• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸರ್ದಾರ್‌ ಪಟೇಲರು ಆರ್‌ಎಸ್‌ಎಸ್‌ ನಿಷೇಧಿಸಿ ಇಂದಿಗೆ 72 ವರ್ಷ

by
February 4, 2020
in ದೇಶ
0
ಸರ್ದಾರ್‌ ಪಟೇಲರು ಆರ್‌ಎಸ್‌ಎಸ್‌ ನಿಷೇಧಿಸಿ ಇಂದಿಗೆ 72 ವರ್ಷ
Share on WhatsAppShare on FacebookShare on Telegram

ಇಂದು ಅಧಿಕಾರಕ್ಕಾಗಿ ಹಾಗೂ ಮತಗಳಿಕೆಗಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಹೆಸರನ್ನು ಬಳಸಿಕೊಳ್ಳುತ್ತಿರುವ ಆರ್‌ಎಸ್‌ಎಸ್‌ ಬೆಂಬಲಿತ ಬಿಜೆಪಿ ಪಕ್ಷದ ನಾಯಕರಿಗೆ 72 ವರ್ಷಗಳ ಹಿಂದೆ ಅದೇ ಸರ್ದಾರ್‌ ಪಟೇಲ್‌ ಅವರು ಗಾಂಧಿ ಹತ್ಯೆಯ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ್ದು ಮರೆತು ಹೋಯಿತೇ? ತಮ್ಮ ಧೃಡ ನಿಲುವುಗಳಿಗೆ ಸದಾ ಹೆಸರುವಾಸಿಯಾಗಿದ್ದ ಸರ್ದಾರ್‌ ಪಟೇಲ್‌ ಅವರನ್ನು ಇಂದು ಕ್ಷುಲ್ಲಕ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ರಾಜಕೀಯ ನಾಯಕರಿಗೆ ಅಂದು ಸರ್ದಾರ್‌ ಪಟೇಲ್‌ ಅವರು ಬರೆದಿದ್ದ ಪತ್ರ ನೆನಪಿಲ್ಲವೇನೋ.

ADVERTISEMENT

ಆರ್‌ಎಸ್‌ಎಸ್‌ ಅನ್ನು ನಿಷೇಧಿಸಿದ ಬಳಿಕ ಅಂದರೆ ಫೆಬ್ರುವರಿ 4, 1948ರಂದು ಅಂದಿನ ಆರ್‌ಎಸ್‌ಎಸ್‌ ನಾಯಕರಿಗೆ ಪತ್ರ ಬರೆದಿದ್ದ ಸರ್ದಾರ್‌ ಪಟೇಲ್‌ ಅವರು “ಆರ್‌ಎಸ್‌ಎಸ್‌ ದೇಶದ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟು ಮಾಡುತ್ತಿದೆ ಹಾಗೂ ಭಾರತ ಮಾತೆಯ ಹೆಸರಿಗೆ ಮಸಿ ಬಳಿಯುತ್ತಿದೆ. ಇದು ದೇಶದಲ್ಲಿ ದ್ವೇಷ ಮತ್ತು ಹಿಂಸೆಯ ಮೂಲ ಬೇರು. ಹೀಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲು ಭಾರತ ಸರ್ಕಾರವು ನಿರ್ಧರಿಸಿದೆ” ಎಂದಿದ್ದರು. ಆಗಿನ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್‌ ಪಟೇಲ್‌ ಅವರು ಬರೆದ ಪತ್ರ ಇಂದಿಗೂ ಗೃಹ ಕಚೇರಿಯ ಕಡತಗಳಲ್ಲಿ ಲಭ್ಯವಿದೆ.

ತಮ್ಮ ಧೃಢ ನಿರ್ಧಾರದಿಂದ ಪಟೇಲರು ಹಿಂದೆ ಸರಿಯಲಿಲ್ಲ. ಅಂದಿನ ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಎಂ ಎಸ್‌ ಗೋಲ್ವಾಲ್ಕರ್‌, ಪಟೇಲರಿಗೆ ಪತ್ರ ಬರೆದು “ಆರ್‌ಎಸ್‌ಎಸ್‌ ಭಾರತದ ಜಾತ್ಯಾತೀತೆಯನ್ನು ಹಾಗೂ ಭಾರತದ ಧ್ವಜವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತದೆ. ಹಾಗಾಗಿ, ಆರ್‌ಎಸ್‌ಎಸ್‌ ಮೇಲೆ ವಿಧಿಸಿರುವ ನಿಷೇಧವನ್ನು ಹಿಂಪಡೆಯಬೇಕು,” ಎಂದು ಹೇಳಿದ್ದರು.

ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುವ ಹಾಗೂ ಅದರಂತೆ ನಡೆಯುವ ಮತ್ತು ಭಾರತದ ಧ್ವಜವನ್ನು ಒಪ್ಪಿಕೊಳ್ಳುವ ಒಪ್ಪಂದದ ಮೇರೆಗೆ 1949ರ ಜುಲೈ 11ರಂದು ಸರ್ದಾರ್‌ ಪಟೇಲರು ಆರ್‌ಎಸ್‌ಎಸ್‌ ಮೇಲಿನ ನಿಷೇಧವನ್ನು ಹಿಂಪಡೆದರು. ಇಲ್ಲಿ ಆರ್‌ಎಸ್‌ಎಸ್‌ ಸಂಪೂರ್ಣವಾಗಿ ಭಾರತದ ಧ್ವಜದ ಎದುರು ಶರಣಾಗತವಾಗುವವರೆಗೂ ಪಟೇಲರು ತಮ್ಮ ಪಟ್ಟು ಸಡಿಲಿಸಲಿಲ್ಲ. ಇಂತಹ ಸಂಘಟನೆಯನ್ನು ಸರ್ದಾರ್‌ ಪಟೇಲರು ನಿಷೇಧಿಸಿ ಇಂದಿಗೆ 72 ವರ್ಷ ತುಂಬಿದೆ.

ಇದರ ನಂತರವೂ ಆರ್‌ಎಸ್‌ಎಸ್‌ ದೇಶದಲ್ಲಿ ಎರಡು ಬಾರಿ ನಿಷೇದಕ್ಕೆ ಒಳಗಾಗಿದೆ. ಇಂದಿರಾ ಗಾಂಧೀಯವರು ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಹಾಗೂ 1992ರ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಘಟನೆಯ ನಂತರ ಆರ್‌ಎಸ್‌ಎಸ್‌ಅನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು.

ಅಂದು ಅಂತಹ ದಯನೀಯ ಸ್ಥಿತಿಯಲ್ಲಿದ್ದಂತಹ ಸಂಘಟನೆಯ ಇಂದಿನ ನಾಯಕರು ಅದೇ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಾರೆ. ಮಾಹಾತ್ಮಾ ಗಾಂಧಿಯನ್ನು ಹತ್ಯೆಗೈದ ಆರೋಪದ ನಿಷೇಧವಾಗಿದ್ದ ಆರ್‌ಎಸ್‌ಎಸ್‌ನ ನಾಯಕರು ಇಂದಿಗೂ ಮಹಾತ್ಮಾ ಗಾಂಧಿಯ ಕುರಿತು ಸಾರ್ವಜನಿಕ ಸಭೆಗಳಲ್ಲಿ ಕೀಳು ಮಟ್ಟದ ಭಾಷೆಯನ್ನು ಪ್ರಯೋಗ ಮಾಡಿ ತಮ್ಮ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ.

Tags: M S GolwolkarMahatma Gandhi Assassination‌Sardar PatelStatue of Unityಆರ್‌ಎಸ್‌ಎಸ್‌ಎಂ ಎಸ್‌ ಗೋಲ್ವೋಲ್ಕರ್ನಾಥೂರಾಮ್ ಗೋಡ್ಸೆಮಹಾತ್ಮಾ ಗಾಂಧಿ ಹತ್ಯೆಸರ್ದಾರ್‌ ಪಟೇಲ
Previous Post

ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು 

Next Post

NRC ಕುರಿತು ಸಂಸತ್ತಿನಲ್ಲಿ ಸುಳ್ಳು ಹೇಳಿದರೇ ಅಮಿತ್‌ ಶಾ?

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
NRC ಕುರಿತು ಸಂಸತ್ತಿನಲ್ಲಿ ಸುಳ್ಳು ಹೇಳಿದರೇ ಅಮಿತ್‌ ಶಾ?

NRC ಕುರಿತು ಸಂಸತ್ತಿನಲ್ಲಿ ಸುಳ್ಳು ಹೇಳಿದರೇ ಅಮಿತ್‌ ಶಾ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada