• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾ ವಿರುದ್ಧ ವಿಕೇಂದ್ರೀಕರಣದ ಹೋರಾಟ!

by
May 6, 2020
in ದೇಶ
0
ಕರೋನಾ ವಿರುದ್ಧ ವಿಕೇಂದ್ರೀಕರಣದ ಹೋರಾಟ!
Share on WhatsAppShare on FacebookShare on Telegram

ಕರೋನಾ ವೈರಸ್ ದಾಂಧಲೆ ಮಾಡುತ್ತಿರುವ ಹೊತ್ತಿನಲ್ಲಿ ಮತ್ತು ಅದು ಪ್ರತೀ ಹಳ್ಳಿಗಳಲ್ಲಿ ಹರಡುತ್ತಿರುವ ಹೊತ್ತಿನಲ್ಲಿ- ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಏಕೆ ಕಡೆಗಣಿಸಲಾಗುತ್ತಿದೆ ಎಂಬುದು ದೊಡ್ಡ ಪ್ರಶ್ನೆ. ಅದು ಕೆಲವು ಕರೋನಾ ಪೀಡಿತ ಗ್ರಾಮಗಳ ಅನುಭವಗಳನ್ನು ದಾಲಿಸಿದೆ. ಕರೋನಾ ವಿರುದ್ಧದ ಹೋರಾಟದಲ್ಲಿ ತಳಮಟ್ಟದ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಪಂಚಾಯತ್ ರಾಜ್ ವ್ಯವಸ್ಥೆ ಅತ್ಯಂತ ಪರಿಣಾಮಕಾರಿ ವಾಹಕವಾಗಬಹುದಿತ್ತು. ಆದರೆ, ಹಾಗೆ ಆಗುತ್ತಿಲ್ಲ. ಈ ನಡುವೆಯೂ ಕೆಲವು ಗ್ರಾಮ ಪಂಚಾಯಿತಿಗಳು ತಮ್ಮದೇ ಆದ ರೀತಿಯಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿವೆ. ಉಳಿದ ಗ್ರಾಮ ಪಂಚಾಯತ್‌ಗಳು ಇವುಗಳ ಕುರಿತು ತಿಳಿದುಕೊಂಡು ಕಾರ್ಯಾಚರಿಸಬಹುದಿತ್ತು. ಆದರೆ, ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಕೆಲಸಕ್ಕೆ ಬಾರದ ಸುದ್ದಿಗಳನ್ನು, ಸುಳ್ಳುಗಳನ್ನು ಹರಡುವುದರಲ್ಲಿ ನಿರತವಾಗಿವೆ. ಅವುಗಳಿಗೆ ಇಂತಹ ಸುದ್ದಿಗಳು ಗೌಣವಾಗಿವೆ.

ADVERTISEMENT

ಇಂತಹ ಹೊತ್ತಿನಲ್ಲಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅತ್ಯಂತ ಅನುಭವ ಹೊಂದಿರುವ ಮೈಸೂರಿನ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ANSSIRD) ಇಂತಹಾ ಕೆಲವು ಗ್ರಾಮ ಪಂಚಾಯತ್‌ಗಳ ಅನುಭವಗಳನ್ನು ದಾಖಲಿಸುವ ಕೆಲಸವನ್ನು ಮಾಡಿದೆ. ಆಂತಹ ಎರಡು ಗ್ರಾಮ ಪಂಚಾಯತ್‌ಗಳ ಅನುಭವಗಳ ಸಾರವನ್ನು ಇಲ್ಲಿ ನೀಡಲಾಗಿದೆ.

ಬನಹಟ್ಟಿಯ ಅನುಭವ

ಬನಹಟ್ಟಿ ಪಂಚಾಯತ್ ಗದಗ ಜಿಲ್ಲೆಯ ನರಗುಂದದಿಂದ ಸುಮಾರು 6 ಕಿ.ಮೀ ದೂರದಲ್ಲಿದಲ್ಲಿರುವ, ಮೂರು ಗ್ರಾಮಗಳಿರುವ ಒಂದು ಸಣ್ಣ ಗ್ರಾಮ ಪಂಚಾಯತ್ ಬೆಣ್ಣಿಹಾಳ ನದಿ ಪಕ್ಕದಲ್ಲಿರುವ ಊರಿನ ನಡುವೆ 1942ನೇ ಇಸವಿಯಲ್ಲಿ ಕಟ್ಟಲಾಗಿರುವ ಇಪ್ಪತ್ತು ಎಕರೆಯಷ್ಟು ವಿಶಾಲವಾದ ಕುಡಿಯುವ ನೀರಿನ ದೊಡ್ಡ ಕೆರೆ ಇದೆ. ಈ ಪಂಚಾಯತ್‌ನ ಒಟ್ಟು ಜನಸಂಖ್ಯೆ ಸುಮಾರು 7000 ಅಥವಾ 1400 ಕುಟುಂಬಗಳು. ಅದರಲ್ಲಿ 984 ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿತರು. ಪಂಚಾಯತ್‌ನಲ್ಲಿ 13 ಮಂದಿ ಸದಸ್ಯರಿದ್ದಾರೆ.

ಕಲ್ಬುರ್ಗಿ ಜಿಲ್ಲೆಯಲ್ಲಿ ಕರೋನಾ ಸೋಂಕು ಹರಡಿರುವ ವಿಷಯ ಎಲ್ಲಾ ಕಡೆ ಪ್ರಚಾರ ಆದ ಕ್ಷಣದಿಂದಲೇ, ಬೇರೆಬೇರೆ ನಗರ ಪ್ರದೇಶಗಳಿಗೆ ಗೌಂಡಿ ಕೆಲಸ, ಮನೆ ಕೆಲಸ, ಕಟ್ಟಡ ಕೆಲಸಕ್ಕಾಗಿ ಕೊಲ್ಲಾಪುರ, ಮಂಗಳೂರು, ಕಾಸರಗೋಡು ಮುಂತಾದ ಕಡೆ ಹೋಗಿರುವವರು, ಡ್ರೈವರ್ ಕೆಲಸದಲ್ಲಿ ಬೆಂಗಳೂರು ಮತ್ತು ಕೇರಳ ಮುಂತಾದ ಕಡೆ ಹೋಗಿರುವ ಸುಮಾರು 40/45 ಮಂದಿ ಯುವಕರು ಸೇರಿದಂತೆ ಒಟ್ಟು 228 ಮಂದಿ‌ ಮಾರ್ಚ್ ತಿಂಗಳ ಮೊದಲ ವಾರದಲ್ಲೇ ಬನಹಟ್ಟಿಗೆ ವಾಪಸು ಬಂದುಬಿಟ್ಟಾಗ ಪಂಚಾಯತ್ ಜಾಗೃತಗೊಂಡಿತು. ಕರೋನಾ ಸೋಂಕು ಲಕ್ಷಣ ಪತ್ತೆ ಹಚ್ಚಲು ಆಗಲೇ ತರಬೇತಿಗೊಂಡಿರುವ ಆರೋಗ್ಯ ಮತ್ತು, ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಕೂಡಲೆ ಮನೆಮನೆ ಭೇಟಿ ಕಾರ್ಯಕ್ರಮ ಜಾರಿಗೊಳಿಸಿತು.

ಮೊತ್ತ ಮೊದಲು, ಗಾಮ ಪಂಚಾಯತ್ ಅಧ್ಯಕ್ಷ, ಅಭಿವೃದ್ಧಿ ಅಧಿಕಾರಿ, ಒಂದಿಬ್ಬರು ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಆರೋಗ್ಯ ಸಿಬ್ಬಂದಿ ಮತ್ತು, ಐವರು ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಸೇರಿ, ಮಾರ್ಚ್ ಮೊದಲನೇ ತಾರೀಕಿನಿಂದ 14ರ ನಡುವೆ ಬೇರೆ ಊರುಗಳಿಂದ ವಾಪಾಸಾಗಿರುವ ಎಲ್ಲಾ 202 ಮಂದಿಯನ್ನು ಗುರುತಿಸಿ, ಮನೆಯಲ್ಲಿಯೇ ಆರೋಗ್ಯ ತಪಾಸಣೆ ನಡೆಸಿ ಅವರ ವಿವರಗಳನ್ನು ದಾಖಲಿಸಿ, ಆರೋಗ್ಯಕರ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಿದರು. ಈ ತಂಡವೇ ಈಗ ಕರೋನಾ ಕಾರ್ಯಪಡೆಯ ಕೇಂದ್ರ ಬಿಂದು ಆಗಿ ಕಾರ್ಯನಿರ್ವಹಿಸುತ್ತಿದೆ.

ಈ ತಂಡವು ಕರೋನಾ ಪಿಡುಗು ತಡೆಗಟ್ಟಲು ಅನುಸರಿಸಬೇಕಾದ ರೋಗ ನಿರೋಧಕ ಕ್ರಮಗಳ ಬಗ್ಗೆ ಹಾಗೂ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿಯೇ ಇರಬೇಕಾದ ಅಗತ್ಯದ ಬಗ್ಗೆ ಪ್ರತೀ ದಿನ ಮೈಕ್ ಮೂಲಕ ಪ್ರಚಾರ ಮಾಡುತ್ತಿದೆ. ಪಡಿತರ ಅಂಗಡಿ, ಕಿರಾಣಿ ಅಂಗಡಿಗಳಲ್ಲಿ ಆರೋಗ್ಯಕರ ಅಂತರ ಕಾಪಾಡಲು ಒಂದು ಮೀಟರ್ ಅಂತರಕ್ಕೆ ಗುರುತು ಹಾಕಿಸಿ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದೆ. ಚಹಾ ಹೊಟೇಲು ಮತ್ತು ಕ್ಷೌರಿಕ ಅಂಗಡಿಗಳನ್ನು ನಿಯಮಿತ ಸಮಯದಲ್ಲಿ ಮಾತ್ರ ತೆರೆದು ವ್ಯವಹಾರ ಮಾಡಲು ಸೂಚನೆಗಳನ್ನು ಪಾಲಿಸಲು ತಿಳಿಸಲಾಗಿದೆ. ಪಂಚಾಯಿತಿಯು ಊರೊಳಗಿನ ದರ್ಜಿಗಳಿಗೆ ದಿನಗೂಲಿ ಕೊಟ್ಟು ಬೇಕಾದ ಮಾಸ್ಕ್ ಹೊಲಿಸುವ ನಿರ್ಧಾರಕ್ಕೆ ಬಂದರು.

ತಕ್ಷಣವೇ ಕಾರ್ಯಪ್ರವೃತ್ತರಾದ ಅಧ್ಯಕ್ಷರು, ಪಿಡಿಓ, ಕಾರ್ಯಪಡೆ ಸದಸ್ಯರೊಂದಿಗೆ ಸಮಾಲೋಚಿಸಿ, ನರಗುಂದ ಪಟ್ಟಣದಿಂದ 700 ಮೀಟರ್ ಕಾಟನ್ ಬಟ್ಟೆ ಖರೀದಿಸಿ, ಮಾಸ್ಕ್ ತಯಾರಿ ಕೆಲಸ ಆರಂಭಿಸಿಯೇ ಬಿಟ್ಟರು. ಗ್ರಾಮದ ಅನುಭವಿ ದರ್ಜಿಗಳು ತಮ್ಮ ಹೊಲಿಗೆ ಯಂತ್ರಗಳನ್ನು ಗ್ರಾಮ ಪಂಚಾಯಿತಿಗೆ ತಂದು ತಯಾರಿಕೆಗೆ ಮುಂದಾದಾಗ ಸಿದ್ಧವಾಗಿದ್ದು ಕೇವಲ 200 ಮಾಸ್ಕ್ ಗಳು ಮಾತ್ರ. ಹೀಗಾದರೆ ವಿಳಂಬವಾಗುವುದು ಎಂಬುದನ್ನು ಅರಿತ ಅಧ್ಯಕ್ಷರು ಮರುದಿನ ಹೊಲಿಗೆಯ ಅನುಭವ ಇದ್ದ ಪಂಚಾಯಿತಿಯ ಇಬ್ಬರು ಸಿಬ್ಬಂದಿಗಳನ್ನು ಬಟ್ಟೆ ಮಾರ್ಕ್ ಮಾಡಿ ಕತ್ತರಿಸಲು ಮತ್ತು ಇತರ ಪಂಚಾಯಿತಿ ಸಿಬ್ಬಂದಿಗಳನ್ನು ಇನ್ನಿತರ ನೆರವಿಗೆ ನಿಯೋಜಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬನಹಟ್ಟಿ, ಮೂಗನೂರು ಮತ್ತು ಕುಲಗೇರಿ ಗ್ರಾಮಗಳಲ್ಲಿ ಹೊಲಿಗೆಯಲ್ಲಿ ಪರಿಣಿತಿ ಹೊಂದಿದ 12 ಮಹಿಳೆಯರಿಗೆ ತಲಾ ಎರಡು ರೂಪಾಯಿಗಳಂತೆ 100 ಮಾಸ್ಕ್ ಹೊಲಿಯಲು ಕತ್ತರಿಸಿದ ಬಟ್ಟೆ, ನೂಲು ನೀಡುವುದೆಂದು ಪಂಚಾಯಿತ್ ನಿರ್ಧರಿಸಿತು. ಹೆಚ್ಚುವರಿಯಾಗಿ 100 ಮೀಟರ್ ಬಟ್ಟೆಯನ್ನು ತರಿಸಲಾಯಿತು. ಇನ್ನುಳಿದ ಎರಡು ದಿನದಲ್ಲಿ ಒಟ್ಟು 6,000 ಮಾಸ್ಕ್‌ಗಳು ಸಿದ್ಧವಾದವು. ಒಟ್ಟು 35,000 ರೂ.ಗಳ ವೆಚ್ಚದಲ್ಲಿ ಮಾಸ್ಕ್ ತಯಾರಿ ಮುಗಿಯಿತು. ಒಟ್ಟಾರೆ ಈ ಆರು ದಿನಗಳಲ್ಲಿ ಪಿ.ಡಿ.ಓ, ಅಧ್ಯಕ್ಷರು ಹಾಗೂ ಪಂಚಾಯತ್ ಸಿಬ್ಬಂದಿಗಳು ಕಛೇರಿ ಕಚೇರಿಯಲ್ಲೇ ಇದ್ದು ದುಡಿದರು. ಕಾರ್ಯಪಡೆ ತಂಡದ ಸದಸ್ಯರು ಪ್ರತೀ ಓಣಿಗೆ ಇಬ್ಬರಂತೆ ಮನೆ ಮನೆಗೆ ತೆರಳಿ ಪಂಚಾಯಿತಿ ವ್ಯಾಪ್ತಿಯ 1300 ಕುಟುಂಬಗಳ ಸದಸ್ಯರಿಗೆ (ಪ್ರತೀ ಮನೆಗೆ ಮೂರರಿಂದ ಐದರಂತೆ) ಮಾಸ್ಕ್ ಗಳನ್ನು ಹಂಚಿದ್ದಾರೆ.

ಪರ ಊರಿನಿಂದ ವಾಪಾಸು ಬಂದಿರುವ 228 ಮಂದಿ ವಾಸವಿರುವ 70 /100 ಮನೆಗಳಿಗೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಮೂರು ದಿನಗಳಿಗೊಮ್ಮೆ ಜ್ವರ, ನೆಗಡಿ, ಕೆಮ್ಮು ಲಕ್ಷಣಗಳು ಇವೆಯೇ ಎಂದು ಪರೀಕ್ಷೆ ಮಾಡುತ್ತಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಗಟಾರ ಶುಚಿತ್ವ ಮತ್ತು ಕೊಚ್ಚೆನೀರು ತೆರವುಗೊಳಿಸುವುದು ಮತ್ತು ಡಿ.ಡಿ.ಟಿ ಸಿಂಪಡಿಸುವಿಕೆ ಮಾಡಿಸಲಾಗುತ್ತಿದೆ.

ಪಂಚಾಯತ್ ವತಿಯಿಂದ ನೀಡಲಾದ ಸ್ಯಾನಿಟೈಸರ್, ಮಾಸ್ಕ್ ಮಾತ್ರ ಬಳಸಲಾಗುತ್ತಿದೆ. ಆದರೆ, ಕೈಗೆ ಗ್ಲೌಸ್ ಕೆಲವೊಮ್ಮೆ ಮಾತ್ರ ಬಳಸಲಾಗುತ್ತಿದೆ. ಮನೆಯಲ್ಲಿ ದಿಗ್ಬಂದನದಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಮಾಡುವ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಮಾಸ್ಕ್, ಹಾಗೂ ಕೈಗೆ ಗ್ಲೌಸ್ ಧರಿಸುತ್ತಾರೆ. ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡ ಕ್ಷಣ ರೋಗಿಗಳನ್ನು ನರಗುಂದ ಕರೋನಾ ಚಿಕಿತ್ಸಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಶುಶ್ರೂಷೆಗಾಗಿ ಕಳುಹಿಸಿಕೊಡಲಾಗುತ್ತಿದೆ.

ರೈತರು ತಾವು ಬೆಳೆದ ತರಕಾರಿಗಳನ್ನು ನರಗುಂದ ಮಾರುಕಟ್ಟೆಗೆ ಒಯ್ಯಲು (ಬೆಳಗ್ಗೆ 3-6ರ ನಡುವೆ ನಡೆಯುವ ಸವಾಲ್‌ನಲ್ಲಿ ಭಾಗವಹಿಸಿ ಮಾರಾಟ ಮಾಡಲು/ಕೊಳ್ಳಲು ಅಗತ್ಯ ಪಾಸ್/ಅನುಮತಿಯನ್ನು ಬೀಟ್ ಪೊಲೀಸರಿಂದ ಪಡೆಯಲು ಸಹಾಯ ಮಾಡುತ್ತೇವೆಂದು ಪಂಚಾಯತ್ ಅದ್ಯಕ್ಷರು ತಿಳಿಸಿದ್ದಾರೆ. ಇದು ರೂಪಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಪೂರೈಕೆ ಜಾಲದಲ್ಲಿರುವ ಅಡಚಣೆಗಳನ್ನು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಇದು ಸುಲಭ ಉಪಾಯ.

ಎಲ್ಲಾ ಗ್ರಾಮಗಳಲ್ಲಿ ಕಾರ್ಯಪಡೆಗಿರುವ ಸವಾಲುಗಳು ಅನೇಕ ಇವೆ. ಅವುಗಳಲ್ಲಿ ಮುಖ್ಯವಾದವುಗಳು ಎಂದರೆ, ಗ್ರಾಮಸ್ಥರಲ್ಲಿ ಆರೋಗ್ಯಕರ ಅಂತರ ಕಾಯ್ದುಕೊಳ್ಳುವ ಪರಿಕಲ್ಪನೆ ಇಲ್ಲದಿರುವುದು; ಬೇಸಿಗೆ ಕಾಲದಲ್ಲಿ ಕಾರ್ಮಿಕರು ನೆರಳಲ್ಲಿ ಗುಂಪಾಗಿ ಕುಳಿತು ಕೊಳ್ಳುವುದು ರೂಢಿಯಾಗಿರುವುದು. ಆಡಲು ಗುಂಪು ಸೇರುವುದು; ರೈತರಿಗೆ ತಮ್ಮ ಬೇಳೆಗಳನ್ನು ಮಾರುಕಟ್ಟೆಗೆ ಒಯ್ಯಲು ಇರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗದಿರುವುದು. ಮದ್ಯ ಮತ್ತಿತರ ಚಟಗಳ ಸಮಸ್ಯೆ ಮತ್ತಿದು ಸಾಮಾಜಿಕ ಸಮಸ್ಯೆಯೂ ಹೌದು.

ಹರದನಹಳ್ಳಿಯ ‘ಕರೋನಾ ನಿಗ್ರಹ ದಳ’

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ಮಲೆನಾಡು ಪ್ರದೇಶ ವ್ಯಾಪ್ತಿಯಲ್ಲಿದ್ದು, ಹತ್ತಿರದಲ್ಲೇ ಕಪಿಲಾ ನದಿಯ ಸಂಗಮ ಇದೆ. ಒಟ್ಟು ಆರು ಗ್ರಾಮಗಳನ್ನು ಒಳಗೊಂಡ ಈ ಊರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿನ ಸಾಕ್ಷರತಾ ಪ್ರಮಾಣ 45 ಶೇಕಡಾ (2011) ಮಾತ್ರ. ಇಲ್ಲಿನ ಪ್ರಸ್ತುತ ಜನಸಂಖ್ಯೆ ಅಂದಾಜು 12,000. ಇಲ್ಲಿ ಸುಮಾರು 2,834 ಕುಟುಂಬಗಳು ಇವೆ. ಇದರಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿತರು 1100. ಗ್ರಾಮದ ಪ್ರಮುಖ ಆದಾಯ ಕೃಷಿ. ಕಪಿಲಾ ಜಲಾಶಯದ ನೀರು ಬಳಸಿ, ಕಾಕಡಾ ಹೂ, ಶುಂಠಿ ಬೆಳೆಯುತ್ತಾರೆ. ಕೃಷಿ ಕಾರ್ಮಿಕರಲ್ಲಿ ಬಹಳಷ್ಟು ಜನ ಪಕ್ಕದ ಕೇರಳದ ಗಡಿಭಾಗದಲ್ಲಿನ ತೋಟಗಳಿಗೆ ಹೋಗುತ್ತಾರೆ. ಹಲವರು ಇಟ್ಟಿಗೆ ಕೆಲಸ ಮಾಡುತ್ತಾರೆ. ಈ ಪಂಚಾಯತಿಯಲ್ಲಿ 20 ಸದಸ್ಯರಿದ್ದಾರೆ.

ನಂಜನಗೂಡಿನ ಜುಬಿಲಿಯಂಟ್ ಫಾರ್ಮಾದಿಂದ ಕರೋನಾ ಸೋಂಕಿತರ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಬೆಂಗಳೂರು, ಮೈಸೂರು, ಗುಲ್ಬರ್ಗಾ ಮುಂತಾದ ಕಡೆಗಳಲ್ಲಿ ದಿನಗೂಲಿ, ಗಾರೆಕೆಲಸ, ಪೈಂಟಿಂಗ್, ಹೊಟೇಲಲ್ಲಿ ಅಡುಗೆ, ಸಪ್ಲಾಯರ್ ಇತ್ಯಾದಿ ಕೆಲಸಗಳಲ್ಲಿ ತೊಡಗಿದ್ದವರು, ಎಪ್ರಿಲ್ 2ರಿಂದ ಎರಡು ತಂಡಗಳಲ್ಲಿ (ಒಮ್ಮೆ 405, ಮತ್ತೊಮ್ಮೆ 48) ಒಟ್ಟು 453 ಮಂದಿ ಊರಿಗೆ ಮರಳಿದಾಗ ಗ್ರಾಮಸ್ಥರು ದಿಗಿಲುಗೊಂಡರು. ಊರಿಂದ ಹೊರಹೋಗಲು, ಅಥವಾ ಒಳಕ್ಕೆ ಬರಲು ಯಾವುದೇ ವಾಹನ ಓಡಾಟ ಸಂಪೂರ್ಣ ನಿಂತುಹೋದಾಗ ಗ್ರಾಮಸ್ಥರು ಗಾಬರಿಯಿಂದ ಗ್ರಾಮ ಪಂಚಾಯಿತಿಯ ಮೊರೆಹೊಕ್ಕರು.

ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷೆ, ಉಪಾಧ್ಯಕ್ಷ , ಸಿಬ್ಬಂದಿ ಹಾಗೂ ಹನ್ನೊಂದು ಸದಸ್ಯರಲ್ಲಿ ಸಕ್ರಿಯರಾಗಿರುವರನ್ನು ಒಳಗೊಂಡ ಕರೋನಾ ಕಾರ್ಯಪಡೆಯೊಂದು ಪಿಡಿಓ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆರು ಹಳ್ಳಿಗಳಲ್ಲಿ ಅರೋಗ್ಯಕರ ದೈಹಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ, ಆಗಾಗ ಕೈ ತೊಳೆದುಕೊಳ್ಳುವ ಮತ್ತು ಮಾಸ್ಕ್ ಧರಿಸುವ ಕುರಿತು ಮತ್ತು ಗ್ರಾಮಸ್ಥರೆಲ್ಲರೂ ಕಡ್ಡಾಯವಾಗಿ ಮನೆಬಿಟ್ಟು ಹೊರಬರದಂತೆ ಸೂಚನೆಗಳನ್ನು ಮೈಕ್ ಮೂಲಕ ಪ್ರಚಾರ ಮಾಡಿಸಲಾಗಿದೆ.

453 ಮಂದಿ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಆರೋಗ್ಯ ಕಾರ್ಯಕರ್ತೆಯರಿಂದ ಪರೀಕ್ಷೆ ಮಾಡಿಸಿ, ಎಲ್ಲರನ್ನೂ 14 ದಿನಗಳವರೆಗೆ ಅವರವರ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡುವುದರ ಜೊತೆಗೆ, ಗ್ರಾಮ ಕೊರೊನಾ ನಿಗ್ರಹ ದಳದ ಮೂಲಕ ಪ್ರತಿಯೊಂದು ಮನೆಯ ಮೇಲೆ ನಿಗಾ ವಹಿಸಲಾಯಿತು.

ಕರೋನಾ ನಿಗ್ರಹದಳಗಳನ್ನು ಎಲ್ಲಾ ಆರು ಗ್ರಾಮಗಳಲ್ಲಿ ರಚಿಸಿ, ಪ್ರತೀ ತಂಡಕ್ಕೆ, ಪಂಚಾಯತಿ ಸಿಬ್ಬಂದಿ (8), ಸ್ಥಳೀಯ ಕರೋನಾ ನಿಗ್ರಹ ದಳದ ಸದಸ್ಯರು (11), ಆಶಾ ಕಾರ್ಯಕರ್ತೆಯರು (8) ಮತ್ತು ಪಂಚಾಯತ್ ಸದಸ್ಯರು (20)- ಒಟ್ಟು 47 ಮಂದಿಯನ್ನು ಹಂಚಿಕೆ ಮಾಡಲಾಯಿತು.

ಪ್ರತೀ ಊರಲ್ಲಿ ಸರಾಸರಿ ಆರರಿಂದ ಏಳು ಶುಂಠಿ ಕ್ಯಾಂಪ್/ ಸೈಟ್‌ಗಳನ್ನು, ಅಂದರೆ ಒಟ್ಟು 22 ಸ್ಥಳಗಳಲ್ಲಿ ಕಾರ್ಮಿಕರು ಆರೋಗ್ಯಕರ ಅಂತರ ಕಾಯ್ದುಕೊಳ್ಳುವಂತೆ ಖಾತರಿಗೊಳಿಸಲು ಕರೋನಾ ನಿಗ್ರಹ ದಳ ಬೆಳಿಗ್ಗೆ 4.00ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ದಿನಂಪ್ರತಿ ಕಾವಲು ಕುಳಿತಿತು. ಸಂಬಂಧಪಟ್ಟ ಗುತ್ತಿಗೆದಾರ/ಮೇಸ್ತ್ರಿಗಳಿಗೆ ಪ್ರತೀ ಸೈಟಲ್ಲಿ 15ಕ್ಕಿಂತ ಹೆಚ್ಚು ಕಾರ್ಮಿಕರನ್ನು ಕೆಲಸಕ್ಕೆ ಹಚ್ಚಬಾರದು ಮತ್ತು ಒಂದು ಸೈಟಲ್ಲಿ ಬೇರೆ ಊರಿನ ಕೆಲಸಗಾರರೊಂದಿಗೆ (ಕೇರಳದ ಗಡಿ ಪ್ರದೇಶ ಆಗಿರುವುದರಿಂದ ಕರೋನಾ ಸೋಂಕು ಅವರಿಂದ ಹರಡದಂತೆ) ಊರಿನವರನ್ನು ಜೊತೆ ಸೇರಿಸಬಾರದು ಎಂದು ತಾಕೀತು ಮಾಡಲಾಯಿತು. ಊರಿಗೆ ವಾಪಾಸು ಬಂದಿರುವ 453 ವಲಸೆ ಕಾರ್ಮಿಕರನ್ನು ಮನೆಯಲ್ಲಿಯೇ ಇರಿಸಿ, ಪ್ರತಿಯೊಬ್ಬರ ಮೇಲೆ ಕರೋನಾ ನಿಗ್ರಹ ದಳದ ಮೂಲಕ ನಿಗಾ ವಹಿಸುವುದು.

ಅವರು ಕೈಗೊಂಡಿರುವ ಕ್ರಮಗಳನ್ನು ಗಮನಿಸೋಣ. ಪ್ರತೀ ಊರಿನ ಕೇಂದ್ರದಿಂದ ಮೊಬೈಲ್ ಬಳಸಿ, ಗ್ರಾಮಸ್ಥರ ಚಲನವಲನಗಳ ವೀಡಿಯೊ ಚಿತ್ರೀಕರಣ ಹಾಗೂ ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿ ಕರೋನಾ ನಿಗ್ರಹ ದಳದ ಜೊತೆ ಮಾಹಿತಿ ಹಂಚಿಕೆ; ಕರೋನಾ ನಿಗ್ರಹ ದಳದ ವಾಟ್ಸಪ್ ಗುಂಪು ರಚಿಸಿ, ಕರೋನಾ ಪಿಡುಗಿನ ಬೆಳವಣಿಗೆ ಕುರಿತು ಹಾಗೂ ಸ್ಥಳೀಯ ಸ್ಥಿತಿಗತಿ ಬಗ್ಗೆ ಮಾಹಿತಿ ಹಂಚಿಕೆ; ನಂಜನಗೂಡು- ಎಚ್.ಡಿ.ಕೋಟೆ ರಸ್ತೆಯಲ್ಲಿ ಹರದನಹಳ್ಳಿಯ ಕಪಿಲಾ ನದಿ ಸೇತುವೆಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಕೇರಳ ರಾಜ್ಯದ ಗಡಿಯ ಮೂಲಕ ಕರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ.

ಸದ್ಯ ಹರದನಹಳ್ಳಿಯಲ್ಲಿ ಶುಂಠಿ ಕ್ಯಾಂಪ್‌ನಲ್ಲಿ ಕೆಲಸಮಾಡುತ್ತಿರುವ ಕಾರ್ಮಿಕರ ನಡುವೆ ಆರೋಗ್ಯಕರ ಅಂತರ ಕಾಪಾಡುವುದು ಇವರ ಮುಂದಿರುವ ದೊಡ್ಡ ಸವಾಲು. ಕಾರಣ ಶುಂಠಿ ಬೇಳೆ ಅತ್ಯಂತ ಲಾಭದಾಯಕ. ಆದುದರಿಂದ, ಕಾರ್ಮಿಕರಿಗೆ ಉತ್ತಮ ಕೂಲಿ ಮತ್ತು ವರ್ಷದಲ್ಲಿ ಹತ್ತು ತಿಂಗಳು ಕೆಲಸ ಇರುತ್ತದೆ. ಅವರು ದಿನದ ಕೆಲಸಕ್ಕೆ ಗಂಡಾಳಿಗೆ ರೂ. 400ರಿಂದ 600 ಮತ್ತು ಹೆಣ್ಣಾಳಿಗೆ 300ರಿಂದ 350 (ಒಂದು ಊಟ ಸೇರಿ) ಮತ್ತು ಸೀಸನ್‌ನಲ್ಲಿ ಪ್ರತೀ ಗಂಟೆಗೆ 125 ರೂಪಾಯಿ ಲೆಕ್ಕದಲ್ಲಿ ಕೂಲಿ ಪಡೆಯುತ್ತಾರೆ. ಆದರೆ, ನಮ್ಮ ವಲಸೆ ಕಾರ್ಮಿಕರ ಕಷ್ಟಕಾಲದಲ್ಲಿ ಹಸಿವು ಮತ್ತು ‘ಆರೋಗ್ಯಕರ ಅಂತರ’ದ ನಡುವಿನ ಆಯ್ಕೆಯಲ್ಲಿ ‘ಹಸಿವೆ’ಯೇ ಗೆಲ್ಲುತ್ತಿರುವುದು ಕಾಣಿಸುತ್ತಿದೆ.

ಊರಲ್ಲಿ ರೈತರು ಟೊಮೇಟೊ ಮಾತ್ರ ಬೆಳೆಯುತ್ತಿದ್ದು, ಉಳಿದ ಎಲ್ಲಾ ತರಕಾರಿಗಳನ್ನು ಹಂಪಾಪುರ, ಚಂದ್ರವಾಡಿ, ಹುಲ್ಲಹಳ್ಳಿ ಮಾರುಕಟ್ಟೆ/ ಸಂತೆಗಳಿಂದಲೇ ತರಬೇಕು, ಆದರೆ, ಗ್ರಾಮಸ್ಥರಿಗೆ ಊರಹೊರಗೆ ಹೋಗಲು ಸಾದ್ಯವಿಲ್ಲದ ಕಾರಣ ತರಕಾರಿ ಕಿಟ್ ನೀಡುವ ಬಗ್ಗೆ ನಿರ್ಣಯ ತೆಗೆದುಕೊಂಡ ಕಾರ್ಯಪಡೆಯು ಸಂಪನ್ಮೂಲವನ್ನು ದಾನಿಗಳಿಂದ, ಪಂಚಾಯತಿ ಸಿಬ್ಬಂದಿಗಳ ಧನ ಸಹಾಯ, ರೈತರು ಮುಂತಾದವರಿಂದ ಸಂಗ್ರಹಿಸಿದೆ. ಪಂಚಾಯತಿ ಸದಸ್ಯರು ಹಾಗೂ ಪಿ.ಡಿ.ಓ ಅವರು ತಮ್ಮ ಒಂದು ತಿಂಗಳ ವೇತನ (ಒಟ್ಟು ರೂ.60,000)ವನ್ನು ಇದಕ್ಕಾಗಿ ನೀಡಿದ್ದಾರೆ.

ಇದರ ಜೊತೆಗೆ ಸುಮಾರು 24 ಕ್ವಿಂಟಾಲ್ ಅಕ್ಕಿಯನ್ನು ದಾನರೂಪದಲ್ಲಿ ಗ್ರಾಮದ ರೈತರು, ಮಾಜಿ ಉಪಾಧ್ಯಕ್ಷ ಉದಯರವಿ ಮತ್ತು ಇನ್ನುಳಿದ ಸದಸ್ಯರಿಂದ ಸಂಗ್ರಹಿಸಿ, 170 ಕಡು ಬಡವರು, ರೇಶನ್ ಕಾರ್ಡ್ ಇಲ್ಲದವರಿಗೆ, ಅಂಗವೈಕಲ್ಯ ಹೊಂದಿರುವವರಿಗೆ, ಹಿರಿಯ ನಾಗರಿಕರಿಗೆ ತಲಾ 15 ಕಿ.ಗ್ರಾಂನಂತೆ ವಿತರಣೆ ಮಾಡಲಾಗಿದೆ. ಈ ಕಿಟ್‌ಗಳ ಪ್ಯಾಕಿಂಗ್ ಕೆಲಸವನ್ನು ಸಂಪೂರ್ಣವಾಗಿ ಕರೋನಾ ನಿಗ್ರಹ ದಳದ ಸದಸ್ಯರು ಮಾಡಿದ್ದಾರೆ ಮತ್ತು ಹಂಚಿಕೆಯನ್ನು ಅಯಾ ಗ್ರಾಮದಲ್ಲಿ ಪಂಚಾಯತಿ ಸದಸ್ಯರ ಮಾರ್ಗದರ್ಶನದಲ್ಲಿ ಮಾಡಲಾಗಿದೆ. ಗ್ರಾಮಸ್ಥರ ವೈದ್ಯಕೀಯ ಸೇವೆಗಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಹರದನಹಳ್ಳಿ ಕಾಡಂಚಿನಲ್ಲಿರುವ ಗ್ರಾಮ ಪಂಚಾಯಿತಿ. ಇದಕ್ಕೆ ಆರು ಹಳ್ಳಿಗಳು ಸೇರುತ್ತವೆ. ಪಂಚಾಯಿತಿಯ ಜನರು ಆರೋಗ್ಯ ಸೇವೆಗಾಗಿ 20 ಕಿ.ಮೀ ದೂರದ ಹುಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿದೆ. ಲಾಕ್‌ಡೌನ್ ಪರಿಸ್ಥಿತಿಯಲ್ಲಿ‌ ಗ್ರಾಮದ ಒಳಗೆ ಹಾಗೂ ಹೊರಗೆ ಹೋಗುವ ಎಲ್ಲಾ ರಸ್ತೆಗಳನ್ನೂ ಮುಚ್ಚಿರುವುದರಿಂದ, ಸುತ್ತಿ ಬಳಸಿ, ಗ್ರಾಮಗಳನ್ನು ಸೇರಲು ಒಂದು ಗಂಟೆ ವಿಳಂಬವಾಗುತ್ತಿತ್ತು.

ಈ ಪರಿಸ್ಥಿತಿಯಲ್ಲಿ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು ಉಚಿತವಾಗಿ ತಮ್ಮ ಖಾಸಗಿ ವಾಹನವನ್ನು ಪಂಚಾಯಿತಿ ಅಂಬುಲೆನ್ಸ್ ರೀತಿ ಬಳಸಲು ಮುಂದೆಬಂದರು. ಅದಕ್ಕೆ ಪೂರಕವಾಗಿ ಪಿ.ಡಿ.ಓ ಕೂಡಾ ತಮ್ಮ ನೆಂಟರಿಂದ ಇನ್ನೊಂದು ವಾಹನವನ್ನು ಪಡಕೊಂಡರು. ಹೀಗೆ ಪಂಚಾಯಿತಿಯು ಎರಡು ವಾಹನಗಳನ್ನು ವಿಕೋಪ ಪರಿಸ್ಥಿತಿಯಲ್ಲಿ ಪಂಚಾಯತ್ ಆಂಬುಲೆನ್ಸ್ ಗಳಾಗಿ ಸಜ್ಜುಗೊಳಿಸಿದೆ.

ಗ್ರಾಮ ಪಂಚಾಯತಿಯ ಸಕಾರಾತ್ಮಕ ಕೆಲಸಗಳ ಬಗ್ಗೆ ಮೆಚ್ಚುಗೆಯ, ಪ್ರೋತ್ಸಾಹದ ಮಾತುಗಳನ್ನು ಆಡದಿರುವುದು ಮತ್ತು ವ್ಯಕ್ತಿಗಳಿಗೆ ಮಹತ್ವ ನೀಡುತ್ತಿರುವುದು ಖೇದಕರ ಎಂಬ ಗ್ರಾಮೀಣ ಪ್ರದೇಶಗಳ ಈ ಅಂಶವು ರಾಷ್ಟ್ರೀಯ ಮಟ್ಟದಲ್ಲಿಯೂ ನಿಜ.

ಕೃತಜ್ಞತೆಗಳು: ಮಾಹಿತಿ ನೀಡಿದ ಎಲ್ಲರಿಗೂ, ಅದನ್ನು ಸಾಧ್ಯಮಾಡಿದ ANSIRDಗೆ ಪ್ರಮುಖವಾಗಿ

Tags: ANSSIRDBanahattiCorona OutbreakHaradanahalliPanchayat raj systemಪಂಚಾಯತ್ ರಾಜ್ ವ್ಯವಸ್ಥೆಬನಹಟ್ಟಿಹರದನಹಳ್ಳಿ
Previous Post

ಕರ್ನಾಟಕದಲ್ಲಿ ಮತ್ತೆ 20 ಕೋವಿಡ್-19 ಪ್ರಕರಣ ಪತ್ತೆ

Next Post

ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

ಪತ್ರಕರ್ತ ದಲ್ಲಾಳಿಯಲ್ಲ; ವ್ಯವಸ್ಥೆಯ ಕಣ್ಗಾವಲು!

Please login to join discussion

Recent News

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು
Top Story

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

by ಪ್ರತಿಧ್ವನಿ
October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ
Top Story

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

by ಪ್ರತಿಧ್ವನಿ
October 24, 2025
ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ
Top Story

ದೀಪಾವಾಳಿ ಹಬ್ಬ ಹಿನ್ನಲೇ ದೀಪಾ ಕಾಯೊ ನೆಪದಲ್ಲಿ ಜೂಜಾಟ

by ಪ್ರತಿಧ್ವನಿ
October 24, 2025
HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

ಯತೀಂದ್ರ ನಾಯಕತ್ವ ಹೇಳಿಕೆ – ಡಿಕೆಶಿಯಿಂದ ಹೈಕಮಾಂಡ್ ವಿಚಾರ ಮುಟ್ಟಿಸುವ ಸುಳಿವು

October 24, 2025
ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

ಬಿಗ್ ಬಾಸ್ ಮಾಜಿ ಸ್ಪರ್ಧಿ ವಿರುದ್ಧ ಹಿಟ್ ರನ್ ಕೇಸ್..- ಬೈಕ್ ಸವಾರಳಿಗೆ ಕಾಲು ಮುರಿತ

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada