• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಲಾಕ್ ಡೌನ್ ಸಂಕಷ್ಟ: ಮೋದಿ ವಿರುದ್ದ ಹೆಚ್ಚುತ್ತಿರುವ ವಲಸೆ ಕಾರ್ಮಿಕ ಸಮುದಾಯದ ಅಸಮಾಧಾನ

by
June 12, 2020
in ದೇಶ
0
ಲಾಕ್ ಡೌನ್ ಸಂಕಷ್ಟ: ಮೋದಿ ವಿರುದ್ದ ಹೆಚ್ಚುತ್ತಿರುವ ವಲಸೆ ಕಾರ್ಮಿಕ ಸಮುದಾಯದ ಅಸಮಾಧಾನ
Share on WhatsAppShare on FacebookShare on Telegram

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕರೋನಾ ವೈರಸ್‌ ಭೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದು ಮಧ್ಯಮ ಮತ್ತು ಬಡ ವರ್ಗದವರು ಮಾತ್ರ. ಅದರಲ್ಲೂ ಕಾರ್ಮಿಕ ವರ್ಗದವರ ಗೋಳು ಮುಗಿಲು ಮುಟ್ಟಿದೆ. ದೇಶದ ಕೋಟ್ಯಾಂತರ ಜನ ವಲಸೆ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ. ಸಾವಿರಾರು ಕಾರ್ಮಿಕರು ತಮ್ಮ ಗ್ರಾಮಗಳನ್ನು ಸೇರಿಕೊಳ್ಳಲು ವಾಹನಗಳಿಗೆ ಸಾವಿರಾರು ರೂಪಾಯಿ ತೆತ್ತು ಸಾವಿರಾರು ಕಿಲೋಮೀಟರ್‌ ಪ್ರಯಾಣಿಸಿ ಊರು ಸೇರಿಕೊಂಡಿದ್ದಾರೆ. ಇವರು ಗಳಿಸಿ ಉಳಿಸಿಕೊಂಡಿದ್ದ ಪುಡಿ ಗಂಟೂ ಈಗ ಕರಗಿ ಹೋಗಿದೆ. ಊರಿಗೆ ತೆರಳುವ ಸಮಯದಲ್ಲಿ ರೈಲ್ವೇ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲೇ ಸಾಕಷ್ಟು ದಿನ ಕಳೆಯಬೇಕಾಗಿ ಬಂದಿತ್ತು. ಆಗ ಒಂದಕ್ಕೆರಡು ಬೆಲೆ ತೆತ್ತು ದುಬಾರಿ ದರದಲ್ಲಿ ಆಹಾರ ಖರೀದಿಸಿದ ಕಾರಣದಿಂದಾಗಿ ಇವರ ಬಳಿ ಏನೂ ಉಳಿದಿಲ್ಲ. ಊರಿನಲ್ಲಾದರೂ ಉದ್ಯೋಗವೇನೂ ಇಲ್ಲ. ಇತ್ತೀಚೆಗೆ ಎಂಜಿನಿಯರ್‌ ಪಧವೀಧರನೊಬ್ಬ MNREGA ಯೋಜನೆಯಡಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಚಿತ್ರವೊಂದು ವೈರಲ್‌ ಆಗಿತ್ತು. ಇನ್ನು ಇದೇ ರೀತಿ ಮುಂದುವರೆದರೆ ಇಂತಹ ದೃಶ್ಯ ದೇಶಾದ್ಯಂತ ಸಾಮಾನ್ಯವಾಗಿ ಬಿಡುತ್ತದೆ. ಈ ವಲಸೆ ಕಾರ್ಮಿಕರ ಮನಸ್ಸು ಒಳಗೇ ಕುದಿಯುತ್ತಿದೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಘೋಷಿಸಿದ ಅನಿರೀಕ್ಷಿತ ಲಾಕ್‌ ಡೌನ್‌ ಜತೆಗೇ ಆರ್ಥಿಕ ಸಂಕಷ್ಟ ಅವರನ್ನು ಆಕ್ರೋಶಿತರನ್ನಾಗಿ ಮಾಡಿದೆ.

ADVERTISEMENT

ಕಳೆದೊಂದು ದಶಕದಿಂದ ಬಹುತೇಕ ಈ ಕಾರ್ಮಿಕ ಸಮುದಾಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಿಜೆಪಿ ಪಕ್ಷಕ್ಕೆ ಖಾಯಂ ಮತ ಬ್ಯಾಂಕ್‌ ಆಗಿತ್ತು. ಈ ವರ್ಗದ ಮತಗಳಿಂದಾಗಿ ಬಿಜೆಪಿ ತನ್ನ ಮಿತ್ರ ಪಕ್ಷಗಳ ಜತೆಗೂಡಿ ಎರಡು ಅವಧಿಗೆ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದಿತ್ತು. ಈ ಮತಗಳಿಕೆ ನಿರೀಕ್ಷೆಗಿಂತಲೂ ಹೆಚ್ಚಾಗಿದ್ದಿದ್ದು ಸುಳ್ಳಲ್ಲ. ಆದರೆ ಇದೇ ಮೊದಲ ಬಾರಿಗೆ ವಲಸೆ ಕಾರ್ಮಿಕ ಸಮುದಾಯದ ಮೇಲೆ ಬಿಜೆಪಿ ಹೊಂದಿರುವ ಅಚಲವಾದ ಹಿಡಿತವು ಸಡಿಲಗೊಳ್ಳುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಮೋದಿಯವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಾಗ ಕಳೆದ ಎರಡು ತಿಂಗಳುಗಳಲ್ಲಿ ದೇಶಾದ್ಯಂತ ಆದಾಯ ಕಳೆದುಕೊಂಡವರ ದುಃಖದ ಬಗ್ಗೆ ದೇಶಾದ್ಯಂತ ವರದಿಗಳು ಪ್ರಕಟಗೊಳ್ಳುತ್ತಿವೆ. ಕಳೆದ ವರ್ಷ ತನ್ನ ಎರಡನೇ ಅವಧಿಯನ್ನು ಅಧಿಕಾರದ ಬಹುಮತದೊಂದಿಗೆ ಗೆದ್ದ ನಾಯಕನ ಮೇಲೆ ಕೋಪವು ಪ್ರಮುಖ ರಾಜ್ಯಗಳಲ್ಲಿ ಹರಡಲು ಪ್ರಾರಂಭಿಸಿದೆ.

ಉತ್ತರ ಪ್ರದೇಶದಲ್ಲಿ ನೋಯ್ಡಾದಲ್ಲಿ ಕೆಲಸ ಕಳೆದುಕೊಂಡ ಜಮ್ಮುನ್ ಹರ ಎಂಬ ಜವಳಿ ಕಾರ್ಖಾನೆಯ ಕೆಲಸಗಾರ ಮೊದಲಿನಿಂದಲೂ ಮೋದಿ ಅವರ ಕಟ್ಟಾಭಿಮಾನಿ. ಕಳೆದ ಎರಡು ಚುನಾವಣೆಗಳಲ್ಲೂ ಆತ ಮೋದಿ ಅವರ ಪಕ್ಷಕ್ಕೆ ಮತ ಚಲಾಯಿಸಿದ್ದ. ಆದರೆ ಲಾಕ್‌ ಡೌನ್‌ ಘೋಷಿಸಿದ ನಂತರ ಮೇ 29 ರಂದು ಆತ ತನ್ನ ಊರಾದ ಬಿಹಾರಕ್ಕೆ ತೆರಳಲು ಪಟ್ಟ ಶ್ರಮ ಕಲ್ಪನೆಗೂ ನಿಲುಕದ್ದು. ಕಳೆದ ವರ್ಷ ಕೂಡ ಮೋದಿಯ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿದ ಹರಾ, ಮೋದಿ ಸರ್ಕಾರ ಈ ಬಾರಿ ನಮಗೆ ತುಂಬಾ ಅನ್ಯಾಯ ಮಾಡಿದೆ ಎಂದು ಹೇಳುತ್ತಾನೆ. ಅಲ್ಲದೆ ಮುಂದಿನ ಬಾರಿ ಮತ ಚಲಾಯಿಸುವಾಗ ನಾವು ಅನುಭವಿಸಿದ್ದನ್ನು ನೆನೆಸಿಕೊಂಡೇ ಮತ ಚಲಾಯಿಸುತ್ತೇವೆ . ನನ್ನಂತೆ ಸಾವಿರಾರು ಜನರು ಕಷ್ಟ ನಷ್ಟ ಅನುಭವಿಸಿದ್ದಾರೆ ಎಂದೂ ಆತ ಹೇಳಿದ.

ದೇಶದಲ್ಲಿ ವಾಸಿಸುತ್ತಿರುವ 100 ದಶಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರ ಅಭಿಪ್ರಾಯಗಳನ್ನು ಯಾವುದೇ ವಿಶ್ವಾಸಾರ್ಹ ಸಮೀಕ್ಷೆಗಳು ಈ ತನಕವೂ ಗುರುತಿಸಿಲ್ಲ. ಮೋದಿ ಅವರು ಕರೋನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ವಹಿಸಿದ ಕಾರ್ಯಕ್ಕಾಗಿ ಹೆಚ್ಚಿನ ಪ್ರಶಂಸೆ ಪಡೆದಿದ್ದಾರೆ. ಅವರು ರಾಷ್ಟ್ರೀಯ ಸಂಸತ್ತಿನಲ್ಲಿ ಘನ ಬಹುಮತವನ್ನು ಉಳಿಸಿಕೊಂಡಿದ್ದಾರೆ, ದುರ್ಬಲ ವಿರೋಧವು ಹೆಚ್ಚಾಗಿ ನಿಷ್ಪರಿಣಾಮಕಾರಿಯಾಗಿದೆ ಎಂದು ಭಾವಿಸಿಕೊಂಡಿದ್ದರೆ, ಚಾಟಿ ಏಟು ಖಚಿತವೇ ಆಗಿದೆ. ಮತ್ತು ಅವರು ಅದಕ್ಕಗಿ 2024 ರ ಸಾರ್ವತ್ರಿಕ ಚುನಾವಣೆಯವರೆಗೆ ಕಾಯುವ ಅಗತ್ಯವಿಲ್ಲ.

ಹರಾ ಅವರಂತಹ ಮತದಾರರಲ್ಲಿ ವರ್ತನೆಗಳ ವ್ಯಾಪಕ ಬದಲಾವಣೆಯು ಮುಂದಿನ 12 ತಿಂಗಳುಗಳಲ್ಲಿ ನಡೆಯುವ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಅಪಾಯವನ್ನುಂಟು ಮಾಡುತ್ತದೆ. ಇದರಿಂದಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟದ ಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸಬಹುದು. ಮುಂಬೈ ಮತ್ತು ದೆಹಲಿಯಂತಹ ಪ್ರಮುಖ ನಗರಗಳಲ್ಲಿ ವೈರಸ್ ತಡೆಗಟ್ಟುವಲ್ಲಿ ಲಾಕ್‌ಡೌನ್ ಹೆಚ್ಚಾಗಿ ವಿಫಲವಾಗಿದೆ ಮತ್ತು ದೀರ್ಘಕಾಲದ ನಿರುದ್ಯೋಗವು ಉದ್ವಿಗ್ನತೆಯನ್ನು ಹೆಚ್ಚಿಸಲು ಪ್ರಾರಂಭಿಸುತ್ತಿದೆ.

ಮೋದಿಯ ಮೊದಲ ಪರೀಕ್ಷೆಯು ನವೆಂಬರ್ ವೇಳೆಗೆ ದೇಶದ ಅತಿದೊಡ್ಡ ವಲಸೆ ಕಾರ್ಮಿಕರ ಮೂಲವಾದ ಬಿಹಾರದಲ್ಲಿ ಬರಲಿದೆ. ಇದನ್ನು ಪ್ರಸ್ತುತ ಅವರ ಬಿಜೆಪಿಯನ್ನು ಒಳಗೊಂಡಿರುವ ಒಕ್ಕೂಟವು ಆಳುತ್ತಿದೆ. ಭಾರತದ ಅತ್ಯಂತ ಬಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿ, ಇದು ರಾಜಕೀಯ ಘಂಟಾಘೋಷವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.

ಭಾನುವಾರ ಬಿಹಾರದಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ ಮೋದಿ ಅವರ ಬಲಗೈ, ಗೃಹ ಸಚಿವ ಅಮಿತ್ ಶಾ ಆಡಳಿತ ಪಕ್ಷವು ವಲಸೆ ಕಾರ್ಮಿಕರ ಬಗ್ಗೆ ನಡೆಸಿದ ಟೀಕೆಗಳಿಗೆ ಸೂಕ್ಷ್ಮವಾಗಿದೆ ಎಂದು ಸಂಕೇತಿಸಿತು. ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ಮತ್ತೆ ಅಧಿಕಾರ ಹಿಡಿಯಲಿದೆ ಎಂದ ಷಾ ಅವರು ಮೋದಿಯನ್ನು ಟೀಕಿಸುವ ಪ್ರತಿಪಕ್ಷ ನಾಯಕರನ್ನು ನಿರ್ಲಕ್ಷಿಸುವಂತೆ ವಲಸೆ ಕಾರ್ಮಿಕರನ್ನು ಒತ್ತಾಯಿಸಿದರು.

ಈ ವಲಸೆ ಕಾರ್ಮಿಕರು ಭಾರತದ ಐದನೇ ಒಂದು ಭಾಗದಷ್ಟು ಕಾರ್ಮಿಕ ವರ್ಗವನ್ನು ಪ್ರತಿನಿಧಿಸುತಿದ್ದು ನಗರಗಳನ್ನು ನಿರ್ಮಿಸುತ್ತಾರೆ ಮತ್ತು ಕಾರ್ಖಾನೆಗಳನ್ನು ನಡೆಸುತ್ತಾರೆ. ಮಾರ್ಚ್ 25 ರಂದು ಮೋದಿಯವರು ಕೇವಲ 4 ಘಂಟೆ ಅವಧಿಯಲ್ಲಿ ಘೋಷಿಸಿದ ಲಾಕ್‌ ಡೌನ್‌ ನ ತಪ್ಪು ಹೆಜ್ಜೆಯು ಕಾರ್ಮಿಕರ ಗ್ರಾಮೀಣ ಹಳ್ಳಿಗಳಿಗೆ ಸಾಗಿಸಲು ವಿಶೇಷ ರೈಲುಗಳನ್ನು ಬಳಸುವ ಯೋಜನೆಯು ವ್ಯರ್ಥವೇ ಆಯಿತು. ನೂರಾರು ಕಿಲೋಮೀಟರ್ ಕಾಲ್ನಡಿಗೆ ಅಥವಾ ಸೈಕಲ್ ಪ್ರಯಾಣ, ಸಾಮಾನುಗಳನ್ನು ಎಳೆಯುವುದು ಮತ್ತು ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಳ್ಳುವುದನ್ನು ಬಿಟ್ಟು ಅನೇಕ ಜನರಿಗೆ ಬೇರೆ ದಾರಿಯೇ ಇರಲಿಲ್ಲ. ಒಂದು ಹತಾಶ ಗುಂಪು ಸಿಮೆಂಟ್ ಮಿಕ್ಸರ್ ನ ಒಳಗೆ ಕುಳಿತುಕೊಂಡು ಪ್ರಯಾಣಿಸಿತು. ಹಸಿವಿನಿಂದ ಮತ್ತು ಅಪಘಾತದ ಹಾದಿಯಲ್ಲಿ ನೂರಾರು ಜನರು ಸಾವನ್ನಪ್ಪಿದರು. ರೈಲ್ವೆ ಹಳಿಗಳ ಉದ್ದಕ್ಕೂ ನಡೆದುಕೊಂಡು ಬಂದ ವಲಸೆ ಕಾರ್ಮಿಕರ ಗುಂಪು ಕೂಡ ಚಿರ ನಿದ್ರೆಗೆ ಜಾರಿತು.

ಅವರು ಮೋದಿಯವರ ಪಕ್ಷ ಮತ್ತು ಅವರ ಸಮ್ಮಿಶ್ರ ಪಾಲುದಾರರ ವಿರುದ್ಧ ಮತ ಚಲಾಯಿಸುತ್ತಾರೆ. ಎಂದು ರಾಜಕೀಯ ವಿಶ್ಲೇಷಕ ಶೈಬಲ್‌ ಗುಪ್ತಾ ಹೇಳಿದರು. ಈಗಾಗಲೇ ಕಾರ್ಮಿಕ ವರ್ಗದಲ್ಲಿ ಸಾಮಾಜಿಕ ಅಭದ್ರತೆಯ ಭಾವನೆ ಹೆಚ್ಚಾಗುತ್ತಿದೆ. ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ಸೂರತ್ ನಗರದಲ್ಲಿ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐದು ಪ್ರತ್ಯೇಕ ಘರ್ಷಣೆಗಳಲ್ಲಿ ಕೋಪಗೊಂಡ ಕಾರ್ಮಿಕರನ್ನು ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಬೇಕಾಯಿತು. ಮತ್ತೋರ್ವ ವಲಸೆ ಕಾರ್ಮಿಕ ಶರ್ಮಾ ಅವರ ಪ್ರಕಾರ ಪ್ರಾಣಿಗಳನ್ನು ಸಹ ಉತ್ತಮವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಉತ್ತರ ಪ್ರದೇಶದ ತನ್ನ ಹಳ್ಳಿಗೆ 800 ಕಿಲೋಮೀಟರ್ ದೂರ ಕ್ರಮಿಸಲು ಅವರ ಕುಟುಂಬ ಸದಸ್ಯರೊಂದಿಗೆ ಅವರು ನಡೆದೇ ಸಾಗಬೇಕಾಯಿತು. ಮೋದಿ ಸಾಕಷ್ಟು ಮಾತನಾಡುತ್ತಿದ್ದಾರೆ, ಆದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಸರ್ಕಾರ ನಮಗೆ ಏನೂ ಮಾಡಲಿಲ್ಲ ಎಂದು ಅವರು ಹೇಳಿದರು. ನಾನು ಬಿಜೆಪಿಗೆ ಮತ ಹಾಕಿದ್ದೇನೆ, ಆದರೆ ಮುಂದಿನ ಬಾರಿ ನಾನು ಹಾಕುವುದಿಲ್ಲ ಎಂದೂ ಅವರು ಹೇಳಿದರು.

ಪ್ರಮುಖ ವಿರೋಧ ಪಕ್ಷವು ಸರ್ಕಾರದ ಬಗ್ಗೆ ಕಠಿಣ ಟೀಕೆಗಳ ಹೊರತಾಗಿಯೂ ರಾಜಕೀಯ ಲಾಭವನ್ನು ಬಳಸಿಕೊಳ್ಳಲೂ ವಿಫಲವಾಗಿದೆ. ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಅವರ ಪ್ರಕಾರ ಕಾರ್ಮಿಕರ ಬಗ್ಗೆ ಮೋದಿಯ ಆಡಳಿತದ ವರ್ತನೆ ಸ್ಪಷ್ಟವಾಗಿದೆ. ‘ನೀವು ಲಾಕ್‌ಡೌನ್ ಅನ್ನು ಮುರಿದಿದ್ದೀರಿ, ಈಗ ನರಕಕ್ಕೆ ಹೋಗಿ. ಅವರ ಕ್ರೂರತೆಯನ್ನು ಬೇರೆ ಯಾವುದೂ ವಿವರಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೋರ್ವ ವಲಸೆ ಕಾರ್ಮಿಕ ಶರ್ಮಾ ಅವರ ಪ್ರಕಾರ, ಪ್ರಾಣಿಗಳನ್ನು ಸಹ ಉತ್ತಮವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಉತ್ತರ ಪ್ರದೇಶದ ತನ್ನ ಹಳ್ಳಿಗೆ 800 ಕಿಲೋಮೀಟರ್ ದೂರ ಕ್ರಮಿಸಲು ಅವರ ಕುಟುಂಬ ಸದಸ್ಯರೊಂದಿಗೆ ಅವರು ನಡೆದೇ ಸಾಗಬೇಕಾಯಿತು. ಮೋದಿ ಸಾಕಷ್ಟು ಮಾತನಾಡುತ್ತಿದ್ದಾರೆ, ಆದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಸರ್ಕಾರ ನಮಗೆ ಏನೂ ಮಾಡಲಿಲ್ಲ ಎಂದು ಅವರು ಹೇಳಿದರು. ನಾನು ಬಿಜೆಪಿಗೆ ಮತ ಹಾಕಿದ್ದೇನೆ, ಆದರೆ ಮುಂದಿನ ಬಾರಿ ನಾನು ಹಾಕುವುದಿಲ್ಲ ಎಂದೂ ಅವರು ಹೇಳಿದರು.

Tags: Amith ShaCovid 19Migrant WorkersPM Modiಅಮಿತ್‌ ಶಾಕೋವಿಡ್-19ಪ್ರಧಾನಿ ಮೋದಿವಲಸೆ ಕಾರ್ಮಿಕರು
Previous Post

KSRTC ನೌಕರರ ನಿವೃತ್ತಿ ಪಡೆದುಕೊಳ್ಳಲೆಂದೇ ರಚನೆಯಾಗಿದೆ ಸಮಿತಿ!

Next Post

ಕರೋನಾ ಸೋಂಕು: ಹೆಚ್ಚುತ್ತಿರುವ ಪ್ರಕರಣಗಳು ದೇಶಕ್ಕೆ ಮುನ್ನೆಚ್ಚರಿಕೆಯೇ?

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ಕರೋನಾ ಸೋಂಕು: ಹೆಚ್ಚುತ್ತಿರುವ ಪ್ರಕರಣಗಳು ದೇಶಕ್ಕೆ ಮುನ್ನೆಚ್ಚರಿಕೆಯೇ?

ಕರೋನಾ ಸೋಂಕು: ಹೆಚ್ಚುತ್ತಿರುವ ಪ್ರಕರಣಗಳು ದೇಶಕ್ಕೆ ಮುನ್ನೆಚ್ಚರಿಕೆಯೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada