• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೇರಳ ನೆರೆ: ಕೋವಿಡ್-19 ಆಂಬ್ಯುಲೆನ್ಸ್ ಆಗಿ ಪರಿವರ್ತನೆಗೊಂಡ ರಕ್ಷಣಾ ಬೋಟ್

by
August 18, 2020
in ದೇಶ
0
ಕೇರಳ ನೆರೆ: ಕೋವಿಡ್-19 ಆಂಬ್ಯುಲೆನ್ಸ್ ಆಗಿ ಪರಿವರ್ತನೆಗೊಂಡ ರಕ್ಷಣಾ ಬೋಟ್
Share on WhatsAppShare on FacebookShare on Telegram

ಕೇರಳದಲ್ಲಿ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಹಲವಾರು ಭೂಮಾರ್ಗ, ಸೇತುವೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ, ಅದೇ ವೇಳೆ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ್ದು, ಹಲವಾರು ಪ್ರದೇಶಗಳಲ್ಲಿ ಸರಾಗ ಸಂಚಾರಕ್ಕೆ ಅನಾನುಕೂಲ ಎದುರಾಗಿದೆ.

ಹಲವಾರು ಭೂಪ್ರದೇಶಗಳ ಸಂಚಾರ ಮಾರ್ಗಗಳು, ಸೇತುವೆಗಳು ಮುಖ್ಯ ಭೂಭಾಗದಿಂದ ಬೇರ್ಪಟ್ಟಿದ್ದು, ಅಲ್ಲಿನ ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಜವಾಬ್ದಾರಿಯನ್ನು ರಕ್ಷಣಾ ಬೋಟ್‌ಗಳು ವಹಿಸಿಕೊಂಡಿವೆ.

ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಬೋಟ್‌ಗಳನ್ನು ಆಂಬ್ಯುಲೆನ್ಸ್‌ ಆಗಿ ಪರಿವರ್ತಿಸಿ ಬಳಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ರಕ್ಷಣಾ ಬೋಟ್‌ಗಳು ಈಗ ರೋಗಿಗಳನ್ನು ಜಲಮಾರ್ಗದ ಮೂಲಕ ಆಸ್ಪತ್ರೆಗಳಿಗೆ ತಲುಪಿಸುವ ಪರ್ಯಾಯ ಆಂಬ್ಯುಲೆನ್ಸ್‌ ಆಗಿ ಬಳಸಲ್ಪಡುತ್ತಿದೆ.

ಸಾಧಾರಣವಾಗಿ, ಕೇರಳದಲ್ಲಿ ಒಳ ನಾಡು ಜಲಸಾರಿಗೆ ವ್ಯಾಪಕವಾಗಿದೆ. ನದಿ ಪ್ರದೇಶ ಹೇರಳವಾಗಿದೆ. ಇದು ಕೇರಳ ಪ್ರವಾಸೋದ್ಯಮದ ಬಹುಮುಖ್ಯ ಆಕರ್ಷಣೀಯ ಭಾಗವೂ ಹೌದು. ಆದರೆ ಈ ಪ್ರದೇಶಗಳಲ್ಲಿ ಅತಿವೃಷ್ಟಿ ಉಂಟಾದರೆ ಇಲ್ಲಿಯ ಜನರು ಬವಣೆ ಹೇಳತೀರದು.

ಮುಖ್ಯವಾಗಿ, ಪ್ರಮುಖ ಭೂಪ್ರದೇಶದಿಂದ ಬೇರ್ಪಟ್ಟಿರುವ ದ್ವೀಪದಂತಹ ಪ್ರದೇಶಗಳು ಬೋಟ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಭೂಮಾರ್ಗವಿಲ್ಲದ ಹಲವಾರು ಪ್ರದೇಶಗಳ ಕೋವಿಡ್‌ ಸೋಂಕಿತರಿಗೆ ಬೋಟ್‌ ಆಂಬ್ಯುಲೆನ್ಸ್‌ ಗಳು ನೆರವಾಗಿವೆ ಎಂದು ವಿಜಿಲೆನ್ಸ್‌ ವಿಂಗ್‌ ಅಧಿಕಾರಿ ಸಂತೋಷ್‌ ಕುಮಾರ್‌ ಎಎನ್‌ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕರೋನಾ ಸೋಂಕು ಕೇರಳದಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮ ಇಚ್ಛಾಶಕ್ತಿಯಿಂದ ಕರೋನಾ ಸೋಂಕನ್ನು ಸಮರ್ಥವಾಗಿ ಅಲ್ಲಿನ ಆಡಳಿತ ನಿರ್ವಹಿಸಿತ್ತು. ಅಲ್ಲದೆ, ಕೇರಳದ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ ಅವರ ಕೋವಿಡ್ ನಿರ್ವಹಣೆ ವಿಶ್ವಾದ್ಯಂತ ಕೊಂಡಾಡಲ್ಪಟ್ಟಿದ್ದವು.

Alappuzha: Kerala Water Transport Dept has converted rescue boats into ambulances during #COVID19 pandemic. Santhosh Kumar, Vigilance Wing Inspector says, “This service has helped many #COVID19 patients who live in locations cut-off from the mainland reach hospitals.” pic.twitter.com/mrsoMAtbOi

— ANI (@ANI) August 18, 2020


ADVERTISEMENT
Tags: ಕೇರಳಕೋವಿಡ್-19ನೆರೆ ಪರಿಸ್ಥಿತಿ
Previous Post

ಚೀನಾ ಜೊತೆ ಮಾತುಕತೆ ವಿಫಲ: ಲಢಾಕ್ ನಲ್ಲಿ ಸೇನೆ ನಿಯೋಜನೆಗೆ ಸರ್ಕಾರ ಸಜ್ಜು

Next Post

ಪ್ರಜಾಸತ್ತೆ ಸ್ವಾಸ್ಥ್ಯ, ನ್ಯಾಯಾಂಗ ಸ್ವಾಯತ್ತತೆ ಚರ್ಚೆಗೆ ಬಿರುಸು ತಂದ ನ್ಯಾಯಾಂಗ ನಿಂದನೆ ಪ್ರಕರಣ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಪ್ರಜಾಸತ್ತೆ ಸ್ವಾಸ್ಥ್ಯ

ಪ್ರಜಾಸತ್ತೆ ಸ್ವಾಸ್ಥ್ಯ, ನ್ಯಾಯಾಂಗ ಸ್ವಾಯತ್ತತೆ ಚರ್ಚೆಗೆ ಬಿರುಸು ತಂದ ನ್ಯಾಯಾಂಗ ನಿಂದನೆ ಪ್ರಕರಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada