• Home
  • About Us
  • ಕರ್ನಾಟಕ
Monday, January 19, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?

by
July 14, 2020
in ರಾಜಕೀಯ
0
ಸಚಿನ್ ಪೈಲಟ್ ಕಿತ್ತುಹಾಕಿದ ಕಾಂಗ್ರೆಸ್ ಪರ್ಯಾಯ ನಾಯಕನನ್ನು ಹುಟ್ಟುಹಾಕುವುದೇ?
Share on WhatsAppShare on FacebookShare on Telegram

ಕಾಂಗ್ರೆಸ್ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ‌ಉಪ ಮುಖ್ಯಮಂತ್ರಿ ಸ್ಥಾನದಿಂದ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕುವ ಮೂಲಕ ಬಹಳ ಅಪರೂಪದ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್ ಒಳ್ಳೆಯದಕ್ಕೂ ಕೆಟ್ಟದಕ್ಕೂ ಹೀಗೆ ಬೇಗ ಕ್ರಮ ಕೈಗೊಂಡ ಉದಾಹರಣೆ ವಿರಳಾತಿವಿರಳ. ಅನಗತ್ಯವಾಗಿ ಕಾದುನೋಡುವ ತಂತ್ರ ಅನುಸರಿಸುತ್ತಿತ್ತು. ವಿನಾಕಾರಣ ವಿಳಂಬ ಮಾಡುತ್ತಿತ್ತು. ಸೋಮಾರಿತನದ ಪರಮಾವಧಿ ತೋರುತ್ತಿತ್ತು. ಅದೆಲ್ಲದಕ್ಕೂ ಅಪವಾದವೆಂಬಂತೆ ತಕ್ಷಣವೇ ಕ್ರಮ ಕೈಗೊಂಡಿದೆ.

ADVERTISEMENT

ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನಗಳಲ್ಲಿ ಸಾಲು ಸಾಲಾಗಿ ಬಂಡಾಯ ಎದ್ದ ಕಾರಣ ಕಡೆಗೂ ಕಾಂಗ್ರೆಸ್ ಹೈಕಮಾಂಡ್ ‘ಏನಾದರೊಂದು ಕ್ರಮ’ ಕೈಗೊಳ್ಳಬೇಕೆಂದು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇದು ಕೂಡ ವಿಳಂಬವಾದ ತೀರ್ಮಾನವೇ. ಆದರೆ ಈಗಲಾದರೂ ಶಿಸ್ತು ಕ್ರಮ ಕೈಗೊಂಡಿದೆ. ಆ ಮುಖಾಂತರ ‘ದುರ್ಬಲ ಹೈಕಮಾಂಡ್’ ಎಂಬ ದೂರಿಗೆ ತಕ್ಕ ಉತ್ತರ ನೀಡಿದೆ. ಮತ್ತು ಮುಂದೆ ಬಂಡೇಳುವವರಿಗೂ ಸಂದೇಶ ರವಾನಿಸಿದೆ.

ಹಾಗಂತ ಕಾಂಗ್ರೆಸ್ ಹೈಕಮಾಂಡಿಗೆ ಬುದ್ದಿ ಬಂದೇಬಿಟ್ಟಿತು ಎಂದು ಎಣಿಸುವಂತಿಲ್ಲ. ಏಕೆಂದರೆ ಈ ಬಾರಿ ಸಚಿನ್ ಪೈಲಟ್ ಅವರಿಂದ ಹೈಕಮಾಂಡ್ ನಾಯಕರಿಗೆ ಆಗಿರುವುದು ಮರ್ಮಾಘಾತ. ಖುದ್ದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಹಮದ್ ಪಟೇಲ್ ಅವರಂಥ ನಾಯಕರು ಮನವೊಲಿಸಲು ಮುಂದಾದರೂ ಸಚಿನ್ ಪೈಲಟ್ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದು ಹೈಕಮಾಂಡ್ ನಾಯಕರನ್ನು ಕೆರಳಿಸಿದೆ.

ಇದಲ್ಲದೆ ಸಚಿನ್ ಪೈಲಟ್ ಹಾಕಿರುವ ಮೂರು ಷರತ್ತುಗಳು ಕೂಡ ಹೈಕಮಾಂಡ್ ರೊಚ್ಚಿಗೇಳುವಂತೆ ಮಾಡಿದೆ. ಆ ಮೂರು ಷರತ್ತುಗಳೇನೆಂದರೆ… ಒಂದು- ಮುಂಬರುವ ವಿಧಾನಸಭೆಗೂ ಮುನ್ನ ಸಾರ್ವಜನಿಕವಾಗಿ ತನ್ನನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು. ಎರಡು- ತನ್ನ ಬೆಂಬಲಿಗ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಅಥವಾ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕು. ಮೂರು- ರಾಜಸ್ಥಾನದ ಕಾಂಗ್ರೆಸ್​ ಉಸ್ತುವಾರಿಯಾಗಿರುವ ಅವಿನಾಶ್ ಪಾಂಡೆ ಅವರನ್ನು ಬದಲಾಯಿಸಬೇಕು. ಹೀಗೆ ತಮ್ಮ ಪರಮಾಧಿಕಾರವನ್ನೇ ಪ್ರಶ್ನೆ ಮಾಡುವಂಥ ಷರತ್ತುಗಳನ್ನು ವಿಧಿಸಿದ್ದರಿಂದ ಸಿಡಿದೆದ್ದ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನೇ ಪದಚ್ಯುತಗೊಳಿಸಿದೆ.

ಕಾಂಗ್ರೆಸ್ ಹೀಗೆ ತ್ವರಿತವಾಗಿ ಕ್ರಮ ಕೈಗೊಳ್ಳುವ ಗುಣ ಬೆಳಸಿಕೊಳ್ಳುವುದು ಆ ಪಕ್ಷದ ಸದ್ಯದ ಪರಿಸ್ಥಿತಿಗೆ ಬಹಳ ಅಗತ್ಯವೇ ಆಗಿದೆ. ಆದರೆ ಸಚಿನ್ ಪೈಲಟ್ ವಿಷಯದಲ್ಲಿ ಮರುಚಿಂತನೆ ನಡೆಸಬೇಕಿತ್ತು. ಮೇಲುನೋಟಕ್ಕೆ ಸಚಿನ್ ಪೈಲಟ್ ಅಧಿಕಾರದಾಹಿ ಎಂದು ಕಾಣಿಸಬಹುದು. ವಾಸ್ತವ ಭಿನ್ನವಾಗಿದೆ. ಇವತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಚಿನ್ ಪೈಲಟ್ ಬೆವರು ಸುರಿಸಿದ್ದಾರೆ. ಅಶೋಕ್ ಗೆಹ್ಲೋಟ್ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡು ದೆಹಲಿಯಲ್ಲಿದ್ದಾಗ ರಾಜಸ್ಥಾನದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟಿದ್ದಾರೆ. 36ನೇ ವರ್ಷಕ್ಕೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷಗಾದಿ ಏರಿದರೂ ಎಲ್ಲರನ್ನೂ ಸಂಭಾಳಿಸಿದ್ದಾರೆ. ಹಾಗಾಗಿ ಸಚಿನ್ ಪೈಲಟ್ ವಿಷಯದಲ್ಲಿ ಮತ್ತೊಂದು ಅವಕಾಶ ನೀಡಬೇಕಿತ್ತು‌.

ಇನ್ನೊಂದು ವಿಷಯಕ್ಕೆ ಸಚಿನ್ ಪೈಲಟ್ ಅವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೆದು ಧೋರಣೆ ತಾಳಬೇಕಿತ್ತು. ಮಧ್ಯಪ್ರದೇಶದಲ್ಲಿ ಪಕ್ಷ ತ್ಯಜಿಸಿದ ಜ್ಯೊತಿರಾಧಿತ್ಯ ಸಿಂಧ್ಯ ಬಿಜೆಪಿ ಸೇರಿದರು. ಆದರೆ ಸಚಿನ್ ಪೈಲಟ್ ತಾನು ಬಿಜೆಪಿ ಸೇರುವುದಿಲ್ಲ ಎಂಬುದನ್ನು ಬೆಂಬಲಿಗರ ಮೂಲಕ ಸ್ಪಷ್ಟಪಡಿಸಿದ್ದಾರೆ. ಜ್ಯೊತಿರಾಧಿತ್ಯ ಸಿಂಧ್ಯ ರೀತಿ ನೇರವಾಗಿ ಬಿಜೆಪಿ ಪಾಳೆಯ ಸೇರಿಕೊಂಡಿದ್ದರೆ ಕಾಂಗ್ರೆಸಿಗೆ ಇನ್ನೂ ಹೆಚ್ಚು ನಷ್ಟ ಆಗಿರುತ್ತಿತ್ತು.

ಇದೆಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷ ಈಗ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಪರ್ಯಾಯ ನಾಯಕನನ್ನು ಹುಡುಕಿಲ್ಲ. ಕರ್ನಾಟಕದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ, ಬಿ.ಕೆ. ಹರಿಪ್ರಸಾದ್ ಅವರನ್ನು ವಿಧಾನ‌ ಪರಿಷತ್ ಸದಸ್ಯರನ್ನಾಗಿ ಮಾಡಿ ಹಲವು ಯುವಕರಿಗೆ ಭ್ರಮನಿರಸನ ಉಂಟುಮಾಡಲಾಗಿತ್ತು. ರಾಜಸ್ಥಾನದಲ್ಲಿ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಉಳಿಸಿಕೊಳ್ಳಲು ಯುವ ನಾಯಕ ಸಚಿನ್ ಪೈಲಟ್ ಅವರನ್ನು ಕಳೆದುಕೊಂಡಿದೆ. ಅಶೋಕ್ ಗೆಹ್ಲೋಟ್ ಸಂಧ್ಯಾಕಾಲದಲ್ಲಿರುವವರು. ಸಚಿನ್ ಪೈಲಟ್ ಇನ್ನಷ್ಟು ವರ್ಷ ಪಕ್ಷಕ್ಕಾಗಿ ದುಡಿಯಬಲ್ಲವರಾಗಿದ್ದರು. ಹಳೆಯ ಬೇರನ್ನು ಉಳಿಸಿಕೊಂಡು ಹೊಸ ಚಿಗುರನ್ನು ಕಳೆದುಕೊಂಡಿದೆ. ಕ್ರಮ ತೆಗೆದುಕೊಳ್ಳುವುದೆಂದರೆ ಇರುವುದನ್ನು ಕಳೆದುಕೊಳ್ಳುವುದಲ್ಲ. ಪ್ರೊ ಆ್ಯಕ್ಟೀವ್ ಆಗುವುದೆಂದರೆ ಅಕಾಲದಲ್ಲಿ ಸಕ್ರಿಯವಾಗುವುದಲ್ಲ ಎನ್ನುವುದು ಕಾಂಗ್ರೆಸ್ ಹೈಕಮಾಂಡಿಗೆ ಅರ್ಥ ಆಗಬೇಕಿದೆ.

Tags: Sachin pilotಕಾಂಗ್ರೆಸ್ಸಚಿನ್ ಪೈಲಟ್
Previous Post

ಇರಾನ್‌- ಚೀನಾ ಪಾಲುದಾರಿಕೆ; ಚಬಹರ್ ರೈಲು ಮಾರ್ಗದಿಂದ ಭಾರತ ಹೊರಕ್ಕೆ

Next Post

ಕರೋನಾ ಅಟ್ಟಹಾಸದ ಎದುರು ಬಡ್ಡುಕತ್ತಿ ಝಳಪಿಸುತ್ತಿರುವುದೇಕೆ?

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

ತನ್ನ ಮಾತು ವಿರೋಧಿಸುವರಿಗೆ ಟ್ರಂಪ್ ಮತ್ತೆ ಶಾಕ್

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
Next Post
ಕರೋನಾ ಅಟ್ಟಹಾಸದ ಎದುರು ಬಡ್ಡುಕತ್ತಿ ಝಳಪಿಸುತ್ತಿರುವುದೇಕೆ?

ಕರೋನಾ ಅಟ್ಟಹಾಸದ ಎದುರು ಬಡ್ಡುಕತ್ತಿ ಝಳಪಿಸುತ್ತಿರುವುದೇಕೆ?

Please login to join discussion

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada