Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕೆಫೆ ಕಾಫಿ ಡೇ ಖಾತೆಯಿಂದ 2 ಸಾವಿರ ಕೋಟಿ ರೂಪಾಯಿ ʼನಾಪತ್ತೆʼ!?

ಕೆಫೆ ಕಾಫಿ ಡೇ ಖಾತೆಯಿಂದ 2 ಸಾವಿರ ಕೋಟಿ ರೂಪಾಯಿ ʼನಾಪತ್ತೆʼ!?
ಕೆಫೆ ಕಾಫಿ ಡೇ ಖಾತೆಯಿಂದ 2 ಸಾವಿರ ಕೋಟಿ ರೂಪಾಯಿ ʼನಾಪತ್ತೆʼ!?

March 16, 2020
Share on FacebookShare on Twitter

ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಖಾತೆಯಲ್ಲಿದ್ದ ಕನಿಷ್ಠ 2000 ಕೋಟಿ ರೂಪಾಯಿ ಆಗಿರೋದನ್ನ ಪತ್ತೆ ಹಚ್ಚಲಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್‌ ಆತ್ಮಹತ್ಯೆ ಪ್ರಕರಣ ನಂತರ ನಡೆಸಲಾಗುತ್ತಿರುವ ಆಂತರಿಕ ತನಿಖೆ ಸಂದರ್ಭ ಈ ವಿಚಾರ ಬಯಲಾಗಿದೆ. ಸಿದ್ಧಾರ್ಥ್‌ ಸಾವಿನ ನಂತರ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಅಶೋಕ್‌ ಕುಮಾರ್‌ ಮಲ್ಹೋತ್ರಾ ಈ ಕುರಿತು ಸಮಗ್ರ ತನಿಖೆಯಲ್ಲಿ ನಿರತವಾಗಿದ್ದು, ತನಿಖೆ ಸಂದರ್ಭ ಭಾರೀ ಮೊತ್ತದ ಹಣ ನಾಪತ್ತೆಯಾಗಿರುವದನ್ನ ಪತ್ತೆಹಚ್ಚಿದ್ದಾರೆ. ಈ ಕುರಿತು ತಯಾರಿಸಲಾದ ನೂರಾರು ಪುಟಗಳ ವರದಿಯಲ್ಲೂ ಈ ವಿಚಾರ ಉಲ್ಲೇಖಿಸಿದ್ದಾಗಿ ಕಂಪೆನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಸಿದ್ಧಾರ್ಥ್‌ ಸಂಸ್ಥೆಯ ಹೆಸರಲ್ಲಿ ನಡೆಸಿದ ಬ್ಯಾಂಕಿಂಗ್ ವ್ಯವಹಾರ, ವೈಯಕ್ತಿಕ ವ್ಯವಹಾರಗಳ ಬಗ್ಗೆಯೂ ಅಶೋಕ್‌ ಮಲ್ಹೋತ್ರಾ ತನಿಖೆ ನಡೆಸಿದ್ದಾರೆ. ಆದರೂ ಇದುವರೆಗೂ ಹಣ ʼಮಿಸ್ಸಿಂಗ್‌ʼ ಆಗಿರೋದಾಗಲೀ, ಇಲ್ಲವೇ ಸಿದ್ದಾರ್ಥ್‌ ವೈಯಕ್ತಿಕ ವ್ಯವಹಾರದ ಬಗ್ಗೆಯಾಗಲೀ ತನಿಖಾಧಿಕಾರಿ ಅಶೊಕ್‌ ಕುಮಾರ್‌ ಮಲ್ಹೋತ್ರಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಬದಲಾಗಿ ತನಿಖೆ ಪ್ರಗತಿಯಲ್ಲಿದ್ದು, ಇನ್ನೊಂದು ವಾರದೊಳಗಾಗಿ ಅಂತಿಮ ಷರಾ ಬರೆಯುವ ಸಾಧ್ಯತೆ ಇದೆ. ಆ ಸಂದರ್ಭವೂ ಈ ಎಲ್ಲಾ ವಿಚಾರಗಳು ಬಹಿರಂಗಗೊಳ್ಳುತ್ತಾ ಅನ್ನೋ ಕೌತುಕ ಹೆಚ್ಚಿಸಿದೆ.

ಅದರ ಜೊತೆಗೆ ಕಂಪೆನಿಯ ಇನ್ನೊಂದು ಮೂಲದ ಪ್ರಕಾರ 25 ಬಿಲಿಯನ್‌ಗೂ ಅಧಿಕ ನಗದು ನಾಪತ್ತೆಯಾಗಿರುವ ಬಗ್ಗೆಯೂ ಕೆಲವು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ ಕಂಪೆನಿಯ ಅಧಿಕೃತ ವಕ್ತಾರರು ಈ ಎಲ್ಲ ವಿಚಾರಗಳನ್ನ ಅಲ್ಗಲಗಳೆದಿದ್ದು, “ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಅಂತಿಮ ಹಂತವನ್ನ ತಲುಪಿಲ್ಲ. ಆದ್ದರಿಂದ ಕಂಪೆನಿಯ ನಿರ್ದೇಶಕರು ಈ ಬಗ್ಗೆ ತಲೆಕೆಡಿಸಬೇಕಿಲ್ಲ. ತನಿಖಾ ಅವಧಿಯಲ್ಲಿಯೇ ಈ ರೀತಿಯ ಗೊಂದಲ ಸರಿಯಲ್ಲ” ಎಂದಿದ್ದಾರೆ. ಅಲ್ಲದೇ “ಆಡಳಿತ ಮಂಡಳಿ ಮತ್ತು ಸಿದ್ದಾರ್ಥ್‌ ಕುಟುಂಬ ಇಂತಹ ಪರಿಸ್ಥಿತಿಯಲ್ಲೂ ವ್ಯವಹಾರದ ಬಗ್ಗೆ ಹಾಗೂ ಏಜೆಂಟ್‌ಗಳ ಜೊತೆ ಮಾಡಲಾದ ಕರಾರುಗಳ ಕುರಿತು ಬದ್ಧವಾಗಿರಲು ಇಚ್ಛಿಸುತ್ತಿದೆ” ಎಂದಿದ್ದಾರೆ.

ಸಿದ್ದಾರ್ಥ್‌ ಸಾವಿನ ನಂತರ ಸಿಕ್ಕಿದ್ದ ಪತ್ರವೊಂದರಲ್ಲಿ ಕಂಪೆನಿ ಹೆಸರಲ್ಲಿ ಇರುವ ಅಧಿಕ ಪ್ರಮಾಣದ ಸಾಲದ ವಿಚಾರ ತಿಳಿಯುತ್ತಿದ್ದಂತೆ ಷೇರುದಾರರು ಹಿಂಜರಿದಿದ್ದರು. ಅಲ್ಲದೇ ಕಂಪೆನಿಯ ನಿರ್ದೇಶಕರು ಹಾಗೂ ಉದ್ಯೋಗಿಗಳಿಗೆ ಬರೆಯಲಾದ ಪತ್ರದಲ್ಲಿ, ಸಿದ್ದಾರ್ಥ್‌ ತಾನು ಮಾಡಿರುವ ಅಧಿಕ ಪ್ರಮಾಣದ ಸಾಲ ಹಾಗೂ ಸಾಲಗಾರರು ಮತ್ತು ತೆರಿಗೆ ಅಧಿಕಾರಿಗಳಿಂದ ಅನುಭವಿಸುತ್ತಿರುವ ನಿರಂತರ ಕಿರುಕುಳದ ವಿಚಾರವನ್ನು ಉಲ್ಲೇಖಿಸಿದ್ದರು. ಖಾಸಗಿ ಫೈನಾನ್ಸ್‌ ಕಂಪೆನಿಗಳಿಂದ ಅಧಿಕ ಬಡ್ಡಿದರದಲ್ಲಿ ಸಾಲ ಪಡೆದಿರುವುದು ಕೂಡಾ ಕಂಪೆನಿಯ ಬೆಳವಣಿಗೆಗೆ ಅಡ್ಡಿಯಾಗಿತ್ತು ಅನ್ನೋದು ಕೂಡಾ ತನಿಖೆ ಸಂದರ್ಭ ತಿಳಿದು ಬಂದಿದೆ. ಜೊತೆಗೆ 2019 ರ ಹಣಕಾಸು ವರ್ಷಾಂತ್ಯಕ್ಕೆ 24 ಬಿಲಿಯನ್‌ ನಗದು ಹೊಂದಿದ್ದ ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಖಾತೆಯಲ್ಲಿ ಸಿದ್ದಾರ್ಥ್‌ ಸಾವಿನ ನಂತರ ʼಝೀರೋ ಬ್ಯಾಲೆನ್ಸ್‌ʼ ಇತ್ತು ಅನ್ನೋ ವಿಚಾರವೂ ಅಚ್ಚರಿಯನ್ನ ಮೂಡಿಸಿದೆ.

