Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ದಸರಾ ನುಂಗಣ್ಣರು: ಮೂರು ವರ್ಷವಾದರೂ ಆಡಿಟ್ ವರದಿ ಇಲ್ಲ

ದಸರಾ ನುಂಗಣ್ಣರು: ಮೂರು ವರ್ಷವಾದರೂ ಆಡಿಟ್ ವರದಿ ಇಲ್ಲ
ದಸರಾ ನುಂಗಣ್ಣರು: ಮೂರು ವರ್ಷವಾದರೂ ಆಡಿಟ್ ವರದಿ ಇಲ್ಲ
Pratidhvani Dhvani

Pratidhvani Dhvani

October 3, 2019
Share on FacebookShare on Twitter

`ಹುಚ್ಚು ಮುಂಡೆ ಮದುವೇಲಿ ಉಂಡೋನೆ ಜಾಣ’, `ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’, ಹೀಗೆ ಕನ್ನಡದ ಉಪಮೆಗಳಿಗೆ ಉದಾಹರಣೆ ಬೇಕಿದ್ದರೆ ಮೈಸೂರಿನಲ್ಲಿ ನಡೆಯುವ ವಾರ್ಷಿಕ ದಸರಾದ ಸಂಭ್ರಮಾಚರಣೆಯನ್ನು ಉಲ್ಲೇಖಿಸಬಹುದು. ಹಳೆ ಪೋಸ್ಟರ್‍ನಿಂದ ಹಿಡಿದು, ಈವೆಂಟ್ ಮ್ಯಾನೇಜ್‍ಮೆಂಟ್‍ವರೆಗೆ ಇಲ್ಲಿ ಉಣ್ಣೋರ ಕಾರುಬಾರು ಜೋರಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೇಡ ಜಂಗಮರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಡಿ : ಸಿಎಂ ಎದುರೇ ಕೂಗಾಡಿದ ಸಿದ್ದರಾಜು!

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

2017 ರಲ್ಲಿ ಇಂತಹ ಲಂಗು ಲಗಾಮಿಲ್ಲದೇ ನುಂಗುವ ಪ್ರಕ್ರಿಯೆಗೆ ಕಡಿವಾಣ ಹಾಕಲು ಎರಡು ಪ್ರತ್ಯೇಕ ಸಮಿತಿಗಳನ್ನು ಅಂದಿನ ಜಿಲ್ಲಾಧಿಕಾರಿ ಡಿ ರಂದೀಪ್ ರಚಿಸಿದ್ದರು. ಆದರೆ, ಈವರೆಗೂ ಈ ಸಮಿತಿಗಳು ವರದಿ ನೀಡಿಲ್ಲ. ಇದು ಈ ಎಲ್ಲಾ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.

ಆಚರಣೆಯಲ್ಲಿ ಏಕತಾನತೆ ಕಾಡುತ್ತಿದ್ದರೂ, ರಾಜ್ಯ ಸರಕಾರ ನಾಡ ಹಬ್ಬ ದಸರಾಕ್ಕೆ ಕೋಟಿ ಕೋಟಿ ಹಣವನ್ನು ಅನುದಾನದ ರೂಪದಲ್ಲಿ ನೀಡುತ್ತಲೆ ಬಂದಿದೆ. ರಾಜ್ಯದಲ್ಲಿ ಬರ, ಪ್ರವಾಹ ಅದೇನೇ ಇದ್ದರೂ ಪ್ರತೀ ವರ್ಷ ಎಗ್ಗಿಲ್ಲದಂತೆ ದಸರಾಗೆ ಅನುದಾನ ನೀಡುತ್ತಲೇ ಬಂದಿದೆ. ಆದರೆ ಈ ಹಣಕ್ಕೆ ಉತ್ತರದಾಯಿತ್ವ ಮಾತ್ರ ಶೂನ್ಯ. ರಾಜಕಾರಣಿಗಳು, ಸ್ಥಳೀಯ ನಾಯಕರುಗಳು, ಮಧ್ಯವರ್ತಿಗಳು ಹೀಗೆ ಈ ಅನುದಾನದ ಬೊಕ್ಕಸಕ್ಕೆ ಬಿಲ ತೋಡುವವರ ಸಂಖ್ಯೆಯೇ ಇಲ್ಲಿ ಅಧಿಕವಾಗಿದೆ.

ಯಾವ್ಯಾವ ಸಮಿತಿಗಳಿವೆ?

ಸಾಮಾನ್ಯವಾಗಿ ದಸರಾಕ್ಕೆ ಸಂಬಂಧಿಸಿದಂತೆ ಸ್ವಾಗತ ಮತ್ತು ಆಮಂತ್ರಣ ಸಮಿತಿ, ರೈತ ದಸರಾ ಸಮಿತಿ, ಕ್ರೀಡಾ ದಸರಾ ಸಮಿತಿ, ಸಾಂಸ್ಕ್ರತಿಕ ಸಮಿತಿ, ವಿದ್ಯುತ್‍ ಅಲಂಕಾರ, ಯೋಗ ಸಮಿತಿ, .. ಹೀಗೆ ಸುಮಾರು 16 ಕ್ಕೂ (ಈಗ ಹೊಸತಾಗಿ ಇನ್ನೂ ಹಲವು ಸೇರ್ಪಡೆಗೊಂಡಿವೆ ಎನ್ನುತ್ತವೆ ಮೂಲಗಳು) ಹೆಚ್ಚು ಉಪಸಮಿತಿಗಳಿರುತ್ತದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಈ ಸಮಿತಿಗೆ ಪದಾಧಿಕಾರಿಗಳ ನೇಮಕವಾಗಿ, ಉಪಸಮಿತಿಗಳ ಮೂಲಕ ದಸರಾಕ್ಕೆ ಅನುದಾನವನ್ನು ಮಂಜೂರು ಮಾಡಲಾಗುತ್ತದೆ. ಈ ಉಪಸಮಿತಿಗಳು ಆಯಾ ಸಮಿತಿಗೆ ಸಂಬಂಧಿಸಿದಂತೆ ಪ್ರತೀ ವರ್ಷ ಖರ್ಚು ವೆಚ್ಚದ ವಿವರಗಳನ್ನು ಸೂಕ್ತವಾಗಿ ನಿರ್ವಹಿಸುವುದಲ್ಲದೆ, ಪ್ರತೀ ವರ್ಷ ಪರಿಶೋಧಕ (ಆಡಿಟರ್)ರಲ್ಲಿ ಆಡಿಟಿಂಗ್ ಕೂಡ ಮಾಡಿಸಬೇಕು.

ಆದರೆ, ಈ ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ನಡೆಯುತ್ತಿರುವ ಬಗ್ಗೆ ಆಕ್ಷೇಪಣೆಗಳು ಕೇಳಿಬಂದ ಕಾರಣ ಈ ಹಿಂದಿನ ಜಿಲ್ಲಾಧಿಕಾರಿ ಆರ್ ರಂದೀಪ್ 2017 ಆಗಸ್ಟ್‍ ನಲ್ಲಿ ದಸರಾ ಖರ್ಚು ವೆಚ್ಚಗಳ ಮೇಲೆ ನಿಗಾ ಇರಿಸಲು ಲೆಕ್ಕಪತ್ರ ಪರಿಶೀಲನಾ ಸಮಿತಿಯೊಂದನ್ನು ರಚಿಸಿದರು. ದಸರಾಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ ಉಪ ಸಮಿತಿಗಳ ಖರ್ಚುವೆಚ್ಚಗಳ ಮೇಲ್ವಿಚಾರಣೆ ನಡೆಸಲು ಈ ಸಮಿತಿಗೆ ಅಧಿಕಾರ ನೀಡಲಾಯಿತು. ಈ ಉಪಸಮಿತಿಗಳು ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿವೆಯೇ ಎಂದು ತಿಳಿದು ನಂತರ ಅನುದಾನ ಬಿಡುಗಡೆ ಮಾಡುವಂತೆ ಈ ಸಮಿತಿಗೆ ಸೂಚಿಸಲಾಗಿತ್ತು.

ಪ್ರತಿ ಉಪ ಸಮಿತಿಗೂ ಮಂಜೂರಾದ ಹಣ, ಬಜೆಟ್ ಪ್ರಸ್ತಾವನೆ, ಆಯವ್ಯಯ ಹೀಗೆ ಎಲ್ಲ ವಿವರಗಳನ್ನು ನೋಡಿಕೊಳ್ಳುವಂತೆ ಲೆಕ್ಕಪತ್ರ/ಅಕೌಂಟ್ಸ್ ಮತ್ತು ಅಡಿಟ್ ಎರಡೂ ಸಮಿತಿಗೆ ಆದೇಶಿಸಲಾಯಿತು. ಇದರೊಂದಿಗೆ 2016ರ ದಸರಾ ಖರ್ಚು ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕೆಂದೂ ನಿರ್ದೇಶಿಸಲಾಗಿತ್ತು. ಆದರೆ ವರ್ಷ ಮೂರು ಕಳೆದರೂ ಇಲ್ಲಿಯವರೆಗೆ ಈ ಯಾವ ಸಮಿತಿಗಳು ವರದಿ ಸಲ್ಲಿಸಿಲ್ಲ. ಇದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ವರ್ಷದ ಗ್ರಾಮೀಣ ದಸರಾ ಕ್ರೀಡೆ

ಅನುದಾನದ ದುರ್ಬಳಕೆಯನ್ನು ತಡೆಯಲು, ಆಡಳಿತದಲ್ಲಿ ಪಾರದರ್ಶಕತೆಗಾಗಿ ಈ ಸಮಿತಿಯನ್ನು ರಚಿಸಲಾಗಿತ್ತು. ಪ್ರತಿಯೊಬ್ಬರಿಗೂ ದಸರಾಕ್ಕೆ ಖರ್ಚು ಮಾಡಿದ ಹಣ ಮಾಹಿತಿ ಹಕ್ಕಿನ ಮೂಲಕ ಪಡೆದುಕೊಳ್ಳುವಷ್ಟು ಪಕ್ಕಾ ಆಗಿರಬೇಕು ಎಂಬುದು ಈ ಸಮಿತಿ ರಚನೆಯ ಹಿಂದಿನ ಉದ್ಧೇಶವಾಗಿತ್ತು. ಆದರೆ ದಸರಾ ಅನುದಾನದ ಹಣದ ಖರ್ಚು ವೆಚ್ಚಗಳನ್ನು ಪಾರದರ್ಶಕವಾಗಿಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಲೆಕ್ಕ ಪರಿಶೋಧಕರೊಬ್ಬರು. ಅನುದಾನದ ಹಣಕ್ಕೆ ಟೆಂಡರ್ ಕರೆಯುವಷ್ಟು ಸಮಯಾವಕಾಶವೂ ಇರುವುದಿಲ್ಲ. ಹೀಗಾಗಿ ಅವರಿಗೆ ಇದರಿಂದ ವಿನಾಯಿತಿ ಇದೆ. ಇದನ್ನು ಆಯಾ ಉಪಸಮಿತಿಗಳು ಹೇಗೂ ಬಳಸಿಕೊಳ್ಳಬಹುದು.

ಎಲ್ಲಿದೆ ಲೆಕ್ಕ ಪತ್ರ ಸಮಿತಿ?

2019ರ ವೇಳೆಗೆ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ನಾಗರಾಜಮೂರ್ತಿ ಈಗ ನಿವೃತ್ತರಾಗಿದ್ದಾರೆ. ಸಮಿತಿಯ ಇತರ ಸದಸ್ಯರು ಬೇರೆ ಬೇರೆ ಕಡೆ ವರ್ಗಾವಣೆಯಾಗಿದ್ದಾರೆ. ಆ ಸಮಿತಿಯಲ್ಲಿದ್ದ ಯಾರೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿಲ್ಲ. ಅಡಿಟ್ ಸಮಿತಿಯ ಉಸ್ತುವಾರಿ ವಹಿಸಲಾಗಿದ್ದ ಲೋಕಲ್ ಆಡಿಟ್ ಸರ್ಕಲ್‍ನ ಸಿದ್ಧಗಂಗಮ್ಮನೂ ವರ್ಗಾವಣೆಯಾಗಿದ್ದಾರೆ. ಈ ಸಮಿತಿ ಹೇಗೆ ಕಾರ್ಯ ನಿರ್ವಹಿಸೀತು? ಕಡತಗಳು ಈ ಸಮಿತಿಯವರೆಗೆ ಬರುತ್ತಿದ್ದವೇ? ದಸರಾ ಅನುದಾನದ ದುರ್ಬಳಕೆಯನ್ನು ತಡೆಯಲು ಈ ಸಮಿತಿಗೆ ಸಾಧ್ಯವಾಯಿತೇ ಎಂಬುದನ್ನು ತಿಳಿಸಲು ಈ ಸಮಿತಿಯಲ್ಲಿ ಯಾರೂ ಲಭ್ಯವಿಲ್ಲ.

ಸಮಿತಿ ಕಥೆ ಏನಾಯ್ತು. ಯಾರಿಗೂ ಗೊತ್ತಿಲ್ಲ. ಪ್ರಸ್ತುತ ಈ ಸಮಿತಿ ಪುನ್‍ರ್ ರಚನೆಗೊಂಡು ಕಾರ್ಯ ನಿರ್ವಹಿಸುತ್ತಿದೆಯೇ? ಅದರ ಮಾಹಿತಿಯೂ ಲಭ್ಯವಿಲ್ಲ. ಅಂದಿನ ಜಿಲ್ಲಾಧಿಕಾರಿ ರಂದೀಪ್ ಈಗ ಬೆಂಗಳೂರಿನಲ್ಲಿ (ಬಿಬಿಎಂಪಿ) ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಮಿತಿ ಏನು ಕೆಲಸ ಮಾಡಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇಂದಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವರದಿ ಸಲ್ಲಿಸಲು ಸ್ವಲ್ಪಮಟ್ಟಿನ ಕೆಲಸ ಬಾಕಿ ಇದೆ. ಅದಾದ ನಂತರ ವರದಿ ಸಲ್ಲಿಸುತ್ತೇವೆ ಎನ್ನುತ್ತಾರೆ.

ಕಳೆದು ವರ್ಷದ ಜಂಬೂ ಸವಾರಿ 

ಮೂಲಗಳ ಪ್ರಕಾರ, ಜಿಲ್ಲಾಡಳಿತದ ಸೂಚನೆಯೆ ಮೇರೆಗೆ ಮೈಸೂರಿನ ಲೋಕಲ್ ಆಡಿಟ್ ಸರ್ಕಲ್‍ಗೆ ದಸರಾ ಖರ್ಚು ವೆಚ್ಚಗಳಿಗೆ ಸಂಬಂಧಿಸಿದ ಎಲ್ಲಾ ಕಡತಗಳೂ ಆಡಿಟಿಂಗ್‍ಗೆ ಹೋಗಬೇಕಿತ್ತು. ಆದರೆ ಈಗ ವರ್ಗಾವಣೆಗೊಂಡಿರುವ ಅಂದಿನ ಲೋಕಲ್ ಆಡಿಟ್ ಸರ್ಕಲ್‍ನ ಜಂಟಿ ನಿರ್ದೇಶಕರಾದ ಸಿದ್ಧಗಂಗಮ್ಮನವರ ಪ್ರಕಾರ ಎರಡು ಉಪಸಮಿತಿಯ ಹೊರತಾಗಿ ಬೇರಾವುದೇ ಕಡತಗಳು ಅವರಲ್ಲಿಗೆ ಅಡಿಟಿಂಗ್‍ ಗೆ ಬಂದೇ ಇಲ್ಲ. “ಯೋಗ ಸಮಿತಿಯವರು ಮಾತ್ರ ಎರಡೂ ವರ್ಷವೂ ಅಡಿಟಿಂಗ್ ಮಾಡಿಸಿಕೊಂಡು ಹೋಗಿದ್ದರು. ಬಿಟ್ಟರೆ ಒಂದು ವರ್ಷ ಲೈಟಿಂಗ್ ಸಮಿತಿಯವರುಬಂದಿದ್ದರು. ಮತ್ತೆ ಯಾರೂ ಬಂದಿರಲಿಲ್ಲ. ನಾವು ಮತ್ತೆ ಮತ್ತೆ ಜ್ಞಾಪನಾ ಪತ್ರ ಕಳುಹಿಸಿದ್ದರೂ ಯಾರೂ ಬಂದಿರಲಿಲ್ಲ. ಅಡಿಟಿಂಗ್ ನಂತರವೇ ಸಾಮಾನ್ಯವಾಗಿ ಮುಂದಿನ ವರ್ಷ ಹಣ ಬಿಡುಗಡೆಯಾಗುತ್ತದೆ. ಆದರೆ ಇಲ್ಲಿ ಯಾರೂ ಅಡಿಟಿಂಗ್‍ ಗೆ ಬಂದಿಲ್ಲ. ಕಳುಹಿಸಿದ ಜ್ಞಾಪನಾ ಪತ್ರಕ್ಕೂ ಜಿಲ್ಲಾಡಳಿತದಿಂದ ಯಾರೂ ಮುರು ಉತ್ತರ ಕಳುಹಿಸಿಲ್ಲ” ಎನ್ನುತ್ತಾರೆ ಸಿದ್ಧಗಂಗಮ್ಮ.

ಪ್ರತೀ ವರ್ಷ ಆಡಿಟಿಂಗ್ ಅಗುತ್ತಿಲ್ಲ ಎಂದ ಮೇಲೆ ದಸರಾ ಅನುದಾನದಲ್ಲಿ ನುಂಗಣ್ಣರ ಪಾಲೆಷ್ಟು? ನಾಡಹಬ್ಬದಲ್ಲಿ ಸಾರ್ವಜನಿಕ ಹಣ ವರ್ಷ ವರ್ಷ ರಾಜಕಾರಣಿಗಳದ್ದೋ ಅಥವಾ ಇನ್ನು ಯಾವ ಸರ್ಕಾರಿ ಅಧಿಕಾರಿಗಳ ಬೊಕ್ಕಸ ತುಂಬಿಸುತ್ತಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಲೇ ಬೇಕಾಗಿದೆ.

RS 500
RS 1500

SCAN HERE

don't miss it !

5ನೇ ಟೆಸ್ಟ್: ಇಂಗ್ಲೆಂಡ್ 284ಕ್ಕೆ ಆಲೌಟ್, ಭಾರತಕ್ಕೆ ಭಾರೀ ಮುನ್ನಡೆ
ಕ್ರೀಡೆ

5ನೇ ಟೆಸ್ಟ್: ಇಂಗ್ಲೆಂಡ್ 284ಕ್ಕೆ ಆಲೌಟ್, ಭಾರತಕ್ಕೆ ಭಾರೀ ಮುನ್ನಡೆ

by ಪ್ರತಿಧ್ವನಿ
July 3, 2022
ಸುಪ್ರೀಂ ಮೆಟ್ಟಿಲೇರಿದ ಅಗ್ನಿಪಥ್‌ ವಿವಾದ; ಮುಂದಿನ ವಾರ ವಿಚಾರಣೆ
ದೇಶ

ಸುಪ್ರೀಂ ಮೆಟ್ಟಿಲೇರಿದ ಅಗ್ನಿಪಥ್‌ ವಿವಾದ; ಮುಂದಿನ ವಾರ ವಿಚಾರಣೆ

by ಪ್ರತಿಧ್ವನಿ
July 4, 2022
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಕರ್ನಾಟಕ

ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
July 4, 2022
ಗುಜರಾತ್ ಗೆಲ್ಲಲು ಪಂಚ ಸೂತ್ರಗಳ ಮೊರೆ ಹೋದ ಕಾಂಗ್ರೆಸ್
ದೇಶ

ಗುಜರಾತ್ ಗೆಲ್ಲಲು ಪಂಚ ಸೂತ್ರಗಳ ಮೊರೆ ಹೋದ ಕಾಂಗ್ರೆಸ್

by ಯದುನಂದನ
July 6, 2022
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಒಬ್ಬ ಆರೋಪಿ ಪೊಲೀಸ್ ವಶಕ್ಕೆ
ಕರ್ನಾಟಕ

ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ; ಒಬ್ಬ ಆರೋಪಿ ಪೊಲೀಸ್ ವಶಕ್ಕೆ

by ಪ್ರತಿಧ್ವನಿ
July 5, 2022
Next Post
‘ಕುಂಡೆ ಹಬ್ಬ’ ಶುರುವಿಟ್ಟ ಭಜನಾ ಮಂಡಳಿ

‘ಕುಂಡೆ ಹಬ್ಬ’ ಶುರುವಿಟ್ಟ ಭಜನಾ ಮಂಡಳಿ

ಎನ್ಆರ್ ಸಿ ಅನ್ಯಾಯ: ಒಂದು ಲಕ್ಷಕ್ಕೂ ಹೆಚ್ಚು ಗೋರ್ಖಾ ಸಮುದಾಯ ಹೊರಗೆ

ಎನ್ಆರ್ ಸಿ ಅನ್ಯಾಯ: ಒಂದು ಲಕ್ಷಕ್ಕೂ ಹೆಚ್ಚು ಗೋರ್ಖಾ ಸಮುದಾಯ ಹೊರಗೆ

ಕೊಡಗಿನಲ್ಲಿ ಅಬ್ಬರದ ಮಳೆಗೆ  ಕಾಫಿ

ಕೊಡಗಿನಲ್ಲಿ ಅಬ್ಬರದ ಮಳೆಗೆ  ಕಾಫಿ, ಕರಿಮೆಣಸಿಗೆ ಕೊಳೆ ರೋಗ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist