• Home
  • About Us
  • ಕರ್ನಾಟಕ
Thursday, September 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸಿನಿಮಾ

ಕೊಲೆ ಕೇಸ್​​ನಲ್ಲಿ ನಟ ದರ್ಶನ್ ರಕ್ಷಣೆಗೆ ನಡೀತಿದ್ಯಾ ಕಸರತ್ತು..?

ಪ್ರತಿಧ್ವನಿ by ಪ್ರತಿಧ್ವನಿ
June 12, 2024
in ಸಿನಿಮಾ
0
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್​ನಲ್ಲಿ ಬಂಧನ ಆಗಿರುವ ನಟ ದರ್ಶನ್​​ ರಕ್ಷಣೆಗೆ ರಾಜಕಾರಣಿಗಳು ಪ್ರಯತ್ನ ಮಾಡಿದ್ದಾರೆ ಅನ್ನೋ ಮಾತುಗಳು ಚರ್ಚೆಗೆ ಬಂದಿವೆ. ನಿನ್ನೆ ಮೈಸೂರಿನಲ್ಲಿ ಬಂಧನ ಆದ ಬಳಿಕ ಪೊಲೀಸ್ರು ಕೋರ್ಟ್​ಗೆ ಹಾಜರು ಮಾಡಿ ವಶಕ್ಕೆ ಪಡೆದಿದ್ದಾರೆ. 6 ದಿನಗಳ ಕಾಲ ಸಾಕ್ಷ್ಯ ಸಂಗ್ರಹ ಜೊತೆಗೆ ಸ್ಥಳ ಮಹಜರು ಮಾಡಲು ಪೊಲೀಸ್ರು ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ರಾಜಕಾರಣಿಗಳು ನಟ ದರ್ಶನ್​ ರಕ್ಷಣೆ ಮಾಡಲು ಪ್ರಯತ್ನ ನಡೆದಿದ್ದು, ಪೊಲೀಸ್ರ ತನಿಖೆ ಮೇಲೆ ಪ್ರಭಾವ ಬೀರುವುದಕ್ಕೆ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಬೆಂಗಳೂರು ಹಾಗು ಹಳೇ ಮೈಸೂರು ಭಾಗದ ಇಬ್ಬರು ಸಚಿವರು ಸಿಎಂ ಸಿದ್ದರಾಮಯ್ಯ ಮೂಲಕವೇ ಪೊಲೀಸ್ರ ಮೇಲೆ ಒತ್ತಡ ಹಾಕುತ್ತಿದ್ದಾರೆ ಅನ್ನೋ ಮಾಹಿತಿ ಹರಿದಾಡ್ತಿದೆ.

ADVERTISEMENT

ಅನಾಮಿಕ ವ್ಯಕ್ತಿಯ ಶವ ಸಿಕ್ಕಿದೆ ಎಂದು ಮೊದಲು ಪೊಲೀಸ್ರು ಎಫ್​ಐಆರ್ ಮಾಡಿಕೊಂಡಿದ್ದರು. ಇದೀಗ ಅನಾಥ ಶವದ ಕೇಸ್​ನಲ್ಲಿಯೇ ತನಿಖೆ ಮುಂದುವರಿಸಿದ್ದಾರೆ. ದರ್ಶನ್​ ಸೇರಿದಂತೆ ಬಂಧಿತ ಆರೋಪಿಗಳ ಮೇಲೆ ಪ್ರತ್ಯೇಕ FIR ಮಾಡಿಲ್ಲ. ಅನಾಮಿಕ ಶವದ ಎಫ್​ಐಆರ್​ನಲ್ಲೇ ತನಿಖೆ ನಡೆದಿದ್ದು, ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸುವ ವೇಳೆ A1, A2… ಮಾಡಲಾಗುವುದು ಎಂದು ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ. ಆದರೆ ಅಷ್ಟರಲ್ಲಿ ಆರೋಪಿಗಳು ಪೊಲೀಸ್ರ ಜೊತೆಗೆ ಮಸಲತ್ತು ಮಾಡಿ ಕೆಲವೊಂದಿಷ್ಟು ಜನರನ್ನು ಸಿಲುಕಿಸಿ ಉಳಿದವರು ಪಾರಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ನಿವೃತ್ತ ಪೊಲೀಸರು.

