• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

`ಲಾಕ್ ಡೌನ್ ತಲೆ ಬಿಸಿಯನ್ನು ಕಡಿಮೆ ಮಾಡಬಲ್ಲದು IPL’ : ಶಿಖರ್ ಧವನ್ ಅಭಿಮತ

by
May 26, 2020
in Uncategorized
0
`ಲಾಕ್ ಡೌನ್ ತಲೆ ಬಿಸಿಯನ್ನು ಕಡಿಮೆ ಮಾಡಬಲ್ಲದು IPL’ : ಶಿಖರ್ ಧವನ್ ಅಭಿಮತ
Share on WhatsAppShare on FacebookShare on Telegram

ಕೋವಿಡ್‌-19 ಕಾರಣದಿಂದ ಹೇರಲಾದ ಲಾಕ್‌ ಡೌನ್‌ನಿಂದಾಗಿ ದೇಶವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಮನೆಯಲ್ಲೇ ಕೂಡಿ ಹಾಕಿರುವಂತ ಪರಿಸ್ಥಿತಿಯಲ್ಲಿದ್ದಾರೆ ಜನರು. ಹೀಗಿರುವಾಗ ಒಂದಲ್ಲಾ ಒಂದು ಮನರಂಜನಾ ಕಾರ್ಯಕ್ರಮಗಳ ಕಡೆ ಹಾಗೂ ಮನೆಯೊಳಗಡೆಯೇ ಆಟ ಆಡುವುದು ಮತ್ತು ಆನ್‌ಲೈನ್‌ ಗೇಮಿಂಗ್‌ ಕಡೆಗೂ ಜನರು ಮುಖ ಮಾಡಿದ್ದಾರೆ. ಆದರೆ ಅದೂ ಕೂಡ ಈಗ ಜನರಲ್ಲಿ ಬೇಸರ ತರಿಸಿದೆ. ಈತನ್ಮಧ್ಯೆ, ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್‌ ಧವನ್‌ IPL ಈಗ ನಡೆದರೆ ಲಾಕ್‌ ಡೌನ್‌ ತಲೆ ಬಿಸಿ ಕಡಿಮೆ ಆಗಬಹುದು ಎಂದಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಶ್ರೀಲಂಕಾ ಕ್ರಿಕೆಟಿಗ ಎಂಜಲೋ ಮ್ಯಾಥ್ಯೂಸ್‌ ಜೊತೆ ಕಮೆಂಟ್‌ ಮಾತುಕತೆ ನಡೆಸುವ ವೇಳೆ ಶಿಖರ್‌ ಧವನ್‌ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. “ಸದ್ಯ ಯಾವುದಾದರೊಂದು ಕ್ರೀಡೆಗೆ ಚಾಲನೆ ಸಿಕ್ಕರೆ ಒಳ್ಳೆಯದಿತ್ತು. ಅದ್ರಲ್ಲೂ IPLಗೆ ಅನುಮತಿ ಕೊಟ್ಟಿದ್ದರೆ ಅದು ಲಾಕ್‌ ಡೌನ್‌ ತಲೆ ಬಿಸಿಯಲ್ಲಿರುವ ಜನರಲ್ಲಿ ಸಕಾರಾತ್ಮಕ ಭಾವನೆ ಹುಟ್ಟಿಸಬಲ್ಲದು. ಮುನ್ನೆಚ್ಚರಿಕಾ ಕ್ರಮಗಳೊಂದಿಗೆ IPL ಕೂಟವನ್ನು ಆಯೋಜಿಸಬೇಕು. ಜನರಿಗೆ ಸ್ಟೇಡಿಯಂಗೆ ಬಂದು ನೋಡಲು ಅವಕಾಶ ನೀಡದೆ ಕೂಡ ಟೂರ್ನಮೆಂಟ್‌ ಆಯೋಜನೆ ಮಾಡಬಹುದು. ಆದರೆ, ನಾವು ಜನ ಸಾಗರದ ಮಧ್ಯೆ ನಿಂತು ಆಡುವ ಮಜವನ್ನು ಕಳೆದುಕೊಳ್ಳಲಿದ್ದೇವೆ. ಆದರೂ ಅಡ್ಡಿಯಿಲ್ಲ, IPL ನಡೆದರೆ ಕ್ರಿಕೆಟ್‌ ಪ್ರಿಯರಲ್ಲಿ ಅದು ಹುಮ್ಮಸ್ಸು ಮೂಡಿಸಲಿದೆ” ಎಂದಿದ್ದಾರೆ. ಅಂದಹಾಗೆ, ಶಿಖರ್‌ ಧವನ್‌ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದಾರೆ. 2019ರಲ್ಲಿ ಸನ್‌ ರೈಸರ್ಸ್ ಹೈದಾಬಾದ್‌ ತಂಡದಿಂದ ಹೊರ ಬಿದ್ದು 5.2 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾಗಿದ್ದರು.

ಮಾರ್ಚ್‌ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಕರೋನಾ ಹಾಗೂ ಲಾಕ್‌ ಡೌನ್‌ ಕಾರಣಕ್ಕೆ BCCI ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಕೇವಲ IPL ಮಾತ್ರವಲ್ಲ ಎಲ್ಲಾ ಅಂತಾರಾಷ್ಟ್ರೀಯಾ ಕ್ರಿಕೆಟ್‌ ಪಂದ್ಯಗಳನ್ನೂ ಕೂಡ ICC ರದ್ದು ಮಾಡಿತ್ತು. ಆದರೆ ಲಾಕ್‌ ಡೌನ್‌ ಕಾರಣದಿಂದ ರದ್ದಾಗಿರುವ 13ನೇ ಆವೃತ್ತಿಯ IPL ಅಕ್ಟೋಬರ್‌ ಅಥವಾ ನವೆಂಬರ್‌ ನಲ್ಲಿ ನಡೆಸಲು BCCI ಚಿಂತಿಸುತ್ತಿದೆ. ಇದೇ ವೇಳೆ ಆಸ್ಟ್ರೇಲಿಯಾದಲ್ಲಿ ವಿಶ್ವ ಕಪ್‌ ಕೂಡ ನಡೆಯಲಿದೆ. ವಿಶ್ವಕಪ್‌ ವೇಳಾಪಟ್ಟಿಯಲ್ಲಿ ಬದಲಾವಣೆಯನ್ನು ICC ಮಾಡಿದರೆ, ಇದೇ ಸಮಯದಲ್ಲಿ ಇಲ್ಲಿ IPL ಚುಟುಕು ಕ್ರಿಕೆಟ್‌ ಹಬ್ಬ ಕೂಡ ಶುರುವಾಗುವ ಸಾಧ್ಯತೆ ಇದೆ.

Tags: BCCI CricketICCIPLLockdownShikar DhawanTeam India
Previous Post

ಅನ್ಯರಾಜ್ಯದಿಂದ ಬಂದ 81 ಮಂದಿಯಲ್ಲಿ ಕರೋನಾ!

Next Post

ಉತ್ತರಾಖಂಡ್‌ನ 51 ದೇವಾಲಯಗಳು ಸರ್ಕಾರದ ಸುಪರ್ದಿಗೆ, ಆತಂಕದಲ್ಲಿ ಅರ್ಚಕರು

Related Posts

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ
Uncategorized

ಆಯುರ್ವೇದಿಕ್ ಚಿಕಿತ್ಸೆ ಟೆಂಟ್: 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ಬಂಧನ

by ಪ್ರತಿಧ್ವನಿ
December 10, 2025
0

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಐಟಿ ಕಂಪನಿಯ ಉದ್ಯೋಗಿಗೆ ಬರೋಬ್ಬರಿ 40 ಲಕ್ಷ ವಂಚಿಸಿದ್ದ ನಕಲಿ ಸ್ವಾಮೀಜಿ ವಿನಯ್ ಗುರೂಜಿ ಸೇರಿ ಇಬ್ಬರನ್ನ ಜ್ಞಾನಭಾರತಿ...

Read moreDetails
Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

Belagavi Politics: ಲಕ್ಷ್ಮಣ್‌ ಸವದಿಗೆ ತೀವ್ರ ನಿರಾಸೆ ತಂದಿಟ್ಟ ಜಾರಕಿಹೊಳಿ ಬ್ರದರ್ಸ್‌ ತಂತ್ರ

December 13, 2025
*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

*ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಆರ್.ವಿ. ದೇವರಾಜ್ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ*

December 2, 2025
ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

ಬೆಂಗಳೂರಲ್ಲಿ ದೇಶದ ಅತಿದೊಡ್ಡ ಸೈಬರ್ ವಂಚನೆ ಬಯಲು

November 17, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
Next Post
ಉತ್ತರಾಖಂಡ್‌ನ 51 ದೇವಾಲಯಗಳು ಸರ್ಕಾರದ ಸುಪರ್ದಿಗೆ

ಉತ್ತರಾಖಂಡ್‌ನ 51 ದೇವಾಲಯಗಳು ಸರ್ಕಾರದ ಸುಪರ್ದಿಗೆ, ಆತಂಕದಲ್ಲಿ ಅರ್ಚಕರು

Please login to join discussion

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ
Top Story

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

by ಪ್ರತಿಧ್ವನಿ
December 13, 2025
ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ
Top Story

ಯಾರ ಬೆದರಿಕೆಗೂ ಬಗ್ಗಲ್ಲ: ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಖಜಾಂಚಿಗೆ ಡಿಕೆಶಿ ಎಚ್ಚರಿಕೆ

by ಪ್ರತಿಧ್ವನಿ
December 13, 2025
ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ
Top Story

ಮೇಕೆದಾಟು ಯೋಜನೆ ತಡೆಯಿರಿ: ಕ್ಯಾತೆ ತೆಗೆದ ಎಐಎಡಿಎಂಕೆ ಪಳನಿಸ್ವಾಮಿ

by ಪ್ರತಿಧ್ವನಿ
December 13, 2025
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
Top Story

ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

ಬೆಂಗಳೂರಿಗೆ 2ನೇ ಏರ್‌ಪೋರ್ಟ್‌ ಖಚಿತ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಕರೆದ ಸರ್ಕಾರ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!