ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತವಾಗಿದ್ದು, ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ವರದಿ ಮಾಡಿದೆ. ಸೋಮವಾರ ಪ್ರಕಟವಾದ ಪ್ರಾಥಮಿಕ ಫಲಿತಾಂಶಗಳು ಕೋವಿಡ್ -19 ಗುಣಪಡಿಸುವ ಭರವಸೆಯನ್ನು ಹುಟ್ಟುಹಾಕಿದೆ.
ಪ್ರಯೋಗವು ಪ್ರಸ್ತುತ ಸುಧಾರಿತ ಹಂತದಲ್ಲಿದೆ. ಇಂಗ್ಲಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪ್ರಯೋಗಗಳು ನಡೆಯುತ್ತಿವೆ. ಅಂತಿಮ ಫಲಿತಾಂಶಗಳು ಕೂಡಾ ಸಕಾರಾತ್ಮಕವಾಗಿದ್ದರೆ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಆಕ್ಸ್ಫರ್ಡ್, ಅಸ್ಟ್ರಾಜೆನೆಕಾ ಜತೆಗೆ ಇಂಗ್ಲಂಡ್ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
ಚೀನಾದಲ್ಲಿ ಲಸಿಕೆ ಪ್ರಯೋಗದ 2 ನೇ ಹಂತವು ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ ಮತ್ತು ಪ್ರತಿರೋಧಕ ಪ್ರತಿಕ್ರಿಯೆಯನ್ನು ಪ್ರೇರೇಪಿಸುತ್ತದೆ ಎಂದು ಜರ್ನಲ್ ವರದಿ ಮಾಡಿದೆ. ಚೀನಾದಲ್ಲಿ ಪ್ರಯೋಗವನ್ನು ಏಪ್ರಿಲ್ನಲ್ಲಿ ನಡೆಸಲಾಗಿದ್ದು 500 ಕ್ಕೂ ಹೆಚ್ಚು ಜನರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು.
ಅಸ್ಟ್ರಾಜೆನೆಕಾದ ಉಪಾಧ್ಯಕ್ಷ ಮೆನೆ ಪಂಗಲೋಸ್ “ಅಭಿವೃದ್ಧಿಗೊಳಿಸಿರುವ ಲಸಿಕೆಯು SARS-CoV-2 ವಿರುದ್ಧ ತ್ವರಿತ ಪ್ರತಿಕಾಯ ಮತ್ತು ಟಿ-ಸೆಲ್ ಪ್ರತಿಕ್ರಿಯೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತೋರಿಸಿದೆ. ಇದಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ಅದಾಗ್ಯೂ ಇಂದಿನ ಅಂಕಿಅಂಶವು, ಲಸಿಕೆ ಕೆಲಸ ಮಾಡುತ್ತದೆ ಎಂಬ ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ ಹಾಗೂ ಪ್ರಪಂಚದಾದ್ಯಂತ ರೋಗಿಗಳ ಬಳಕೆಗಾಗುವಷ್ಟು ಪ್ರಮಾಣದಲ್ಲಿ ಲಸಿಕೆಯನ್ನು ತಯಾರಿಸುವ ನಮ್ಮ ಯೋಜನೆಗಳನ್ನು ಮುಂದುವರಿಸಲು ನಮಗೆ ಇನ್ನಷ್ಟು ಆತ್ಮವಿಶ್ವಾಸ ನೀಡಿದೆ” ಎಂದು ಹೇಳಿದ್ದಾರೆ.
ಆಕ್ಸ್ಫರ್ಡ್ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತಾ, ಅಧ್ಯಯನದ ಪ್ರಮುಖ ಸಂಶೋಧಕ ಆಂಡ್ರ್ಯೂ ಪೊಲಾರ್ಡ್ “ಹೊಸ ಲಸಿಕೆ ಚಿಂಪಾಂಜಿ ಅಡೆನೊವೈರಸ್ ವೈರಲ್ ವೆಕ್ಟರ್ (ChAdOx1) ಲಸಿಕೆಯಾಗಿದ್ದು ಅದು SARS-CoV-2 ಅನ್ನು ಎದುರಿಸುವ ಸ್ಪೈಕ್ ಪ್ರೋಟೀನ್ನ್ನು ವ್ಯಕ್ತಪಡಿಸಿದೆ” ಎಂದಿದ್ದಾರೆ.
ಅಡೆನೊವೈರಸ್ ಲಸಿಕೆ ಜನರ ಜೀವಕೋಶಗಳಿಗೆ ಪ್ರವೇಶಿಸಿದಾಗ ಅದು ಸ್ಪೈಕ್ ಪ್ರೋಟೀನ್ ಜೆನೆಟಿಕ್ ಕೋಡ್ ಅನ್ನು ಕೂಡ ನೀಡುತ್ತದೆ. ಇದು ಜನರ ಜೀವಕೋಶಗಳು ಸ್ಪೈಕ್ ಪ್ರೋಟೀನ್ ಅನ್ನು ಉತ್ಪಾದಿಸಲು ಕಾರಣವಾಗುತ್ತದೆ ಮತ್ತು SARS-CoV-2 ವೈರಸ್ ಅನ್ನು ಗುರುತಿಸಿ, ಅದಕ್ಕೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಯಾರುಗೊಳಿಸಲು ಸಹಾಯ ಮಾಡುತ್ತದೆ. ಈ ಲಸಿಕೆ ದೇಹದಲ್ಲಿ ಪರಿಚಲನೆಗೊಳ್ಳುವಾಗ ವೈರಸ್ ಮೇಲೆ ದಾಳಿ ಮಾಡುತ್ತದೆ, ಜೊತೆಗೆ ಸೋಂಕಿತ ಕೋಶಗಳ ವಿರುದ್ಧವೂ ಹೋರಾಡುತ್ತದೆ. ಇದರಿಂದಾಗಿ ನಮ್ಮ ಲಸಿಕೆಯ ಜನರನ್ನು ದೀರ್ಘಕಾಲದವರೆಗೆ ಸೋಂಕಿನಿಂದ ರಕ್ಷಿಸಬಲ್ಲದು. ಆದಾಗ್ಯೂ, SARS-CoV-2 ಸೋಂಕಿನಿಂದ ಲಸಿಕೆ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ ಹಾಗೂ ಎಷ್ಟು ಕಾಲ ರಕ್ಷಣೆ ನೀಡಲಿದೆ ಎಂದು ದೃಢೀಕರಿಸುವ ಮೊದಲು ನಮಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯ ಇದೆ ಎಂದೂ ಅವರು ಹೇಳಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸುದ್ದಿಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ “ಇದು ತುಂಬಾ ಸಕಾರಾತ್ಮಕ ಸುದ್ದಿ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ನಮ್ಮ ವಿಜ್ಞಾನಿಗಳು ಮತ್ತು ಸಂಶೋಧಕರು ಅದ್ಭುತ ಕೆಲಸ ನಿರ್ವಹಿಸಿದ್ದಾರೆ. ಇನ್ನೂ ಹೆಚ್ಚಿನ ಪ್ರಯೋಗಗಳು ನಡೆಯಬೇಕಿದೆ, ಅದಾಗ್ಯೂ ಇದು ಸರಿಯಾದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ
ವ್ಯವಹಾರ ಕಾರ್ಯದರ್ಶಿ ಅಲೋಕ್ ಶರ್ಮಾ “ಇಂದಿನ ಫಲಿತಾಂಶಗಳು ಅತ್ಯಂತ ಉತ್ತೇಜನಕಾರಿಯಾಗಿದೆ, ಇಂಗ್ಲೆಂಡ್ ಮತ್ತು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ರಕ್ಷಿಸಲು ನಮ್ಮನ್ನು ಇದು ಇನ್ನೂ ಒಂದು ಹೆಜ್ಜೆ ಮುಂದೆ ಕರೆದೊಯ್ದಿದೆ. ಲಸಿಕೆಯ ಅಭಿವೃದ್ಧಿ ಮತ್ತು ತಯಾರಿಕೆಗಾಗಿ 84 ಮಿಲಿಯನ್ ಯುರೋ ಸರ್ಕಾರದ ಹೂಡಿದೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕಾರ್ಯನಿರ್ವಹಿಸುತ್ತಿರುವ ಚುರುಕುತನ ಮತ್ತು ವೇಗವು ಅತ್ಯುತ್ತಮವಾಗಿದೆ. ಅವರು ಇಲ್ಲಿಯವರೆಗೆ ಸಾಧಿಸಿದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ” ಎಂದು ಹೇಳಿದ್ದಾರೆ.