ದೇಶದಲ್ಲಿ ಟೆಲಿಕಾಂ ಕ್ರಾಂತಿಯ ಫಲ ಕೊಡತೊಡಗಿದ್ದರೆ, ಸರಕಾರಿ ಸ್ವಾಮ್ಯದ ಎರಡು ಟೆಲಿಕಾಂ ಕಂಪೆನಿಗಳು ಕಾರ್ಮಿಕರ ಸಂಬಳ ಪಾವತಿಸಲು ಪರದಾಡುತ್ತಿವೆ. ಟೆಲಿಕಾಂ ಸೇವೆ ನೀಡುವ ಭಾರತೀಯ ಸಂಚಾರ ನಿಗಮ (ಬಿಎಸ್
ಎನ್
ಎಲ್) ಮತ್ತು ಮುಂಬಯಿಯ ಮಹಾನಗರ ಸಂಚಾರ ನಿಗಮ (ಎಂಟಿಎನ್
ಎಲ್) ಎಂಬ ಎರಡು ಬೃಹತ್ ಕಂಪನಿಗಳು ಮುಚ್ಚುವುದು ಬಹುತೇಕ ಖಾತ್ರಿ ಆಗಿದೆ.
2000 ಇಸವಿಯಲ್ಲಿ ಸ್ಥಾಪನೆಯಾಗಿ ನವರತ್ನ ಕಂಪೆನಿ ಎಂಬ ಹೆಗ್ಗಳಿಕೆ ಪಡೆದಿದ್ದ ಬಿಎಸ್ಎನ್ಎಲ್ ಕಳೆದ ಹತ್ತು ವರ್ಷಗಳಿಂದ ನಷ್ಟದಲ್ಲೇ ಇದೆ. ಕಂಪೆನಿಯ ಒಟ್ಟು ನಷ್ಟ 90,000 ಕೋಟಿ ರೂಪಾಯಿ. ಟೆಲಿಕಾಂ ಸೇವೆ ನೀಡುವ ಏಕಸ್ವಾಮ್ಯ ಹೊಂದಿದ್ದ ಇವೆರೆಡೂ ಕಂಪೆನಿಗಳು ಖಾಸಗಿ ಕಂಪೆನಿಗಳ ಪ್ರವೇಶದ ಹೊರತಾಗಿಯೂ ತಮ್ಮ ಕಾರ್ಯಕ್ಷಮತೆಯ ಕೊರತೆ, ಭ್ರಷ್ಟಚಾರ ಮತ್ತು ಮಿತಿ ಮೀರಿದ ಉದ್ಯೋಗಿಗಳ ಭಾರದಿಂದಾಗಿ ಇಂದು ಸಂಪೂರ್ಣ ನೆಲಕಚ್ಚಿದೆ. ಆಡಳಿತಾರೂಢ ಪಕ್ಷಗಳು ತಮ್ಮ ನೆಚ್ಚಿನ ಖಾಸಗಿ ಕಂಪೆನಿಗಳಿಗೆ ಲಾಭ ಆಗಲಿ ಎಂದು ಸರಕಾರಿ ಟೆಲಿಕಾಂ ಕಂಪೆನಿಗಳ ಕಾರ್ಯಕ್ಷಮತೆ ಹೆಚ್ಚಿಸುವ, ಗುಣಮಟ್ಟವನ್ನು ಸುಧಾರಿಸುವ ಕೆಲಸಕ್ಕೆ ಕೈ ಹಾಕಲೇ ಇಲ್ಲ.
ಈ ಶತಮಾನದ ಆರಂಭದೊಂದಿಗೆ ಭಾರತದ ದೂರವಾಣಿ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿದ್ದ ಇವೆರಡು ಸರಾಕಾರಿ ಟೆಲಿಕಾಂ ಕಂಪೆನಿಗಳು ಬಾಗಿಲು ಹಾಕಲಿವೆ ಎಂಬುವುದು ನಂಬಲಾಗದ ವಿಚಾರ. ನಷ್ಟದಲ್ಲಿ ಇರುವ ಸಂಸ್ಥೆಗಳ ಪುನರುಜ್ಜೀವನಕ್ಕೆ 74,000 ಕೋಟಿ ರೂಪಾಯಿ ಬೇಡಿಕೆಯನ್ನು ಕೇಂದ್ರ ಹಣಕಾಸು ಸಚಿವಾಲಯ ತಿರಸ್ಕರಿಸಿದೆ. ಇವೆರಡು ಕಂಪೆನಿಗಳನ್ನು ಮುಚ್ಚುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದೆ. ಎರಡೂ ಕಂಪೆನಿಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಅಂದರೆ ಒಟ್ಟು ಎರಡು ಲಕ್ಷ ಉದ್ಯೋಗಿಗಳು ಇದ್ದಾರೆ.
ಬಿಎಸ್
ಎನ್
ಎಲ್ ನಷ್ಟದಲ್ಲಿದ್ದರೂ ಸಾಲದ ಮೊತ್ತ ಕೇವಲ 15,000 ಕೋಟಿ ರೂಪಾಯಿ ಮಾತ್ರ. ಇತರ ಖಾಸಗಿ ಟೆಲಿಕಾಂ ಕಂಪೆನಿಗಳು ಬೃಹತ್ ಪ್ರಮಾಣದ ಸಾಲ ಮಾಡಿಕೊಂಡಿವೆ. ಸುನಿಲ್ ಮಿತ್ತಲ್ ಮಾಲಕತ್ವದ ಭಾರತಿ ಏರ್ ಟೆಲ್ ಟೆಲಿಕಾಂ ಕಂಪೆನಿ ಸಾಲದ ಮೊತ್ತ 1.10 ಲಕ್ಷ ಕೋಟಿ ರೂಪಾಯಿ. ಬಿಎಸ್
ಎನ್
ಎಲ್ ದೇಶದಾದ್ಯಂತ 50,000 ಕೋಟಿ ಸ್ಥಿರಾಸ್ಥಿ ಹೊಂದಿದ್ದು, ತನ್ನ ಓಪ್ಟಿಕಲ್ ಫೈಬರ್ ಕೇಬಲ್ ಲೀಸಿಗೆ ನೀಡಿದರೂ ಕೂಡ 50 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಬಹುದು. ಮಾತ್ರವಲ್ಲದೆ, ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ ವಿಆರ್ ಎಸ್ ನೀಡಿದರೆ ವಾರ್ಷಿಕ ಖರ್ಚು ವೆಚ್ಚ ಕಡಿಮೆ ಮಾಡಬಹುದು. ಆದರೆ, ಸರಕಾರ ಇಂತಹ ಪ್ರಸ್ತಾವಗಳ ಮೇಲೆ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದು ಸಂಶಯಾಸ್ಪದವಾಗಿದೆ.
ಕೇಂದ್ರ ಸರ್ಕಾರ ಸೂಚನೆ ಪ್ರಕಾರ ಬಿಎಸ್
ಎನ್
ಎಲ್, ಎಂಟಿಎನ್
ಎಲ್ ಮುಚ್ಚುವಾಗ ಉದ್ಯೋಗಿಗಳಿಗ ಪರಿಹಾರ ನೀಡಲು ಅಂದಾಜು 95,000 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಎರಡೂ ಸಂಸ್ಥೆಗಳ ಹಿರಿಯ ನೌಕರ ವರ್ಗ ಸ್ವಯಂ ನಿವೃತ್ತಿ ಪಡೆದುಕೊಂಡರೆ ಅಂದಾಜು 28,165 ಕೋಟಿ ಹಾಗೂ ನಿವೃತ್ತಿ ನಂತರದ ಸೌಲಭ್ಯ ನೀಡಲು ಅಂದಾಜು 10,993 ಕೋಟಿ ರೂಪಾಯಿ ಖರ್ಚಾಗಬಹುದು.
ಇವೆರಡು ಟೆಲಿಕಾಂ ಕಂಪೆನಿಗಳನ್ನು ನಷ್ಟದಿಂದ ಬಚಾವ್ ಮಾಡಲು ಸರಕಾರಕ್ಕೆ ಸಾಕಷ್ಟು ದಾರಿಗಳಿವೆ. ಖಾಸಗಿ ವಲಯದ ಟೆಲಿಕಾಂ ಕಂಪೆನಿಗಳ ಮೇಲಿನ ಅತಿಯಾದ ಪ್ರೀತಿಯ ನಡುವೆ ದೇಶ ಪ್ರೇಮ ಮಂಕಾಗಿದೆ. ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಸಂಸ್ಥೆ ಕಾಲಿಟ್ಟ ಕೂಡಲೇ ಬಿಎಸ್
ಎನ್
ಎಲ್, ಎಂಟಿಎನ್
ಎಲ್ ಅಂತ್ಯ ಆರಂಭ ಆಗಿತ್ತು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳ ವೇತನವನ್ನು ನೀಡಲಾಗಿಲ್ಲ. ಹಿಂದಿನ 15,000 ಕೋಟಿ ರೂಪಾಯಿ ಸಾಲ ಬಾಕಿ ಇರುವುದರಿಂದ ಬ್ಯಾಂಕುಗಳು ಕೂಡ ಸಾಲ ನೀಡುತ್ತಿಲ್ಲ. ಜೂನ್ ತಿಂಗಳಲ್ಲಿ 850 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ಮತ್ತೊಂದು ಸುತ್ತಿನ 2500 ಕೋಟಿ ರೂಪಾಯಿ ಸಾಲ ಮಂಜೂರಾಗಿಲ್ಲ. ಇತ್ತ ಕೇಂದ್ರ ಸರಕಾರ ಕೂಡ ಯಾವುದೇ ಸಹಕಾರ ನೀಡುತ್ತಿಲ್ಲ. ಬಿಎಸ್ಎನ್ಎಲ್ ಹೊಂದಿರುವ ಸ್ಥಿರಾಸ್ತಿಯಿಂದಲೇ 50 ಸಾವಿರ ಕೋಟಿ ಸಾಲ ಎತ್ತ ಬಹುದು. ಆದರೆ, ಹಣಕಾಸು ಸಂಸ್ಥೆಗಳು ಚಿಕ್ಕ ಮೊತ್ತದ ಸಾಲ ನೀಡುತ್ತಿಲ್ಲ ಯಾಕೆ ಎಂಬುದು ಯಕ್ಷ ಪ್ರಶ್ನೆ.
ಬಿಎಸ್ಎನ್ಎಲ್ ಕೊನೆಯ ಬಾರಿಗೆ ಲಾಭ ಮಾಡಿಕೊಂಡಿರುವುದು. 2005ರಲ್ಲಿ. 10,000 ಕೋಟಿ ರೂಪಾಯ ಲಾಭ ಮಾಡಿಕೊಂಡಿದ್ದ ಬಿಎಸ್ಎನ್ಎಲ್, ಮತ್ತರೆಡು ವರ್ಷಗಳಲ್ಲಿ ಲಾಭದ ಪ್ರಮಾಣದಲ್ಲಿ ಕುಸಿತ ಕಂಡಿತು. 2007-2008ರ ಅವಧಿಯಲ್ಲಿ ಟೆಲಿಕಾಂ ಸೇವೆಗಾಗಿ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿಕೊಳ್ಳದಿರುವುದೇ ಬಿಎಸ್ಎನ್ಎಲ್ ಕುಸಿತಕ್ಕೆ ನಾಂದಿ ಹಾಡಿತು. ಟೆಂಡರ್ ಪ್ರಕ್ರಿಯೆ ವಿಳಂಬ, ದೂರಗಾಮಿ ಯೋಜನೆ ಇಲ್ಲದಿರುವುದು, ಸರಕಾರದ ಹಸ್ತಕ್ಷೇಪ, ಕಾರ್ಮಿಕ ಯೂನಿಯನ್ ಗಳ ಆಕ್ಷೇಪ ಇತ್ಯಾದಿಗಳಿಂದಾಗಿ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆ ಆರಂಭ ಆಗಿತ್ತು.
2011ರಿಂದಲೇ ಇದ್ದ ಸ್ವಯಂ ನಿವೃತ್ತಿ ಯೋಜನೆ ಪ್ರಸ್ತಾವ ಧೂಳು ತಿನ್ನುತಲೇ ಇತ್ತು. ಅದಾಗಲೇ ಖಾಸಗಿ ಟೆಲಿಕಾ ಕಂಪೆನಿಗಳು ಪ್ರಗತಿ ಕಾಣಲು ಆರಂಭಿಸಿದರೂ ಬಿಎಸ್ಎನ್ಎಲ್ ಉದ್ಯೋಗಿಗಳು ಮಾತ್ರ ತಮ್ಮ ಸರಕಾರಿ ಉದ್ಯೋಗದ ಉದಾಸೀನತೆಯಿಂದ ಹೊರಬಂದಿರಲಿಲ್ಲ. ಈಗ ನೋಡಿದರೆ ಬಿಎಸ್ಎನ್ಎಲ್ ಗ್ರಾಹಕರಿಂದ ಹೆಚ್ಚಾಗಿ ಬಿಎಸ್ಎನ್ಎಲ್ ಉದ್ಯೋಗಿಗಳೇ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇವೆರೆಡು ಕಂಪೆನಿಗಳು ಮುಚ್ಚದಿರಲಿ ಎಂದು ಆಶಿಸುವುದೂ ತಪ್ಪಾದೀತೊ ಏನೋ.