• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಶೀಘ್ರವೇ ಸಿಎಂ ಯಡಿಯೂರಪ್ಪಗೆ ಕಾದಿದೆ ಮತ್ತೊಂದು ಶಾಕ್!

by
June 10, 2020
in ರಾಜಕೀಯ
0
ಶೀಘ್ರವೇ ಸಿಎಂ ಯಡಿಯೂರಪ್ಪಗೆ ಕಾದಿದೆ ಮತ್ತೊಂದು ಶಾಕ್!
Share on WhatsAppShare on FacebookShare on Telegram

ಟಿವಿ ಮಾಧ್ಯಮಗಳಿಂದ ‘ರಾಜಹುಲಿ’ ಎಂದೇ ಬಿರುದಾಂಕಿತರಾಗಿರುವ, ಮುಖ್ಯವಾಹಿನಿ ಮಾಧ್ಯಮಗಳಿಂದ ‘ಛಲದಂಕ ಮಲ್ಲ’ನೆಂದೇ ಕರೆಸಿಕೊಂಡಿರುವ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ರಾಜ್ಯದಿಂದ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಮುಟ್ಟಿ ನೋಡಿಕೊಳ್ಳುವಂತಹ ಏಟು ನೀಡಿದೆ. ಈಗ ವಿಧಾನ ಪರಿಷತ್ ಚುನಾವಣೆಗೆ ಹುರಿಯಾಳುಗಳನ್ನು ಆಯ್ಕೆ ಮಾಡುವ ಸರದಿ. ಈ‌ ವಿಷಯದಲ್ಲೂ ಯಡಿಯೂರಪ್ಪಗೆ ಮುಖಭಂಗವಾಗುವುದು ಶತಸಿದ್ದ ಎನ್ನುತ್ತವೆ ಬಿಜೆಪಿಯ ಹೈಕಮಾಂಡ್ ಮೂಲಗಳು.

ADVERTISEMENT

ಹೆಸರಿಗೆ ಮಾತ್ರ ಹೈಕಮಾಂಡ್, ಎಲ್ಲವೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಹಿಮೆ ಎಂಬುದೀಗ ಬಹಿರಂಗಗೊಂಡಿರುವ ಗುಟ್ಟು.‌ ಆದರವರು ಅಡಿಗಡಿಗೆ ಯಡಿಯೂರಪ್ಪ ಅವರನ್ನು ಕಾಡುತ್ತಿರುವುದೇಕೆ ಎಂಬುದು ಕುತೂಹಲಕಾರಿ ಸಂಗತಿ. ರಾಷ್ಟ್ರೀಯ ಸಂಘಟನಾ‌ ಕಾರ್ಯದರ್ಶಿಯಾದರೂ ರಾಜ್ಯದ ಬೆಳವಣಿಗೆಗಳ ಬಗ್ಗೆ ಯಾಕಿಷ್ಟೊಂದು ಆಸಕ್ತಿ, ಕಾಳಜಿ ಎಂಬುದು ಇನ್ನೊಂದು ರೀತಿಯ ಕುತೂಹಲ.

Also Read: ರಾಜ್ಯಸಭಾ ಚುನಾವಣೆ: ಮುಖ್ಯಮಂತ್ರಿಗೆ ಮತ್ತೊಮ್ಮೆ ಮುಖಭಂಗ..?

ಈ ಸಂತೋಷ್ ರಾಜ್ಯ ಬಿಜೆಪಿಯಲ್ಲಿ ಮುಖ್ಯ ಪಾತ್ರಧಾರಿಯಾಗಿದ್ದೇ ಯಡಿಯೂರಪ್ಪ ಅನುಪಸ್ಥಿತಿಯಲ್ಲಿ. ‌ಅಂದರೆ ಯಡಿಯೂರಪ್ಪ ಬಿಜೆಪಿಗೆ ವಿಚ್ಛೇದನ ನೀಡಿ ಕೆಜೆಪಿ ಕಟ್ಟಿದ ಬಳಿಕ. ಯಡಿಯೂರಪ್ಪ ಇಲ್ಲದೆಯೂ 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಇದು ಅಲ್ಲಿಯವರೆಗೆ ಯಡಿಯೂರಪ್ಪ ಅವರೇ ನೀರು ಗೊಬ್ಬರ ಹಾಕಿ ಬೆಳೆಸಿದ್ದ ಬೇರುಗಳಿಂದ ಫಲವೇ ಆದರೂ ಶ್ರೇಯ ಮಾತ್ರ ಸಂತೋಷ್ ಪಾಲಾಯಿತು. ಆಗಿನಿಂದಲೂ ಅವರಿಗೆ ‘ಯಡಿಯೂರಪ್ಪ ಹೊರತುಪಡಿಸಿದ ಬಿಜೆಪಿ’ ಕಟ್ಟಬೇಕೆಂಬ ಹಠ ಹುಟ್ಟಿಕೊಂಡಿತು. ಅದೇ ಕಾರಣಕ್ಕೆ ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದ ಮೇಲೂ, ಮತ್ತೆ ಮುಖ್ಯಮಂತ್ರಿ ಆದ ಮೇಲೂ ಅವರ ಕೈ ಮೇಲಾಗದಂತೆ ಸದಾ ನಿಗಾ ಇಟ್ಟಿದ್ದಾರೆ. ಪೂರಕವಾದ ತಂತ್ರ ರೂಪಿಸುತ್ತಿದ್ದಾರೆ.

ಮೊದಲೆಲ್ಲಾ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಕುರ್ಚಿಯ ಕನಸು ಕಾಣುತ್ತಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದಮೇಲೆ ತಮ್ಮ ಕನಸನ್ನು ತಾವೇ ಕೊಂದುಹಾಕಿದ್ದಾರೆ. ಬದಲಿಗೆ ತಮ್ಮ‌ ಶಿಷ್ಯನೊಬ್ಬನನ್ನು ಸಿಎಂ ಕುರ್ಚಿಯ ಮೇಲೆ ಕೂರಿಸುವ ಹಂಬಲ‌ ಹೊಂದಿದ್ದಾರೆ ಎನ್ನುತ್ತಾರೆ ಅವರ ಸಮೀಪವರ್ತಿಗಳು. ಸಂತೋಷ್ ಅವರ ಈ ಹಂಬಲಕ್ಕೆ ಸಹಜವಾಗಿ ಯಡಿಯೂರಪ್ಪ ತಡೆಗೋಡೆಯಾಗಿದ್ದಾರೆ. ಅದೇ ಕಾರಣಕ್ಕೆ ಕ್ರಮೇಣವಾಗಿ ಪಕ್ಷದಲ್ಲಿ ಯಡಿಯೂರಪ್ಪ ಅವರ ಪ್ರಭಾವ, ಹಿಡಿತಗಳನ್ನು ಕ್ಷೀಣಗೊಳಿಸುವ ಕೆಲಸವಾಗುತ್ತಿದೆ.

Also Read: ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಅವಿರೋಧ ಆಯ್ಕೆ?

ಈ ತಂತ್ರದ ಭಾಗವಾಗಿಯೇ ‘ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಕಿಮ್ಮತ್ತಿಲ್ಲ’ ಎಂಬ ಸಂದೇಶ ನೀಡಬೇಕೆಂದೇ ರಾಜ್ಯ ಕೋರ್ ಕಮಿಟಿ‌ ಕಳಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಕಸದ ಬುಟ್ಟಿಗೆ ಎಸೆದು ತನ್ನದೇ ಹುರಿಯಾಳುಗಳ ಹೆಸರನ್ನು ಕಳಿಸಿದೆ. ಯಾವ ಆಯಾಮದಲ್ಲೂ ವಿರೋಧ ಬರಬಾರದೆಂದು ‘ಕಾರ್ಯಕರ್ತರಿಗೆ ಮಣೆ’ ಎಂಬ ಮಜಬೂತಾದ ನಾಟಕ ಮಾಡಲಾಗಿದೆ. ಇದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಷಯದಲ್ಲೂ ಮುಂದುವರೆಯಲಿದೆ.

ಏಕೆಂದರೆ ರಾಜ್ಯಸಭೆಗೆ ರಮೇಶ್ ಕತ್ತಿ ಕಳಿಸಿ ಬೆಳಗಾವಿ ಬೇಗುದಿಯಿಂದ ಪಾರಾಗಬಹುದೆಂದು, ತಮ್ಮ ಪುತ್ರ ವಿಜಯೇಂದ್ರನ ಬಿಸಿನೆಸ್ ಪಾಟ್ನರ್ ಪ್ರಕಾಶ್ ಶೆಟ್ಟಿ ಕಳಿಸಿ ಕುಟುಂಬದ ಒತ್ತಡ ನೀಗಿಸಿಕೊಳ್ಳಬಹುದೆಂದು ಅಂದಾಜು ಮಾಡಿದ್ದ ಯಡಿಯೂರಪ್ಪಗೆ ಮುಖಭಂಗವಾಗಿದೆ. ಇದಕ್ಕಿಂತ ಹೆಚ್ಚು ಒತ್ತಡ ಇರುವುದು ವಿಧಾನ‌ ಪರಿಷತ್ ಚುನಾವಣೆಯಲ್ಲಿ. ಏಕೆಂದರೆ ಯಡಿಯೂರಪ್ಪ ಇವತ್ತು ಮುಖ್ಯಮಂತ್ರಿ ಆಗಲು ಕಾರಣಕರ್ತರಾದ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಮತ್ತು ಆರ್. ಶಂಕರ್ ಅವರನ್ನು ಪರಿಷತ್ ಗೆ ಕಳಿಸಬೇಕಾದ, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ ಯಡಿಯೂರಪ್ಪ.

ವಿಧಾನಸಭೆಯಿಂದ ಮತ್ತು ನಾಮನಿರ್ದೇಶನದ ಮೂಲಕ ಬಿಜೆಪಿ 9 ಜನರಿಗೆ ಅವಕಾಶ ಕಲ್ಪಿಸಬಹುದು. ಈ 9ರ ಪೈಕಿ ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಮತ್ತು ಆರ್. ಶಂಕರ್ ಜೊತೆಗೆ ರಾಜ್ಯಸಭಾ ಟಿಕೆಟ್ ವಂಚಿತ ರಮೇಶ್ ಕತ್ತಿಯನ್ನು ಪರಿಷತ್ ಗೆ ಕಳುಹಿಸಬೇಕು ಎನ್ನುವುದು ಯಡಿಯೂರಪ್ಪ ಲೆಕ್ಕಾಚಾರವಾಗಿದೆ. ಆದರೆ ‘ಪ್ರತಿಧ್ವನಿ‘ಗೆ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ ಯಡಿಯೂರಪ್ಪ ಹೇಳಿದ ಒಂದಿಬ್ಬರಿಗೆ ಅವಕಾಶ ಸಿಕ್ಕರೆ ಅದೇ ದೊಡ್ಡದು. ಉಳಿದಂತೆ ಯಡಿಯೂರಪ್ಪ ಅವರಿಗೆ ಮತ್ತೊಂದು ಸುತ್ತಿನ ಮುಖಭಂಗ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಹೀಗೆ ಯಡಿಯೂರಪ್ಪ ಅವರನ್ನು ಹಂತಹಂತವಾಗಿ ನಗಣ್ಯ ಮಾಡಿ ಮುಂದೊಂದು ದಿನ ‘ನಾಯಕತ್ವ ಬದಲಾವಣೆ’ಗೂ ಮುನ್ನುಡಿ ಬರೆಯಬಹುದು ಎಂಬ ಮಾಹಿತಿಯೂ ಸಿಕ್ಕಿದೆ.

Tags: CM YediyurappaMLC ElectionRajyasabhaರಾಜ್ಯಸಭೆ ಅಭ್ಯರ್ಥಿ ಆಯ್ಕೆವಿಧಾನ ಪರಿಷತ್ ಚುನಾವಣೆಸಿಎಂ ಯಡಿಯೂರಪ್ಪ
Previous Post

ಉಪಗ್ರಹ ಸಹಾಯದಿಂದ ಕರೋನಾ ಮೂಲ ಹುಡುಕಿದ ಸಂಶೋಧಕರು ನೀಡಿದ್ರು ಅಚ್ಚರಿಯ ವರದಿ!

Next Post

ಅಸ್ಸಾಂ: ತೈಲ ಬಾವಿಯಲ್ಲಿ ಬೆಂಕಿ ಅವಘಢ- 2 ಫೈರ್‌ಮ್ಯಾನ್‌ಗಳ ಮೃತದೇಹ ಪತ್ತೆ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
Next Post
ಅಸ್ಸಾಂ: ತೈಲ ಬಾವಿಯಲ್ಲಿ ಬೆಂಕಿ ಅವಘಢ- 2 ಫೈರ್‌ಮ್ಯಾನ್‌ಗಳ ಮೃತದೇಹ ಪತ್ತೆ

ಅಸ್ಸಾಂ: ತೈಲ ಬಾವಿಯಲ್ಲಿ ಬೆಂಕಿ ಅವಘಢ- 2 ಫೈರ್‌ಮ್ಯಾನ್‌ಗಳ ಮೃತದೇಹ ಪತ್ತೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada