Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ

ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ
ಮೋದಿ ಪಕ್ಷಕ್ಕೆ ಸಾವಿರಾರು ಕೋಟಿ ಲಾಭ ತಂದುಕೊಟ್ಟ ಎಲೆಕ್ಟೊರಲ್ ಬಾಂಡ್ ಯೋಜನೆ

November 21, 2019
Share on FacebookShare on Twitter

ನರೇಂದ್ರ ಮೋದಿ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರೀಯ ಚುನಾವಣಾ ಆಯೋಗದ ಆಶಯಕ್ಕೆ ವಿರುದ್ಧವಾಗಿ ಜಾರಿಗೆ ತಂದಿರುವ ಎಲೆಕ್ಟೊರಲ್ ಬಾಂಡ್ ಯೋಜನೆ ಈಗ ವಿವಾದಕ್ಕೆ ಎಡೆಯಾಗಿದೆ. ಎಲೆಕ್ಟೊರಲ್ ಬಾಂಡ್ ತರುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೇ ಹೋದದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಅಷ್ಟೇ ಅಲ್ಲಾ ಸಂಸತ್ತಿಗೂ ಸುಳ್ಳುಮಾಹಿತಿ ನೀಡಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

‘Nudity Not Obscene by Default’: Kerala HC Quashes Case Against Rehana Fathima : ”ನಗ್ನತೆಯನ್ನು ಲೈಂಗಿಕತೆಯೊಂದಿಗೆ ಹೋಲಿಸಬಾರದು”: ರೆಹಾನಾ ಫಾತಿಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಕೇರಳ ಹೈಕೋರ್ಟ್!

ಅತ್ಯುತ್ತಮ ವಿಶ್ವವಿದ್ಯಾಲಯ ವಿಭಾಗದಲ್ಲಿ ಬೆಂಗಳೂರಿನ ʼಐಐಎಸ್​ಸಿʼ ನಂಬರ್‌ ಒನ್..! NIRF ರ್‍ಯಾಂಕಿಂಗ್‌

ಕುಸ್ತಿಪಟುಗಳು ಪರೋಕ್ಷ ಪ್ರಭುತ್ವಕ್ಕೆ ಗುಲಾಮರಾಗಬೇಕೆ? ಅನ್ಯಾಯದ ವಿರುದ್ಧ ದನಿ ಎತ್ತಬಾರದೇ?

ಕಾರ್ಪೊರೆಟ್ ವಲಯದಿಂದ ಕಾನೂನುಬದ್ಧವಾಗಿ ಸುಲಿಗೆ ಮಾಡುವ ಸ್ವರೂಪದಲ್ಲಿರುವ ಎಲೆಕ್ಟೊರಲ್ ಬಾಂಡ್ ಮುಂದಿನ ದಿನಗಳಲ್ಲಿ ಮೋದಿ ಸರ್ಕಾರಕ್ಕೆ ಉರುಳಾದರೂ ಅಚ್ಚರಿ ಇಲ್ಲ. ಎಲೆಕ್ಟೊರಲ್ ಬಾಂಡ್ ಅನ್ನು ಎಷ್ಟು ನಯವಾಗಿ ವಂಚಿಸುವ ರೀತಿಯಲ್ಲಿ ರೂಪಿಸಲಾಗಿತ್ತೆಂದರೆ, ಕಾನೂನು ತೊಡಕು ಎದುರಿಸಬೇಕಾಗುತ್ತದೆಂಬ ಕಾರಣಕ್ಕೆ ಬಾಂಡ್ ವಿತರಿಸುವ ಅಧಿಕಾರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನೀಡಿತ್ತು. ಆ ಮೂಲಕ ಬಾಂಡ್ ವಿತರಿಸುವ ಹಕ್ಕು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ನ ಸ್ವಯತ್ತತೆ ಮತ್ತು ಪರಮಾಧಿಕಾರಕ್ಕೆ ಕುತ್ತು ತಂದಿತ್ತು. ಈ ಬಗ್ಗೆ ನರೇಂದ್ರಮೋದಿ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ತಪ್ಪುದಾರಿಗೆ ಎಳೆದಿದೆ. ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಂಡ್ ವಿತರಿಸುತ್ತದೆ ಆದರೂ, ಮುಂದಿನ ದಿನಗಳಲ್ಲಿ ಈ ಜವಾಬ್ದಾರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ವಹಿಸಲಾಗುತ್ತದೆ ಎಂದು ತಿಳಿಸಲಾಗಿತ್ತಾದರೂ, ಈಗಲೂ ಆ ಬಾಂಡ್ ವಿತರಿಸುವ ಅಧಿಕಾರ ಎಸ್‌ಬಿಐ ನಲ್ಲೇ ಇದೆ.

ಎಲೆಕ್ಟೊರಲ್ ಬಾಂಡ್ ಯೋಜನೆಯಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಭಾರತೀಯ ಜನತಾ ಪಕ್ಷಕ್ಕೆ 2000 ರೂಪಾಯಿ ಕೋಟಿ ಲಾಭವಾಗಿದೆ. ಎಲೆಕ್ಟೊರಲ್ ಬಾಂಡ್ ಮೂಲಕ ಇದುವರೆಗೆ (2019 ಮಾರ್ಚ್ 31ರವರೆಗೆ) ರಾಜಕೀಯ ಪಕ್ಷಗಳಿಗೆ ನೀಡಲಾಗಿರುವ ದೇಣಿಗೆಯ ಒಟ್ಟು ಮೊತ್ತ 2772,78,56,000 ರುಪಾಯಿಗಳು. ಈ ಪೈಕಿ 2018ರಲ್ಲಿ 1056,73,42,000 ರುಪಾಯಿಗಳು ಮತ್ತು 2019 ರ ಮೊದಲ ಮೂರು ತಿಂಗಳಲ್ಲೇ 1716,05,14000 ರುಪಾಯಿಗಳನ್ನು ನೀಡಲಾಗಿದೆ.

ಎಲೆಕ್ಟೊರಲ್ ಬಾಂಡ್ ಯೋಜನೆ ಜಾರಿಗೆ ಬಂದ ಮೊದಲ ಮೂರು ತಿಂಗಳಲ್ಲಿ 210 ಕೋಟಿ ರುಪಾಯಿಗಳನ್ನು ರಾಜಕೀಯ ಪಕ್ಷಗಳಿಗೆ ಕೊಡಮಾಡಲಾಗಿತ್ತು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಮೊದಲ ಮೂರು ತಿಂಗಳಲ್ಲಿ ಎಲೆಕ್ಟೊರಲ್ ಬಾಂಡ್ ಮೂಲಕ ನೀಡಲಾದ ದೇಣಿಗೆ ಪೈಕಿ ಶೇ.95ರಷ್ಟನ್ನು ಆಡಳಿತಾರೂಢ ಬಿಜೆಪಿಯೇ ಪಡೆದಿತ್ತು.

2018 ಜನವರಿ 2ರಂದು ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಎಲೆಕ್ಟೊರಲ್ ಬಾಂಡ್ ವಿತರಿಸುವ ಜವಾಬ್ದಾರಿಯನ್ನು ಎಸ್ಬಿಐಗೆ ವಹಿಸಿತ್ತು. ಈಗಲೂ ಎಸ್ಬಿಐ ಎಲೆಕ್ಟೊರಲ್ ಬಾಂಡ್ ವಿತರಿಸುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿರುವ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಎಸ್ಬಿಐ ಕೇಂದ್ರ ಕಚೇರಿಯಲ್ಲಿ ಎಲೆಕ್ಟೊರಲ್ ಬಾಂಡ್ ವಿತರಿಸಲಾಗುತ್ತದೆ. ಇಲ್ಲಿ ಇದುವರೆಗೆ ಒಟ್ಟು 82,75,00,000 ರುಪಾಯಿ ಮೊತ್ತದ ಬಾಂಡ್ ವಿತರಿಸಲಾಗಿದೆ.

ಮಹಾರಾಷ್ಟ್ರದ ವಿಹಾರ್ ದುರ್ವೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಎಸ್‌ಬಿಐನಿಂದ ಪಡೆದಿರುವ ಅಂಕಿ ಅಂಶಗಳ ಪ್ರಕಾರ, ಇದುವರೆಗೆ 2772,78,56,000 ರುಪಾಯಿಗಳನ್ನು ಎಲೆಕ್ಟೊರಲ್ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಈ ಪೈಕಿ 2000 ಕೋಟಿಗಿಂತಲೂ ಹೆಚ್ಚು ಮೊತ್ತವನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ ಅಷ್ಟೊಂದು ಆಸಕ್ತಿ ವಹಿಸಿ ಎಲೆಕ್ಟೊರಲ್ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದ್ದರ ಮರ್ಮ ಏನೆಂಬದು ಈಗ ಅರ್ಥವಾಗುತ್ತಿದೆಯಲ್ಲವೇ?

ಇಲ್ಲಿ ಬಿಜೆಪಿಯ ತಂತ್ರಗಾರಿಕೆ ಗಮನಿಸಬೇಕು. ಆಡಳಿತಾರೂಢ ಪಕ್ಷವಾದ್ದರಿಂದ ಅಧಿಕೃತವಾಗಿ ತಮಗೆ ಹೆಚ್ಚಿನ ದೇಣಿಗೆ ಬರುವಂತೆ ಮಾಡಿಕೊಂಡಿರುವ ಬಿಜೆಪಿ, ಪ್ರತಿ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆ ಹರಿಯದಂತೆ ನೋಡಿಕೊಂಡಿದೆ. ಹೀಗಾಗಿ ಎಲೆಕ್ಟೊರಲ್ ಬಾಂಡ್ ಮೂಲಕ ಹರಿದು ಬಂದಿರುವ ದೇಣಿಗೆಯಲ್ಲಿ ಸಿಂಹಪಾಲು ಆಡಳಿತಾರೂಢ ಬಿಜೆಪಿಗೆ ದಕ್ಕಿದೆ.

ರಾಜಕೀಯ ಪಕ್ಷಗಳು ಎಲೆಕ್ಟೊರಲ್ ಬಾಂಡ್ ಮೂಲಕ ದೇಣಿಗೆ ಪಡೆಯಲು ಕೆಲವು ಷರತ್ತು ವಿಧಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 29ಎ ಅಡಿಯಲ್ಲಿ ನೊಂದಾಯಿಸಲ್ಪಟ್ಟಿರುವ ರಾಜಕೀಯ ಪಕ್ಷಗಳು ಬಾಂಡ್ ಮೂಲಕ ದೇಣಿಗೆ ಪಡೆಯಬಹುದು. ಆದರೆ, ಈ ಪಕ್ಷಗಳು ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.1ಕ್ಕಿಂತಲೂ ಹೆಚ್ಚು ಮತ ಪಡೆದಿರಬೇಕು. ಈ ದೇಣಿಗೆ ಪಡೆಯಲೆಂದೇ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಖಾತೆ ನೀಡುತ್ತದೆ. ಆ ಖಾತೆ ಮೂಲಕವೇ ಬಾಂಡ್ ಮೂಲಕ ಬಂದ ಠೇವಣಿ ಸ್ವೀಕರಿಸಬೇಕು. ವಿತ್ತೀಯ ವರ್ಷದ ಪ್ರತಿ ತ್ರೈಮಾಸಿಕದ ಮೊದಲ ಹತ್ತು ದಿನ ಎಸ್ಬಿಐ ನಿಯೋಜಿತ ಶಾಖೆಯಲ್ಲಿ ಬಾಂಡ್ ಖರೀದಿಸಬಹುದು. ಲೋಕಸಭಾ ಚುನಾವಣೆ ಇದ್ದ ಸಂದರ್ಭದಲ್ಲಿ ಬಾಂಡ್ ಖರೀದಿಸಲು 30 ದಿನಗಳ ಅವಕಾಶ ನೀಡಲಾಗುತ್ತದೆ.

ಈ ಹಿಂದೆ ರಾಜಕೀಯ ಪಕ್ಷಗಳಿಗೆ ಕಾರ್ಪೊರೆಟ್ ಗಳು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳು ದೇಣಿಗೆ ನೀಡುತ್ತಿದ್ದವು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಿಗೂ ಹೆಚ್ಚು ಕಮ್ಮಿ ಸರಿಸಮನಾಗಿ ದೇಣಿಗೆ ನೀಡುತ್ತಿದ್ದವು. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಆಗ ಬಹುತೇಕ ರಾಜಕೀಯ ಪಕ್ಷಗಳಿಗೆ ಚುನಾವಣಾ ವೆಚ್ಚಕ್ಕೆ ದೇಣಿಗೆ ಹರಿದು ಬರುತ್ತಿತ್ತು.

ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯು ಹೆಚ್ಚು ಪಾರದರ್ಶಕವಾಗಿರಬೇಕು ಮತ್ತು ತೆರಿಗೆ ವಂಚನೆ ತಡೆಯುವ ಹೆಸರಿನಲ್ಲಿ ನರೇಂದ್ರ ಮೋದಿ ಸರ್ಕಾರ ಎಲೆಕ್ಟೊರಲ್ ಬಾಂಡ್ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಹೆಚ್ಚಿನ ಲಾಭವನ್ನು ಬಿಜೆಪಿಯೇ ಪಡೆದುಕೊಂಡಿದೆ. ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ದೇಣಿಗೆ ಸಂಗ್ರಹಿಸಲು ಈ ಯೋಜನೆ ತೊಡಕಾಗಿದೆ. ಹೆಚ್ಚಿನ ದೇಣಿಗೆ ನೀಡದೇ ಇದ್ದರೆ, ಐಟಿ, ಇಡಿ, ಸಿಬಿಐ ದಾಳಿಯ ಭೀತಿಯನ್ನು ಪರೋಕ್ಷವಾಗಿ ಒಡ್ಡುವ ಆಡಳಿತಾರೂಢ ಪಕ್ಷವು ತಲಾ 1000 ಕೋಟಿ ರುಪಾಯಿಗಳಂತೆ ಎರಡೇ ವರ್ಷದಲ್ಲಿ 2,000 ಕೋಟಿ ದೇಣಿಗೆ ಪಡೆದುಕೊಂಡಿದೆ. ಇದೇ ವೇಳೆ ಪ್ರತಿ ಪಕ್ಷಗಳಿಗೆ ಹರಿದು ಬರುತ್ತಿದ್ದ ದೇಣಿಗೆಗೂ ತಡೆಯೊಡ್ಡಿದೆ.

2017-18ರಲ್ಲಿ ಬಿಜೆಪಿಯ ಆದಾಯವು 1027 ಕೋಟಿರುಪಾಯಿಗಳಿಗೆ ಏರಿತ್ತು. ಈ ಪೈಕಿ ಬಿಜೆಪಿಗೆ 989 ಕೋಟಿ ರುಪಾಯಿ ದೇಣಿಗೆ ರೂಪದಲ್ಲಿ ಬಂದಿದ್ದರೆ, ಬಿಜೆಪಿ ಬ್ಯಾಂಕಿನಲ್ಲಿಟ್ಟಿರುವ ಠೇವಣಿಗೆ ಬಂದಿರುವ ಬಡ್ಡಿಯೇ 31 ಕೋಟಿ ರುಪಾಯಿಗಳಷ್ಟಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ವಿವಿಧ ಚಂದಾರೂಪದಲ್ಲಿ 5 ರುಪಾಯಿ ಆದಾಯ ಬಂದಿದ್ದರೆ, ಇತರೆ ಆದಾಯ 2 ಕೋಟಿ ರುಪಾಯಿಗಳಾಗಿದೆ.

(ನಾಳಿನ ಸಂಚಿಕೆಯಲ್ಲಿ- ಊರ್ಜಿತ್ ಪಟೇಲ್ ಪ್ರಸ್ತಾಪಿಸಿದ ಆತಂಕಗಳೇನು?)

RS 500
RS 1500

SCAN HERE

Pratidhvani Youtube

«
Prev
1
/
4568
Next
»
loading
play
H.Vishwanath; ಗ್ಯಾರಂಟಿ ಯೋಜನೆಗಳನ್ನ ಸಿಕ್ಕ ಸಿಕ್ಕವರಿಗೆ ನೀಡಲಾಗುವುದಿಲ್ಲ | Congress guarantee | CM
play
H.Vishwanath; ಡಿ.ದೇವರಾಜ ಅರಸು ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ MLC H. ವಿಶ್ವನಾಥ್ ಭಾಗಿ|Devarajaarasu
«
Prev
1
/
4568
Next
»
loading

don't miss it !

ಕಾಂಗ್ರೆಸ್​ ವಿರುದ್ಧ ಪೋಸ್ಟರ್​ ಅಭಿಯಾನ ನಡೆಸಲು ಬಿಜೆಪಿ ತಯಾರಿ
ರಾಜಕೀಯ

ಕಾಂಗ್ರೆಸ್​ ವಿರುದ್ಧ ಪೋಸ್ಟರ್​ ಅಭಿಯಾನ ನಡೆಸಲು ಬಿಜೆಪಿ ತಯಾರಿ

by Prathidhvani
June 1, 2023
Protest of wrestlers : ಕುಸ್ತಿಪಟುಗಳ ಪ್ರತಿಭಟನೆ ; ‘ಮಹಾ ಪಂಚಾಯತ್‌’ ನಡೆಸುವುದಾಗಿ ಟಿಕಾಯತ್‌ ಹೇಳಿಕೆ..!
Top Story

Protest of wrestlers : ಕುಸ್ತಿಪಟುಗಳ ಪ್ರತಿಭಟನೆ ; ‘ಮಹಾ ಪಂಚಾಯತ್‌’ ನಡೆಸುವುದಾಗಿ ಟಿಕಾಯತ್‌ ಹೇಳಿಕೆ..!

by ಪ್ರತಿಧ್ವನಿ
May 31, 2023
ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್​ಐಎ ದಾಳಿ : ನಾಲ್ವರು ವಶಕ್ಕೆ
ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್​ಐಎ ದಾಳಿ : ನಾಲ್ವರು ವಶಕ್ಕೆ

by Prathidhvani
May 31, 2023
Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ
Top Story

Karnataka State Govt Employees : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ. 4ರಷ್ಟು ಹೆಚ್ಚಳ

by ಪ್ರತಿಧ್ವನಿ
May 30, 2023
Mango Mela : ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜೂನ್ 11 ರವರೆಗೆ ಮಾವು ಮೇಳ
Top Story

Mango Mela : ಲಾಲ್‌ಬಾಗ್‌ನಲ್ಲಿ ಇಂದಿನಿಂದ ಜೂನ್ 11 ರವರೆಗೆ ಮಾವು ಮೇಳ

by ಪ್ರತಿಧ್ವನಿ
June 2, 2023
Next Post
ಮೊಹಾಂತಿ

ಮೊಹಾಂತಿ, ಪ್ರಸಾದ್‌ರಿಂದ ಗಣಪತಿಗೆ ಕಿರುಕುಳವೇ ಆಗಿಲ್ಲ: ಸಿಬಿಐ

ವಿವಾದಾತ್ಮಕ ಸ್ಥಳದಲ್ಲಿ ದೇವಾಲಯ ಇತ್ತೇ? ಪುರಾತತ್ವಜ್ಞರು ಹೇಳುವುದೇನು?

ವಿವಾದಾತ್ಮಕ ಸ್ಥಳದಲ್ಲಿ ದೇವಾಲಯ ಇತ್ತೇ? ಪುರಾತತ್ವಜ್ಞರು ಹೇಳುವುದೇನು?

ಸಂಡೂರಿನಲ್ಲಿ ಮತ್ತೆ ಗಣಿ ಧೂಳಿನ ಆತಂಕ!

ಸಂಡೂರಿನಲ್ಲಿ ಮತ್ತೆ ಗಣಿ ಧೂಳಿನ ಆತಂಕ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist