• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

by
February 29, 2020
in ಕರ್ನಾಟಕ
0
ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 
Share on WhatsAppShare on FacebookShare on Telegram

ಹಾವೇರಿಯಲ್ಲಿ ನೆರೆಯಲ್ಲಿ ಕೊಚ್ಚಿ ಹೋಗಿದ್ದ ಬೆಳೆಗಳಿಗೆ ಪರಿಹಾರ ವಿತರಿಸುವ ಸಂದರ್ಭದಲ್ಲಿ ಭಾರೀ ಅವ್ಯವಹಾರ ಎಸಗಿದ್ದ ಅಧಿಕಾರಿಗಳ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ. ನೆರೆಯಿಂದ ನೊಂದ ರೈತರ ಸಂಕಷ್ಟಗಳನ್ನು ಪರಿಹರಿಸಬೇಕಿದ್ದ ಸರ್ಕಾರಿ ಅಧಿಕಾರಿಗಳು, ರೈತರ ನೋವಿನ ಮೇಲೆ ಬರೆ ಎಳೆದಂತೆ, ನೆರೆ ಪರಿಹಾರದ ಹಣವನ್ನು ಲಪಟಾಯಿಸಿದ ಕುರಿತು ಪ್ರತಿಧ್ವನಿ ವಿಸ್ತೃತವಾದ ವರದಿ ದಾಖಲಿಸಿತ್ತು.

ADVERTISEMENT

ಈಗ ಅವ್ಯವಹಾರ ಎಸಗಿರುವ ಆರೋಪದ ಮೇಲೆ ಆರು ಜನ ಗ್ರಾಮ ಲೆಕ್ಕಾಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಈ ಕುರಿತಾಗಿ ಪ್ರತಿಧ್ವನಿಗೆ ಮಾಹಿತಿ ನೀಡಿರುವ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ತಂತ್ರಾಂಶದಲ್ಲಿನ ಲೋಪದೋಷಗಳನ್ನು ಅರಿತು ಬೇಕಾಬಿಟ್ಟಿಯಾಗಿ ಹಣ ವರ್ಗಾವಣೆ ಮಾಡಿರುವವರ ವಿರುದ್ದ ಕ್ರಿಮಿನಲ್‌ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಹಾವೇರಿ ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್‌ ಗ್ರಾಮ ಲೆಕ್ಕಾಧಿಕಾರಿ ಆನಂದ ದೇಸಾಯಿ, ಕರ್ಜಗಿ ಗ್ರಾಮ ಲೆಕ್ಕಾಧಿಕಾರಿ ಎಸ್‌ ಎ ಲಿಂಗದಹಳ್ಳಿ, ಶಿಗ್ಗಾಂವ್‌ ತಾಲೂಕಿನ ಅತ್ತಿಗೆರೆ ಗ್ರಾಮ ಪಂಚಾಯತ್‌ನ ಗ್ರಾಮ ಲೆಕ್ಕಾಧಿಕಾರಿ ಅಕ್ಷಯ್‌ ಪಾಟೀಲ್‌, ಆಂಡಳಗಿ ಗ್ರಾಮ ಲೆಕ್ಕಾಧಿಕಾರಿ ಸಿ ಡಿ ಮಳಲಿ, ಕಬ್ಬನೂರು ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಮ್‌ ಇಂದೂರು ಹಾಗೂ ಬನ್ನೂರು ಗ್ರಾಮ ಲೆಕ್ಕಾಧಿಕಾರಿ ಎಚರೇಶ್‌ ಹಿರೇಸಕ್ರಿಗೌಡ ಅಮಾನತುಗೊಂಡ ಅಧಿಕಾರಿಗಳು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.

ಇನ್ನು ಈ ಅವ್ಯವಹಾರದ ಕುರಿತು ತನಿಖೆಯನ್ನು ಕೈಗೊಳ್ಳಲು ಪ್ರತೀ ತಾಲೂಕಿಗೆ ವಿಚಾರಣಾಧಿಕಾರಿಯನ್ನು ನೇಮಿಸಲಾಗಿದೆ. ಅವರಿಗೆ ಪರಿಹಾರ ವಿತರಿಸುವ ತಂತ್ರಾಂಶದ ಕುರಿತು ತರಭೇತಿಯನ್ನು ನೀಡಲಾಗುತ್ತಿದ್ದು, ಈ ಅವ್ಯವಹಾರದ ಕುರಿತ ಸಮಗ್ರ ತನಿಖೆಯನ್ನು ಅವರು ನಡೆಸಿ ವರದಿ ನೀಡಲಿದ್ದಾರೆ, ಎಂದು ಕೃಷ್ಣ ತಿಳಿಸಿದರು.

“ಉನ್ನತ ಶಿಕ್ಷಣ ಪಡೆದು ಸರ್ಕಾರಿ ಅಧಿಕಾರಿಗಳಾಗಿ ನೇಮಕಗೊಳ್ಳುವವರು, ತಂತ್ರಾಂಶದಲ್ಲಿನ ಲೋಪದೋಷಗಳ ಕುರಿತು ಚೆನ್ನಾಗಿ ಅರಿತಿರುತ್ತಾರೆ. ಅಂಥಹವರಿಂದ ಈ ರೀತಿಯ White Collar Crime ನಡೆದಿದೆ,” ಎಂದು ಕೃಷ್ಣ ಬಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.

ಈ ಅವ್ಯವಹಾರದ ಕುರಿತು ಇನ್ನಷ್ಟು ಮಾಹಿತಿಗಳು ತಿಳಿದು ಬಂದಿದ್ದು, ಭೂಮಿಯ ಮೂಲ ದಾಖಲೆ ಹೊಂದಿರುವ ವ್ಯಕ್ತಿ ಮೃತಪಟ್ಟಲ್ಲಿ, ಅವರ ಮಗ ಅಥವಾ ಮಗಳಿಗೆ ಸೇರಬೇಕಾದ ಹಣವನ್ನು ಕೂಡಾ ಈ ಅಧುಕಾರಿಗಳು ಲಪಟಾಯಿಸಿದ್ದಾರೆ. ಇನ್ನು ಈ ಅವ್ಯವಹಾರದಲ್ಲಿ ಹಲವು ಬ್ರೋಕರ್‌ಗಳು ಕೂಡಾ ಪಾಲು ಹೊಂದಿದ್ದು, ರೈತರ ಹೆಸರಿನಲ್ಲಿ ಹಣ ಪಡೆದು ನಂತರ ಹಣವನ್ನು ತಮ್ಮ ಖಾತೆಗೆ ನೇರವಾಗಿ ವರ್ಗಾಯಿಸಿದ್ದಾರೆ. ಈಗಾಗಲೇ ಲಕ್ಷಗಟ್ಟಲೆ ಹಣವನ್ನು ನುಂಗಿ ನೀರು ಕುಡಿದಿರುವ ಅಧಿಕಾರಿಗಳಿಂದ ಸುಮಾರು 60 ಲಕ್ಷದಷ್ಟು ಹಣವನ್ನು ವಾಪಸು ಪಡೆಯಲಾಗಿದ್ದು, ತಂತ್ರಾಂಶದಲ್ಲಿನ ಅಂಕಿ ಸಂಖ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಲಪಟಾಯಿಸಲಾದ ಮೊತ್ತದ ನಿಖರ ಮಾಹಿತಿ ತಿಳಿಯಲಿದೆ.

ಏನೇ ಆದರೂ, ಬಡ ರೈತರ ಸಂಕಷ್ಟಕ್ಕೆ ಸರ್ಕಾರ ನೀಡಿದ ಹಣವನ್ನು ಈ ರೀತಿ ನುಂಗಿ ನೀರು ಕುಡಿದ ಅಧಿಕಾರಿಗಳಿಗೆ ಕಠಿಣ ಸಜೆಯಾಗಬೇಕು. ಇವರ ಮೇಲೆ ಜರುಗಿಸುವ ಕ್ರಮ ಉಳಿದ ಅಧಿಕಾರಿಗಳಿಗೆ ಒಂದು ಉದಾಹರಣೆಯಾಗಿರಬೇಕು. ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದು ಮಾತ್ರವಲ್ಲದೇ, ರೈತರ ಕಷ್ಟಗಳಿಗೆ ರಾಜಕಾರಣಿಗಳು ನೆರವಾಗಬೇಕಿದೆ.

Tags: DC Krishna BajapaiFlood ComepnsationHaveri DistrictVillage accountantನೆರೆ ಪರಿಹಾರಸರ್ಕಾರಿ ಅಧಿಕಾರಿಹಾವೇರಿ
Previous Post

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

Next Post

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

Related Posts

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್
Top Story

BREAKING NEWS : ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು : ಕಾನೂನು ಹೋರಾಟಕ್ಕೆ ಸಿದ್ದವಾದ ಸಿಎಂ ವಿಜಯ್

by ಪ್ರತಿಧ್ವನಿ
May 25, 2026
0

ಚೆನೈ : ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ನೀರಾವರಿ ಯೋಜನೆಗೆ ತಮಿಳುನಾಡಿನ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಇದರ ವಿರುದ್ಧ ನಿಲುವನ್ನು ಹೊಂದಿದ್ದವು, ಅದರಂತೆ...

Read moreDetails
ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಕೇತ್ರದ ಹಿನ್ನೆಲೆ ಏನು..?

May 25, 2026
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ ಜನರ ಲೂಟಿಗಿಳಿದಿದೆ : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

May 25, 2026
ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

May 25, 2026
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
Next Post
ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada