ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಯವರನ್ನು ಉದ್ಯಮಿಯೋರ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಬಳಿಕ ಸುಪ್ರಿಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ಕುರಿತು ಸ್ಟ್ಯಾಂಡ್‌ಅಪ್ ಕೋಮಿಡಿಯನ್ ಕುನಾಲ್ ಕಮ್ರಾ ಹಾಸ್ಯಾಸ್ಪದವಾಗಿ ಟ್ವೀಟ್ ಮಾಡುತ್ತಿದ್ದು, ಇದು ಸದ್ಯ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕುನಾಲ್ ಕಮ್ರಾ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಕುನಾಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ರವರು ಪ್ರಕಟಿಸಿದ ನೋಟೀಸ್ ಪ್ರಕಾರ, ಕುನಾಲ್ ಕಮ್ರಾ ರವರ ಪ್ರತಿಯೊಂದು ಟ್ವೀಟ್ ಅನ್ನು ನಾವು ಗಮನಿಸಿದ್ದು, ಹಲವಾರು ಟ್ವೀಟ್ ಗಳು ಕೀಳು ಅಭಿರುಚಿಯಿಂದ ಕೂಡಿದೆ. ಹಾಸ್ಯ ಮತ್ತು ನ್ಯಾಯಾಂಗ ನಿಂದನೆಯ ಪರಿಧಿಯನ್ನು ಕುನಾಲ್ ಕಮ್ರಾ ದಾಟಿದ್ದಾರೆ.
Me right now https://t.co/17TMiBzPM4 pic.twitter.com/rUOQLYFt9w
— Kunal Kamra (@kunalkamra88) November 11, 2020
“ಕೋರ್ಟ್‌ನಲ್ಲಿ ʼಗೌರವಾನ್ವಿತʼ (honorable) ಎಂಬ ಪದವನ್ನು ಇನ್ನು ಮುಂದೆ ಬಳಸಬಾರದು. ಏಕೆಂದರೆ ಗೌರವವು ಯಾವತ್ತೋ ಸುಪ್ರಿಂ ಕೋರ್ಟ್ ಕಟ್ಟಡ ಬಿಟ್ಟು ಹೊರ ಬಂದಿದೆ” ಹಾಗೂ “ಈ ದೇಶದ ಸುಪ್ರಿಂ ಕೋರ್ಟ್ ಅನ್ನುವುದು ಸುಪ್ರಿಂ ಜೋಕ್ ಆಗಿ ಮಾರ್ಪಾಡುಗೊಂಡಿದೆ” ಎಂಬ ಟ್ವೀಟ್ ಗಳನ್ನು ಉದಾಹರಣೆಯಾಗಿ ನೋಟೀಸ್ ನಲ್ಲಿ ನೀಡಲಾಗಿದೆ. ಇನ್ನು, ಸುಪ್ರಿಂ ಕೋರ್ಟ್ ನ ಕಟ್ಟಡಕ್ಕೆ ಸಂಪೂರ್ಣ ಕೇಸರಿ ಬಣ್ಣವನ್ನು ಬಳಿದು, ಭಾರತದ ಧ್ವಜವಿರುವ ಸ್ಥಳದಲ್ಲಿ ಬಿಜೆಪಿ ಪಕ್ಷದ ಧ್ವಜವನ್ನಿಟ್ಟಿರುವುದು ಸುಪ್ರಿಂ ಕೋರ್ಟ್ ಗೆ ಮಾಡಿದ ನಿಂದನೆಯಾಗಿದೆ ಎಂದು ಈ ನೋಟೀಸ್ ನಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಉಲ್ಲೇಖಿಸಿದ್ದಾರೆ.






