ಲಾಕ್ಡೌನ್ನಿಂದ ಕಂಗೆಟ್ಟಿದ್ದ ವಲಸಿಗ ಕಾರ್ಮಿಕರಿಗೆ ತಮ್ಮ ಗೂಡಿಗೆ ತೆರಳಲು ಅನುಮತಿ ನೀಡಿ, ರಾಜ್ಯದಲ್ಲಿ ನಿಗದಿತ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ತಮ್ಮ ಊರಿಗೆ ಹೋಗುವ ಆತುರದಲ್ಲಿ ನಗರದ ಕೆಂಪೇಗೌಡ ಬಸ್ಸ್ಟ್ಯಾಂಡ್ಗೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ ಪ್ರಯಾಣಿಕರಿಂದಾಗಿ ಸಂಪೂರ್ಣ ಬಸ್ಸ್ಟ್ಯಂಡ್ ಅವ್ಯವಸ್ಥೆಯ ಆಗರವಾಗಿತ್ತು. ಸಾಮಾಜಿಕ ಅಂತರವೆನ್ನುವ ಪದಕ್ಕೆ ಅರ್ಥವೇ ಇಲ್ಲದಂತಾಗಿತ್ತು. ಯಾವಾಗ ತಮ್ಮ ಊರಿನ ಬಸ್ ಬರುತ್ತದೆಯೋ ಎನ್ನುವ ಚಿಂತೆ ಲಾಕ್ಡೌನ್ನಿಂದ ಸಿಲುಕಿಕೊಂಡಿದ್ದ ಪ್ರಯಾಣಿಕರದಾದರೆ, ಜಮಾಯಿಸಿದ್ದ ಪ್ರಯಾಣಿಕರಿಗೆ ವ್ಯವಸ್ಥಿತವಾಗಿ ಬಸ್ಸುಗಳ ಸೌಲಭ್ಯವನ್ನು ಒದಗಿಸುವ ಚಿಂತೆ ಸಾರಿಗೆ ಇಲಾಖೆಯ ಅಧಿಕಾರಿಗಳದಾಗಿತ್ತು.
ಸಿದ್ದರಾಮಯ್ಯ ಅವರ ಸ್ಪಷ್ಟನೆ:ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ, ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ, ಈ ಯೋಜನೆ ರಾಜ್ಯದ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಉನ್ನತಮಟ್ಟದಲ್ಲಿ ಸುಧಾರಿಸಲು ಜಾರಿಗೊಳಿಸಲಾಗಿದ್ದು, ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ...
Read moreDetails