• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, July 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೃಷಿ ಕಾಯ್ದೆಗೆ ಅವಕಾಶ ನೀಡುವಂತೆ ರೈತರಿಗೆ ಕುಮಾರಸ್ವಾಮಿ ಸಲಹೆ

by
December 26, 2020
in ಕರ್ನಾಟಕ
0
ಕೃಷಿ ಕಾಯ್ದೆಗೆ ಅವಕಾಶ ನೀಡುವಂತೆ ರೈತರಿಗೆ ಕುಮಾರಸ್ವಾಮಿ ಸಲಹೆ
Share on WhatsAppShare on FacebookShare on Telegram

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರೈತರು ಕೃಷಿ ಕಾಯ್ದೆಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ ರಾಜನಾಥ್‌ ಸಿಂಗ್‌ ಅವರ ಮಾತುಗಳು ಭರವಸೆ ಮೂಡಿಸುವಂತೆ ಇದೆ ಎಂದಿದ್ದಾರೆ.

“ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿಚಾರವಾಗಿ ದೆಹಲಿ ಹೊರವಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ದೇಶ ಮಾತ್ರವಲ್ಲದೇ, ವಿಶ್ವದ ಗಮನ ಸೆಳೆಯುತ್ತಿದೆ. ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಭಾರತ ಗಳಿಸಿಕೊಂಡ ಖ್ಯಾತಿ, ಸ್ಥಾನಮಾನಗಳಿಗೆ ಈ ಹೊಸ ಕಾಯ್ದೆಗಳು, ಅದರ ವಿರುದ್ಧ ನಡೆಯುತ್ತಿರುವ ಹೋರಾಟಗಳು ಚ್ಯುತಿಯುಂಟು ಮಾಡಬಾರದು ಎಂಬುದು ನನ್ನ ಅಭಿಲಾಷೆ. ಮೋದಿ ತಾವು ಪ್ರಧಾನಿಯಾದ ನಂತರ ಸ್ವತಃ ತಾವು ಗಳಿಸಿಕೊಂಡ ಹೆಸರಿಗೂ ಇದು ಕಪ್ಪುಚುಕ್ಕೆಯಾಗಬಹುದು ಎಂಬುದನ್ನು ಅವರು ಗಮನಿಸಬೇಕು. ಅದೇ ಹೊತ್ತಲ್ಲೇ ರೈತರಿಗೆ ಅನಾನುಕೂಲವೂ ಆಗಬಾರದು ಎನ್ನುವ ಮೂಲಕ ಹಾವೂ ಸಾಯಬಾರದೂ ಕೋಲೂ ಮುರಿಯಬಾರದು ಎನ್ನುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ರೈತರಿಗೆ ಕಾರ್ಯಕ್ರಮಗಳ ಮೂಲಕ ಪರೋಕ್ಷ ಸಂದೇಶ ರವಾನಿಸುವ ಬದಲಿಗೆ ಪ್ರಧಾನಿ ನೇತೃತ್ವದಲ್ಲಿ ನಿರ್ಣಾಯಕ ಸಭೆ ನಡೆಸಿ, ಹೋರಾಟ ಅಂತ್ಯಗೊಳಿಸುವುದು ಸೂಕ್ತ. ಇದು ದೇಶದ ಘನತೆ ದೃಷ್ಟಿಯಿಂದ ಅತ್ಯಗತ್ಯವೂ ಹೌದು. ದೇಶದ ಘನತೆಯ ವಿಚಾರದಲ್ಲಿ ಮೋದಿಯವರೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಆದ್ದರಿಂದ ಸಮಸ್ಯೆ ಕೂಡಲೇ ಇತ್ಯರ್ಥವಾಗಲಿ ಎಂದಿದ್ದಾರೆ.

ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ.
5/5

— H D Kumaraswamy (@hd_kumaraswamy) December 26, 2020


ADVERTISEMENT

ಕಾಯ್ದೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಮಾತುಗಳು ಭರವಸೆ ಮೂಡಿಸುವಂತಿವೆ. ಕಾಯ್ದೆಗಳ ಪ್ರಯೋಗಾತ್ಮಕ ಜಾರಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ. ಅಲ್ಲದೆ, ಕಾಯ್ದೆಗಳು ರೈತರಿಗೆ ಸಮಸ್ಯೆ ಸೃಷ್ಟಿಸುವಂತಿದ್ದರೆ ಸರ್ಕಾರ ಅವುಗಳನ್ನು ಹಿಂದಕ್ಕೆ ಪಡೆಯುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ. ರೈತರೂ ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತೀಯ ಕೃಷಿರಂಗ ವಿಷವರ್ತುಲದಲ್ಲಿದೆ ಎಂಬುದು ಸಾರ್ವತ್ರಿಕ ಆರೋಪ. ಕೃಷಿ ರಂಗದ ಕಲ್ಯಾಣವಾಗುತ್ತದೆ ಎಂದರೆ ಯಾವುದೇ ಪ್ರಯೋಗಕ್ಕೆ ನಾವೂ ಸಿದ್ಧರಿರುವುದು ಅಗತ್ಯ ಕೂಡ. ಹಾಗಾಗಿ ರೈತರು ಕಾಯ್ದೆಗೆ ಅವಕಾಶ ನೀಡುವ ಬಗ್ಗೆಯೂ ಒಮ್ಮೆ ಆಲೋಚಿಸುವುದು ಉಚಿತವೂ ಆಗಿದೆ ಎಂಬುದು ನನ್ನ ಅಭಿಪ್ರಾಯ. ಆದರೆ, ಸರ್ಕಾರ, ಹೋರಾಟಗಾರರ ನಡುವೆ ಸಮನ್ವಯವಿರಲಿ ಎಂದು ಅವರು ಹೇಳಿದ್ದಾರೆ.

Tags: HD ಕುಮಾರಸ್ವಾಮಿಕುಮಾರಸ್ವಾಮಿಕೃಷಿ ಕಾಯ್ದೆಕೃಷಿ ಕಾಯ್ದೆ ತಿದ್ದುಪಡಿ
Previous Post

ಬಿಜೆಪಿ ವಿರೋಧಿ ಪಕ್ಷಗಳು ಯುಪಿಎ ಅಡಿಯಲ್ಲಿ ಒಂದಾಗಬೇಕು -ಶಿವಸೇನೆ

Next Post

ಕರವೇ ನಡೆಸುತ್ತಿರುವ #ಕನ್ನಡವಿವಿಉಳಿಸಿ ಭಿತ್ತಿಪತ್ರ ಚಳವಳಿ ನಾಲ್ಕನೇ ದಿನಕ್ಕೆ

Related Posts

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!
Top Story

ಹ್ಯಾಟ್ರಿಕ್ ಹೀರೋ ಜನ್ಮದಿನ: ಶಿವಣ್ಣನ ಅಭಿಮಾನಿಗಳಿಗೆ ‘ಹೆಲ್ತ್ ಕಾರ್ಡ್’ ಜೊತೆ 4 ಚಿತ್ರಗಳ ಭರ್ಜರಿ ಅಪ್ಡೇಟ್!

by ಪ್ರತಿಧ್ವನಿ
July 12, 2026
0

‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ...

Read moreDetails
ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರಿನಲ್ಲಿ ಉಳಿಯುವುದು ಎಸ್.ಜಾನಕಿಯವರ ಕೊನೆ ಆಸೆ: ಸಿಎಂ ಡಿ.ಕೆ ಶಿವಕುಮಾರ್

July 12, 2026
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಬೆಂಗಳೂರು ದಕ್ಷಿಣದಲ್ಲೇ ಎರಡನೇ ವಿಮಾನ ನಿಲ್ದಾಣ: ಸಿಎಂ ಡಿ.ಕೆ ಶಿವಕುಮಾರ್

July 12, 2026
ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

ಶಿವಣ್ಣ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್‌: ಆರ್.ಚಂದ್ರು ಜೊತೆ ಹೊಸ ಸಿನಿಮಾ ಫಿಕ್ಸ್

July 12, 2026
ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

ಚಿಲ್ಲರೆ ಇಲ್ಲ ಎಂದ ಸಚಿವರನ್ನೇ ಬಸ್‌ನಿಂದ ಕೆಳಗಿಳಿಯಲು ಹೇಳಿದ BMTC ಕಂಡಕ್ಟರ್‌

July 12, 2026
Next Post
ಕರವೇ ನಡೆಸುತ್ತಿರುವ #ಕನ್ನಡವಿವಿಉಳಿಸಿ ಭಿತ್ತಿಪತ್ರ ಚಳವಳಿ ನಾಲ್ಕನೇ ದಿನಕ್ಕೆ

ಕರವೇ ನಡೆಸುತ್ತಿರುವ #ಕನ್ನಡವಿವಿಉಳಿಸಿ ಭಿತ್ತಿಪತ್ರ ಚಳವಳಿ ನಾಲ್ಕನೇ ದಿನಕ್ಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada