ಕೋವಿಡ್ ಪಾಸಿಟಿವ್ ಕಂಡುಬಂದಿದ್ದ ಹಿನ್ನಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಸಿಎಂ ಬಿ ಯಸ್ ಯಡಿಯೂರಪ್ಪ ದಾಖಲಾಗಿದ್ದ ಯಡಿಯೂರಪ್ಪ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 9 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯಮಂತ್ರಿ ಚಿಕಿತ್ಸೆ ಮುಗಿಸಿ ಕಾವೇರಿ ನಿವಾಸಕ್ಕೆ ತೆರಳಿದ್ದಾರೆ.
ಸಂಪೂರ್ಣವಾಗಿ ಗುಣಮುಖರಾಗಿರುವ ಸಿಎಂ, ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ ಹೂಗುಚ್ಛ ನೀಡಿ ವೈದ್ಯರು ಬೀಳ್ಕೊಟ್ಟಿದ್ದಾರೆ. ಯಡಿಯೂರಪ್ಪ ಮುಂದಿನ 2-3 ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ, ನಂತರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ನಿಯಮದ ಪ್ರಕಾರ ಸಾಂವಿಧಾನಿಕ ಹುದ್ದೆ ಹೊಂದಿರುವವರಿಗೆ ಕ್ವಾರಂಟೇನ್ ನಿಯಮದಿಂದ ವಿನಾಯಿತಿ ಇದೆ. ಕರೋನಾ ಯೋಧರಿಗೆ ವಿನಾಯಿತಿ ನೀಡಲಾಗಿದೆ, ಅದರಂತೆ ಸಿಎಂ ಕ್ವಾರಂಟೇನ್ ಅವಧಿ ಕಡಿತವಾಗಲಿದೆ. ಹೀಗಾಗಿ ಸಿಎಂ ಸ್ವಾತಂತ್ರ್ಯ ದಿನಾಚರಣೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಧ್ವಜಾರೋಹಣ ಕೂಡಾ ಅವರೇ ಮಾಡಲಿದ್ದಾರೆ ಎನ್ನಲಾಗಿದೆ.