ಸಿದ್ದಾರ್ಥ್‌ ಸಾವನ್ನಪ್ಪಿದ ನಂತರ ಕಂಪೆನಿ ಅದೆಷ್ಟರ ಮಟ್ಟಿಗೆ ಆರ್ಥಿಕ ಹೊಡೆತಕ್ಕೆ ಸಿಕ್ಕಿತ್ತೆಂದರೆ ಕಂಪೆನಿಯಲ್ಲಿರುವ ಉದ್ಯೋಗಿಗಳಿಗೆ ವೇತನ ನೀಡಲೂ ಪರದಾಡಿತ್ತು. ಷೇರು ಕುಸಿತಗೊಂಡ ಪರಿಣಾಮ ಒಂದೊಮ್ಮೆ ಕಂಪೆನಿಯ ಮೌಲ್ಯ 80 ಬಿಲಿಯನ್‌ಗೆ ಕುಸಿದಿತ್ತು. ದಾಖಲೆ ಮಟ್ಟದಲ್ಲಿ ಅಂದು ಕಂಪೆನಿ ಷೇರು ಕುಸಿದ ಪರಿಣಾಮ CCDಗೆ ಅತ್ಯಂತ ಕಠಿಣ ಸವಾಲು ಎದುರಾಗಿತ್ತು. ಇದೀಗ ಕಂಪೆನಿ ಖಾತೆಯಿಂದ 2000 ಸಾವಿರ ಕೋಟಿ ರೂಪಾಯಿ ನಾಪತ್ತೆಯಾಗಿರುವುದು ಮತ್ತಷ್ಟು ಕುತೂಹಲಕ್ಕೂ ಕಾರಣವಾಗಿದೆ. ಇದೆಲ್ಲದರ ನಡುವೆ ಕಂಪೆನಿ ಮತ್ತೆ ಹಿಂದಿನ ವ್ಯವಹಾರವನ್ನು ಸಾಧಿಸುವುದರ ಜೊತೆಗೆ “ದೇಶದಲ್ಲೇ ಸಿಸಿಡಿಯನ್ನ ಮಾದರಿಯನ್ನಾಗಿರಿಸುವುದೇ ತನ್ನ ಗುರಿ” ಅಂತ ಹೇಳಿಕೊಂಡಿದೆ.

ಕೃಪೆ: ಬ್ಲೂಮ್‌ಬರ್ಗ್‌

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

PRIYANK GANDHI : ಮೋದಿ ಸರ್ಕಾರ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಮುಗಿಸಲು ಮುಂದಾಗಿದೆ..! #Pratidhvani
ಇದೀಗ

PRIYANK GANDHI : ಮೋದಿ ಸರ್ಕಾರ ದೇಶದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಮುಗಿಸಲು ಮುಂದಾಗಿದೆ..! #Pratidhvani

by ಪ್ರತಿಧ್ವನಿ
March 26, 2023
ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶ
Top Story

ಮೇ 10ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ : ಮೇ 13ರಂದು ಫಲಿತಾಂಶ

by ಪ್ರತಿಧ್ವನಿ
March 29, 2023
ಕಾಂಗ್ರೆಸ್​ಗೆ ಹಾರಲು ಸಜ್ಜಾಗಿದ್ದಾರೆ ಹಾಲಿ ಸಚಿವರು..! ಲಿಸ್ಟ್​ ಹೀಗಿದೆ..
Top Story

ಕಾಂಗ್ರೆಸ್​ಗೆ ಹಾರಲು ಸಜ್ಜಾಗಿದ್ದಾರೆ ಹಾಲಿ ಸಚಿವರು..! ಲಿಸ್ಟ್​ ಹೀಗಿದೆ..

by ಕೃಷ್ಣ ಮಣಿ
March 28, 2023
ʻಗೇಮ್‌ ಚೇಂಜರ್‌ʼ ಆದ ರಾಮ್‌ಚರಣ್‌..!
ಸಿನಿಮಾ

ʻಗೇಮ್‌ ಚೇಂಜರ್‌ʼ ಆದ ರಾಮ್‌ಚರಣ್‌..!

by ಪ್ರತಿಧ್ವನಿ
March 27, 2023
ಮಾರ್ಚ್‌ 30ಕ್ಕೆ ʻಗುರುದೇವ್‌ ಹೊಯ್ಸಳʼ ಅದ್ಧೂರಿ ಬಿಡುಗಡೆ
ಸಿನಿಮಾ

ಮಾರ್ಚ್‌ 30ಕ್ಕೆ ʻಗುರುದೇವ್‌ ಹೊಯ್ಸಳʼ ಅದ್ಧೂರಿ ಬಿಡುಗಡೆ

by Prathidhvani
March 27, 2023
Next Post
ನಿರ್ಣಾಯಕ ಘಟ್ಟ ತಲುಪಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು

ನಿರ್ಣಾಯಕ ಘಟ್ಟ ತಲುಪಿದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು

‘ಕೋವಿಡ್-19’ ಸಂಕಷ್ಟ ತಗ್ಗಿಸಲು ತುರ್ತು ಕ್ರಮಗಳನ್ನು ಪ್ರಕಟಿಸಿದ RBI

‘ಕೋವಿಡ್-19’ ಸಂಕಷ್ಟ ತಗ್ಗಿಸಲು ತುರ್ತು ಕ್ರಮಗಳನ್ನು ಪ್ರಕಟಿಸಿದ RBI

ಮಂಗನ ಕಾಯಿಲೆ: ರಾಜ್ಯ ಸರ್ಕಾರದಿಂದ ಮಂಗನಾಟ

ಮಂಗನ ಕಾಯಿಲೆ: ರಾಜ್ಯ ಸರ್ಕಾರದಿಂದ ಮಂಗನಾಟ, ಶಾಸಕ ಹಾಲಪ್ಪನವರಿಂದ ಹರತಾಳ 

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist