• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

by
February 29, 2020
in Uncategorized
0
ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ
Share on WhatsAppShare on FacebookShare on Telegram

ಮಹಿಳೆಯರ ಟಿ-20 ವಿಶ್ವಕಪ್‌ನಲ್ಲಿ ಅಜೇಯ ಓಟದೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡ, ದೇಶವಾಸಿಗಳಿಗೆ ಕೇಳಲು ಹಿತಕರವಾದ ಸುದ್ದಿ ಕೊಡುವ ಮೂಲಕ ಎಡ/ಬಲಗಳ ರಾಜಕೀಯ ಸೈದ್ಧಾಂತಿಕ ಕಚ್ಚಾಟದಲ್ಲಿ ಬ್ಯುಸಿ ಆಗಿದ್ದ ನೆಟ್ಟಿಗರೆಲ್ಲಾ ಒಟ್ಟಾಗಿ, ಒಂದು ವಿಚಾರಕ್ಕಾಗಿ ಸಮಾನ ಮನಸ್ಸಿನಿಂದ ಸೆಲೆಬ್ರೇಟ್ ಮಾಡಲು ಕಾರಣ ನೀಡಿದೆ.

ADVERTISEMENT

ಅದರಲ್ಲೂ, ನ್ಯೂಝೀಲೆಂಡ್ ವಿರುದ್ಧದ ಪಂದ್ಯದಲ್ಲಿ ಚುರುಕಿನ 46 ರನ್‌ಗಳಿಸಿ ಭಾರತ ತಂಡಕ್ಕೆ ಮಿಂಚಿನ ಆರಂಭ ಒದಗಿಸಿಕೊಟ್ಟ 16 ವರ್ಷದ ಆರಂಭಿಕ ಬ್ಯಾಟ್ಸ್‌ವುಮನ್ ಶೆಫಾಲಿ ವರ್ಮಾ ಇದೀಗ ಎಲ್ಲರ ಕಣ್ಮನ ಸೆಳೆದ ಸೆನ್ಸೇಶನ್ ಆಗಿದ್ದಾರೆ. ಬರೀ 34 ಎಸೆತಗಳಲ್ಲಿ 46 ರನ್‌ಗಳ ತಮ್ಮ ಇನಿಂಗ್ಸ್‌ನಿಂದಾಗಿ ವರ್ಮಾಗೆ ಟೂರ್ನಿಯ ಎರಡನೇ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ.

ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ 114 ರನ್‌ ಕಲೆ ಹಾಕಿರುವ ಶೆಫಾಲಿ, 172.72 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದು, ವಿಶ್ವಕಪ್‌ ದಾಖಲೆ ನಿರ್ಮಿಸಿದ್ದಾರೆ. ಶೆಫಾಲಿಯ ಈ ಮಿಂಚಿನ ಓಟದಿಂದ ಕ್ರಿಕೆಟ್‌ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಭಾರತೀಯ ಪುರುಷರ ತಂಡದ ಮಾಜಿ ಆಟಗಾರರು ಇಂಪ್ರೆಸ್ ಆಗಿದ್ದಾರೆ.

“ಟಿ-20 ವಿಶ್ವಕಪ್‌ ಸೆಮಿಫೈನಲ್ ತಲುಪಿದ ಮೊದಲ ತಂಡವಾದ ಭಾರತೀ ಮಹಿಳಾ ತಂಡಕ್ಕೆ ಅಭಿನಂದನೆಗಳು. ಇದೊಂದು ಟೈಟ್ ಗೇಮ್ ಆಗಿದ್ದು ಒತ್ತಡದಲ್ಲಿ ನಾವು ಒಳ್ಳೆಯ ಆಟವಾಡಿದ್ದೇವೆ. ಮತ್ತೊಂದು ನಿರ್ಣಾಯಕ ಆಟವಾಡಿದ ಶೆಫಾಲಿಯನ್ನು ನೋಡುವುದು ಬಹಳ ಸಂತಸವಾಯಿತು,” ಎಂದು ಸಚಿನ್ ತೆಂಡೂಲ್ಕರ್‌ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶೆಫಾಲಿ, “ಥ್ಯಾಂಕ್ಯೂ ಸರ್‌ ನಿಮ್ಮ ಶ್ಲಾಘನೆಯ ಮಾತುಗಳು ಹಾಗೂ ಬೆಂಬಲಕ್ಕೆ! ನನ್ನ ತಂಡಕ್ಕೆ ನನ್ನ ಬೆಸ್ಟ್‌ ಆಟವನ್ನು ನೀಡುತ್ತಲೇ ಇರಲು ಇಚ್ಛಿಸುತ್ತೇನೆ ಸರ್‌.” ಎಂದು ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಮತ್ತೊಬ್ಬ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌, “ವಾಹ್ ಭಾಯ್‌ ಬಾಹ್‌!ಒತ್ತಡಲ್ಲಿ ತಮ್ಮ ಶಾಂತಚಿತ್ತೆ ಕಾಪಾಡಿಕೊಂಡ ಹುಡುಗಿಯರು ನ್ಯೂಝೀಲೆಂಡ್ ತಂಡವನ್ನು ಮಣಿಸಿ ಟಿ-20 ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶೆಫಾಲಿ ವರ್ಮಾ ಒಬ್ಬ ದೊಡ್ಡ ರಾಕ್ ಸ್ಟಾರ್‌. ಹುಡುಗಿಯರ ಪ್ರದರ್ಶನ ಕಂಡು ಆನಂದವಾಗುತ್ತಿದೆ,” ಎಂದಿದ್ದಾರೆ.

ಶೆಫಾಲಿ ಕುರಿತು ಮೆಚ್ಚುಗೆ ಮಾತನ್ನು ಆಡಿದ ಮತ್ತೊಬ್ಬ ಲೆಜೆಂಡರಿ ಆಟಗಾರ ವಿವಿಎಸ್ ಲಕ್ಷ್ಮಣ್‌, “ಪಂದ್ಯದಲ್ಲಿ 132 ರನ್‌ಗಳನ್ನು ಡಿಫೆಂಡ್ ಮಾಡುವಲ್ಲಿ ಬೌಲರ್‌ಗಳು ಅತ್ಯುತ್ತಮ ಆಟವಾಡಿದ್ದಾರೆ. ಶೆಫಾಲಿ ವರ್ಮಾ ಭಾರತದ ಪರವಾಗಿ ಟಾಪ್ ಕ್ಲಾಸ್ ಆಟವಾಡಿದ್ದಾರೆ,” ಎಂದಿದ್ದಾರೆ.

ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಮಾತನಾಡಿ, “ಯೆಸ್‌! ವೆಲ್ ಡನ್, ಶಿಕಾ ಪಾಂಡೆ. ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಮೇಲಿಯಾ ಕರ್‌‌ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯದಂತೆ ನೋಡಿಕೊಂಡರು ಆಕೆ,” ಎಂದಿದ್ದಾರೆ.

ಕಳೆದ 3-4 ವರ್ಷಗಳಿಂದ ಜಾಗತಿಕ ಕೂಟಗಳಲ್ಲಿ ಅತ್ಯುತ್ತಮ ಆಟವಾಡುತ್ತಾ ಬಂದಿರುವ ಮಹಿಳಾ ಕ್ರಿಕೆಟ್‌ಗೆ ಪುರಷರ ಕ್ರಿಕೆಟ್‌ಗಿರುವಷ್ಟು ಹಿಂಬಾಲಕರಿಲ್ಲ ಎಂಬುದೇನೂ ಗೊತ್ತಿರದ ವಿಚಾರವಲ್ಲ. ಇದು ಬರೀ ಕ್ರಿಕೆಟ್‌ನಲ್ಲಿ ಮಾತ್ರವಲ್ಲೇ ಫುಟ್ಬಾಲ್‌ನಲ್ಲೂ ಇರುವ ಟ್ರೆಂಡ್.

ಆದರೂ, ಈ ವಿಶ್ವಕಪ್‌ಅನ್ನೇ ತೆಗೆದುಕೊಂಡರೆ, ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಲೀಗ್ ಪಂದ್ಯದಲ್ಲಿ ಎಷ್ಟು ಚಂದ ಆಡಿರಲ್ಲ ನಮ್ಮ ಮಾನಿನಿಯರು? ಅಲ್ಪ ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಶಿಸ್ತಿನ ಬೌಲಿಂಗ್ ಹಾಗೂ ಅದಕ್ಕೆ ಪೂರಕವಾಗಿ ಚುರುಕಾದ ಫೀಲ್ಡಿಂಗ್ ಮೂಲಕ ವೀಕ್ಷಕರ ಗಮನವನ್ನು ಹಿಡಿದಿಡುವ ಆಟ ಆಡುವಲ್ಲಿ ಮಹಿಳೆಯರು ಸಫಲರಾಗಿದ್ದಾರೆ ಎನ್ನಲಡ್ಡಿಯಿಲ್ಲ.

ಎಳಸು ಎಳಸಾಗಿ ಆಡುವ ರಿಶಭ್ ಪಂತ್‌ನನ್ನೂ ನಾಚಿಸುವಂತೆ ಆಡುತ್ತಿರುವ ಶೆಫಾಲಿ ಆಗಲೀ, ಎದುರಾಳಿ ಬ್ಯಾಟ್ಸ್‌ವುಮೆನ್‌ಅನ್ನು ದಂಗುಬಡಿಸುವಂಥ ಗೂಗ್ಲಿಗಳ ಪ್ರಯೋಗ ಮಾಡುತ್ತಿರುವ ಪೂನಮ್ ಯಾದವ್‌ ಇರಲಿ ಗುಣಮಟ್ಟದ ಆಟವನ್ನು ಅಭಿಮಾನಿಗಳಿಗೆ ಕೊಡಮಾಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಇವರೊಂದಿಗೆ ಸ್ಮೃತಿ ಮಂದನಾ, ಹರ್ಮನ್ ಪ್ರೀತ್‌ ಕೌರ್‌ ಹಾಗೂ ಜೆಮಿಮಾ ರಾಡ್ರಿಗ್ಸ್‌ರಂಥ ಯಂಗ್‌ಸ್ಟರ‍್ಸ್‌‌ ನೆರವಿನಿಂದ ಭಾರತ ತಂಡ ಫೈನಲ್ ತಲುಪಿದಲ್ಲಿ ಅಚ್ಚರಿಯಲ್ಲ. ಈ ಆಟಗಾತಿಯರನ್ನು ದೇಶದ ಜನತೆ ಚೆನ್ನಾಗೇ ಗುರುತಿಸುತ್ತಿದ್ದು, ಅವರ ಆಟಕ್ಕೆ ಮೆಚ್ಚುಗೆಯ ಚಪ್ಪಾಳೆಗಳು ಸಾಕಷ್ಟು ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.

ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ಗಳಂತೆ ಮಹಿಳಾ ಕ್ರಿಕೆಟ್‌ ಸಹ ಫೇಮಸ್ ಆಗಲು ಮಾಡಬಹುದಾದ ಬ್ರಾಂಡಿಂಗ್ ಅನ್ನು ಮಾಡಲು ಕ್ರಿಕೆಟ್‌ ಮಂಡಳಿಗಳು ಮಾಡಲು ಮುಂದೆ ಬರಬೇಕಿದೆ. ಕಳೆದ ದಶಕದಿಂದ ತೀರಾ ಬೋರಿಂಗ್ ಆಗಿಬಿಟ್ಟಿರುವ ಏಕದಿನ ಪಂದ್ಯಗಳಿಗೆ ಮನ್ವಂತರ ನೀಡಲು ಮಾಡುತ್ತಿರುವಂಥ ಪ್ರಯತ್ನವನ್ನು ಮಹಿಳಾ ಕ್ರಿಕೆಟ್‌ಗೂ ನೀಡಬೇಕಾಗಿದೆ.

Tags: BCCI CricketIndian Women's cricket teamWomen's CricketWomen's T20 Worldcupಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡಮಹಿಳಾ ಕ್ರಿಕೆಟ್ಮಹಿಳೆಯರ ಟಿ-20 ವಿಶ್ವಕಪ್‌
Previous Post

ದೆಹಲಿ ಹಿಂಸಾಚಾರದ ಹಿಂದೆ ಇತ್ತೆ ಗುಜರಾತ್ ಮಾದರಿಯ ಬ್ಲೂಪ್ರಿಂಟ್?

Next Post

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

Related Posts

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!
Uncategorized

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

by ಪ್ರತಿಧ್ವನಿ
April 9, 2026
0

Indian Premier League (IPL) ಪಂದ್ಯಗಳ ಅವಧಿ ಹೆಚ್ಚುತ್ತಿರುವ ಹಿನ್ನೆಲೆ, Board of Control for Cricket in India 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು...

Read moreDetails
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

ನಾಳೆ 2ನೇ ಪಿಯುಸಿ ಫಲಿತಾಂಶ ಪ್ರಕಟ: ಆನ್‌ಲೈನ್ ನಲ್ಲಿ ರಿಸಲ್ಟ್ ನೋಡುವುದು ಹೇಗೆ ?

April 8, 2026
ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಉಪಚುನಾವಣೆ ಕದನ ಅಂತಿಮ ಘಟ್ಟಕ್ಕೆ: ದಾವಣಗೆರೆ ದಕ್ಷಿಣ–ಬಾಗಲಕೋಟೆ ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

April 8, 2026
Next Post
ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada