ದೆಹಲಿಯ 70 ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಮತ್ತೊಮ್ಮೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿ ಅರವಿಂದ್ ಕೇಜ್ರಿವಾಲ್ ಇದ್ದಾರೆ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ನಡೆದ ಮ್ಯಾಜಿಲ್ ವಿಧಾನಸಭಾ ಚುನಾವಣೆಯಲ್ಲೂ ನಡೆಯಲಿದೆ ಅನ್ನೋ ನಂಬಿಕೆಯಲ್ಲಿ ಮೋದಿ ಅಂಡ್ ಟೀಂ ಕೆಲಸ ಮಾಡುತ್ತಿದೆ. ಬಹುತೇಕ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಲಿದೆ ಅನ್ನೋ ವರದಿ ಕೊಟ್ಟಿರೋದು ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ. ಇದೇ ಕಾರಣದಿಂದ ದೆಹಲಿ ಚುನಾವಣೆಯಲ್ಲಿ ದೇಶಭಕ್ತಿಯನ್ನು ದಾಳವಾಗಿ ಉರುಳಿಸಲು ಮುಂದಾಗಿದ್ದ ಬಿಜೆಪಿ ತಂತ್ರಗಾರಿಕೆ ಮಗಾಡೆ ಮಲಗಿದ್ದು, ಕೇಂದ್ರ ಚುನಾವಣಾ ಆಯೋಗ ಪಾಕಿಸ್ತಾನ, ಯುದ್ಧ, ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದನಾತ್ಮಕವಾಗಿ ಭಾಷಣ ಮಾಡಿದ ನಾಯಕರ ಚುನಾವಣಾ ಪ್ರಚಾರ ಮಾಡದಂತೆ ನಿಷೇಧ ಏರಿದೆ. ಈ ಶಾಕ್ ನಡುವೆ ಬಿಜೆಪಿ ನಾಯಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಅದು ಏನಂದ್ರೆ ಪ್ರಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಅರವಿಂಗ್ ಕೇಜ್ರಿವಾಲ್ ಬೆನ್ನಿಗೆ ನಿಂತಿದ್ದಾರೆ.
ಮಮತಾ ಬ್ಯಾನರ್ಜಿ ಪರವಾಗಿ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಡೇರೆಕ್ ಓ ಬ್ರಿಯಾನ್ ದೆಹಲಿಯಲ್ಲಿ ಮಾತನಾಡಿ, ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕರೆ ನೀಡಿದ್ದಾರೆ. ಒಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿರುವ ಓ ಬ್ರಿಯಾನ್, ಕೇವಲ ಅರವಿಂದ್ ಕೇಜ್ರಿವಾಲ್ ಮಾತ್ರವಲ್ಲ ಇಡೀ ಆಮ್ ಆದ್ಮಿ ಪಾರ್ಟಿಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದಿದ್ದಾರೆ. ರಾಜೇಂದ್ರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ರಾಘವ್ ಚಾಂದ್ ಪರ ಪ್ರಚಾರ ನಡೆಸಿದ ಡೇರೆಕ್ ಓ ಬ್ರಿಯಾನ್, ಟ್ವಿಟ್ಟರ್ ಹಾಗು ವಿಡಿಯೋ ಷೇರ್ ಮೂಲಕ ಇಡೀ ದೆಹಲಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ, ಜನರಿಗೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ದೆಹಲಿ ಮಹತ್ವದ ದಾಪುಗಾಲು ಇಟ್ಟಿದೆ. ವಿದ್ಯುತ್, ಆರೋಗ್ಯ ಕ್ಷೇತ್ರದಲ್ಲೂ ಸರ್ಕಾರ ಮಹತ್ವದ ಕೆಲಸ ಮಾಡಿದೆ. ಮೆಟ್ರೋ ಹಾಗು ಬಸ್ ಸಂಚಾರವನ್ನು ಮಹಿಳೆಯರಿಗೆ ಉಚಿತ ಮಾಡಿದ್ದಾರೆ. 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದಾರೆ. ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಿರುವ ಆಮ್ ಆದ್ಮಿ ಪಾರ್ಟಿಯನ್ನು ಮತ್ತೊಮ್ಮೆ ಅಧಿಕಾರ ತರಬೇಕು ಎಂದು ಮನವಿ ಮಾಡಿದ್ದಾರೆ.
2015ರ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದರು. ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಫಲರಾಗಿದ್ದರು. ಈ ಬಾರಿ ತನ್ನದೇ ದಾಖಲೆಯನ್ನು ಅಳಿಸಿ ಹಾಕಲು ಆಮ್ ಆದ್ಮಿ ನಾಯಕರು ತೀಮರ್ಾನ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಶಾಸಕರಾಗಿದ್ದ ಕೆಲವರಿಗೆ ಟಿಕೆಟ್ ಕೊಡಲು ನಿರಾಕರಿಸಿದ್ದಾರೆ. ಶಾಸಕರಾಗಿದ್ದ ಸಮಯದಲ್ಲಿ ಮಾಡಿದ ಕೆಲಸಗಳು ಹಾಗು ಅವರ ಕಾರ್ಯ ವೈಖರಿಯನ್ನು ಆಧರಿಸಿ ಟಿಕೆಟ್ ನೀಡಲಾಗಿದೆ. ಜನರ ಬಾಯಲ್ಲೂ ಆಮ್ ಆದ್ಮಿ ಪಾರ್ಟಿ ಗೆಲುವಿನ ಜಪ ನಡೆಯುತ್ತಿದೆ. ಕೇಂದ್ರ ಸಕರ್ಾರ ಅದೆಷ್ಟೇ ದಬ್ಬಾಳಿಕೆ ಮಾಡಿದರೂ ಸಮರ್ಥ ಅಧಿಕಾರ ಕೊಡಲು ನಾವು ಸಫಲರಾಗಿದ್ದೇವೆ ಎಂದು ಅರವಿಂದ್ ಕ್ರೇಜಿವಾಲ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಆಮ್ ಆದ್ಮಿ ಪಕ್ಷದ ವೇಗಕ್ಕೆ ಕಡಿವಾಣ ಹಾಕಲು ಮೋದಿ ನೇತೃತ್ವದ ಬಿಜೆಪಿ ಪಡೆ ಭಾರೀ ಕಸರತ್ತು ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಚಾಣಕ್ಯ ಖ್ಯಾತಿಯ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಕೇಂದ್ರ ಸಚಿವರು ದೆಹಲಿಯ ಮೂಲೆಮೂಲೆಯಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಅಬ್ಬರದ ಚುನಾವಣಾ ಪ್ರಚಾರದ ನಡುವೆ ತೃಣಮೂಲ ಕಾಂಗ್ರೆಸ್ ಎಂಟ್ರಿ ಕೊಟ್ಟಿರೋದು ಮಹತ್ವದ ತಿರುವು ನೀಡಲಿದೆಯಾ ಎನ್ನುವುದು ಫೆಬ್ರವರಿ 11ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಗೊತ್ತಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ನಾವು ಕೇಂದ್ರ ಜಾರಿ ಮಾಡಿರುವ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲ್ಲ ಎಂದಿದ್ದಾರೆ. ಇದೀಗ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಜೊತೆಗೆ ನೇರವಾಗಿ ನಿಂತಿರೋದು ಮತಗಳ ಕ್ರೋಢೀಕರಣ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ದೆಹಲಿಯಲ್ಲಿ ಕಟ್ಟಡ ಕಾಮರ್ಿಕರು, ಕೂಲಿ ಕಾಮರ್ಿಕರು, ಸೇರಿದಂತೆ ಪಶ್ಚಿಮ ಬಂಗಾಳ ಮೂಲದವರು ವಾಸವಿದ್ದಾರೆ. ಜೊತೆಗೆ ಕೇಂದ್ರದ ಸಿಎಎ ವಿರುದ್ಧ ಪ್ರಬಲ ದನಿ ಎತ್ತಿರುವ ನಾಯಕರಲ್ಲಿ ಮಮತಾ ಬ್ಯಾನರ್ಜಿ ಒಬ್ಬರಾಗಿದ್ದಾರೆ. ಹೀಗಾಗಿ ಮುಸ್ಲಿಂ ಮತಗಳು ಹರಿದು ಹಂಚಿ ಹೋಗುವುದನ್ನು ತಡೆದು ಆಮ್ ಆದ್ಮಿ ಪಾರ್ಟಿಯನ್ನು ಸೇರಲಿವೆ ಎನ್ನಲಾಗಿದೆ. ಅರವಿಂದ್ ಕೇಜ್ರಿವಾಲ್ ಉರುಳಿಸಿರುವ ಈ ದಾಳ ಮೋದಿ ಗ್ಯಾಂಗ್ ಭಯ ಹೆಚ್ಚುವಂತೆ ಮಾಡಿದೆ.