ನಟ ದರ್ಶನ್​ನನ್ನು ಕೇಸ್​ನಲ್ಲಿ ಸಿಲುಕಿಸ ಬಾರದು ಅನ್ನೋದೇ ಪೊಲೀಸ್ರ ಉದ್ದೇಶ ಆಗಿದ್ದರೆ, ಬಂಧನ ಮಾಡದೆಯೇ ಪೊಲೀಸ್ರು ಕೇಸ್​ ಮುಚ್ಚಿ ಹಾಕಬಹುದಿತ್ತು. ಆದರೆ ಕರ್ನಾಟಕ ಪೊಲೀಸ್​​ ದೊಡ್ಡ ಸಿನಿಮಾ ಸ್ಟಾರ್​ ಅನ್ನೋದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಸಾಕ್ಷಿಗಳನ್ನು ಆಧರಿಸಿ ಬಂಧನ ಮಾಡಿದ್ದಾರೆ ಎಂದರೆ ಈ ರೀತಿಯ ಒತ್ತಡಗಳಿಗೆ ಮಣಿಯುವುದಿಲ್ಲ ಅನ್ನೋ ಮಾತುಗಳೂ ಕೂಡ ಕೇಳಿ ಬರುತ್ತಿವೆ. ಆದರೂ ಹಣವಂತರಿಗೆ ಕಾನೂನು ಶಿಕ್ಷೆ ಕೊಡುವುದು ಅಷ್ಟೊಂದು ಸರಳ ಅಲ್ಲ ಅನ್ನೋ ಮಾತನ್ನೂ ನಾವು ಜ್ಞಾಪಕ ಮಾಡಿಕೊಳ್ಳುವಂತಾಗಿದೆ. ಕಾನೂನಿನ ಯಾವುದೋ ಒಂದು ಸಣ್ಣ ಲೋಪವನ್ನೇ ದೊಡ್ಡದು ಮಾಡಿಕೊಂಡು ಪಾರಾಗ್ತಾರಾ..? ಅನ್ನೋ ಶಂಕೆಯೂ ಕಾಡ್ತಿದೆ.

ಸಾಮಾನ್ಯ ವ್ಯಕ್ತಿಯೊಬ್ಬ ಕೊಲೆ ಮಾಡಿದರೆ ಅದು ಕೊಲೆಯಷ್ಟೆ. ಆತ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಾನೆ. ಅಲ್ಲಿ ತನ್ನ ತಪ್ಪಿನ ಅರಿವಾಗಿ ಜೀವನದಲ್ಲಿ ಬುದ್ಧಿ ಕಲಿಯುತ್ತಾನೆ. ಕೆಳ ಮಟ್ಟದ ಕೋರ್ಟ್​ ಆದೇಶವನ್ನು ಪ್ರಶ್ನೆ ಮಾಡದೆ ತುಂಬಾ ಜನರು ಶಿಕ್ಷೆ ಅನುಭವಿಸಿ ಬರುವುದೂ ಉಂಟು. ಆದರೆ ನಟ ದರ್ಶನ್​ ಸಾಮಾನ್ಯ ವ್ಯಕ್ತಿಯಲ್ಲ. ಆತನ ಬಳಿ ಹಣಬಲ, ರಾಜಕೀಯ ಬಲ ಸೇರಿದಂತೆ ಎಲ್ಲಾ ರೀತಿಯಲ್ಲೂ ಬಲಾಢ್ಯ. ಹೀಗಾಗಿ ತನಿಖಾ ಹಂತದಲ್ಲೇ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹ ಮಾಡಬೇಕಿದೆ. ಇನ್ನು ಪೊಲೀಸ್ರು ತನಿಖೆ ಮತ್ತು ಅಂತಿಮ ವರದಿ Chanrge Sheet ಸಲ್ಲಿಸುವಾಗ ಸೂಕ್ಷ್ಮಮತಿಗಳಾಗಿ, ಕಾನೂನು ತಜ್ಞರ ಸಲಹೆ ಪಡೆದು ವರದಿ ಸಿದ್ಧಪಡಿಸಬೇಕಿದೆ. ದರ್ಶನ್​ಗೆ ಶಿಕ್ಷೆಯಾದರೆ ಸಮಾಜಕ್ಕೆ ಮಾದರಿ ಆಗಲಿದೆ. ಕೊಲೆ ಮಾಡೋದು, ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಅನ್ನೋ ಸಂದೇಶ ಕೊಟ್ಟಂತಾಗುತ್ತದೆ.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'Darshan Arrest
Previous Post

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ವಿನೋದ್ ರಾಜ್

Next Post

ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಗೆ ಮಾಹಿತಿಯೇ ಇಲ್ಲ; ವಕೀಲ

Related Posts

Top Story

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

by ಪ್ರತಿಧ್ವನಿ
September 4, 2025
0

ಚಿತ್ರೀಕರಣr ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ ಟಿ.ಎನ್.ನಾಗೇಶ್ ನಿರ್ದೇಶನದ ಈ ಚಿತ್ರ . "ಭೀಮ" ಚಿತ್ರದ ಗಿರಿಜಾ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ಪ್ರಿಯಾ ಅವರು...

Read moreDetails

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

September 4, 2025

ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ “ಅಯ್ಯೊ ಶಿವನೇ” ಹಾಡು. .

September 4, 2025
ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

ಗ್ಯಾಂಗ್ಸ್ ಆಫ್ ಯುಕೆ ಟ್ರೈಲರ್ ಉಪೇಂದ್ರ ಬಿಡುಗಡೆ

September 4, 2025
ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

September 3, 2025
Next Post
ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಗೆ ಮಾಹಿತಿಯೇ ಇಲ್ಲ; ವಕೀಲ

ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಗೆ ಮಾಹಿತಿಯೇ ಇಲ್ಲ; ವಕೀಲ

Recent News

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ
Top Story

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

by ನಾ ದಿವಾಕರ
September 4, 2025
Top Story

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

by ಪ್ರತಿಧ್ವನಿ
September 4, 2025
Top Story

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

by ಪ್ರತಿಧ್ವನಿ
September 4, 2025
Top Story

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

by ಪ್ರತಿಧ್ವನಿ
September 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada