• Home
  • About Us
  • ಕರ್ನಾಟಕ
Tuesday, December 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ನೊಬೆಲ್ ಶಾಂತಿ: ಇಥಿಯೋಪಿಯಾ, ಇಂಡಿಯಾ ಹೋಲಿಕೆ

by
October 14, 2019
in ದೇಶ
0
ನೊಬೆಲ್  ಶಾಂತಿ: ಇಥಿಯೋಪಿಯಾ
Share on WhatsAppShare on FacebookShare on Telegram

ಇಥಿಯೋಪಿಯಾ ದೇಶದ ಪ್ರಧಾನಿ ಅಬಿ ಅಹಮದ್‌ ಅವರಿಗೆ ಪ್ರಾಯ 43 ವರ್ಷ. ಅವರು 2019ನೇ ಸಾಲಿನ ‘ನೊಬೆಲ್ ಶಾಂತಿ ಪ್ರಶಸ್ತಿ’ಗೆ ಆಯ್ಕೆ ಆಗಿದ್ದಾರೆ. ಇಥಿಯೋಪಿಯಾ ಎಂಬ ದೇಶ ಸೋಮಾಲಿಯ, ಸುಡಾನ್, ಕೆನ್ಯಾ ದೇಶಗಳಿಂದ ಸುತ್ತುವರಿದ ಹಿಂದುಳಿದ ಆಫ್ರಿಕನ್ ದೇಶ. ಎರಿಟ್ರಿಯಾ ಜೊತೆಗೆ 20 ವರ್ಷಗಳ ಸುದೀರ್ಘ ಕಾಲದ ಗಡಿ ಬಿಕ್ಕಟ್ಟನ್ನು ಶಾಂತಿಯುವಾಗಿ ಬಗೆಹರಿಸಿರುವುದಕ್ಕಾಗಿ ಅಹಮದ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ADVERTISEMENT

ನಮ್ಮ ಪ್ರಧಾನಿಯವರಿಗೆ ವಿದೇಶಗಳಿಂದ ಹಲವಾರು ಪ್ರಶಸ್ತಿಗಳು ದೊರೆತಿವೆ. ಇಸ್ಲಾಂ ರಾಷ್ಟ್ರಗಳು ಕೂಡ ಪ್ರಶಸ್ತಿ ನೀಡಿವೆ. ಕೆಲವು ವರ್ಷಗಳ ಹಿಂದೆಯೇ ಮೋದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಬಹುದು ಎಂಬ ಗಾಸಿಪ್ ಹಬ್ಬಿತ್ತು. ವಿದೇಶ ಸುತ್ತುವ ಪ್ರಧಾನಿ ಮುಂದಿನ ಬಾರಿ ಅಗತ್ಯವಾಗಿ ಅಹಮದ್ ಅವರನ್ನು ಭೇಟಿಯಾದರೆ ಪ್ರಶಸ್ತಿ ಪಡೆಯುವುದು ಹೇಗೆಂದು ಹಲವು ಸಲಹೆಗಳನ್ನು ಅಗತ್ಯ ಪಡೆಯಬಹುದು.

ಅದಕ್ಕೂ ಮುನ್ನ ಅಹಮ್ಮದ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿ ಅರಸಿಕೊಂಡು ಬಂದಿದ್ದಾದರೂ ಹೇಗೆ ಎಂದು ನೋಡೋಣ. ವಿಶ್ವದ ಅತ್ಯಂತ ಬಡ ರಾಷ್ಟ್ರಗಳಾದ ಎರಿಟ್ರಿಯ ಮತ್ತು ಇಥಿಯೋಪಿಯಾ ಕಳೆದ 20 ವರ್ಷಗಳಿಂದ ಗಡಿ ತಕರಾರಿನ ಸಂಘರ್ಷದಲ್ಲಿತ್ತು. ಅದಕ್ಕೂ ಮೊದಲು ಇವೆರಡೂ ಒಂದೇ ದೇಶ ಆಗಿತ್ತು. ಅಖಂಡ ಭಾರತದಂತೆ. ಇಥಿಯೋಪಿಯಾದಲ್ಲಿ ಹತ್ತಕ್ಕೂ ಹೆಚ್ಚು ಜನಾಂಗಗಳು, ಇಸ್ಲಾಂ ಮತ್ತು ಕ್ರಿಶ್ಚಿಯನ್ ಎಂಬ ಪ್ರಮುಖ ಧರ್ಮಗಳು, ಅನೇಕ ಭಾಷೆಗಳಿವೆ. ಸಾಂಸ್ಕತಿಕವಾಗಿಯೂ ವೈವಿಧ್ಯಮಯವಾಗಿವೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇದೆ. ಆಡಳಿತ ವ್ಯವಸ್ಥೆಯೂ ಹೆಚ್ಚು ಕಡಿಮೆ ನಮ್ಮಂತೆಯೇ ಇದೆ.

ಅಹಮದ್-ಮೋದಿ, ಇಥಿಯೋಪಿಯಾ-ಭಾರತ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಜನಪ್ರಿಯತೆ ಕಳಕೊಂಡಿದ್ದಾಗ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಿರುವುದು. 2018ರಲ್ಲಿ ಇಂತಹುದೇ ಪರಿಸ್ಥಿತಿಯಲ್ಲಿ ಹೊಸ ಆಲೋಚನೆಗಳೊಂದಿಗೆ ಅಹಮದ್ ಸರಕಾರ ರಚಿಸಿದ್ದು. ಮೋದಿ ಮೋಡಿ ಹೇಗಿತ್ತೊ ಹಾಗೇ ಇತ್ತು. ಇಬ್ಬರೂ ಕೂಡ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಕೂಡ ಹೆಸರು ಮಾಡುವ ಅಭಿಲಾಷೆ ಹೊಂದಿದವರು.

ಮೋದಿ ಕಸ ಹೆಕ್ಕುವ ಫೋಟೋ ಹಾಕುವ ಮೂಲಕ ಪ್ರಚಾರ ಪಡೆದರೆ, ಅಹಮದ್ ಗಿಡ ನೆಡುವ ಕಾರ್ಯಕ್ರಮದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿದ್ದರು. ತಮ್ಮನ್ನು ತಾವೇ ನೈಜಕ್ಕಿಂತ ಎತ್ತರವಾದ ಮಹಾನ್ ವ್ಯಕ್ತಿಯಾಗಿ ಬಿಂಬಿಸುವಲ್ಲಿ ಇಬ್ಬರೂ ಸಮಾನವಾಗಿದ್ದರು. ವ್ಯತ್ಯಾಸವೆಂದರೆ, ಅಹಮದ್ ಕಚೇರಿಗೆ ಯಾರೂ ಕೂಡ ಪ್ರವೇಶ ಮಾಡಬಹುದು. ಮೋದಿ ಕಚೇರಿಗೆ ಹೋಗುವ ಕೇಂದ್ರ ಸಚಿವ ಕೂಡ ಮಾತನಾಡಿದ ಸುದ್ದಿ ಇಲ್ಲ.

ನಮ್ಮ ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಇಥಿಯೋಪಿಯಕ್ಕಿಂತ ವಿಭಿನ್ನವಾಗಿದೆ. ಅಲ್ಲಿ ರಾಜಕೀಯ ವಿರೋಧಿಗಳನ್ನು ಜೈಲಿಗೆ ಹಾಕಲಾಗಿತ್ತು. ಚುನಾವಣೆ ಎಂಬುದು ಒಂದು ನಾಟಕದಂತೆ ನಡೆಯುತ್ತಿತ್ತು. ದೇಶದಲ್ಲಿ ಆಂತರಿಕ ಜನಾಂಗಿಯ ಕಲಹಗಳು ನಡೆಯುತ್ತಿದ್ದವು. ಹಲವು ಲಕ್ಷ ಮಂದಿ ಸ್ಥಳಾಂತರ ಆಗಿದ್ದರು. ಕೆಲವು ಬೇರೆ ದೇಶಕ್ಕೆ ವಲಸೆ ಹೋಗಿದ್ದರು. ಪತ್ರಕರ್ತರನ್ನು ಕೂಡ ದೊಡ್ಡ ಸಂಖ್ಯೆಯಲ್ಲಿ ಜೈಲಿಗೆ ಹಾಕಲಾಗಿತ್ತು. ಹಲವು ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿತ್ತು.

ಇಂತಹ ಪರಿಸ್ಥಿತಿ ಇಂದು ಭಾರತದಲ್ಲಿ ಖಂಡಿತಾ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಇಂತಹ ದುಸ್ಥಿತಿ ಬರಬಾರದು ಎಂದೇನಿಲ್ಲ. ನೊಬೆಲ್ ಪ್ರಶಸ್ತಿ ಬೇಕಿದ್ದರೆ ಗಮನಿಸಬೇಕಾದ ವಿಚಾರ – ಅಹಮದ್ ಕೈಗೊಂಡ ರಾಜಕೀಯ ಮತ್ತು ಆಡಳಿತ ಉದಾರೀಕರಣ ಕ್ರಮಗಳು. ಜೈಲಲ್ಲಿ ಇದ್ದ ಸಾವಿರಾರು ಮಂದಿಯನ್ನು ಬಿಡುಗಡೆ ಮಾಡಿರುವುದು. ಮಾತ್ರವಲ್ಲದೆ, ಬಿಡುಗಡೆಗೊಂಡ ಭಿನ್ನಮತಿಯ ಮುಖಂಡರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹುದ್ದೆಗಳನ್ನು ನೀಡಲಾಯಿತು. ಒಬ್ಬ ಮುಖಂಡನನ್ನು ಚುನಾವಣಾ ಮಂಡಳಿಯ ಮುಖ್ಯಸ್ಥನಾಗಿ ಮಾಡಲಾಯಿತು. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲಾಯಿತು. ಅಹಮದ್ ಅವರ ಸಚಿವ ಸಂಪುಟ ಸದಸ್ಯರಲ್ಲಿ ಅರ್ಧಾಂಶ ಮಹಿಳೆಯರೇ ಇದ್ದಾರೆ. ರಕ್ಷಣಾ ಸಚಿವರು ಕೂಡ ಮಹಿಳೆಯೇ ಆಗಿದ್ದಾರೆ.

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ನಿರಂಕುಶ ಆಡಳಿತ ಉದಾರೀಕರಣಕ್ಕೆ ತೆರೆದುಕೊಂಡಿತು. ಮಾಧ್ಯಮ ಸ್ವಾತಂತ್ರ್ಯ ನೀಡಲಾಯಿತು. ಇಂಟರನೆಟ್ ನಿರ್ಬಂಧ ಹಿಂತೆಗೆಯಲಾಯಿತು. ಮಾತ್ರವಲ್ಲದೆ, ನೂರಾರು ಮಂದಿ ಜನವಿರೋಧಿ ಸರಕಾರಿ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆಡಳಿತವನ್ನು ಚುರುಕುಗೊಳಿಸಲಾಯಿತು. ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಯಿತು.

ಬಹುಮುಖ್ಯವಾಗಿ, ನೆರೆರಾಷ್ಟ್ರ ಇರಿಟ್ರಿಯಾದೊಂದಿಗೆ 20 ವರ್ಷಗಳಿಂದ ನಡೆಸಲಾಗುತ್ತಿದ್ದ ಯುದ್ಧವನ್ನು ನಿಲ್ಲಿಸಲಾಯಿತು. ಯುದ್ಧ ಮಾಡಲು ಅವರಲ್ಲಿ ಅಂತಹ ದೊಡ್ಡ ಸೈನ್ಯ ಏನೂ ಇರಲಿಲ್ಲ. ಎರಡು ರಾಷ್ಟ್ರಗಳ ಕಲಹದಲ್ಲಿ ಸಾವನ್ನಪ್ಪಿದವರು ನಾಗರಿಕರೇ ಹೆಚ್ಚು. ಅದರಲ್ಲಿ ಸ್ವಯಂಸೇವಕ ಸೈನಿಕರೂ ಸೇರಿದ್ದರು. ಅವರು ಹೋರಾಟ ನಡೆಸುತ್ತಿದ್ದುದು ಫಲವತ್ತಾದ ಜಮೀನಿಗಾಗಿ ಆಗಿರಲಿಲ್ಲ.

ಒಂದು ದಿನ ಇರಿಟ್ರಿಯಾ ದೇಶಕ್ಕೆ ಭೇಟಿ ನೀಡಿದ ಅಹಮದ್ ಗಡಿವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಾಗ್ದಾನ ನೀಡಿದರು. ಶತ್ರು ದೇಶಕ್ಕೆ ಭೇಟಿ ನೀಡಿದ್ದೇ ಮಹತ್ವದ ಘಟನೆ ಆಗಿತ್ತು. ನಮ್ಮ ಪ್ರಧಾನಿಯಂತೆ ಬರ್ತ್ ಡೇ ಶುಭಾಶಯ ಹೇಳಲು ಹೋಗಿರಲಿಲ್ಲ. ಇಂದಿನ ಪಾಕಿಸ್ತಾನದ ಆಡಳಿತಕ್ಕಿಂತಲೂ ಕೆಟ್ಟದಾಗಿ ಹಂಗಾಮಿ ನಿರಂಕುಶ ಆಡಳಿತ ಹೊಂದಿದೆ ಇರಿಟ್ರಿಯಾ. ತಮ್ಮ ಬಹುಪಾಲು ತಕರಾರು ಇದ್ದ ಭೂಭಾಗಗಳನ್ನು ಇರಿಟ್ರಿಯಾಗೆ ಬಿಟ್ಟು ಕೊಡುವ ತೀರ್ಮಾನಕ್ಕಾಗಿ ಅಹಮದ್ ವಿಶ್ವದ ಗಮನ ಸೆಳೆದಿದ್ದರು.

ಅಬಿ ಅಹಮದ್ ಸೇನೆಯಲ್ಲಿ ಸೈಬರ್ ಇಂಟೆಲಿಜೆನ್ಸ್ ಮುಖ್ಯಸ್ಥ ಆಗಿದ್ದವರು. ಕೇವಲ ಎಂಟು ವರ್ಷಗಳ ಹಿಂದೆ ರಾಜಕೀಯ ಪ್ರವೇಶ ಮಾಡಿದ್ದರು. ತಮ್ಮ ಪಕ್ಷದಲ್ಲಿ ದೇಶದ ಅತಿ ದೊಡ್ಡ ಜನಾಂಗಿಯ ಗುಂಪಿನ ಘಟಕ ಮುಖ್ಯಸ್ಥ. ಶಾಂತಿ ಸಂಘರ್ಷ ಮತ್ತು ಭದ್ರತಾ ಅಧ್ಯಯನದಲ್ಲಿ ಪಿ ಎಚ್ ಡಿ ಮಾಡಿರುವ ಎಲ್ಲ ಸಿದ್ಧಾಂತಗಳ ಕೃತಿಗಳನ್ನು ತನ್ನ ಕಚೇರಿಯಲ್ಲಿ ಜೋಡಿಸಿಟ್ಟಿದ್ದಾರಂತೆ. ಸ್ವಪಕ್ಷೀಯರೊಂದಿಗೆ ಗುದ್ದಾಡಿಕೊಂಡೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತರಾಗಿ ಕೊನೆಗೆ ವ್ಯವಸ್ಥಿತವಾಗಿ ಅಧಿಕಾರ ವಹಿಸಿಕೊಂಡವರು. ಮಿಲಿಟರಿ ಗುಪ್ತಚರ ಅಧಿಕಾರಿ ಆಗಿರುವುದು ಅವರಿಗೆ ಸಹಾಯ ಮಾಡಿತ್ತು.

ಏಕ ವ್ಯಕ್ತಿ ಕೇಂದ್ರೀತ ಇಮೇಜ್ ಬಿಲ್ಡಪ್, ಏಕಾಂಗಿಯಾಗಿ ನಿರ್ಣಯಗಳನ್ನು ಕೈಗೊಳ್ಳುವುದು, ಜನಪ್ರಿಯತೆಗಾಗಿ ಗಿಮಿಕ್ ಮಾಡುವುದನ್ನು ಗಮನಿಸಿದ ರಾಜಕೀಯ ವಿಶ್ಲೇಷಕರು ಅಹಮದ್ ಕೂಡ ತುರ್ಕಿಯ Recep Tayyip Erdogan, ಅಮೆರಿಕಾ ಡೋನಾಲ್ಡ್ ಟ್ರಂಪ್, ರಶ್ಯದ ಪುಟಿನ್, ಭಾರತದ ನರೇಂದ್ರ ಮೋದಿ ತರಹದ ಮುಖಂಡ ಎಂದು ಬಣ್ಣಿಸಲ್ಪಡುತ್ತಾರೆ.

ವ್ಯಾಖ್ಯಾನಗಳು ಏನೇ ಇರಲಿ ಅಹಮದ್ ರಾಜಕೀಯವಾಗಿ ತಮ್ಮ ಕಾರ್ಯಪ್ರವೃತ್ತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇನ್ನೊಂದೆಡೆ, ಮೋದಿ ದೇಶದ ವ್ಯವಸ್ಥೆಯನ್ನು ಹಳೆಯ ಇಥಿಯೋಪಿಯ ಶೈಲಿಗೆ ಕೊಂಡೊಯ್ಯುತ್ತಾರೊ ಎಂಬ ಸಂಶಯ ಮೂಡಿಸಿದೆ. 2020ರಲ್ಲಿ ನಡೆಯಲಿರುವ ಇಥಿಯೋಪಿಯಾದ ಸಾರ್ವತ್ರಿಕ ಚುನಾವಣೆ ಅತ್ಯಂತ ಮುಕ್ತ ಮತ್ತು ನ್ಯಾಯಸಮ್ಮವಾಗಿ ನಡೆಸಲು ಅಹಮದ್ ಮುಂದಾಗಿದ್ದಾರೆ. ನಮ್ಮ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ನಡೆದುಕೊಂಡಿರುವುದು ಸಂಶಯಾತ್ಮಕವಾಗಿದೆ.

ಇಂದಿನ ಥಿಯೋಪಿಯಾಗೂ ಇಂಡಿಯಾಗೂ ವ್ಯತ್ಯಾಸವೇನು?

ಇಥಿಯೋಪಿಯಾದಲ್ಲಿ ಒಂದು ರಾಜಕೀಯ ಗುಂಪಿನ ವ್ಯವಸ್ಥೆ ಇತ್ತು. ಶಾಂತಿ ಪ್ರಶಸ್ತಿ ಪಡೆಯಲಿರುವ ಅಹಮದ್ ರಾಜಕೀಯ ಪಕ್ಷಗಳ ಮೇಲಿನ ನಿಷೇಧ ಹಿಂತೆಗೆದುಕೊಂಡಿದ್ದಾರೆ. ನಮ್ಮಲ್ಲಿ ಒಂದು ರಾಷ್ಟ್ರ, ಒಂದು ಪಕ್ಷ ಎಂಬರ್ಥದ ಘೋಷಣೆ ಕೇಳತೊಡಗಿದೆ. ಇಥಿಯೋಪಿಯಾದಲ್ಲಿ ಒಂದು ಕಾಲದಲ್ಲಿ ರಾಜಕೀಯ ಭಿನ್ನರನ್ನು ಭಯೋತ್ಪಾಕರೆಂದೇ ಕರೆಯಲಾಗುತಿತ್ತು. ಮೋದಿ ಅವರ ಭಾರತದಲ್ಲಿ ಭಿನ್ನಾಭಿಪ್ರಾಯ ಹೊಂದಿರುವವರನ್ನು ದೇಶ ದ್ರೋಹಿಗಳು, ಹಿಂದೂ ವಿರೋಧಿ ಮತ್ತು ಅರ್ಬನ್ ನಕ್ಸಲರು ಎಂದು ಕರೆಯಲಾಗುತ್ತಿದೆ. ಅಹಮದ್ ತಮ್ಮ ದೇಶದಲ್ಲಿ ಈಗಾಗಲೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವ ಮೂಲಕ ತಮ್ಮ ರಾಜಕೀಯವನ್ನು ಉಜ್ವಲಗೊಳಿಸಿದ್ದರೆ, ಮೋದಿ ರಾಜಕೀಯ ಲೋಕ ಕಿರಿದಾಗತೊಡಗಿದೆ, ಪತ್ರಕರ್ತರ ಸ್ವಾತಂತ್ರ್ಯ ಕಡಿಮೆ ಆಗತೊಡಗಿದೆ. ಪೊಲೀಸ್ ಪ್ರಕರಣ ಕೂಡ ದಾಖಲಾಗುತ್ತಿದೆ. ಇಥಿಯೋಪಿಯಾದ ಮಾಧ್ಯಮ ಸ್ವಾತಂತ್ರ್ಯ ವಿಸ್ತಾರ ಆಗುತ್ತಿದ್ದರೆ, ವಿಶ್ವ ಮಟ್ಟದಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಕುಸಿಯತೊಡಗಿದೆ.

ಬಹುಮುಖ್ಯವಾಗಿ ಕಲಿಯ ಬೇಕಾಗಿರುವುದು ಆರ್ಥಿಕ ಸುಧಾರಣೆ. ಖಾಸಗೀಕರಣ ಮತ್ತು ಇತರ ಸೂತ್ರಗಳ ಮೂಲಕ ಅಹಮದ್ ನೈಜ ಆರ್ಥಿಕ ಉದಾರೀಕರಣ ನಡೆಸುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಅಂಕಿ ಅಂಶಗಳನ್ನು ಫೋರ್ಜರಿ ಮಾಡದೆಯೇ ಇಥಿಯೋಪಿಯದ ಆರ್ಥಿಕತೆ ಎರಡಂಕೆಯ ಪ್ರಗತಿಯನ್ನು ಅಲ್ಪ ಅವಧಿಯಲ್ಲಿ ತೋರಿಸಿದೆ. ಭಾರತ ಸದ್ಯ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಖಜಾನೆ ತುಂಬಲು ಮತ್ತು ಪಕ್ಷ ನಿಷ್ಠರಾದ ಉದ್ಯಮಿಗಳಿಗೆ ಪ್ರಯೋಜನ ಮಾಡಲು ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ.

ಜನಾಂಗೀಯ ಕಲಹಗಳನ್ನು ನಿಯಂತ್ರಿಸಲು ಇಥಿಯೋಪಿಯ ಪರಿಹಾರ ಪ್ರಾಧಿಕಾರಗಳನ್ನು ನೇಮಿಸುತ್ತಿದೆ. ಇತ್ತ ಭಾರತದಲ್ಲಿ ದಲಿತ ಮತ್ತು ಮುಸ್ಲಿಮರನ್ನು ಹಾದಿ ಬೀದಿಯಲ್ಲಿ ಕೊಲ್ಲುವುದನ್ನು ನಿಯಂತ್ರಿಸಲು ಕಾನೂನು ರಚಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಸರಕಾರ ಕಿಮ್ಮತ್ತು ನೀಡುತ್ತಿಲ್ಲ. ಇದರ ಬದಲಾಗಿ ಎನ್ ಆರ್ ಸಿ ಮೂಲಕ ಮುಸ್ಲಿಮರಿಗೆ ಮತ್ತು ಇತರರಿಗೆ ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸಲು ಚಿಂತಿಸಲಾಗುತ್ತಿದೆ.

ಗಡಿ ವಿವಾದ:

ಅಂತಿಮವಾಗಿ ನೊಬೆಲ್ ಪುರಸ್ಕಾರ ದೊರೆಯಲು ಕಾರಣವಾದ ಗಡಿ ವಿವಾದಕ್ಕೆ ಬರುವುದಾದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಸಂಬಂಧಗಳು ಉತ್ತಮಗೊಳ್ಳದೆ ಉದ್ವಿಗ್ನಾವಸ್ಥೆಗೆ ಜಾರಿದೆ. ಕೆಲವೊಂದು ಸೇನಾ ಕ್ರಮಗಳು ಕೂಡ ನೊಬೆಲ್ ಶಾಂತಿ ಪ್ರಶಸ್ತಿಗೆ ಪರಿಗಣಿಸದಂತೆ ಮಾಡಿದೆ. ಜಮ್ಮು ಕಾಶ್ಮೀರದ ರಾಜ್ಯದ ಅಸ್ತಿತ್ವವನ್ನು ತೆಗೆದು ಮಾಧ್ಯಮ ಮತ್ತು ಸಂಪರ್ಕ ಸ್ವಾತಂತ್ರ್ಯ ದಿಗ್ಭಂಧನ ವಿಧಿಸಿರುವುದು ಕಣಿವೆ ಪ್ರದೇಶದ ಜನರು ದೆಹಲಿಯ ಬಗ್ಗೆ ಹೊಂದಿದ್ದ ಅಲ್ಪಸ್ವಲ್ಪ ಗೌರವವನ್ನು ಕೊನೆಗಾಣಿಸಿದೆ. ಪಾಕಿಸ್ತಾನದಂತೆ ಹಲವು ರಾಷ್ಟ್ರಗಳಿಗೆ ಭಾರತದ ವಿರುದ್ಧ ಧ್ವನಿ ಎತ್ತಲು ಅವಕಾಶ ನೀಡಿದೆ.

ಒಬ್ಬ ವಿಶ್ವ ನಾಯಕ ಆಗಬೇಕೆಂದವನಿಗೆ ಯಾಕೆ ಬೇಕು ಭಿನ್ನಮತ, ಗಡಿ ಸಂಘರ್ಷ ಎಂದು ಅಹಮದ್ ತನ್ನ ದೇಶದ ಭೂಭಾಗ ಬಿಟ್ಟು ಕೊಡುವ ಕಠಿಣ ನಿರ್ಧಾರ ಕೈಗೊಂಡರು. ವಿಶ್ವಸಂಸ್ಥೆ ಸೂಚನೆಯನ್ನು ಪಾಲಿಸಿದರು. ಮಿಲಿಟರಿ ಪ್ರಾಬಲ್ಯದ ದೇಶ ಕಟ್ಟುವ ಇರಾದೆಯನ್ನೂ ತೋರಲಿಲ್ಲ. ಶಾಂತಿ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಅಹಮದ್ ಉದ್ದೇಶ ಆಗಿತ್ತು. ಹಾಗೆಂದ ಮಾತ್ರಕ್ಕೆ ಇಥಿಯೋಪಿಯ ದೇಶದಲ್ಲಿ ಎಲ್ಲವೂ ಸರಿಯಾಗಿದೆ ಎಂದಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾದರೆ ಹಲವು ವರ್ಷಗಳ ನಿರಂತರ ಪ್ರಯತ್ನದ ಅಗತ್ಯವಿದೆ. ಉದ್ದೇಶ ಒಳ್ಳೆಯದಾದರೆ ಎಲ್ಲವೂ ಒಳ್ಳೆಯಾದುಗುತ್ತದೆ ಎಂಬಂತೆ ಇಥಿಯೋಪಿಯಾ ಸಾಗುತ್ತಿದೆ.

ಇವೆಲ್ಲದರ ನಡುವೆ ಭಾರತ ಇಥಿಯೋಪಿಯದ ಅಬಿ ಅಹಮದ್ ಜತೆ ರಾಜಧಾನಿ ಅದಿಸ್ ಅಬಾಬದಲ್ಲೇ ಒಂದು `informal summit’ ನಡೆಸುವುದು ಉತ್ತಮ ಅಲ್ಲವೇ?

Tags: Bilateral RelationshipEritreaEthiopiaEthiopian Prime Minister Abiy AhmedNobel Peace PrizePrime Minister Narendra Modiಇಥಿಯೋಪಿಯಾ ದೇಶಇಥಿಯೋಪಿಯಾ ಪ್ರಧಾನಿ ಅಬಿ ಅಹಮದ್‌ಇರಿಟ್ರಿಯಾ ದೇಶದ್ವಿಪಕ್ಷೀಯ ಸಂಬಂಧನೊಬೆಲ್ ಶಾಂತಿ ಪುರಸ್ಕಾರಪ್ರಧಾನಿ ನರೇಂದ್ರ ಮೋದಿ
Previous Post

ಪ್ರತಿಷ್ಠೆಯ `ನಿಜಾಮ್ ನಿಧಿ’ ವ್ಯಾಜ್ಯದಲ್ಲಿ ಪಾಕ್ ಗೆ ಸೋಲು

Next Post

‘ಡಿಸಿಎಂ’ ಶ್ರೀರಾಮುಲು ಹಿಂದಿದೆ ಕುತೂಹಲಕಾರಿ ಅಂಶಗಳು

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025

ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಖಂಡನೆ

December 22, 2025
Next Post
‘ಡಿಸಿಎಂ’ ಶ್ರೀರಾಮುಲು ಹಿಂದಿದೆ ಕುತೂಹಲಕಾರಿ ಅಂಶಗಳು

‘ಡಿಸಿಎಂ’ ಶ್ರೀರಾಮುಲು ಹಿಂದಿದೆ ಕುತೂಹಲಕಾರಿ ಅಂಶಗಳು

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada