• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಸುಶಾಂತ್ ಸಿಂಗ್, ರಿಯಾ ಚಕ್ರವರ್ತಿ ಹಾಗೂ ನ್ಯಾಯಾಧೀಶ ಸಮಾಜ

by
August 30, 2020
in ಅಭಿಮತ
0
ಸುಶಾಂತ್ ಸಿಂಗ್
Share on WhatsAppShare on FacebookShare on Telegram

ಜೂನ್ 14, ಬಾಲಿವುಡ್‌ ಕಂಡ ಪ್ರತಿಭಾನ್ವಿತ ಯುವ ನಟ ತನ್ನ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಅಸಹಜ ಮರಣಹೊಂದಿ ಎರಡು ತಿಂಗಳ ತರುವಾಯವೂ ಆತನ ಸಾವಿನ ಕುರಿತಂತೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಕಾವು ಇನ್ನೂ ತಣ್ಣಗಾಗಿಲ್ಲ. ಮುಂಬೈ ಪೊಲೀಸರು ಹಾಗೂ ಮರಣೋತ್ತರ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದರೂ ಸಂವೇದನಾಹೀನರಾಗಿ ಒಂದು ವರ್ಗ ಕೆಲವೊಂದಿಷ್ಟು ಜನರನ್ನು ಹಣಿಯಲು ಸುಶಾಂತ್‌ ಪ್ರಕರಣವನ್ನು ಬಳಸಿಕೊಂಡಿತು.

ADVERTISEMENT

ಸುಶಾಂತ್‌ ಸಾವಿಗೆ ಇನ್ನೊಬ್ಬರನ್ನು ಗುರಿಯಾಗಿಸುವಲ್ಲಿ ನಿರತರಾದವರ ಗುರಿಗೆ ಮೊದಲು ಬಲಿಯಾದದ್ದು ನಿರ್ದೇಶಕ ಕರಣ್‌ ಜೋಹರ್‌, ಬಳಿಕ ಸಾಲಿನಲ್ಲಿ ಬಾಲಿವುಡ್‌ ತಾರೆಯ ಮಕ್ಕಳು. ಆದಿಯಲ್ಲಿ ಸುಶಾಂತ್‌ ಮರಣಕ್ಕೆ ಬಾಲಿವುಡ್‌ ನೆಪೋಟಿಸಂ ಕಾರಣವೆಂದು ಬಾಲಿವುಡ್‌ ತಾರೆಗಳ ಮೇಲೆ ಹೀನಾಯವಾಗಿ ಮುಗಿಬಿದ್ದಿದ್ದರು. ಇದಕ್ಕೆ ಕಂಗನಾ ರಾಣಾವತ್‌ ಎಂಬ ನಟಿಯೂ ಸಾಥ್‌ ನೀಡಿ, ಸುಶಾಂತ್‌ ಸಾವಿನಲ್ಲಿ ತನ್ನ ಪ್ರಸಿದ್ಧಿ ಬೆಳೆಸಿಕೊಂಡಳು. ಸಾಮಾಜಿಕ ಜಾಲತಾಣದ ಸೋಕಾಲ್ಡ್‌ ನ್ಯಾಯಾಧೀಶರ ಪಾಲಿಗೆ ಅಕ್ಷರಶಃ ʼದೀದಿʼ ಯಾಗಿಬಿಟ್ಟಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಳಿಕ ಸುಶಾಂತ್‌ ಮರಣದ ಉತ್ತರದಾಯಿತ್ವ ಸುಶಾಂತ್‌ ಮಾಜಿ ಗೆಳತಿ ರಿಯಾ ಚಕ್ರವರ್ತಿಯ ಹೆಗಲಿಗೆ ಹಾಕಲಾಯಿತು. ತನಿಖೆ ಮುಗಿಯುವ ಮುನ್ನವೇ ರಿಯಾಳನ್ನು ಕೊಲೆಗಾತಿ, ಮಾಟಗಾತಿಯೆಂಬಂತೆ ಕೆಲವು ಟ್ರಾಲ್‌ ಪೇಜ್‌ಗಳು ವಿಕೃತವಾಗಿ ಟ್ರಾಲ್‌ ಮಾಡಲು ಶುರುಮಾಡಿತು. ತನಿಖೆಯಾಗಿ ಕಾನೂನು ರೀತ್ಯಾ ತೀರ್ಪು ಬರುವ ಮೊದಲೇ ಜನರು ಓರ್ವ ವ್ಯಕ್ತಿಯನ್ನು ಅಪರಾಧಿಯನ್ನಾಗಿ ಬಿಂಬಿಸುತ್ತಿರುವುದು, ಮಾನಸಿಕ ಹಿಂಸೆ ನೀಡುತ್ತಿರುವುದು ಸಮಾಜ ಯಾವ ಮಟ್ಟಕ್ಕೆ ವಿಕಾರಗೊಂಡಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಕನಿಷ್ಠ ತೀರ್ಪು ಬರುವವರೆಗೂ ಕಾಯುವ ವಿವೇಚನೆಯಿಲ್ಲದ ಜನರ ವಿಕೃತತೆಗಳು ಯಥೇಚ್ಚವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು, ಹಾಗೂ ಮಹಿಳೆಯನ್ನು ದೇವಿಯನ್ನಾಗಿ ಪೂಜಿಸುವ ಭಾರತದ ʼಸೋಕಾಲ್ಡ್‌ ಸುಸಂಸ್ಕೃತ ಸಮಾಜʼ, ವಿಚಾರಣೆ ಎದುರಿಸುತ್ತಿರುವ ಓರ್ವ ಹೆಣ್ಣನ್ನುಅನಧಿಕೃತವಾಗಿ ಅಪರಾಧಿಯೆಂದೇ ಷರಾ ಬರೆದಿರುವುದನ್ನು ಅರಗಿಸಿಕೊಂಡು ಮಗುಮ್ಮಾಗಿ ಬಿದ್ದಿದೆ. ಕನಿಷ್ಟ ವಿಚಾರಣೆ ಮುಗಿಯುವ ತನಕ ಸಹನೆ ಪಾಲಿಸುವ ಜವಾಬ್ದಾರಿ ಯಾರಿಗೂ ಇದ್ದಂತಿಲ್ಲ. ಹೆಣಗಳ ಮೇಲೆ ಮುಗಿಬೀಳುವ ರಣಹದ್ದುಗಳಂತೆ ರೀಯಾಳ ಮೇಲೆ ಟ್ರಾಲ್‌ ಪೇಜ್‌ಗಳು, ಸುದ್ದಿ ಚಾನೆಲ್‌ಗಳು ಮುಗಿಬೀಳುತ್ತಿವೆ.

ರಾಜಕೀಯ ಪಕ್ಷಗಳು ಈ ಎಲ್ಲದಕ್ಕೂ ಒಂದು ಹೆಜ್ಜೆ ಮುಂದಿಟ್ಟಿದೆ. ರಾಜ್ಯ- ರಾಜ್ಯದ ನಡುವಿನ ಸಂಘರ್ಷದಂತೆ ಪ್ರಕರಣ ತಿರುವು ಪಡೆದುಕೊಳ್ಳುವವರೆಗೆ ಮೌನವಾಗಿ ನೋಡಿವೆ. ತಾನೇ ಪ್ರಕರಣವನ್ನು ಈ ಆಯಾಮಕ್ಕೆ ತಿರುಚಲು ಅನುವು ಮಾಡಿಕೊಟ್ಟಿದೆ.

ಮುಂಬೈಯನ್ನು ಕೇಂದ್ರೀಕರಿಸುವ ಬಾಲಿವಡ್‌ ಜಗತ್ತಿನಲ್ಲಿ ಬಿಹಾರ ಮೂಲದ ನಟ ಸುಶಾಂತ್‌ ತನ್ನ ದಾರುಣ ಅಂತ್ಯ ಕಡುಕೊಂಡದ್ದು ಬಿಹಾರಿಗಳಿಗೆ ತಮ್ಮ ಮನೆ ಮಗನನ್ನೇ ಕಳೆದುಕೊಂಡಂತಹ ನೋವನ್ನುಂಟು ಮಾಡಿತ್ತು. ಮಹಾರಾಷ್ಟ್ರ- ಬಿಹಾರ ಪೊಲೀಸರ ನಡುವಿನ ನಸುಕಿನ ಗುದ್ದಾಟಕ್ಕೂ ಈ ಪ್ರಕರಣ ಕಾರಣವಾಯಿತು. ಇದರ ಜೊತೆ ಜೊತೆಗೇ ಪಶ್ಚಿಮ ಬಂಗಾಳದ ಮೇಲೆಯೂ ಧ್ವೇಷ ಕಾರಲು ಆನ್‌ಲೈನ್‌ ಟ್ರಾಲ್‌ ಪೇಜ್‌ಗಳು ಶುರು ಮಾಡಿದವು. ಸುಶಾಂತ್‌ ಮಾಜಿ ಗೆಳತಿ ರೀಹಾ, ಪಶ್ಚಿಮ ಬಂಗಾಳದ ಮೂಲದವಳಾದ್ದರಿಂದ ಪಶ್ಚಿಮ ಬಂಗಾಳದ ಹೆಣ್ಣುಮಕ್ಕಳಿಂದ ದೂರವಿರಿ ಎಂಬಂತಹ ವಿಕೃತ ಟ್ರಾಲ್‌ಗಳು ಹಾಸ್ಯದ ರೂಪದಲ್ಲಿ ಹರಿದಾಡಿದವು.

ಮಮತಾ ಬ್ಯಾನರ್ಜಿ ಹಾಗೂ ರಿಯಾಳ ಫೋಟೋ ಕಲೇಜ್‌ ಮಾಡಿ ʼಪಶ್ಚಿಮ ಬಂಗಾಳದ ಹೆಣ್ಣುಗಳಿಂದ ಯಾಕೆ ದೂರವಿರಬೇಕು ಎನ್ನುವುದಕ್ಕೆ ಕಾರಣʼ ಎಂಬ ಒಕ್ಕಣೆಯೊಂದಿಗೆ ಮೀಮ್‌ಗಳು ಹರಿದಾಡಿದವು. ಸಂಬಂಧಗಳಲ್ಲಿ ಮೋಸ ಮಾಡುವುದು ಹೆಣ್ಣು ಎಂಬ ಸ್ಟೀರಿಯೋ ಟೈಪ್‌ ಮನೋಭಾವನೆ ಇಲ್ಲೂ ಕೆಲಸ ಮಾಡಿತು. ಮಾತ್ರವಲ್ಲದೆ, ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಲು ಸುಶಾಂತ್‌ ಸಾವು ಬಳಕೆಯಾಯಿತು. ಸಮಾಜದಲ್ಲಿ ಅಸಹನೆ, ವಿಕೃತ ರೀತಿಯ ಹಾಸ್ಯಗಳಿಗೆ, ಧ್ವೇಷ ಹರಡುವಿಕೆಗೆ ಓರ್ವ ಸೃಜನಶೀಲ ನಟನ ಸಾವು ಯಥೇಚ್ಛ ಬಳಕೆಯಾದದ್ದು ಮಾತ್ರ ವಿಷಾದ.

ಸದ್ಯ ಪ್ರಕರಣ ಸಿಬಿಐ ಮೆಟ್ಟಿಲೇರಿದೆ. ರೀಯಾಳ ವಿರುದ್ಧ ಖಾಸಗೀ ನ್ಯೂಸ್‌ ಚಾನೆಲ್‌ಗಳು ಪುಂಖಾನುಪುಂಖವಾಗಿ ಆರೋಪಗಳನ್ನು ಹೊರಿಸುತ್ತಿದೆ. ಅರ್ನಾಬ್‌ರಂತಹ ಕೂಗುಮಾರಿ ಪತ್ರಕರ್ತರು ತೀರ್ಪನ್ನೇ ನೀಡಿಯೇ ಬಿಟ್ಟಿದ್ದಾರೆ. ಲೈವ್‌ ಟೆಲಿಕಾಸ್ಟ್‌ಗೆ ಕರೆದು ಅವಮಾನ ಮಾಡಿ ಕಳಿಸಿದ್ದಾರೆ. ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡದ್ದೇ ಹೌದಾದರೇ, ಯಾವ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡನೋ ಅದಕ್ಕಿಂತಲೂ ಹೆಚ್ಚು ನೋವು ಆತನ ಸಾವಿನ ಪ್ರತಿಕ್ರಿಯೆಯ ಹೆಸರಿನಲ್ಲಿ ಸಮಾಜ ಕೊಡುತ್ತಿದೆ. ಆತ ಸತ್ತ ಬಳಿಕವೂ ಆತನಿಗೆ ನೆಮ್ಮದಿ ನೀಡದೆ, ಆತನ ಸಾವಿನಿಂದ ಕಂಗನಾರಂತವರು ಹೆಸರು ವೃಧ್ಧಿಸಿದರೆ, ಅರ್ನಾಬ್‌ ನಂತವರು ತಮ್ಮ ವೀಕ್ಷಕರನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸುಶಾಂತ್‌ ಕುರಿತಾದ ಕಾರ್ಯಕರ್ಮಗಳಿಗೆ ಹೆಚ್ಚಿನ ಟಿಆರ್‌ಪಿ ಸಿಗುತ್ತಿದೆ. ಈ ವಿಚಾರ ಗೊತ್ತಿದ್ದೇ, ಲಾಭ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದ ಸುದ್ದಿ ಕೋಣೆಗಳನ್ನು ನಿರ್ಮಿಸಿ ಕೂತಿರುವ ಚಾನೆಲ್‌ಗಳು ಸುಶಾಂತ್‌ ಸಾವನ್ನು ಹರಿದು ಮುಕ್ಕುತ್ತಿದೆ.

ಸದ್ಯ ಸುಶಾಂತ್‌ ಅಸಹಜ ಪ್ರಕರಣ ಸಿಬಿಐ ತನಿಖೆಯಲ್ಲಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ 10 ಗಂಟೆಗಳಿಗಿಂತ ಹೆಚ್ಚು ಕಾಲ ರಿಯಾ ಚಕ್ರವರ್ತಿಯನ್ನು ಸಿಬಿಐ ವಿಚಾರಣೆ ನಡೆಸಿದೆ. ರಜಪೂತ್ ಸಾವಿನ ಪ್ರಕರಣದ ತನಿಖೆಗಾಗಿ ಸಿಬಿಐ ತಂಡವು ರಿಯಾ ಸಹೋದರ ಶೋಯಿಕ್ ಚಕ್ರವರ್ತಿಯ ಹೇಳಿಕೆಯನ್ನು ದಾಖಲಿಸಿದೆ. ಸುಶಾಂತ್‌ ರಜಪೂತ್‌ನ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿ, ಅಡುಗೆ ನೀರಜ್ ಸಿಂಗ್ ಮತ್ತು ಸಹಾಯಕ ದೀಪೇಶ್ ಸಾವಂತ್ ಇತರರನ್ನು ಉನ್ನತ ಮಟ್ಟದ ಪ್ರಕರಣದ ತನಿಖೆಯ ಭಾಗವಾಗಿ ಪ್ರಶ್ನಿಸಿದೆ. ರಜಪೂತ ಚಾರ್ಟರ್ಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್ ಮತ್ತು ಅಕೌಂಟೆಂಟ್ ರಜತ್ ಮೇವತಿ ಅವರ ಹೇಳಿಕೆಗಳನ್ನು ಈಗಾಗಲೇ ಸಿಬಿಐ ತನಿಖಾ ತಂಡ ದಾಖಲಿಸಿದೆ. ಈ ಪ್ರಕರಣದ ʼತೀರ್ಪುʼ ನ್ಯಾಯಾಲಯವು ವಿಚಾರಣೆಯ ನಂತರ ನೀಡಲಿದೆ.

Tags: Rhea Chakrabortysushanth sing rajpoothರಿಯಾ ಚಕ್ರವರ್ತಿಸುಶಾಂತ್‌ ಸಿಂಗ್‌ ರಜಪೂತ್
Previous Post

ಬೋಡೋ ಲ್ಯಾಂಡ್ ಮಾದರಿಯ ಕುಕಿ ಲ್ಯಾಂಡ್ ಸ್ಥಾಪನೆಗೆ ಕುಕಿ ಬಂಡುಕೋರರ ಒತ್ತಾಯ

Next Post

ಗಣಪ ಹೋದ… ಜೋಕುಮಾರ ಬಂದ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಗಣಪ ಹೋದ... ಜೋಕುಮಾರ ಬಂದ

ಗಣಪ ಹೋದ... ಜೋಕುಮಾರ ಬಂದ

Please login to join discussion

Recent News

Health Care

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

by ಪ್ರತಿಧ್ವನಿ
November 3, 2025
Top Story

by ಪ್ರತಿಧ್ವನಿ
November 3, 2025
ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!
Top Story

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ʼಮಾರ್ಕ್ʼ ವೀಕೆಂಡ್‌ ಕಿಕ್‌..!

by ಪ್ರತಿಧ್ವನಿ
November 3, 2025
ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು
Top Story

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

by ಪ್ರತಿಧ್ವನಿ
November 3, 2025
ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು
Top Story

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada