ಆನ್ಲೈನ್ ಸುದ್ದಿ ಜಾಲತಾಣಗಳನ್ನು ಹಾಗೂ Netflix, Amazon Prime Videos ಮತ್ತು Hotstar ನಂತಹ OTT ತಾಣಗಳನ್ನು ಕೇಂದ್ರ ಸುದ್ದಿ ಮತ್ತು ಪ್ರಸರಣ ಸಚಿವಾಲಯದ ವ್ಯಾಪ್ತಿಗೆ ತಂದು ರಾಷ್ಟ್ರಪತಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತವನ್ನೂ ಹಾಕಿದ್ದಾರೆ. ಈ ಆದೇಶವು ಸಾಮಾಜಿಕ ಜಾಲತಾಣದಲ್ಲಿ ಅಂದರೆ, ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ಸುದ್ದಿ ಪ್ರಸಾರ ಮಾಡುವವರಿಗೂ ಅನ್ವಯವಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈವರೆಗೆ ಅಂತರ್ಜಾಲ ಸುದ್ದಿ ಮಾಧ್ಯಮಗಳನ್ನು ಅಥವಾ ಒಟಿಟಿಗಳಲ್ಲಿ ಕಾಣ ಸಿಗುತ್ತಿರುವ ಸಿನಿಮಾ, ಧಾರವಾಹಿ ಅಥವಾ ಇತರ ವಿಚಾರಗಳನ್ನು ನಿಯಂತ್ರಿಸಲು ಯಾವುದೇ ಸ್ವಾಯತ್ತ ಸಂಸ್ಥೆಯನ್ನು ನಿರ್ಮಿಸಿರಲಿಲ್ಲ. ಕಳೆದ ತಿಂಗಳು ಈ ಕುರಿತಾಗಿ ಸುಪ್ರಿಂ ಕೋರ್ಟ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯನ್ನು ಪ್ರಶ್ನಿಸಿದ ಕಾರಣದಿಂದ ಎಲ್ಲಾ ರೀತಿಯ ಸುದ್ದಿ ಮತ್ತು ಮಾಹಿತಿಗಳ ಪ್ರಸಾರವನ್ನು ನಿಯಂತ್ರಿಸುವ ಸಲುವಾಗಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಡಿಯಲ್ಲಿ ತರುವಂತೆ ಆದೇಶವನ್ನು ನೀಡಲಾಗಿದೆ.
ಈವರೆಗೆ ಸೆನ್ಸಾರ್ ಮಂಡಳಿಯ ಕಿರಿಕಿರಿಯಿಲ್ಲದೇ ಒಟಿಟಿಗಳಲ್ಲಿ ಸಿನಿಮಾ ಮತ್ತು ಧಾರವಾಹಿಗಳನ್ನು ಪ್ರಸಾರ ಮಾಡುತ್ತಿದ್ದವರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಇದರೊಂದಿಗೆ ಒಟಿಟಿಗಳಲ್ಲಿ ಮಾತ್ರ ಸಕ್ರಿಯವಾಗಿರುವ ಸುದ್ದಿವಾಹಿನಿಗಳಿಗೂ ಕೂಡಾ ಈ ಆದೇಶ ಅನ್ವಯವಾಗಿಲಿದೆ.
ಈ ಹಿಂದೆ ಒಂದು ಪ್ರತ್ಯೇಕ ಪ್ರಕರಣದಲ್ಲಿ ಅಂತರ್ಜಾಲ ಸುದ್ದಿ ಜಾಲತಾಣಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ಗೆ ಹೇಳಿತ್ತು. ಇದಕ್ಕಾಗಿ ಉನ್ನತ ಮಟ್ಟದ ಅಮಿಕಸ್ ಸಮಿತಿಯನ್ನು ಕೂಡಾ ರಚಿಸುವಂತೆ ಸುಪ್ರಿಂ ಕೋರ್ಟ್ ಬಳಿ ಮನವಿ ಮಾಡಿಕೊಂಡಿತ್ತು.