• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, July 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಿಕ್ರಂ ಲ್ಯಾಂಡರ್ ನ ಅವಶೇಷದ ಸುಳಿವು ನೀಡಿದ ಚೆನ್ನೈ ಇಂಜಿನಿಯರ್ !

by
December 3, 2019
in ದೇಶ
0
ವಿಕ್ರಂ ಲ್ಯಾಂಡರ್ ನ ಅವಶೇಷದ ಸುಳಿವು ನೀಡಿದ ಚೆನ್ನೈ ಇಂಜಿನಿಯರ್ !
Share on WhatsAppShare on FacebookShare on Telegram

ಭಾರತದವರಷ್ಟೇ ಅಲ್ಲ ನಾಸಾದ ಖಗೋಳ ಶಾಸ್ತ್ರಜ್ಞರಿಗೂ ಯಕ್ಷ ಪ್ರಶ್ನೆಯಾಗಿ ಕಾಡಿದ್ದ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ನ ಅವಶೇಷಗಳನ್ನು ಭಾರತೀಯ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಪತ್ತೆ ಮಾಡಿದ್ದಾರೆ.

ADVERTISEMENT

ಭಾರತದ ಬಹುನಿರೀಕ್ಷೆಯ ವಿಕ್ರಂ ಲ್ಯಾಂಡರ್ ಸಂಪರ್ಕ ತಪ್ಪಿ ಚಂದ್ರನಂಗಳದಲ್ಲಿ ಕಳೆದುಹೋಗಿತ್ತು. ಅದರ ಅವಶೇಷಗಳ ಪತ್ತೆಗೆ ಭಾರತ ಮತ್ತು ನಾಸಾದ ವಿಜ್ಞಾನಿಗಳು ಕಳೆದೆರಡು ತಿಂಗಳಿಂದ ಹಗಲಿರುಳೂ ಶ್ರಮಿಸುತ್ತಿದ್ದರು.

ಈ ಮಧ್ಯೆ, ನಾಸಾ ಕಳೆದ ಸೆಪ್ಟಂಬರ್ 26 ರಂದು ಚಂದ್ರನ ಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಚಿತ್ರವನ್ನು ಪಡೆದುಕೊಂಡ ತಮಿಳುನಾಡಿನ ಸುಬ್ರಮಣ್ಯನ್ ಅವರು ಅಂದಿನಿಂದ ಸಂಪರ್ಕ ಕಳೆದುಕೊಂಡಿದ್ದ ವಿಕ್ರಂ ಲ್ಯಾಂಡರ್ ನ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ್ದರು. ಹೀಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸುಬ್ರಮಣ್ಯನ್ ಅವರು ವಿಕ್ರಂ ಇರುವಿಕೆಯ ಕುರುಹನ್ನು ಪತ್ತೆ ಮಾಡಿದ್ದರು. ಅಕ್ಟೋಬರ್ 14 ಮತ್ತು ನವೆಂಬರ್ 11 ರಂದು ನಾಸಾ ಬಿಡುಗಡೆ ಮಾಡಿದ ಕೆಲವು ಚಿತ್ರಗಳಲ್ಲಿಯೂ ಸುಬ್ರಮಣ್ಯನ್ ವಿಕ್ರಂ ಅವಶೇಷಗಳನ್ನು ಗುರುತು ಮಾಡಿದ್ದರು.

ಈ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಅವರು ಅವಶೇಷಗಳನ್ನು ಪತ್ತೆ ಮಾಡಲು ಐದಾರು ರಾತ್ರಿಗಳ ಕಾಲ ಚಂದ್ರನ ಮೇಲೆ ಕಣ್ಣಿಟ್ಟಿದ್ದರು. ಅದೂ ಅಲ್ಲದೇ ಪ್ರತಿ ದಿನ ರಾತ್ರಿ ಸುಮಾರು ಏಳೆಂಟು ಗಂಟೆಗಳ ಕಾಲ ಅವರ ಕಣ್ಣು ಚಂದ್ರನ ಮೇಲೆಯೇ ಇತ್ತು.

ಹೀಗೆ ನಿರಂತರವಾಗಿ ಚಂದ್ರನ ಮೇಲೆ ಕಣ್ಣಿಟುತ್ತಾ ಬಂದಾಗ ಚಂದ್ರನ ಮೇಲ್ಮೈನ ಒಂದು ಭಾಗದಲ್ಲಿ ಕುತೂಹಲಕಾರಿ ವಸ್ತುವೊಂದು ಕಂಡಿದೆ. ಈ ಬಗ್ಗೆ ಕುತೂಹಲ ಮತ್ತು ಸಂದೇಹ ಉಂಟಾಗಿ ಇನ್ನೂ ಒಳಹೊಕ್ಕು ಹೋದಾಗ ಷಣ್ಮುಖ ಅವರಿಗೆ ವಸ್ತುವಿನ ಆಜುಬಾಜಿನಲ್ಲಿ ಇನ್ನೂ ಕೆಲವು ಚೂರುಗಳು ಕಾಣಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿದ ಅವರಿಗೆ ಇದು ವಿಕ್ರಂ ಲ್ಯಾಂಡರ್ ನ ಅವಶೇಷ ಎಂಬುದು ಖಾತರಿಯಾಗಿದೆ.

ಸುಬ್ರಮಣ್ಯನ್ ಅವರು ಈ ಬಗ್ಗೆ ನಾಸಾ ವಿಜ್ಞಾನಿಗಳಿಗೆ ಸುಳಿವು ನೀಡಿದ ಆಧಾರದ ಮೇಲೆ ಮತ್ತಷ್ಟು ಅಧ್ಯಯನ ನಡೆಸಿದ ವಿಜ್ಞಾನಿಗಳು ಇದು ವಿಕ್ರಂನ ಅವಶೇಷ ಎಂಬುದನ್ನು ದೃಢಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಾಸಾದ ವೆಬ್ ಸೈಟ್ ನಲ್ಲಿ ಹಾಕಿದ್ದಾರೆ.

ಚಂದ್ರನ ಮೇಲೆ ನೀಲಿ ಮತ್ತು ಹಸಿರು ಬಣ್ಣದ ಚುಕ್ಕೆಗಳನ್ನು ತೋರಿಸಲಾಗಿದೆ. ವಿಕ್ರಂ ಲ್ಯಾಂಡರ್ ಅವಶೇಷ ಬಿದ್ದುದರಿಂದ ಈ ಪರಿಣಾಮ ಉಂಟಾಗಿದೆ ಎಂದು ನಾಸಾ ತಿಳಿಸಿದೆ.

Tags: Chandraayan 2ChennaiengineerIndian Space Research Organisationlander VikramShanmuga Subramanianಇಂಜಿನಿಯರ್ಚಂದ್ರಚಂದ್ರಯಾನ-2ಚೆನ್ನೈಭಾರತೀಯ ಬಾಹ್ಯಾಕಾಶ ಸಂಸ್ಥೆವಿಕ್ರಂ ಲ್ಯಾಂಡರ್ಷಣ್ಮುಖ ಸುಬ್ರಮಣ್ಯನ್
Previous Post

ಏರುದಾರಿಯಲ್ಲಿ ಲಾಲೂ ಪಕ್ಷ- `ಮೇಲ್ಜಾತಿ’ಗೆ ಮಣೆ

Next Post

ಸಿದ್ದು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿಯಾದರೆ ಕಾಂಗ್ರೆಸ್ ಉಳಿಯುವುದೇ?

Related Posts

Top Story

ಚಿತ್ರ ವಿಮರ್ಶೆ: ಸಿಂಪಲ್‌ ರಕ್ಕಿಯ ರೌಡಿಸಂ ಕಥೆಗೆ ಹುಡುಗಿಯೇ ಟ್ವಿಸ್ಟು!

by ಪ್ರತಿಧ್ವನಿ
July 11, 2026
0

ಚಿತ್ರ ರಕ್ಕಿ: ನಿರ್ದೇಶನ: ವೆಂಕಟ್‌ ಭಾರಧ್ವಾಜ್‌ ನಿರ್ಮಾಣ: ಸುರೇಶ್‌ ಸಾಲಿಗ್ರಾಮ ತಾರಾಗಣ: ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸುರೇಶ, ಹರಿಣಿ, ಸಂಪತ್‌ ಕುಮಾರ್‌, ಗೋವಿಂದೇಗೌಡ,...

Read moreDetails
CM Vijay Vs Stalin

ಅಧಿಕಾರದಲ್ಲಿರೋದು ವಿಜಯ್‌ ಸರ್ಕಾರ ಎನ್ನುವುದು ನೆನಪಿರಲಿ : ಕರೂರಿನಿಂದ ಸ್ಟಾಲಿನ್‌ಗೆ ದಳಪತಿ ವಾರ್ನ್..!

July 10, 2026
ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

ಚೆಕ್ ಬೌನ್ಸ್‌ ಕೇಸ್‌ : ಈ ನಟನಿಗೆ ಮೂರು ತಿಂಗಳು ಜೈಲು!

July 10, 2026
CJP on Ground Youths Movement

ಆನ್‌ಲೈನ್‌ನಿಂದ ಗ್ರೌಂಡ್‌ ಲೆವೆಲ್‌ : CJP ಹೋರಾಟ ದೇಶದ ಯುವ ಸಮೂಹವನ್ನು ರೊಚ್ಚಿಗೆಬ್ಬಿಸಿದ್ದು ಹೇಗೆ..?

July 10, 2026
ರಾಮ ಮಂದಿರದ ಕಠಿಣ ನಿಯಮ: ದೇಣಿಗೆ ಎಣಿಕೆ ಸಿಬ್ಬಂದಿ ಸಾಮೂಹಿಕ ರಾಜೀನಾಮೆ!

ರಾಮ ಮಂದಿರದ ಕಠಿಣ ನಿಯಮ: ದೇಣಿಗೆ ಎಣಿಕೆ ಸಿಬ್ಬಂದಿ ಸಾಮೂಹಿಕ ರಾಜೀನಾಮೆ!

July 10, 2026
Next Post
ಸಿದ್ದು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿಯಾದರೆ ಕಾಂಗ್ರೆಸ್ ಉಳಿಯುವುದೇ?

ಸಿದ್ದು ದೂರವಿಟ್ಟು ಜೆಡಿಎಸ್ ಜತೆ ಮೈತ್ರಿಯಾದರೆ ಕಾಂಗ್ರೆಸ್ ಉಳಿಯುವುದೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada