• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ ಸೀರೆ, ಹಣ ಯಾಕೆ ಹಂಚಬೇಕು: HDK ಪ್ರಶ್ನೆ

by
November 1, 2020
in ಕರ್ನಾಟಕ
0
ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದರೆ ಸೀರೆ
Share on WhatsAppShare on FacebookShare on Telegram

ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈಗ ಯಾಕೆ ಸೀರೆ, ಹಣ ಹಂಚುವ ಪ್ರಮೇಯ ಬರುತ್ತಿತ್ತು. ಗೊತ್ತಿದ್ದು, ಗೊತ್ತಿದ್ದು ಕಾಂಗ್ರೆಸ್‌ನವರು ತಪ್ಪು ಮಾಡಿದ್ದಾರೆ. ಒಬ್ಬ ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಆಗಬೇಕು ಎಂದರೆ ಅದು ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಹೊರಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜರಾಜೇಶ್ವರಿ ನಗರದ ಮತದಾರರಿಗೆ ಕರೆ ನೀಡಿದ್ದಾರೆ.

ADVERTISEMENT

ಕ್ಷೇತ್ರದ ವಿವಿಧ ಕಡೆ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ರೋಡ್‌ ಶೋ ನಡೆಸಿ ಮತಯಾಚಿಸಿದ ಅವರು, ಲೂಟಿ ಹೊಡೆಯುವವರಿಗೆ ಮತ ಹಾಕಬೇಡಿ ಎಂದು ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಅವರ ಮಾತಿಗೆ ಗೌರವ ಕೊಡುತ್ತೀರಾ..? ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೀರಾ..? ಯೋಚಿಸಿ ಮತಚಲಾಯಿಸಿ, ಯುವಕರಿಗೆ, ಪ್ರಾಮಾಣಿಕರಿಗೆ ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಸಾವಿರಾರು ಮನೆಗಳು ಕುಸಿದಿವೆ, ಸಂಪೂರ್ಣ ಬೆಳೆ ನಾಶ ಆಗಿದೆ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ನೀಡುವ ಕಾರ್ಯವಲ್ಲ, ಸಾಂತ್ವನ ಹೇಳುವ ಕಾರ್ಯವನ್ನು ಕೂಡ ಈ ಸರಕಾರ ಮಾಡಿಲ್ಲ. ಎಲ್ಲ ಸಚಿವರು ಉಪಚುನಾವಣೆ ಎಂದು ಬ್ಯುಸಿ ಆಗಿದ್ದಾರೆ. ಸರಕಾರಕ್ಕೆ ಜನರ ಸಂಕಷ್ಟಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದಿದ್ದಾರೆ.

ನಮ್ಮ ಕ್ಷೇತ್ರಗಳಿಗೆ ಕುಮಾರಸ್ವಾಮಿ ಅವರು ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಆರೋಪಿಸುತ್ತಾರೆ. ಆದರೆ, ಅವರ ಕ್ಷೇತ್ರಗಳಿಗೆ ಒಟ್ಟು 16 ಸಾವಿರ ಕೋಟಿ ರೂ. ಅನುದಾನ ನೀಡಿದ್ದೆ. ನಾನು ನೀಡಿದ ಅನುದಾನವನ್ನು ಬಿ.ಎಸ್‌.ಯಡಿಯೂರಪ್ಪ ಅವರು ವಾಪಸ್‌ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಬಸನಗೌಡ ಪಾಟೀಲ್‌ ಅವರೇ ಬಹಿರಂಗವಾಗಿ ಹೇಳುತ್ತಾರೆ. ಇಂತಹ ರಾಷ್ಟ್ರೀಯ ಪಕ್ಷಗಳನ್ನು ನೀವು ನಂಬುತ್ತೀರಾ ಎಂದು ಜನರನ್ನು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಪ್ರಯತ್ನದಿಂದ ಬೆಂಗಳೂರಿಗೆ ಕಾವೇರಿ ನೀರು ಬಂದಿದೆ. ವಿಕ್ಟೋರಿಯಾ, ಬೌರಿಂಗ್‌ ಆಸ್ಪತ್ರೆಗಳ ಮೇಲ್ದರ್ಜೆಗೆ 60 ಕೋಟಿ ರೂ. ಅನುದಾನ ನೀಡಿದ್ದೆ, ಜಯದೇವದಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್‌ ವ್ಯವಸ್ಥೆ ಮಾಡಿದೆ. ಸಾರಾಯಿ, ಲಾಟರಿ ಟಿಕೆಟ್‌ ಸಂಪೂರ್ಣ ನಿಷೇಧ, ಸಾಲ ಮನ್ನಾ, ವೃದ್ಧಾಪ್ಯ ವೇತನ, ವಿಧವಾ ಮಾಸಾಶನಗಳ ಸಹಾಯಧನ ಹೆಚ್ಚಿಸುವ ಅಭಿವೃದ್ಧಿ ಕಾರ್ಯಗಳನ್ನು ಸಿಕ್ಕ ಅಲ್ಪಾವಧಿಯಲ್ಲಿಯೇ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪರಿಷತ್‌ ಸದಸ್ಯ ಟಿ.ಎ.ಶರವಣ, ಕಾಂಗ್ರೆಸ್ ನಾಯಕರು ಜಾತಿ ಆಧಾರದ ಮೇಲೆ ರಾಜಕೀಯ ಮಾಡುವುದಕ್ಕೆ ಹೊರಟಿದ್ದರೆ, ಬಿಜೆಪಿ ಅಭ್ಯರ್ಥಿ‌ ಕ್ರಮ ಸಂಖ್ಯೆ ಮೂರು ಎಂದು ಹೇಳುತ್ತಾ ಮೂರನೇ ಬಾರಿ ನಾಮ ಹಾಕುವುದಕ್ಕೆ ತಯಾರಾಗಿದ್ದಾರೆ. ಹಣ, ಸೀರೆ ಹಂಚಿದ್ದಾಗಿದೆ. ಈಗ ಸೆಟ್ ಟಾಪ್ ಬಾಕ್ಸ್ ನೀಡುತ್ತಿದ್ದಾರೆ. ಯಾವುದೇ ರೀಲ್ ಸ್ಟಾರ್ ಬಂದರೂ ನಮ್ಮ ರಿಯಲ್ ಸ್ಟಾರ್ ಕುಮಾರಣ್ಣನಿಗೆ ಏನು ಆಗಲ್ಲ ಎಂದ್ದಾರೆ.

ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ, ಪರಿಷತ್‌ ಸದಸ್ಯರಾದ ಅಪ್ಪಾಜಿಗೌಡ, ರಮೇಶ್‌ ಗೌಡ, ಬೆಂಗಳೂರು ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಬೆಂಗಳೂರು ನಗರ ಯುವ ಜನತದಾಳದ ಅಧ್ಯಕ್ಷ ಪ್ರವೀಣ್‌ ಗೌಡ ಸೇರಿ ಅನೇಕ ಮುಖಂಡರು ಇದ್ದರು.

Tags: HDKಕುಮಾರಸ್ವಾಮಿ
Previous Post

ಅಸ್ಸಾಂ: ಮುಂದಿನ ವರ್ಷದ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಗೋ ಮಾಂಸ

Next Post

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

Related Posts

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!
Top Story

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

by ಪ್ರತಿಧ್ವನಿ
July 12, 2026
0

‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ...

Read moreDetails
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

July 12, 2026
Next Post
ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada