ಕೆಲ ದಿನಗಳ ಹಿಂದೆ ಟೆಲಿವಿಷನ್ ಚಾನೆಲುಗಳು ತಮ್ಮ ಟೆಲಿವಿಷನ್ ರೇಟಿಂಗ್ ಪಾಯಿಂಟ್ಗಳನ್ನು (ಟಿಆರ್ಪಿ) ಹೆಚ್ಚಿಸಲು ಮನೆಗಳ ಮಾಲೀಕರಿಗೆ ಲಂಚ ನೀಡಿ ಸಿಕ್ಕಿ ಬಿದ್ದ ಸುದ್ದಿ ಹೊರಬಿದ್ದ ಕೂಡಲೇ ಇದು ದೇಶದ ದೃಶ್ಯ ಮಾಧ್ಯಮ ರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿತು. ಇದಕ್ಕೆ ಸಾರ್ವಜನಿಕ ವಲಯದಿಂದಲೇ ಸಾಮಾಜಿಕ ತಾಣಗಳ ಮೂಲಕ ಸಾಕಷ್ಟು ಪ್ರತಿಭಟನೆ ವ್ಯಕ್ತಯಾಯಿತು. ಈ ಘಟನೆಗೆ ದೇಶದ ದೃಶ್ಯ ಮಾಧ್ಯಮ ರಂಗವು ಹಿಂದೆಂದೂ ಕಂಡಿರದ ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿ ಈ ಹಗರಣದ ವಿರುದ್ದ ಸಿಡಿದೆದ್ದಿತು.
ಅಂದ ಹಾಗೆ ದೇಶದ ಒಟ್ಟು ವಾರ್ಷಿಕ ದೃಶ್ಯ ಮಾಧ್ಯಮ ರಂಗದ ಒಟ್ಟು ಜಾಹೀರಾತು ಆದಾಯ 27 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದು ಸಾರ್ವಜನಿಕ ಅಭಿರುಚಿ ಮತ್ತು ದೃಷ್ಟಿಕೋನಗಳನ್ನು ನಿಯಂತ್ರಿಸುವ ಕಾರ್ಯಸೂಚಿ ಆಧಾರಿತ ದೂರದರ್ಶನದ ಹೆಚ್ಚು ನಿರ್ಣಾಯಕ ವಿದ್ಯಮಾನದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ದೃಶ್ಯ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣವನ್ನು ಕೊಲೆ ಎಂದು ಬಿಂಬಿಸುವಲ್ಲಿ ತಮ್ಮ ಬಹುಪಾಲು ಸಮಯ ಕಳೆದವು. ಈ ಸಮಯದಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಯಿತು. ಟಿವಿಯಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ಹಣವನ್ನು ಸುರಿಯುವವರಿಗೆ ಮಾಡುವವರಿಗೆ ಈ ಟಿಆರ್ ಪಿ ರೇಟಿಂಗ್ಗಳು ಮುಖ್ಯ, ಏಕೆಂದರೆ ವಿವಿಧ ಚಾನೆಲ್ಗಳನ್ನು ಯಾರು ಮತ್ತು ಎಷ್ಟು ಮಂದಿ ವೀಕ್ಷಿಸುತ್ತಿದ್ದಾರೆಂದು ಕಂಡುಹಿಡಿಯಬೇಕು. ಈ ರೇಟಿಂಗ್ ವ್ಯವಸ್ಥೆಗಳು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿವೆ.
ವೀಕ್ಷಕರ ಆಯ್ಕೆಗಳನ್ನು ಮಾಪನಾಂಕ ಮಾಡಲು ಭಾರತದ ಬಾರ್ಕ್ ಆಯ್ದ ಮನೆಗಳಲ್ಲಿ 44,000 ಬಾರ್-ಒ-ಮೀಟರ್ಗಳನ್ನು ಸ್ಥಾಪಿಸಿದೆ ಏಕೆಂದರೆ ಇಲ್ಲಿ ಕುಟುಂಬ ಗಾತ್ರಗಳು ದೊಡ್ಡದಾಗಿವೆ. 2015 ರಲ್ಲಿ BARC ಆಗಮನದ ಮೊದಲು ದೂರದರ್ಶನ ದೃಶ್ಯದಲ್ಲಿ ಪ್ರಾಬಲ್ಯ ಹೊಂದಿದ್ದ TAM ರೇಟಿಂಗ್ ವ್ಯವಸ್ಥೆಯಡಿಯಲ್ಲಿ, ಇಡೀ ದೇಶದಲ್ಲಿ ಕೇವಲ 8,000 ಮನೆಗಳಿಗೆ ಮಾತ್ರ ಬಾರ್ ಓ ಮೀಟರ್ ಗಳನ್ನು ಅಳವಡಿಸಲಾಗಿತ್ತು.
Also Read: ಟಿಆರ್ಪಿ ತಿರುಚಿದ ಆರೋಪ: ಅರ್ನಾಬ್ ಗೋಸ್ವಾಮಿ ನೇತೃತ್ವದ Republic TV ವಿರುದ್ದ ವಿಚಾರಣೆ
ಸುಮಾರು 20 ಕೋಟಿ ದೂರದರ್ಶನ ಕುಟುಂಬಗಳ ಅಭಿಪ್ರಾಯಗಳನ್ನು ಪ್ರತಿನಿಧಿಸಲು 44,000 ಮೀಟರ್ ಗಳ ಅಳವಡಿಕೆ ಖಂಡಿತಾ ಸಾಕಾಗದು ಎಂಬುದು ಬಾರ್ಕ್ ವಿರುದ್ಧ ಕೇಳಿ ಬರುತ್ತಿರುವ ಟೀಕೆ. 2021 ರ ವೇಳೆಗೆ ದೇಶದಲ್ಲಿ 55,000 ಮನೆಗಳಿಗೆ ಮೀಟರ್ಗಳನ್ನು ಅಳವಡಿಸಲು ಬಾರ್ಕ್ ಯೋಜಿಸಿದೆ. ಆದರೆ ಟೆಲಿಕಾಂ ರೆಗ್ಯುಲೇಟರ್ ಅಥಾರಿಟಿ ಆಫ್ ಇಂಡಿಯಾ (TRAI) ಮೀಟರ್ ಸಂಖ್ಯೆಗಳನ್ನು ಈಗ 60,000 ಕ್ಕೆ ಮತ್ತು 2022 ರ ಅಂತ್ಯದ ವೇಳೆಗೆ 100,000 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಇಷ್ಟೊಂದು ಮೀಟರ್ ಅಳವಡಿಸಿದರೂ ಇವು ದೇಶದ ಎಲ್ಲ ಜನರನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಬಹುದು. ಆದರೆ ಯಾವುದೇ ಸಮೀಕ್ಷೆಯ ಲಿಮಿಟೇಷನ್ ಇದೇ ಆಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮೀಟರ್ ಗಳನ್ನು ಅಳವಡಿಸಲು ದುಬಾರಿ ವೆಚ್ಚ ತಗುಲಲಿದೆ.
ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಂಡರೆ ಪ್ರತಿಯೊಂದು ಬಾರ್ ಒ ಮೀಟರ್ ಬೆಲೆ 1.5 ಲಕ್ಷ ರೂಪಾಯಿಗಳಾಗುತ್ತವೆ. ಆದರೆ ಭಾರತದಲ್ಲೆ ತಯಾರಾಗುತ್ತಿರುವ ಈ ಮೀಟರ್ ಗಳ ಬೆಲೆ ಈಗ 15 ಸಾವಿರ ರೂಪಾಯಿಗಳಾಗಿವೆ. ಈ ಮೀಟರ್ ಗಳನ್ನು ಅಳವಡಿಸಲು ಬಾರ್ಕ್ ಮೂರು ಲಕ್ಷ ಮನೆಗಳ ಎಸ್ಟಾಬ್ಲಿಷ್ ಮೆಂಟ್ ಸರ್ವೆ ನಡೆಸುತ್ತದೆ. ನಂತರ ಕಂಪ್ತೂಟರ್ ಮೂಲಕವೇ ಆಯ್ದ 44 ಸಾವಿರ ಮನೆಗಳಲ್ಲಿ ಮೀಟರ್ ಅಳವಡಿಸಲಾಗುತ್ತದೆ. ಹೀಗೆ ಕಟ್ಟುನಿಟ್ಟಿನ ನಿಗಾದಲ್ಲಿ ಅಳವಡಿಸಲಾದ ಮೀಟರ್ ಗಳಲ್ಲಿ ಮೂರನೇ ಒಂದರಷ್ಟು ಮೀಟರ್ ಗಳ ಮನೆಗಳನ್ನು ಪ್ರತೀ ವರ್ಷವೂ ಬದಲಾಯಿಸಲಾಗುತ್ತದೆ. ಇದರಿಂದ ಪ್ರಭಾವ ಬೀರುವ ಅಥವಾ ತಿರುಚುವ ಸಾಧ್ಯತೆ ಕಡಿಮೆ ಎಂಬುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಇಷ್ಟೊಂದು ಕಟ್ಟು ನಿಟ್ಟಿನ ನಿಗಾ ವಹಿಸಿದರೂ ಏಜೆನ್ಸಿಯ ಮಾಜಿ ಉದ್ಯೋಗಿಗಳು ಟಿಆರ್ಪಿ ತಿರುಚಿರುವುದು ವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸುತ್ತದೆ.
ಈಗ ಆರೋಪಿ ಸ್ಥಾನದಲ್ಲಿರುವ ದೇಶದ ಅತೀ ದೊಡ್ಡ ಇಂಗಿಷ್ ಸುದ್ದಿ ಚಾನೆಲ್ ಒಂದನ್ನು ಎಷ್ಟು ಜನರು ನೋಡುತ್ತಾರೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ದೇಶದ ಒಟ್ಟು 80 ಕೋಟಿ ಟಿವಿ ವೀಕ್ಷಕರಲ್ಲಿ ಇಂಗ್ಲಿಷ್ ನ್ಯೂಸ್ ನೋಡುವ ಜನರು ಕೇವಲ ಶೇಕಡಾ 1.2 ರಷ್ಟು ಮಾತ್ರ. ಇಂಗ್ಲಿಷ್ ನ್ಯೂಸ್ ಟಿವಿಯು ಸುಮಾರು 1.2 ಕೋಟಿ ಅನಿಸಿಕೆಗಳನ್ನು ಪಡೆದುಕೊಂಡಿದೆ, ಇದು ಒಟ್ಟು ಟಿವಿ ಅನಿಸಿಕೆಗಳಲ್ಲಿ 0.03% ರಷ್ಟಿದೆ. ಆದರೆ ಇದು ದೂರದರ್ಶನದ ಒಟ್ಟು ಜಾಹೀರಾತು ಆದಾಯದ ಶೇಕಡಾ 1.2 ನ್ನು ಪಡೆದಿದೆ. ಏಕೆಂದರೆ ಈ ವಿಭಾಗವು ಹೆಚ್ಚಿನ ಖರೀದಿ ಶಕ್ತಿಯನ್ನು ಹೊಂದಿದೆ, ಹಿಂದಿ ಚಲನಚಿತ್ರ ಚಾನೆಲ್ಗಳು 10% ಟಿವಿ ಆದಾಯವನ್ನು ಪಡೆದುಕೊಳ್ಳುತ್ತವೆ ಮತ್ತು ಹಿಂದಿ ಸುದ್ದಿ ವಾಹಿನಿಗಳು 6% ಪಡೆಯುತ್ತವೆ. ಈ ಹಿಂದೆ, ಕೆಲವು ಟಿಆರ್ಪಿ ಮೀಟರ್ಗಳನ್ನು ಟ್ಯಾಂಪರಿಂಗ್ ಮಾಡುವುದನ್ನು ಬಾರ್ಕ್ ಪತ್ತೆ ಮಾಡಿತ್ತು ಮತ್ತು ಪೊಲೀಸ್ ದೂರುಗಳನ್ನು ದಾಖಲಿಸಲಾಗಿತ್ತು. ಆದರೆ ಸಂಬಂಧಪಟ್ಟ ಪೊಲೀಸ್ ಠಾಣೆಗಳು ಕಠಿಣ ಕ್ರಮವನ್ನು ಕೈಗೊಳ್ಳಲಿಲ್ಲ. ತನಿಖಾ ಸಂಸ್ಥೆಗಳು ಆಗಾಗ್ಗೆ ಹೇಳುವ ಸಮಸ್ಯೆಯೆಂದರೆ, ಈ ರೀತಿಯ ಅಪರಾಧವನ್ನು ಅಪರಾಧವೆಂದು ಘೋಷಿಸುವ ಯಾವುದೇ ನಿರ್ದಿಷ್ಟ ಕಾನೂನು ಅವಕಾಶಗಳಿಲ್ಲ. ಹಾಗಿದ್ದರೂ, ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಆದರೆ ನ್ಯಾಯಾಲಯಗಳಲ್ಲಿ ಇದನ್ನು ಸಾಬೀತುಪಡಿಸುವುದು ಶಿಕ್ಷೆ ಕೊಡಿಸುವುದು ಸುಲಭ ಸಾಧ್ಯವಲ್ಲ.
Also Read: ಸರ್ಕಾರದ ಮದ್ಯ ಪ್ರವೇಶದ ಅನಿವಾರ್ಯತೆಯನ್ನು ಹೆಚ್ಚಿಸಿದ ಟಿಆರ್ಪಿ ಹಗರಣ
ಮೊದಲನೆಯದು ಮಾಧ್ಯಮಗಳ ಮೇಲಿನ ಈ ಕಾನೂನನ್ನು ಮರುಪರಿಶೀಲಿಸುವ ಅಗತ್ಯವಿದ್ದರೆ, ಎರಡನೆಯದು ಮಾಧ್ಯಮಗಳು ಹರಡುತ್ತಿರುವ ವಿಷವನ್ನು ದ್ವೇಷವನ್ನು ಹೇಗೆ ನಿಯಂತ್ರಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ದೂರದರ್ಶನದಲ್ಲಿ ದ್ವೇಷ ಕಾರ್ಯಕ್ರಮಗಳನ್ನು ನಿಯಂತ್ರಿಸಲು ಸರ್ಕಾರದ ಪ್ರತಿಕ್ರಿಯೆಯನ್ನು ಬಯಸಿದಾಗ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅದರ ಅಗತ್ಯತೆಯನ್ನು ಸಮರ್ಥಿಸಿತು. ಮತ್ತು ಡಿಜಿಟಲ್ ಮಾಧ್ಯಮದಿಂದ ನಿಯಂತ್ರಣ ಪ್ರಾರಂಭವಾಗಬೇಕೆಂದು ಪ್ರಸ್ತಾಪಿಸಿತು. ಮಾಧ್ಯಮದ ಮೇಲಿನ ನಿಯಂತ್ರಣ ಕಾನೂನಿಗೆ ಖಂಡಿತವಾಗಿಯೂ ಕೂಲಂಕುಷ ಪರಿಶೀಲನೆಯ ಅಗತ್ಯವಿದ್ದರೂ, ನಾವು ಸರ್ಕಾರವು ಇದನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸ್ಥಿತಿಯ ಅಪಾಯವೂ ಇದೆ. ಟಿಆರ್ಪಿಗಳ ‘ರಿಗ್ಗಿಂಗ್’ ಅನ್ನು ಕ್ರಿಮಿನಲ್ ಅಪರಾಧವೆಂದು ಘೋಷಿಸಬಹುದು, ಯಾವುದೇ ರೇಟಿಂಗ್ಗಳಿಗಿಂತ ಅಥವಾ ಯಾವುದೇ ವ್ಯಕ್ತಿನಿಷ್ಠ ಮೌಲ್ಯಮಾಪನಕ್ಕಿಂತ ಸುಧಾರಿತ ರೇಟಿಂಗ್ ವ್ಯವಸ್ಥೆಯು ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಇದರ ಜಾರಿಗೆ ಸರ್ಕಾರ ಆಸ್ಥೆ ವಹಿಸಬೇಕಿದೆ.