ಭಾರತದಲ್ಲಿ ಕಾರ್ಯನಿರ್ವಹಿಸುವ ಐಪೋನ್ ಘಟಕಗಳಿಗೆ ಚೀನಾಗೆ ಮರಳುವಂತೆ ಚೀನಾದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆಂದೋಲನವನ್ನು ಶುರುಮಾಡಲಾಗಿದೆ. ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ವಿಸ್ಟ್ರಾನ್ ಮತ್ತು ಬಿಡದಿಯ ಟೊಯೊಟಾ ಕಿಲೋಸ್ಕರ್ನಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಯನ್ನು ಹಿನ್ನೆಲೆಯಲ್ಲಿ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ.
ಕರೋನಾ ಭೀತಿ ಹಿನ್ನಲೆ ಚೀನಾದ ಐಪೋನ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಭಾರತಕ್ಕೆ ಮರುಳುವಂತೆ ಸೂಚನೆ ನೀಡಿದ್ದ ಚೀನಾ ಇದೀಗ ಮತ್ತೊಂದು ಹೊಸತಂತ್ರವನ್ನು ಶುರುಮಾಡಿದೆ. ಕೋಲಾರ ಜಿಲ್ಲೆಯ ನರಸಾಪುರದ ವಿಸ್ಟ್ರಾನ್ ಉತ್ಪಾದನಾ ಘಟಕದಲ್ಲಿ ಉದ್ಯೋಗಿಗಳ ಮೇಲೆ ನಡೆದ ಹಲ್ಲೆಯನ್ನು ಗಮನಿಸಿ ಭಾರತದಲ್ಲಿ ಉದ್ಯೋಗಿಗಳಿಗೆ ಭದ್ರತೆಯಿಲ್ಲ ಜೊತೆಗೆ ಉದ್ಯೋಗಿಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಇದರಿಂದ ಮರಳಿ ಚೀನಾಗೆ ಮರಳುವಂತೆ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೂಡಿಕೆಯ ವಿಷಯದಲ್ಲಿಯೂ ಭಾರತದಲ್ಲಿ ವಿದೇಶಿ ಹೂಡಿಕೆಗೆ ಪೂರಕವಾದ ವಾತಾವರಣವಿಲ್ಲ ಜೊತೆಗೆ ,ಕೈಗಾರಿಕಾ ಘಟಕಗಳಿಗೆ ಬೆಂಕಿ ಹಚ್ಚಿ ನಾಶಪಡಿಸುವ ಪ್ರವೃತ್ತಿ ನಮ್ಮಲಿ ಇಲ್ಲವೇ ಇಲ್ಲ, ಆಪಲ್ ತನ್ನ ಐಪೋನ್ ತಯಾರಿಕಾ ಪ್ರಮುಖ ಘಟಕಗಳನ್ನು ಚೀನಾದಲ್ಲಿಯೇ ಸ್ಥಾಪಿಸಬೇಕು. ಇಲ್ಲಿ ಹೂಡಿಕೆ ಮಾಡುವುದರಿಂದ ಭದ್ರತೆ ಹೆಚ್ಚಿರುತ್ತದೆ ಎಂದು ಚೀನಾದ ಸಾಮಾಜಿಕ ಜಾಲತಾಣವಾದ ಸಿನಾ ವೈಬೊ ದಲ್ಲಿ ಇಲ್ಫಿ ಎಂಬುವವರು ಹೇಳಿಕೆ ನೀಡಿದ್ದಾರೆ.
ಗ್ಲೋಬಲ್ ಟೈಮ್ಸ್ ಪತ್ರಿಕೆ ಈ ಕುರಿತು ಸತತ ಲೇಖನಗಳನ್ನು ಪ್ರಕಟಿಸುತ್ತಿದ್ದು, ಕರೋನಾ ಸೋಂಕು ಹಾಗೂ ಕಾರ್ಮಿಕ ವಲಯದಲ್ಲಿನ ಹಿಂಸಾಚಾರ ಉತ್ಪಾದಕತೆ ಸಾಮರ್ಥ್ಯದಲ್ಲಿ ಕುಸಿತ ಕಂಡು ಭಾರತದಲಿ ಸಂಸ್ಥೆಯ ಬೆಳವಣಿಗೆ ಕಷ್ಟ ಸಾಧ್ಯ, ಇದೊಂದು ಕಂಪನಿಯಲ್ಲದೆ ಬೇರೇ ಕೈಗಾರಿಕಾ ಘಟಕಗಳು ಚೀನಾಕೆ ಮರಳಲಿವೆ ಎಂದು ತಜ್ಷರು ಅಭಿಪ್ರಾಯಪಟ್ಟಿದ್ದಾರೆ. ಬೀಜಿಂಗ್ನ ಮತ್ತೊಬ್ಬ ವಿಶ್ಲೇಷಕ ಲಿಯು ಡಿಂಗ್ಡಿಂಗ್ ಪ್ರಕಾರ ಭಾರತದಲ್ಲಿ ಉದ್ಯೋಗಿಗಳಿಗೆ ಸಂಬಳವೂ ಕಡಿಮೆಯಿದೆ, ಉತ್ಪಾದನಾ ಸಾಮರ್ಥ್ಯ ಗುಣಮಟ್ಟ ಕೆಳಮಟ್ಟದ್ದಾಗಿದೆ ಎಂದಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಒಟ್ಟಿನಲ್ಲಿ ದಿನೇ ದಿನೇ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿದ್ದು, ಮೂವ್ ಟು ಚೀನಾ..ಚೀನಾ ವೆಲ್ ಕಮ್ಸ್ ಯೂ ಎಂದು ನೆಟ್ಟಿಗರು ಬರಮಾಡಿ ಕೊಳ್ಳುವುದಕ್ಕೆ ಕಾತುರರಾಗಿದ್ದಾರೆ. ಆಂದೋಲನದ ಮೂಲಕ ಚೀನಾ ಭಾರತದ ಮೇಲೆ ಮತ್ತೊಮ್ಮೆ ಸೇಡುತೀರಿಸಿ ಕೊಳ್ಳಲು ಮುಂದಾಗಿದೆ.