸಲಾಗುವುದು ಎಂದು ಭಾರತೀಯ ಸೇನೆ ತಿಳಿಸಿದೆ.
ನಾಪತ್ತೆಯಾಗಿರುವ ಸೈನಿಕ ಎಲ್ಲಿದ್ದಾನೆಂದು ಚೀನಾ ಸೇನೆಯಿಂದ ಮನವಿ ಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
“ಶಿಷ್ಟಾಚಾರದ ಪ್ರಕಾರ, ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಅವರನ್ನು ಚುಶುಲ್ ಮೊಲ್ಡೊ ಸ್ಥಳದಲ್ಲಿ ಚೀನಾದ ಅಧಿಕಾರಿಗಳಿಗೆ ಹಿಂತಿರುಗಿಸಲಾಗುತ್ತದೆ” ಎಂದು ಸೇನೆ ಹೇಳಿದೆ. ಚೀನಾ ಸೈನಿಕನನ್ನು ಹೇಗೆ ಭಾರತದ ಕಡೆಗೆ ದಾಟಿದೆ ಎಂದು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇ ತಿಂಗಳ ಆರಂಭದಲ್ಲಿ ಭಾರತ ಹಾಗೂ ಚೀನಾದ ನಡುವೆ ಉದ್ವಿಘ್ನತೆ ಉಲ್ಬಣಗೊಂಡ ನಂತರ ಎರಡೂ ಸೈನ್ಯಗಳು ಡೆಮ್‌ಚಾಕ್ ವಲಯವನ್ನು ಒಳಗೊಂಡಂತೆ ಪೂರ್ವ ಲಡಾಖ್‌ನ ಎಲ್‌ಎಸಿಯ ಉದ್ದಕ್ಕೂ ತಲಾ 50,000 ಸೈನಿಕರನ್ನು ನಿಯೋಜಿಸಿವೆ.