
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಯೋಧ್ಯೆ ಭೂಮಿ ಪೂಜೆ ನಡೆದ ಬಳಿಕ ಮಂದಿರ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ರಾಮಮಂದಿರ ದೇಶದ ಹೊಸ ಪ್ರತೀಕವಾಗಲಿದೆ ಎಂದು ಹೇಳಿದ್ದಾರೆ.
ಇಂದು ವಿಶ್ವಾದ್ಯಂತ ರಾಮಭಕ್ತರ ಕನಸು ನನಸಾದ ದಿನ. ರಾಮಮಂದಿರ ದೇಶವನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿ ಮೂಡಿ ಬರಲಿದೆ. ಸ್ವಾತಂತ್ರ ಹೋರಾಟದಲ್ಲಿ ಎಲ್ಲರೂ ಮಹಾತ್ಮಾ ಗಾಂಧಿಯನ್ನು ಬೆಂಬಲಿಸಿದಂತೆ ಇಂದು ಎಲ್ಲರೂ ಶ್ರೀರಾಮ ಮಂದಿರದ ನಿರ್ಮಾಣದಲ್ಲಿ ಎಲ್ಲರೂ ಕೈ ಜೋಡಿಸಿದ್ದಾರೆ. ರಾಮಸೇತುವನ್ನು ಶ್ರೀರಾಮ ಎಂದು ಬರೆದ ಕಲ್ಲಿನಿಂದ ನಿರ್ಮಿಸಿದರೆ ರಾಮಮಂದಿರವನ್ನು ಶ್ರೀರಾಮ ಎಂದು ಬರೆದ ಇಟ್ಟಿಗೆಗಳ ಮೂಲಕ ನಿರ್ಮಿಸಲಾಗುತ್ತದೆ.
ಶ್ರೀರಾಮ ಎಲ್ಲರ ಮನಸ್ಸಿನಲ್ಲೂ ನೆಲೆಸಿದ್ದಾನೆ. ರಾಮ ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದಾನೆ. ನಿರಂತರ ಹೋರಾಟದ ಬಳಿಕ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ನೆರವೇರಿದೆ. ರಾಮಮಂದಿರ ನಿರ್ಮಾಣವಾದರೆ ದೇಶದ ಸಂಪೂರ್ಣ ಅರ್ಥ ವ್ಯವಸ್ಥೆ ಬದಲಾಗಲಿದೆ .
ಸ್ವಾತಂತ್ರ್ಯ ಸಂಗ್ರಾಮದ ರೀತಿಯ ಅಭಿಯಾನ ರಾಮಮಂದಿರದ್ದೂ ಆಗಿತ್ತು. ರಾಮಮಂದಿರ ನಿರ್ಮಾಣಕ್ಕೆ ಅನೇಕರು ಕೆಲಸ ಮಾಡಿದ್ದಾರೆ. ರಾಮಮಂದಿರ ಅಭಿಯಾನದಲ್ಲಿ ಸಮರ್ಪಣೆ, ಬಲಿದಾನ, ಸಂಘರ್ಷವೂ ಇತ್ತು. ಈ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ನಾನು ಶಿರಬಾಗಿ ನಮಿಸುತ್ತೇನೆ.
ಜೈ ಶ್ರೀರಾಮ ಘೋಷಣೆಯ ಈ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಎಲ್ಲರಿಗೂ ಅಭಿನಂದನೆಗಳು. ಇಂದು ಇಡೀ ದೇಶ ರೋಮಾಂಚಿತವಾಗಿದೆ. ಎಲ್ಲವೂ ರಾಮಮಯ. ಎಲ್ಲರ ಮನಸ್ಸೂ ಬೆಳಗುತ್ತಿದೆ. ಇಡೀ ಭಾರತ ಬಾವುಕವಾಗಿದೆ. ಬಹುಕಾಲದ ನಿರೀಕ್ಷೆ ಇಂದು ಕೊನೆಯಾಗಿದೆ.