ಈ ಹಿಂದೆ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿದ್ದಾಗ ಮಂಡಿಸಿದ ಬಜೆಟ್ ನಲ್ಲಿ ಎಲೆಕ್ಟೋರಲ್ ಬಾಂಡ್ ಪರಿಕಲ್ಪನೆಯನ್ನು ತಂದಿದ್ದರು. ಪೊಲಿಟಿಕಲ್ ಫಂಡಿಂಗ್‌ನಲ್ಲಿ ಪಾರದರ್ಶಕತೆ ಬರಬೇಕು, ಇದು ಸಕ್ರಮವಾಗಿರಬೇಕು ಎಂಬ ಕಾರಣದಿಂದ ಈ ಎಲೆಕ್ಟೋರಲ್ ಬಾಂಡ್ ತರುತ್ತಿರುವುದಾಗಿ ತಿಳಿಸಿದ್ದರು. ಈ ನೀತಿಯನ್ನು 2018 ರೊಳಗೆ ತರಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ, ಈ ಬಿಜೆಪಿ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕಿಗೆ ಇದ್ದಕ್ಕಿದ್ದಂತೆ ಒಂದು ಇಮೇಲ್ ಕಳುಹಿಸಿದ “ನಾಳೆ ಎಲೆಕ್ಟ್ರೋರಲ್ ಬಾಂಡ್ ಜಾರಿಗೆ ತರಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕು ಕಾಯ್ದೆಗಳಲ್ಲಿ ತಿದ್ದುಪಡಿ ತರಬೇಕು” ಎಂದು. ಇದರಲ್ಲಿ ಒಂದು ರಿಸರ್ವ್ ಬ್ಯಾಂಕ್ ಗೆ ಸಂಬಂಧಿಸಿದ್ದಾಗಿದೆ. ಆದರೆ, ತರಾತುರಿಯಲ್ಲಿ ಕೇಂದ್ರ ಸರ್ಕಾರ ತಿದ್ದುಪಡಿ ತರುವುದನ್ನು ವಿರೋಧಿಸಿದ್ದ ಆರ್‌ಬಿಐ ಇದು ಸಾಧ್ಯವಿಲ್ಲ. ನೀವು ಬಾಂಡ್ ಅನ್ನು ಸ್ಟೇಟ್ ಬ್ಯಾಂಕ್‌ಗೆ ಕೊಡುತ್ತಿದ್ದೀರಿ. ಇದರಲ್ಲಿ ದೇಣಿಗೆಯನ್ನು ಯಾರು ಕೊಡುತ್ತಿದ್ದಾರೆ ಎನ್ನುವುದನ್ನು ಗೌಪ್ಯತೆ ಮಾಡುತ್ತಿದ್ದೀರಿ, ಇವೆಲ್ಲವೂ ನಿಮ್ಮ ಉದ್ದೇಶಕ್ಕೆ ತದ್ವಿರುದ್ಧವಾಗಿದೆ” ಎಂದು ಹೇಳುತ್ತದೆ ಆರ್ ಬಿಐ.
ಕೇಂದ್ರ ಸರ್ಕಾರವು ಇದನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಮುಖಾಂತರ ತರುವುದಕ್ಕೆ ಮುಂದಾಗುತ್ತದೆ. ಆಗ ಕೇವಲ 15 ದಿನಕ್ಕೆ ಮಾತ್ರ ಅನುಮೋದನೆ ಕೊಟ್ಟಿರುತ್ತದೆ. ಆಗ ಹಣ ಸರಿಯಾಗಿ ಬಾರದ ಕಾರಣ, ಮತ್ತೆ 10 ದಿನ ಹೆಚ್ಚು ತೆಗೆದುಕೊಳ್ಳುತ್ತದೆ. ಆಗ ಈ ಪ್ರಕ್ರಿಯೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಸ್ಪಷ್ಟವಾಗಿ ಹೇಳಿದ್ದರೂ ಸಹ ಅರುಣ್ ಜೇಟ್ಲಿ ಅವರು ಮಾಡಲೇಬೇಕೆಂದು ಪಟ್ಟು ಹಿಡಿಯುತ್ತಾರೆ. ನಂತರ ಚುನಾವಣೆ ಆಯೋಗವೂ ಸಹ ಇದು ಪಾರದರ್ಶಕವಾದುದಲ್ಲ. ಇದೊಂದು ರಹಸ್ಯವಾದ ಕಾರ್ಯಸೂಚಿಯಾಗಿದೆ ಎಂದು ತನ್ನ ಪ್ರತಿಕ್ರಿಯೆ ನೀಡಿತ್ತು. ಆದರೆ, ಬಿಜೆಪಿಯವರ ತಲೆಯಲ್ಲಿ ಇದ್ದದ್ದು ಒಂದೇ. ಹೇಗಾದರೂ ಮಾಡಿ ಇದನ್ನು ಜಾರಿಗೆ ತರಬೇಕೆಂದು. ಆ ಕಾರ್ಯವನ್ನೂ ಮಾಡಿತು. ಆದರೆ, ನಾವು ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದಾಗ 6000 ಕೋಟಿ ಹಣದಷ್ಟು ಇವರ ಹಗರಣವಿತ್ತು.
ಇದನ್ನು ಒಬ್ಬ ವ್ಯಕ್ತಿ, ಬಿಸಿನೆಸ್ ಸ್ಟಾಂಡರ್ಡ್, ಸೆಂಟರ್ ಆಫ್ ಸೈನ್ಸ್ ಎನ್ವೈರ್‌ಮೆಂಟ್‌ನಲ್ಲಿ ಕೆಲಸ ಮಾಡಿದ ನಿತೀನ್ ಸೇಠಿ ಅವರು ಆರು ತನಿಖೆ ನಡೆಸಿ, ಇವರ ಉದ್ದೇಶವೇನು? ಇದರ ಕಾರ್ಯವಿಧಾನ ಹೇಗಿದೆ? ಯಾವ ಕೆಲಸಗಳನ್ನು ಮಾಡಿದ್ದಾರೆ, ಎಲ್ಲವನ್ನೂ ಗಂಭೀರವಾಗಿ ಹೊರಗೆ ತಂದಿದ್ದಾರೆ. ಇದೊಂದು ದೊಡ್ಡ ಹಗರಣ. ನನ್ನ ಅಭಿಪ್ರಾಯದಲ್ಲಿ ಪಾರ್ಲಿಮೆಂಟ್‌ನಲ್ಲಿ ವಿಪಕ್ಷದವರು ಆಗ ಇದರ ವಿರುದ್ಧ ದನಿ ಎತ್ತಬೇಕಾಗಿತ್ತು. ಈ ಹಗರಣದ ವಿರುದ್ಧ ಮಾತನಾಡುವುದರಲ್ಲಿ ವಿಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ. ನಂತರ ಈ ವಿಷಯ ಕುರಿತಾಗಿ ಸುಪ್ರೀಂ ಮೆಟ್ಟಿಲೇರಿದರು, ಸುಪ್ರೀಂ ಕೋರ್ಟ್ ಅದನ್ನು ನೋಡಿದ ಕೂಡಲೆ ವಿಚಾರಣೆ ನಡೆಸಬೇಕಿತ್ತು. ಏಕೆಂದರೆ, ಇನ್ನೊಂದು ಕಾಯ್ದೆಯನ್ನು ತಿದ್ದುಪಡಿ ಮಾಡಿದರೆ, ಐಫ್‌ಸಿಆರ್‌ಎ ಕಾಯ್ದೆ ಇದನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಈ ಕುರಿತು ದೆಹಲಿ ಹೈಕೋರ್ಟ್ ಕೂಡ ಕಾಂಗ್ರೆಸ್ ಮತ್ತು ಬಿಜೆಪಿಯ ಹೇಳಿಕೆಯಲ್ಲಿ ಗಿಲ್ಟ್ ಇದೆ ಎಂದು ಆದೇಶ ನೀಡಿತ್ತು. ನಂತರ ಈ ಎರಡೂ ಪಕ್ಷಗಳು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಹಾಕುತ್ತವೆಯಾದರೂ ನ್ಯಾಯಪೀಠ ಆ ಅರ್ಜಿಯನ್ನು ತಿರಸ್ಕರಿಸುತ್ತದೆ.
ಈಗ ನೋಟ್ ಮೇಲೆ ಯುನಿಕ್ ನಂಬರ್ ಇರುತ್ತದೆ, ಅಂತೆಯೇ ಬಾಂಡ್ ನೀಡುವವರಿಗೂ ನಂಬರ್ ಇರುತ್ತದೆ. ಹಾಗಾಗಿ ಇದನ್ನು ಟ್ರ್ಯಾಕ್ ಮಾಡಬಹುದು. ಇದರ ಲಾಭ ಎಲ್ಲಿಗೆ ಹೋಗುತ್ತದೆ ಎಂದರೆ. ಅಧಿಕಾರದಲ್ಲಿ ಯಾರು ಇರುತ್ತಾರೋ ಅವರಿಗೆ ಹೋಗುತ್ತದೆ. ಆರಂಭದಲ್ಲಿ ಬಂದ ಶೇಕಡಾ 95 ರಷ್ಟು ದೇಣಿಗೆಗಳೆಲ್ಲಾ ಬಿಜೆಪಿಗೆ ಹೋಗಿದೆ. ಅಂದರೆ ಇದೊಂದು ಅಧಿಕಾರದಲ್ಲಿದ್ದ ಪಕ್ಷದ ಸ್ವಾರ್ಥಕ್ಕಾಗಿ, ಅವರ ಹಿತಕ್ಕಾಗಿ ಮಾಡಿದಂತಹ ದುರುದ್ದೇಶಪೂರಿತ ಅತಿ ದೊಡ್ಡ ಯೋಜನೆಯಾಗಿದೆ. ಇಂತಹ ಒಂದು ಗಂಭೀರವಾದ ಹಗರಣವಾಗಿದೆ. 31 ಮೇ 2018 ಒಳಗೆ ಚುನಾವಣಾ ಆಯೋಗಕ್ಕೆ ಬಾಂಡ್ ಮಾಹಿತಿ ಕೊಡಬೇಕು ಎಂದು ಆಯೋಗ ಹೇಳಿತ್ತು. ಅದರಲ್ಲಿ ಮೂರರಿಂದ ನಾಲ್ಕು ಮಾಹಿತಿಗಳನ್ನಷ್ಟೇ ಕೊಟ್ಟಿರಬಹುದು. ಅಲ್ಲದೆ, ಇದರಲ್ಲಿ ದೊಡ್ಡ ದೊಡ್ಡ ಪಕ್ಷಗಳೇ ಮಾಹಿತಿ ಕೊಟ್ಟಿಲ್ಲ. ಇದೆಲ್ಲಾ ಮುಂದೆ ಏನಾಯಿತು, ಹೇಗಾಯಿತು ಎನ್ನುವುದನ್ನು ಸುಪ್ರೀ ಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳಬೇಕು.
ಎಲೆಕ್ಟ್ರೋರಲ್ ಬಾಂಡ್ ಲಾಭ ನಮ್ಮದಾಗಬೇಕು ಎಂಬುದು ಬಿಜೆಪಿಯ ಹಿಡನ್ ಅಜೆಂಡಾ. ಇದನ್ನು ನಾವೆಲ್ಲಾ ಗಂಭೀರವಾಗಿ ಯೋಚನೆ ಮಾಡಬೇಕು. ನನ್ನ ಅಭಿಪ್ರಾಯದಲ್ಲಿ ಬಹಳ ದೇಶದ ಪರಿಸ್ಥಿತಿ ಗಂಭೀರವಾಗಿದೆ. ತುರ್ತು ಪರಿಸ್ಥಿತಿಗಿಂತಲೂ ಶೇಕಡಾ 20ರಷ್ಟು ಗಂಭೀರವಾಗಿದೆ. ಇದಕ್ಕೆ ಎಲೆಕ್ಟ್ರೋರಲ್ ಬಾಂಡ್ ಹಗರಣ ಸ್ಪಷ್ಟವಾಗಿದೆ. ಈಗಿನ ರಾಜಕಾರಣದಲ್ಲಿ ಹಣದ ಪ್ರಾಬಲ್ಯ ಹೆಚ್ಚುತ್ತಿದೆ. ಕ್ರಿಮಿನಾಲಿಟಿ ಮಾಡುತ್ತಿದೆ. ಇವರು ಒಂದು ಹೆಜ್ಜೆ ಮುಂದೆ ಹೋಗಿ ಎಲೆಕ್ಟ್ರೋರಲ್ ಬಾಂಡ್ ನಲ್ಲಿ ಕಾನೂನು ಬಾಹಿರವಾಗಿರುವುದನ್ನು ಅನುಷ್ಠಾನ ಮಾಡಲು ಮುಂದಾಗಿದ್ದಾರೆ.
ನಾನು 1984ರಲ್ಲಿ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವೈರ್ಮೆಂಟ್ ಪುಸ್ತಕದಲ್ಲಿ Fight for survival ಎಂಬ ಲೇಖನ ಬರೆದಿದ್ದೇನೆ. ಎಂದೂ ನಾವು ಕಾನೂನು ಹೋರಾಟದಿಂದ ಸಮಾಜವನ್ನು ಬದಲು ಮಾಡಲಾಗುವುದಿಲ್ಲ. ನಾವು ಸಮಾಜವನ್ನು ಬದಲು ಮಾಡುವುದಕ್ಕೆ ಮುಂದಾದರೆ ಅದು ನಿಲ್ಲುವುದು ರಾಜಕೀಯ ಹೋರಾಟದಿಂದ. ಹಾಗೆಂದ ಮಾತ್ರಕ್ಕೆ ಕಾನೂನು ಹೋರಾಟ ಬೇಡವೆಂದೇನಿಲ್ಲ. ಅವಶ್ಯವಾಗಿ ಕಾನೂನು ಹೋರಾಟ ಆಗಬೇಕು. ಈಗ ನೋಡಿ ಅಯೋಧ್ಯೆಯ ವಿಚಾರ ಕುರಿತು, ಯಾರು ಕ್ರಿಮಿನಲ್ಸ್, ಯಾರು ಜೈಲಿನಲ್ಲಿ ಇರಬೇಕೋ, ಅಂತಹವರಿಗೆ ಸುಪ್ರೀಂ ಕೋರ್ಟ್ ಇವತ್ತು ಭೂಮಿ ಕೊಡುತ್ತದೆ ಎಂದರೆ ಇದರೊಳಗೆ ನ್ಯಾಯ ಇದೆಯೋ? ಇಲ್ಲವೋ? ಅಥವಾ ಇದರಲ್ಲಿ ಏನೂ ಇಲ್ಲ ಎಂದೆನಿಸುತ್ತದೆ. ನನ್ನ ಅಭಿಪ್ರಾಯದಲ್ಲಿ ಇದಕ್ಕೆ ಜನಾಂದೋಲನ ಮುಖ್ಯ ಹಾಗೂ ಸಮಗ್ರ ಹೋರಾಟ ಅವಶ್ಯ. ಕೇವಲ ಕೋರ್ಟ್ ಹೋರಾಟ ಎಂದರೆ ಸಾಧ್ಯವಾಗದು.
ಈ ಎಲೆಕ್ಟೋರಲ್ ಬಾಂಡ್ ಯೋಜನೆಯಲ್ಲಿ ಬಿಜೆಪಿಯವರ ದುರುದ್ದೇಶ ಎದ್ದು ಕಾಣುತ್ತದೆ. ಕಾರ್ಪೊರೇಟ್ ಸಂಸ್ಥೆಗಳಿಂದ ಬರುವ ಹಣವೆಲ್ಲಾ ತನ್ನ ಬೊಕ್ಕಸ ತುಂಬಬೇಕು ಎಂಬ ಏಕೈಕ ದುರುದ್ದೇಶದಿಂದಲೇ ಬಿಜೆಪಿ ಇದನ್ನು ಜಾರಿಗೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ದುರುದ್ದೇಶಪೂರಿತ ಯೋಜನೆಗಳ ವಿರುದ್ಧ ಜನತೆ ಧ್ವನಿ ಎತ್ತಬೇಕು.