ಬೆಂಗಳೂರಿನಲ್ಲಿ ಹೋಂ ಕ್ವಾರಂಟೈನ್ನಲ್ಲಿರಲು ಸೂಚಿಸಿದವರಲ್ಲಿ 23,000 ಕ್ಕೂ ಹೆಚ್ಚು ಮಂದಿ ತಮ್ಮ ವಿಳಾಸವನ್ನು ತಪ್ಪಾಗಿ ನೀಡಿದ್ದಾರೆಂಬ ಕುರಿತು ಮಾಹಿತಿಗಳು ಬರುತ್ತಿವೆ. ಆರೋಗ್ಯ ಕಾರ್ಯಕರ್ತರು ನೀಡಲ್ಪಟ್ಟ ವಿಳಾಸಕ್ಕೆ ತೆರಳಿ ಪರಿಶೀಲಿಸಿದಾಗ ಇಷ್ಟು ಮಂದಿ ತಪ್ಪಾದ ವಿಳಾಸ ನೀಡಿರುವುದು ಬೆಳಕಿಗೆ ಬಂದಿದೆ.
ಹೋಂ ಕ್ವಾರಂಟೈನ್ನಲ್ಲಿರಿಸಲು ಸೂಚಿಸಿದ್ದ 46,113 ಮಂದಿ ಮಾತ್ರ ತಮ್ಮ ಸರಿಯಾದ ವಿಳಾಸವನ್ನು ಆರೋಗ್ಯ ಕಾರ್ಯಕರ್ತರಿಗೆ ನೀಡಿದ್ದಾರೆ. ತಪ್ಪು ವಿಳಾಸ ನಮೂದಿಸಿರುವ 23,184 ಮಂದಿಯನ್ನು ಟ್ರ್ಯಾಕಿಂಗ್ ಮಾಡಲು ಆರೋಗ್ಯ ಕಾರ್ಯಕರ್ತರಿಗೆ ತೊಡಕಾಗಿದೆ.
ಹೊರಗಿನಿಂದ ಬಂದ ಪ್ರಯಾಣಿಕರು 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿರಬೇಕೆಂಬುದು ಸರ್ಕಾರ ಆದೇಶಿಸಿದೆ. ಅದರಂತೆ ಹೊರ ರಾಜ್ಯದಿಂದ ಬಂದವರಿಗೆ ಸ್ವತಃ ಮನೆಯಲ್ಲೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿತ್ತು. ಬೆಂಗಳೂರಿನಲ್ಲಿ ಸಕ್ರಿಯ ಹೋಂ ಕ್ವಾರಂಟೈನ್ನಲ್ಲಿರುವ 69,297 ಮಂದಿಯಯಲ್ಲಿ 23,184 ಮಂದಿ ತಪ್ಪು ವಿಳಾಸ ನೀಡಿರುವುದು ಸ್ಥಳೀಯ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.