Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ? 

ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ?
ಸದ್ದಿಲ್ಲದೇ ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿತೇ ವಿತ್ತ ಇಲಾಖೆ? 

February 6, 2020
Share on FacebookShare on Twitter

ಫೆಬ್ರುವರಿ ಒಂದರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡನೆ ಮಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಡೇಟಾ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಮಾತನಾಡಿದರು. ನಾವು ಒದಗಿಸುವ ಡೇಟಾ ವಿಶ್ವಾಸಾರ್ಹ ಮೂಲವನ್ನು ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದರು. ಅವರ ಈ ಮಾತು ಅವರಿಗೇ ತಿರುಮಂತ್ರವಾಗಿದೆ. ಬಜೆಟ್‌ ಮಂಡಿಸಿದ ನಂತರ ಮಾಧ್ಯಮಗಳಿಗೆ ಎರಡು ಬಜೆಟ್‌ ಪ್ರತಿಗಳನ್ನು ನೀಡಲಾಗಿತ್ತು.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

PDF ಮತ್ತು Excel ಶೀಟ್‌ಗಳ ಪ್ರತ್ಯೇಕ ಪ್ರತಿಗಳನ್ನು ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ನೀಡಲಾಗಿತ್ತು. ಇವೆರಡನ್ನೂ ಗಮನಿಸಿದ ರಾಷ್ಟ್ರೀಯ ಮಾಧ್ಯಮವೊಂದು ಬಜೆಟ್‌ನಲ್ಲಿ ಅಂಕಿ ಅಂಶಗಳ ದೋಷವಿದೆಯೆಂದು, ಆ ಕುರಿತಾಗಿ ಹಣಕಾಸು ಇಲಾಖೆಗೆ ಇ-ಮೈಲ್‌ ಕಳುಹಿಸಿತ್ತು. ಇದನ್ನು ಮನಗಂಡ ಹಣಕಾಸು ಇಲಾಖೆ ಸದ್ದಿಲ್ಲದೇ, ಬಜೆಟ್‌ನ ಅಂಕಿ ಅಂಶಗಳನ್ನು ಬದಲಾಯಿಸಿದೆ.

“ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ಡೆಟಾ ವಿಶ್ಲೇಷಿಸಿ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು,” ಎಂದಿದ್ದರು ನಿರ್ಮಲಾ ಸೀತಾರಾಮನ್‌. ಆದರೆ, ಅವರೇ ಮಂಡಿಸಿರುವ ಬಜೆಟ್‌ನ ಡೇಟಾ ಸರಿಯಿಲ್ಲದಿರುವುದು ಹಣಕಾಸು ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ತಾವು ಹೇಳುವುದೊಂದು ಮಾಡುವುದೊಂದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಬಂದಿದೆ ಕೇಂದ್ರ ಸರ್ಕಾರ.

ಬಜೆಟ್‌ 2020-2021ನಲ್ಲಿ ಏನಿಲ್ಲವೆಂದರೂ ಕನಿಷ್ಟ ಪಕ್ಷ 14 ಇಂತಹ ಅಂಕಿ ಅಂಶಗಳ ದೋಷ ಇರುವುದನ್ನು ಆಂಗ್ಲ ಅಂತರ್ಜಾಲ ತಾಣ indiatoday.in ಪತ್ತೆ ಹಚ್ಚಿತ್ತು. ತಮ್ಮ ವೆಬ್‌ಸೈಟ್‌ನಲ್ಲಿ ಬಜೆಟ್‌ ಕುರಿತಾದ ವಿಶ್ಲೇ಼ಷಣೆಯನ್ನು ಬರೆಯಲು ಹೊರಟಿದ್ದವರಿಗೆ ಬಜೆಟ್‌ನಲ್ಲಿರುವ ಅಂಕಿ ಅಂಶ ದೋಷಗಳು ಕಂಡಿದ್ದವು. ಬಜೆಟ್‌ನ ಪ್ರತಿಯನ್ನು www.indiabudget.gov.in ಅಂತರ್ಜಾಲ ತಾಣದಲ್ಲಿ ಕೂಡಾ ಅಪ್ಲೋಡ್‌ ಮಾಡಲಾಗಿತ್ತು. ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್‌ ಮೀಸಲು ನೋಡಿದಾಗ ಹಲವು ಸಂಸ್ಥೆಗಳಿಗೆ ಹಾಗೂ ಯೋಜನೆಗಳಿಗೆ ಮೀಸಲಿರಿಸಿದ್ದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಈವರೆಗೆ ಕಂಡು ಬಂದಿರುವ 14 ಅಂಕಿ ಅಂಶ ದೋಷಗಳು ಕೇವಲ ಒಂದು ಇಲಾಖೆಗೆ ಸೇರಿದಂತಹವು.

ಚಿತ್ರ ಕೃಪೆ: ಇಂಡಿಯಾ ಟುಡೆ

ಈ ಅಂಕಿ ಅಂಶದಲ್ಲಿನ ದೋಷಗಳ ಕುರಿತಾಗಿ ಇಂಡಿಯಾ ಟುಡೇ ಸಂಸ್ಥೆಯು ಹಣಕಾಸು ಇಲಾಖೆಯ ಅಧೀನದಲ್ಲಿರುವ ಆಯವ್ಯಯ ಇಲಾಖೆಗೆ ಇ-ಮೈಲ್‌ ಕಳುಹಿಸಿ ಸ್ಪಷ್ಟನೆಯನ್ನು ಕೇಳಿತ್ತು. ಈ ಸಂಧರ್ಭದಲ್ಲಿ, ಇ-ಮೈಲ್‌ಗೆ ಪ್ರತಿಕ್ರೀಯಿಸುವ ಗೋಜಿಗೆ ಹೋಗದ ಇಲಾಖೆ ಸದ್ದಿಲ್ಲದೇ ಅಂಕಿ ಅಂಶಗಳಲ್ಲಿ ಬದಲಾವಣೆಯನ್ನು ತಂದಿತು. ಇಂಡಿಯಾ ಟುಡೇ ಕಳುಹಿಸಿದ ಇ-ಮೈಲ್‌ನಲ್ಲಿ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಲಾಗಿತ್ತು

  • ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾದ ಬಜೆಟ್‌ ಪ್ರತಿಗಳಲ್ಲಿ (PDF ಮತ್ತು Excel) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಬಜೆಟ್‌ನಲ್ಲಿ ಈ ರೀತಿಯ ಅಂಕಿ ಅಂಶ ದೋಷಗಳು ಏಕಾಗಿವೆ?
  • ದೋಷಪೂರಿತವಾದ ಬಜೆಟ್‌ ಪ್ರತಿಗಳಲ್ಲಿ ಯಾವ ಅಂಕಿ ಅಂಶವನ್ನು ನಾವು ವಿಶ್ಲೇಷಣೆಗೆ ಪರಿಗಣಿಸಬೇಕು?
  • ಸರ್ಕಾರವು ಈ ದೋಷಗಳನ್ನು ಸರಿಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹೊಸ ಬಜೆಟ್‌ ಪ್ರತಿಯನ್ನು ಬಿಡುಗಡೆ ಮಾಡಲಿದೆಯೇ? ಒಂದು ವೇಳೆ ಆ ರೀತಿ ಮಾಡಿದ್ದಲ್ಲಿ ಯಾವಾಗ ಹೊಸ ಬಜೆಟ್‌ ಪ್ರತಿ ಬಿಡುಗಡೆಯಾಗಬಹುದು?

ಈ ಮೂರು ಪ್ರಶ್ನೆಗಳನ್ನು ಹೊಂದಿರುವ ಇ-ಮೈಲ್‌ ಅನ್ನು ಫೆಬ್ರುವರಿ 4ರಂದು ಬೆಳಿಗ್ಗೆ 11.12ಕ್ಕೆ dprfinance@gamil.com ಇ-ಮೈಲ್‌ ವಿಳಾಸಕ್ಕೆ ಕಳುಹಿಸಲಾಗಿತ್ತು. ಈ ಇ-ಮೈಲ್‌ಗೆ ಇನ್ನೂ ಉತ್ತರ ನೀಡದ ಹಣಕಾಸು ಇಲಾಖೆ, Excel ಪ್ರತಿಯಲ್ಲಿನ ಅಂಕಿ ಅಂಶಗಳನ್ನು ತಿದ್ದಿ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತ್ತೆ ಅಪ್ಲೋಡ್‌ ಮಾಡಿದೆ. PDFನಲ್ಲಿರುವ ಅಂಕಿ ಅಂಶಗಳನ್ನು ಉಳಿಸಿ ಕೇವಲ Excelನಲ್ಲಿದ್ದ ಅಂಕಿ ಅಂಶಗಳನ್ನು ತಿದ್ದಲಾಗಿದೆ. ಈ ವಿಷಯವನ್ನು ಯಾರ ಗಮನಕ್ಕೂ ತರದೆ ಅಂಕಿ ಅಂಶ ತಿದ್ದುಪಡಿಯ ಕಾರ್ಯ ನಡೆದಿದೆ. ಹಳೆಯ ಎರಡೂ ಪ್ರತಿಗಳು ತಮ್ಮಲ್ಲಿವೆ ಎಂದು ಇಂಡಿಯಾ ಟುಡೆ ಸಂಸ್ಥೆಯು ಹೇಳಿಕೊಂಡಿದೆ. ಹೊಸ ಪ್ರತಿಗಳಲ್ಲಿರುವ ಅಂಕಿ ಅಂಶಗಳು ಈಗ ಒಂದಕ್ಕೊಂದು ತಾಳೆಯಾಗುತ್ತಿವೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೇನೆಂದರೆ, ವಿಶ್ವಾಸಾರ್ಹವಾದ ಮೂಲಗಳಿಂದ ಪಡೆದ ಡೆಟಾ ಬಳಸಿ ತಯಾರಿಸಿರುವ ಬಜೆಟ್‌ ಎಂದು ಹೇಳಿಕೊಂಡಿರುವ ನಿರ್ಮಾಲಾ ಸೀತಾರಾಮನ್‌ ಅವರು ಬಜೆಟ್‌ಗಾಗಿ ಪರಿಗಣಿಸಿದ ವಿಶ್ವಾಸಾರ್ಹ ಮೂಲ ವಿಕಿಪೀಡಿಯಾ. ವಿಕಿಪೀಡಿಯಾ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣ ನಿಜ, ಆದರೆ, ಅಲ್ಲಿರುವ ಅಂಕಿ ಅಂಶಗಳು ವಿಶ್ವಾಸಾರ್ಹವೇ ಎಂಬುದು ಪ್ರಶ್ನೆ.

ಕೃಪೆ: Indiatoday.in

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah
Top Story

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕೈ ಬಿಟ್ಟಿದ್ದಕ್ಕೆ ಕಾರಣ ಮತ್ತು ಮುಂದಿನ ರಾಜಕೀಯ : Siddaramaiah

by ಕೃಷ್ಣ ಮಣಿ
March 19, 2023
ಹಿಂದುತ್ವ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಟ ಚೇತನ್​ ಅಂಹಿಸಾ ಬಂಧನ
ಇದೀಗ

ಹಿಂದುತ್ವ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಟ ಚೇತನ್​ ಅಂಹಿಸಾ ಬಂಧನ

by ಮಂಜುನಾಥ ಬಿ
March 21, 2023
ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!
ಇದೀಗ

ʼಕೆ ಜಿ ಎಫ್ʼ , ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”.. KABZAA ‘Box Office’ Collection..!

by ಮಂಜುನಾಥ ಬಿ
March 18, 2023
ರೌಡಿ ಶೀಟರ್‌ ಸೈಲೆಂಟ್‌ ಸುನೀಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆ..! : Rowdy Sheeter Silent Sunila Joins BJP
Top Story

ರೌಡಿ ಶೀಟರ್‌ ಸೈಲೆಂಟ್‌ ಸುನೀಲ ಅಧಿಕೃತವಾಗಿ ಬಿಜೆಪಿ ಸೇರ್ಪಡೆ..! : Rowdy Sheeter Silent Sunila Joins BJP

by ಪ್ರತಿಧ್ವನಿ
March 18, 2023
ʼಜೆಡಿಎಸ್ ಪುಟ್ಕೋಸಿ ಪಕ್ಷʼ ಎಂಬ ಕಾಂಗ್ರೆಸ್ ಹೇಳಿಕೆಗೆ ಹೆಚ್ ಡಿ ‌ಕೆ  ಕೆಂಡಾಮಂಡಲ..! H.D.Kumaraswamy
Top Story

ʼಜೆಡಿಎಸ್ ಪುಟ್ಕೋಸಿ ಪಕ್ಷʼ ಎಂಬ ಕಾಂಗ್ರೆಸ್ ಹೇಳಿಕೆಗೆ ಹೆಚ್ ಡಿ ‌ಕೆ ಕೆಂಡಾಮಂಡಲ..! H.D.Kumaraswamy

by ಪ್ರತಿಧ್ವನಿ
March 19, 2023
Next Post
ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

ಕರೋನಾವೈರಸ್ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆಯೇ ಚೀನಾ?

ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

ಎರಡೆರಡು ಮನೆ ಖರೀದಿಸಬಾರದಂತೆ NRIಗಳು 

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

ಬಿಜೆಪಿ ಅಧಿಕಾರ ಸವಿಯಲು ನೆರವಾದವರ ಮೇಲೆ ಕರಾಳ ಕಾನೂನು ಅಸ್ತ್ರ ಪ್ರಯೋಗವೇಕೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist