Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೃಹತ್‌ ಮೋಸ ಬಯಲು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್‌ ಮೋಸ ಬಯಲು
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಬೃಹತ್‌ ಮೋಸ ಬಯಲು

February 17, 2020
Share on FacebookShare on Twitter

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಸುಮಾರು 4.15ಕೋಟಿಯಷ್ಟು ಅವ್ಯವಹಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಾಗಿ FIR ದಾಖಲಾದ ಒಂದು ವಾರದೊಳಗೆ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಫೋರ್ಸ್‌ (BMTF) ಅಧಿಕಾರಿಗಳು ಬಂಧಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ನೆರೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ : ಎಂ.ಬಿ.ಪಾಟೀಲ್

ಚಾಲೆಂಜಿಂಗ್‌ ಸ್ಟಾರ್‌ ವಿರುದ್ದ ಸಮರ ಸಾರಿದ ಅಪ್ಪು ಫ್ಯಾನ್ಸ್

ಜನ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಇಚ್ಛಿಸಿದ್ದಾರೆ : ಡಿ.ಕೆ.ಶಿವಕುಮಾರ್‌

ಈ ಅವ್ಯವಹಾರವನ್ನು ಕಂಡುಹಿಡಿದ BBMPಯ ಮುಖ್ಯ ಲೆಕ್ಕಾಧಿಕಾರಿಯಾದ ಡಾ. ಗೋವಿಂದರಾಜು ಅವರು ಫೆಬ್ರುವರಿ 12, 2020ರಂದು ಈ ಕುರಿತಾಗಿ ದೂರು ದಾಖಲಿಸಿದ್ದರು. ತಮ್ಮ ಕಚೇರಿಯಲ್ಲಿ ಲೆಕ್ಕಾಧಿಕಾರಿಗಳಾಗಿರುವ ಕಾರ್ಯ ನಿರ್ವಹಿಸುತ್ತಿರುವ ರಾಮಮೂರ್ತಿ ಆರ್‌ ಮತ್ತು ಅನಿತಾ, ಎರಡನೇ ದರ್ಜೆ ಗುಮಾಸ್ತ ರಾಘವೇಂದ್ರ ಹಾಗೂ HDFC ಮತ್ತು ಜನತಾ ಸೇವಾ ಕೋ-ಆಪರೇಟಿವ್‌ ಬ್ಯಾಂಕ್‌ ನ ಮ್ಯಾನೇಜರ್‌ಗಳ ಮೇಲೆ ದೂರು ಸಲ್ಲಿಸಿದ್ದರು.

ಈ ಐವರ ಮೇಲೆ ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಕಾಮಗಾರಿಯ ಬಿಲ್ಲುಗಳ ಪಾವತಿಯಲ್ಲಿ ಅಕ್ರಮವೆಸಗಿ ಪಾಳಿಕೆಗೆ ನಷ್ಟ ಉಂಟು ಮಾಡಿರುವ ಆರೋಪವನ್ನು ದಾಖಲಿಸಲಾಗಿತ್ತು. ಅಷ್ಟಕ್ಕೂ ಈ ಐವರು ಸೇರಿ ಮಾಡಿದ್ದೇನೆಂದರೆ, ಆನ್ಲೈನ್‌ ಮೂಲಕ ಹಣ ಪಾವತಿ ಮಾಡುವ ಉದ್ದೇಶದಿಂದ ತೆರೆಯಲಾಗಿರುವ IFMS ತಂತ್ರಾಂಶದಲ್ಲಿ ಅಪ್‌ಲೋಡ್‌ ಆಗಿದ್ದ Cancelled Cheque ಅನ್ನು ತಿದ್ದಿ, ತಮಗೆ ಬೇಕಾಗಿರುವ ರೀತಿಯಲ್ಲಿ ಬದಲಾಯಿಸಿಕೊಂಡಿದ್ದಾರೆ ಹಾಗೂ ಗುತ್ತಿಗೆದಾರನ ಖಾತೆಯ ಬದಲಿಗೆ ಬೇರೆಯವರ ಖಾತೆಗೆ ಹಣ ವರ್ಗಾಯಿಸಿದ್ದಾರೆ. IFMS ತಂತ್ರಾಂಶದಲ್ಲಿ ಈ ತಿದ್ದುಪಡಿಯನ್ನು ಗಮನಿಸಿದ ಗೊವಿಂದರಾಜು ಅವರು ತಕ್ಷಣವೇ ಈ ಕುರಿತಾಗಿ ದೂರನ್ನು ಸಲ್ಲಿಸಿದ್ದಾರೆ. ಯಾರ ಖಾತೆಗೆ ಹಣ ಜಮಾ ಆಗಿದೆಯೋ, ಅವರು ಖಾತೆಯಿಂದ ಹಣವನ್ನು withdraw ಮಾಡಿರುವುದಾಗಿ ಬ್ಯಾಂಕಿನ ಸಿಬ್ಬಂದಿ ಧೃಡಪಡಿಸಿದ್ದಾರೆ.

ಈ ಅವ್ಯವಹಾರದ ಕುರಿತು ದೂರು ದಾಖಲಾಗುತ್ತಿದ್ದಂತೆ ವಿಚಾರಣೆ ಆರಂಭಿಸಿದ BMTF ಅಧಿಕಾರಿಗಳು, ಒಂದೇ ವಾರದೊಳಗೆ ರಾಮಮೂರ್ತಿ, ಅನಿತಾ, ನಾಗೇಶ್‌ ಹಾಗೂ ಗಂಗಾಧರ್‌ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಈಗಾಗಲೇ 3.86 ಕೋಟಿ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನು 29 ಲಕ್ಷ ರೂಪಾಯಿ ಕುರಿತು ತನಿಖೆ ನಡೆಸಲಾಗುತ್ತಿದೆ. ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಇನ್ನೋರ್ವ ವ್ಯಕ್ತಿ ರಾಘವೇಂದ್ರ ತಲೆಮರೆಸಿಕೊಂಡಿದ್ದು ಅವರನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದು, BMTF ಮುಖ್ಯ ಅಧೀಕ್ಷಕರಾದ ಓಬಳೇಶ್‌ ತಿಳಿಸಿದ್ದಾರೆ.

RS 500
RS 1500

SCAN HERE

don't miss it !

ಧಾರವಾಹಿ ಶೂಟಿಂಗ್‌ ವೇಳೆ ಕಿರುತೆರೆ ನಟ ಚಂದನ್‌ ಮೇಲೆ ಹಲ್ಲೆ
ಸಿನಿಮಾ

ಧಾರವಾಹಿ ಶೂಟಿಂಗ್‌ ವೇಳೆ ಕಿರುತೆರೆ ನಟ ಚಂದನ್‌ ಮೇಲೆ ಹಲ್ಲೆ

by ಪ್ರತಿಧ್ವನಿ
August 1, 2022
ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ ವಂಚಿಸಿದ ರಾಜ್ಯ ಸಚಿವರ ಮಾಜಿ ಸಿಬ್ಬಂದಿ!
ಕರ್ನಾಟಕ

ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ ವಂಚಿಸಿದ ರಾಜ್ಯ ಸಚಿವರ ಮಾಜಿ ಸಿಬ್ಬಂದಿ!

by ಪ್ರತಿಧ್ವನಿ
August 4, 2022
ಏಷ್ಯಾಕಪ್ ಹಾಕಿ: ಭಾರತ-ಪಾಕಿಸ್ತಾನ 1-1 ರೋಚಕ ಡ್ರಾ
ಕ್ರೀಡೆ

ಕಾಮನ್ ವೆಲ್ತ್ ಫೈನಲ್ ಗೆ ಭಾರತ ಪುರುಷ ಹಾಕಿ ತಂಡ ಲಗ್ಗೆ!

by ಪ್ರತಿಧ್ವನಿ
August 5, 2022
ದೇಶದಲ್ಲಿ ಕೋವಿಡ್ -19 ಹೆಚ್ಚಳ : ಪರೀಕ್ಷೆ & ಲಸಿಕೆ ಹೆಚ್ಚಿಸಲು ಕರ್ನಾಟಕ ಸೇರಿ 7 ರಾಜ್ಯಗಳಿಗೆ ಕೇಂದ್ರ ಸೂಚನೆ!
ದೇಶ

ದೇಶದಲ್ಲಿ ಕೋವಿಡ್ -19 ಹೆಚ್ಚಳ : ಪರೀಕ್ಷೆ & ಲಸಿಕೆ ಹೆಚ್ಚಿಸಲು ಕರ್ನಾಟಕ ಸೇರಿ 7 ರಾಜ್ಯಗಳಿಗೆ ಕೇಂದ್ರ ಸೂಚನೆ!

by ಪ್ರತಿಧ್ವನಿ
August 6, 2022
ಮೆಟ್ರೋ ಸಂಚಾರದಲ್ಲಿ ಭಾರೀ ಬದಲಾವಣೆ: 15 ನಿಮಷಕ್ಕೊಂದು ರೈಲು!
ಕರ್ನಾಟಕ

ಮೆಟ್ರೋ ಸಂಚಾರದಲ್ಲಿ ಭಾರೀ ಬದಲಾವಣೆ: 15 ನಿಮಷಕ್ಕೊಂದು ರೈಲು!

by ಪ್ರತಿಧ್ವನಿ
August 6, 2022
Next Post
ಭಾರತಕ್ಕೆ ಕಾಶ್ಮೀರ ವಿವಾದ ಯಾವಾಗಲೂ ಜೀವಂತವಾಗಿಯೇ ಇರಬೇಕಾ?

ಭಾರತಕ್ಕೆ ಕಾಶ್ಮೀರ ವಿವಾದ ಯಾವಾಗಲೂ ಜೀವಂತವಾಗಿಯೇ ಇರಬೇಕಾ?

ಬಿಜೆಪಿಯಲ್ಲಿ ಮಧ್ಯರಾತ್ರಿ ಬುಗಿಲೆದ್ದ ಬಂಡಾಯ?!

ಬಿಜೆಪಿಯಲ್ಲಿ ಮಧ್ಯರಾತ್ರಿ ಬುಗಿಲೆದ್ದ ಬಂಡಾಯ?!

ಏನಿದು ಕಲಂ 370? ಇದರ ಹಿನ್ನೆಲೆ

ಏನಿದು ಕಲಂ 370? ಇದರ ಹಿನ್ನೆಲೆ, ಇತಿಹಾಸವೇನು? ಭವಿಷ್ಯದ ಮೇಲಾಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist