ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಅವರ 6 ಜನ ಸಿಬ್ಬಂದಿಗಳಿಗೂ ಕರೋನಾ ಬಂದಿರುವುದು ಧೃಡವಾಗಿದೆ. ಭಾನುವಾರ ಸಂಜೆ ಯಡಿಯೂರಪ್ಪ ಅವರಿಗೆ ಕರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಖ್ಯಮಂತ್ರಿ ಅವರ ಮಗಳು ಪದ್ಮಾವತಿ ಅವರಿಗೂ ಕರೋನಾ ಸೋಂಕು ಧೃಡಪಟ್ಟಿದೆ. ಪುತ್ರ ವಿಜಯೇಂದ್ರ ಅವರ ವರದಿ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ರಾತ್ರಿ 8:30 ಹೊತ್ತಿಗೆ ನನ್ನಲ್ಲಿ ಕರೋನಾ ಸೋಂಕು ಇರುವುದು ಧೃಡವಾಗಿತ್ತು. ತಕ್ಷಣವೇ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದೇನೆ. ವೈದ್ಯರು ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಶೀಘ್ರದಲ್ಲೇ ಡಿಸ್ಚಾರ್ಜ್ ಆಗಬಹುದೆಂದು ವೈದ್ಯರು ಹೇಳಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.








