ವಿಶೇಷ ಪ್ರಕರಣದ ಆಧಾರದ ಮೇಲೆ ಸರ್ಕಾರವು ಅನುಮತಿಸಿದ ವಿಮಾನಗಳನ್ನು ಹೊರತುಪಡಿಸಿ ಉಳಿದ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನಯಾನಗಳ ಮೇಲಿನ ನಿರ್ಬಂಧವನ್ನು ಜುಲೈ ತಿಂಗಳ ಅಂತ್ಯದವರೆಗೆ ವಿಸ್ತರಣೆಗೊಳಿಸಲಾಗಿದೆ.
ವಿಮಾನಯಾನವನ್ನು ಮಾರ್ಚ್ 22 ರಂದು ವಿಮಾನಯಾನಗಳನ್ನು ರದ್ದು ಪಡಿಸಲಾಗಿತ್ತು. ಜುಲೈ 15 ರವರೆಗೆ ವಿಮಾನಯಾನ ಸ್ಥಗಿತಗೊಳಿಸಲಾಗುತ್ತದೆ ಎನ್ನಲಾಗಿತ್ತು. ಆದರೆ, ನಾಗರಿಕ ವಿಮಾನಯಾನದ ಮೇಲಿನ ನಿರ್ಬಂಧವನ್ನು ವಿಸ್ತರಿಸಿ ಜುಲೈ 31 ರ ರಾತ್ರಿ 11.59 ರವರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಆದೇಶ ಹೊರಡಿಸಿದೆ.
ಅಮೇರಿಕಾ, ಕೆನಡಾ ಸೇರಿದಂತೆ ಯುರೋಪಿಯನ್ ದೇಶಗಳೊಡನೆ ಅಂತರಾಷ್ಟ್ರೀಯ ವಿಮಾನಯಾನ ಪ್ರಾರಂಭಿಸುವಂತೆ ಚರ್ಚಿಸಲಾಗುತ್ತದೆ. ಅಷ್ಟೇ ಅಲ್ಲದೆ ಭಾರತದಲ್ಲಿ ಗಲ್ಫ್ ರಾಷ್ಟ್ರಗಳಿಗೆ ತೆರಳಲು ಹೊರಟಿರುವ ಹಾಗೂ ಅಲ್ಲಿಂದ ಬರಲು ಸಾಧ್ಯ ಆಗದೆ ಬಾಕಿಯಾಗಿರುವ ಯಾತ್ರೆಗೆ ಪೂರಕವಾಗುವಂತೆ ಗಲ್ಫ್ ರಾಜ್ಯದ ಜೊತೆ ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಭಾರತದ ವಂದೇ ಭಾರತ್ ಮಿಶನ್ ಮುಖಾಂತರ ದುಬೈಯಿಂದ ಭಾರತಕ್ಕೆ ಏಕಮುಖ ಯಾತ್ರಿಕರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಭಾರತದಿಂದ ಗಲ್ಫ್ ರಾಜ್ಯಗಳಿಗೆ ತೆರಳಲು ಹಲವಾರು ಮಂದಿ ವಿಮಾನಗಳಿಗಾಗಿ ಎದುರು ನೋಡುತ್ತಿದ್ದಾರೆ.
